ದೆಹಲಿ ಅಬಕಾರಿ ನೀತಿ ಪ್ರಕರಣ: ಎಎಪಿ ನಾಯಕ ಸಂಜಯ ಸಿಂಗ್‌ ಗೆ ಸುಪ್ರೀಂ ಕೋರ್ಟ್ ಜಾಮೀನು

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ಅವರ ಕಸ್ಟಡಿ ಇನ್ನು ಮುಂದೆ ಅಗತ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ಜಾಮೀನು ನೀಡಿದೆ. ವಿಚಾರಣೆಯ ಬಾಕಿ ಇರುವಂತೆ ಸಿಂಗ್ ಅವರನ್ನು ಜಾಮೀನಿನ ಮೇಲೆ … Continued

ಲೋಕಸಭೆ ಚುನಾವಣೆ : 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ನವದೆಹಲಿ: ಕಾಂಗ್ರೆಸ್ ಪಕ್ಷ ಮಂಗಳವಾರ ಲೋಕಸಭೆ ಚುನಾವಣೆಗೆ 17 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆಂಧ್ರಪ್ರದೇಶದ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ವೈ.ಎಸ್. ಶರ್ಮಿಳಾ ರೆಡ್ಡಿ ಅವರಿಗೆ ಆಂಧ್ರಪ್ರದೇಶದ ಕಡಪಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಇತ್ತೀಚಿನ ಪಟ್ಟಿಯಲ್ಲಿ ಒಡಿಶಾದಿಂದ ಎಂಟು ಅಭ್ಯರ್ಥಿಗಳು, ಆಂಧ್ರಪ್ರದೇಶದಿಂದ ಐದು ಅಭ್ಯರ್ಥಿಗಳು, ಬಿಹಾರದಿಂದ ಮೂವರು ಮತ್ತು ಪಶ್ಚಿಮ ಬಂಗಾಳದಿಂದ ಒಬ್ಬ ಅಭ್ಯರ್ಥಿ ಸೇರಿದ್ದಾರೆ. ಬಿಹಾರದಲ್ಲಿ … Continued

ಶಿವಮೊಗ್ಗದಲ್ಲಿ ಬಂಡಾಯ : ಈಶ್ವರಪ್ಪಗೆ ಅಮಿತ್ ಶಾ ಕರೆ, ದೆಹಲಿಗೆ ಬುಲಾವ್‌ ; ಈಶ್ವರಪ್ಪ ಮುಂದಿನ ನಡೆ ಏನು..?

ಬೆಂಗಳೂರು : ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧಿಸಲು ಮುಂದಾಗಿರುವ ಕೆ.ಎಸ್‌. ಈಶ್ವರಪ್ಪ ಅವರಿಗೆ ಕೇಂದ್ರ ಸಚಿವ ಅಮಿತ್ ಶಾ ಅವರು ಕರೆ ಮಾಡಿದ್ದು, ನಾಳೆ (ಏಪ್ರಿಲ್‌ ೩) ಈಶ್ವರಪ್ಪ ಅವರನ್ನು ದೆಹಲಿಗೆ ಬುಲಾವ್‌ ಮಾಡಿದ್ದಾರೆ. ಹೀಗಾಗಿ ಈಶ್ವರಪ್ಪ ದೆಹಲಿಗೆ ತೆರಳಲಿದ್ದಾರೆ. ಮಗ ಕಾಂತೇಶ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ … Continued

ಬೆಳಿಗ್ಗೆ 6:30ಕ್ಕೆ ಏಳುವುದು…ಊಟ-ತಿಂಡಿ, ಪುಸ್ತಕ, ಟಿವಿ, ಮೀಟಿಂಗ್ : ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ದಿನಚರಿ ಹೇಗಿರುತ್ತದೆ ಗೊತ್ತೆ..?

