ಬೆಳಿಗ್ಗೆ 6:30ಕ್ಕೆ ಏಳುವುದು…ಊಟ-ತಿಂಡಿ, ಪುಸ್ತಕ, ಟಿವಿ, ಮೀಟಿಂಗ್ : ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ದಿನಚರಿ ಹೇಗಿರುತ್ತದೆ ಗೊತ್ತೆ..?

ನವದೆಹಲಿ : ಈಗ ರದ್ದಾಗಿರುವ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಏಪ್ರಿಲ್ 15 ರವರೆಗೆ ಜೈಲಿನಲ್ಲಿರುತ್ತಾರೆ. ಏಪ್ರಿಲ್ 1 ಸೋಮವಾರ ಕೇಜ್ರಿವಾಲ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಕೇಜ್ರಿವಾಲ್ ಅವರನ್ನು 15 ದಿನಗಳ ಕಾಲ ತಿಹಾರ್‌ ಜೈಲಿನಲ್ಲಿ ಇರಿಸುವಂತೆ ಹೇಳಿದೆ. ಹೀಗಾಗಿ ಕೇಜ್ರಿವಾಲ್ ಅವರಿಗೆ ನೀಡಲಿರುವ ಆಹಾರ, … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇಜ್ರಿವಾಲಗೆ ದೆಹಲಿ ಹೈಕೋರ್ಟ್‌ ನಿಂದ ಸಿಗದ ಜಾಮೀನು

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾರಿ ನಿರ್ದೇಶನಾಲಯದ (ಇ ಡಿ) ಕ್ಸಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡುವ ಕುರಿತು ಮಧ್ಯಂತರ ಆದೇಶ ನೀಡಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ತನ್ನ ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ … Continued

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ

ನವದೆಹಲಿ : ಅಬಕಾರಿ ನೀತಿ ಹಗರಣದ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ತಂಡವು ಗುರುವಾರ (ಮಾರ್ಚ್ 21) ರಾತ್ರಿ 9 ಗಂಟೆ ವೇಳೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwa ಆ) ಅವರನ್ನು ಬಂಧಿಸಿದೆ. ಅವರ ಬಂಧನಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್​ ನಿರಾಕರಿಸಿದ ನಂತರ ಗುರುವಾರ ಸಂಜೆ ವೇಳೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ … Continued

ದೆಹಲಿ ಮದ್ಯ ನೀತಿ ಪ್ರಕರಣ : ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ದೊಡ್ಡ ಹಿನ್ನಡೆಯಲ್ಲಿ, ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣಗಳಲ್ಲಿ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಪ್ರಕರಣದಲ್ಲಿ 338 ಕೋಟಿ ರೂಪಾಯಿಗಳ ಹಣದ ಜಾಡು “ತಾತ್ಕಾಲಿಕವಾಗಿ ಸ್ಥಾಪಿಸಲಾಗಿದೆ” ಎಂಬ ಆಧಾರದ ಮೇಲೆ ಸುಪ್ರೀಂ ಕೋರ್ಟ್ … Continued

ಅಬಕಾರಿ ನೀತಿ ಹಗರಣ; ವಿಚಾರಣೆಗೆ ಹಾಜರಾಗಲು ಅರವಿಂದ ಕೇಜ್ರಿವಾಲಗೆ ಸಮನ್ಸ್ ನೀಡಿದ ಸಿಬಿಐ

ನವದೆಹಲಿ: ಈಗ ರದ್ದಾದ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 16ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸಿಬಿಐ ಸಮನ್ಸ್ ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದ್ದು, ಸಿಸೋಡಿಯಾ ಅವರು ಏಪ್ರಿಲ್ 17ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಾರ್ವಜನಿಕ ಆಸ್ತಿ … Continued