ನವದೆಹಲಿ : ಈಗ ರದ್ದಾಗಿರುವ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಏಪ್ರಿಲ್ 15 ರವರೆಗೆ ಜೈಲಿನಲ್ಲಿರುತ್ತಾರೆ. ಏಪ್ರಿಲ್ 1 ಸೋಮವಾರ ಕೇಜ್ರಿವಾಲ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಕೇಜ್ರಿವಾಲ್ ಅವರನ್ನು 15 ದಿನಗಳ ಕಾಲ ತಿಹಾರ್‌ ಜೈಲಿನಲ್ಲಿ ಇರಿಸುವಂತೆ ಹೇಳಿದೆ. ಹೀಗಾಗಿ ಕೇಜ್ರಿವಾಲ್ ಅವರಿಗೆ ನೀಡಲಿರುವ ಆಹಾರ, … Continued

ಏಪ್ರಿಲ್‌-ಜೂನ್‌ ಅವಧಿಯಲ್ಲಿ ದೇಶದಲ್ಲಿ ಭಾರೀ ಬಿಸಿಲು ; ಕರ್ನಾಟಕದ ಈ ಭಾಗಗಳಲ್ಲಿ ಬಿಸಿಗಾಳಿಯ ಕೆಟ್ಟ ಪರಿಣಾಮ ; ಹವಾಮಾನ ಇಲಾಖೆ

ನವದೆಹಲಿ : ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಮುಂದಿನ ಹಲವು ದಿನಗಳಲ್ಲಿ ಬಿಸಿಲಿನ ಧಗೆ ಏರಲಿದೆ ಎಂದಿರುವ ಹವಾಮಾನ ಇಲಾಖೆ ಉಷ್ಣ ಮಾರುತದ ಎಚ್ಚರಿಕೆ ನೀಡಿದೆ. ಏಪ್ರಿಲ್‌ ಮೊದಲ ವಾರದಿಂದಲೇ ದೇಶದ ದಕ್ಷಿಣ, ಉತ್ತರ, ಕೇಂದ್ರ ಭಾಗಗಳಲ್ಲಿ ಉಷ್ಣ ಗಾಳಿ ಹೆಚ್ಚಲಿದೆ. ಏಪ್ರಿಲ್‌-ಜೂನ್‌ ತಿಂಗಳಲ್ಲಿ ಸಾಮನ್ಯಕ್ಕಿಂತ ಹೆಚ್ಚಿನ ತಾಪಮಾನ ಕಂಡು ಬರಲಿದೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌, … Continued

ಎಂಥಾ ಲೋಕವಯ್ಯ…! ಪತಿಯನ್ನು ಕೊಂದವರಿಗೆ ₹ 50 ಸಾವಿರ ಬಹುಮಾನ ನೀಡುವೆ : ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡ ಮಹಿಳೆ…!

ಲಕ್ನೋ: ಪತಿಯನ್ನು ಕೊಲೆ ಮಾಡಿದವರಿಗೆ ₹50 ಸಾವಿರ ನಗದು ಬಹುಮಾನ ನೀಡಲಾಗುವುದು’ ಎಂದು ಮಹಿಳೆಯೊ‌ಬ್ಬರು ತಮ್ಮ ವಾಟ್ಸ್‌ಆಪ್‌ ಖಾತೆಯಲ್ಲಿ ಸ್ಟೇಟಸ್‌ ಹಾಕಿಕೊಂಡಿದ್ದಾರೆ. ಉತ್ತರ ಪ್ರದೇಶದ ಆಗ್ರಾದ ಬಹ್ ಜಿಲ್ಲೆಯ ದಂಪತಿ ನಡುವಿನ ಭಿನ್ನಾಭಿಪ್ರಾಯ ಎಷ್ಟು ತೀವ್ರವಾಗಿದೆಯೆಂದರೆ, ಪತಿ ಹತ್ಯೆಗೆ ಪತ್ನಿ ₹ 50,000 ಬಹುಮಾನ ಘೋಷಿಸಿದ್ದಾರೆ. ಆಕೆ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಈ ಆಫರ್ ನೀಡಿದ್ದಾಳೆ…!! … Continued

ಆದಾಯ ತೆರಿಗೆ ಪ್ರಕರಣ: ಚುನಾವಣೆ ಮುಗಿಯುವವರೆಗೂ ಕಾಂಗ್ರೆಸ್ ವಿರುದ್ಧ ಕ್ರಮ ಇಲ್ಲ ಎಂದು ಸುಪ್ರೀಂ ಕೋರ್ಟಿಗೆ ಕೇಂದ್ರದ ಸ್ಪಷ್ಟನೆ

ನವದೆಹಲಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷದಿಂದ ಸುಮಾರು 3,500 ಕೋಟಿ ರೂ.ಗಳ ಆದಾಯ ತೆರಿಗೆ ಬಾಕಿ ವಸೂಲಿ ಕುರಿತಂತೆ ಮುಂಬರುವ ಸಾರ್ವತ್ರಿಕ ಚುನಾವಣೆ ಮುಗಿಯುವವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಪೀಠದ ಎದುರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ … Continued

ಅಯ್ಯೋ ದೇವ್ರೆ ..| ಪ್ರಯಾಣಿಕನಿಗೆ ದುಃಸ್ವಪ್ನವಾದ ಉಬರ್ ಆಟೋ ಪ್ರಯಾಣ : ಆಟೋದಲ್ಲಿ ಪ್ರಯಾಣಿಸಿದ್ದಕ್ಕೆ ಬಂತು 7.66 ಕೋಟಿ ರೂ. ಬಿಲ್..!

ನವದೆಹಲಿ : ನೋಯ್ಡಾದ ಉಬರ್ ಆಟೋಕ್ಕೆ ಬುಕ್‌ ಮಾಡಿ ಅದರಲ್ಲಿ ಪ್ರಯಾಣಿಸಿದ ಗ್ರಾಹಕರೊಬ್ಬರು ಕೋಟಿಗಟ್ಟಲೆ ಬಿಲ್ ಬಂದ ನಂತರ ಹೌಹಾರಿದ್ದಾರೆ..! ಶುಕ್ರವಾರದ ಮುಂಜಾನೆ, ದೀಪಕ ತೆಂಗುರಿಯಾ ಎಂಬವರು ಕೇವಲ ₹ 62 ದರ ಆಗಬಹುದು ಎಂದು ನಿರೀಕ್ಷಿಸಿ ಉಬರ್ ಆಟೋ ಬುಕ್ ಮಾಡಿದ್ದಾರೆ. ಆದರೆ ದೀಪಕ ಅವರು ತಮ್ಮ ನಿಗದಿತ ಸ್ಥಳವನ್ನು ತಲುಪಿದ ನಂತರ ಅವರ … Continued

ದೆಹಲಿ ಸಿಎಂ ಕೇಜ್ರಿವಾಲಗೆ ಏಪ್ರಿಲ್ 15ರ ವರೆಗೆ ನ್ಯಾಯಾಂಗ ಬಂಧನ

ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಏಪ್ರಿಲ್ 15ರ ವರೆಗೆ ದೆಹಲಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಈ … Continued

ಭಾರತದ ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ ಹೊಸದಾಗಿ 30 ಹೆಸರುಗಳನ್ನು ನಾಮಕರಣ ಮಾಡಿದ ಚೀನಾ

ಬೀಜಿಂಗ್: ಭಾರತದ ಅರುಣಾಚಲ ಪ್ರದೇಶದ ಕುರಿತು ಚೀನಾ ಮತ್ತೆ ಕ್ಯಾತೆ ಮಾಡುತ್ತಿದ್ದು, ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ ತಾನು ಹೆಸರಿಟ್ಟ 30 ಹೊಸ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಸ್ಥಳಗಳನ್ನು ಮರುನಾಮಕರಣ ಮಾಡುವುದನ್ನು ಭಾರತ ತಿರಸ್ಕರಿಸಿದೆ. ಅರುಣಾಚಲಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ಹೊಸ ಹೆಸರುಗಳನ್ನು ಇಡುವುದರಿಂದ ಅದು ವಾಸ್ತವತೆಯನ್ನು ಬದಲಾಯಿಸುವುದಿಲ್ಲ … Continued