ದೆಹಲಿ ಮದ್ಯ ನೀತಿ ಪ್ರಕರಣ : ಮನೀಶ್ ಸಿಸೋಡಿಯಾಗೆ 7 ದಿನಗಳ ಇ.ಡಿ. ಕಸ್ಟಡಿ

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ. ಮದ್ಯದ ನೀತಿಯನ್ನು ರೂಪಿಸುವಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ದೆಹಲಿ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ಪ್ರಶ್ನಿಸಲು ಕೇಂದ್ರ ಸಂಸ್ಥೆ ಕನಿಷ್ಠ 10 ದಿನಗಳ ಕಾಲಾವಕಾಶವನ್ನು ಕೋರಿತ್ತು, … Continued

ದೆಹಲಿ ಮದ್ಯ ನೀತಿ ಪ್ರಕರಣ: ಕೆಸಿಆರ್ ಮಗಳ ವಿರುದ್ಧ ₹ 100 ಕೋಟಿ ಕಿಕ್‌ಬ್ಯಾಕ್ ಆರೋಪ ಮಾಡಿದ ಇ.ಡಿ.

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಮತ್ತು ಇತರ ಇಬ್ಬರು ದೆಹಲಿಯ ಹೊಸ ಮದ್ಯ ನೀತಿಯಿಂದ ಲಾಭ ಪಡೆಯಲು ದೆಹಲಿಯ ಆಮ್ ಆದ್ಮಿ ಪಕ್ಷಕ್ಕೆ ₹ 100 ಕೋಟಿ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿದೆ. ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖಂಡರು ಆರೋಪಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದು, … Continued

ದೆಹಲಿ ಮದ್ಯ ನೀತಿ ಪ್ರಕರಣ: ಕೆಸಿಆರ್ ಪುತ್ರಿ ಕವಿತಾಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ ಸಿಬಿಐ

ಹೈದರಾಬಾದ್‌: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ತೆಲಂಗಾಣ ವಿಧಾನ ಪರಿಷತ್ ಸದಸ್ಯೆ (ಎಂಎಲ್‌ಸಿ) ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಕಲ್ವಕುಂಟ್ಲಾ ಅವರಿಗೆ ನೋಟಿಸ್ ಜಾರಿ ಮಾಡಿದೆ. ಡಿಸೆಂಬರ್ 6 ರಂದು ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ತನಿಖಾ ಸಂಸ್ಥೆ ತಿಳಿಸಿದೆ. ಭಾರತ … Continued

ದೆಹಲಿ ಮದ್ಯ ನೀತಿ ಪ್ರಕರಣ: ದೆಹಲಿ-ಎನ್‌ಸಿಆರ್, ಪಂಜಾಬ್‌ ಸೇರಿ 35 ಸ್ಥಳಗಳಲ್ಲಿ ಇ.ಡಿ. ದಾಳಿ

ನವದೆಹಲಿ: ಮೂಲಗಳ ಪ್ರಕಾರ ದೆಹಲಿ ಅಬಕಾರಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ದೆಹಲಿ-ಎನ್‌ಸಿಆರ್, ಪಂಜಾಬ್ ಮತ್ತು ಹೈದರಾಬಾದ್‌ನ 35 ಸ್ಥಳಗಳಲ್ಲಿ ಹೊಸ ದಾಳಿ ನಡೆಸಿದೆ. ಹೊಸ ದಾಳಿಗಳಿಗೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಟ್ವೀಟ್ ಮಾಡಿದ್ದಾರೆ, “500 ಕ್ಕೂ ಹೆಚ್ಚು ದಾಳಿಗಳು, 3 ತಿಂಗಳಿನಿಂದ, 300 … Continued

ದೆಹಲಿ ಅಬಕಾರಿ ಹರಗಣ :ಕರ್ನಾಟಕ ಸೇರಿ ದೇಶದ 40 ಸ್ಥಳಗಳಲ್ಲಿ ಇ.ಡಿ. ದಾಳಿ

ನವದೆಹಲಿ: ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಕುರಿತು ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ದೇಶಾದ್ಯಂತ ಸುಮಾರು 40 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ದೆಹಲಿ-ಎನ್‌ಸಿಆರ್‌ನ ಇತರ ಕೆಲವು ನಗರಗಳಲ್ಲಿ ಮದ್ಯದ ಉದ್ಯಮಿಗಳು, ವಿತರಕರು ಮತ್ತು ಸರಬರಾಜು … Continued