ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಪವನ್‌ ಮೈಕ್ರೋಸಾಫ್ಟ್ ವಿಂಡೋಸ್ ನೂತನ ಮುಖ್ಯಸ್ಥ

ನವದೆಹಲಿ: ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್‌ನ ಹೊಸ ಮುಖ್ಯಸ್ಥರನ್ನು ನೇಮಕಾತಿ ಮಾಡಿರುವುದಾಗಿ ಮೈಕ್ರೋಸಾಫ್ಟ್ ಘೋಷಿಸಿದೆ. ಈ ಹಿಂದೆ ಇದನ್ನು ಮುನ್ನಡೆಸುತ್ತಿದ್ದ ಪನೋಸ್ ಪನಾಯ್ ಅವರ ನಿರ್ಗಮನದ ನಂತರ ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ ಪವನ್ ದಾವುಲೂರಿ ಅವರನ್ನು ಆ ಜಾಗದಲ್ಲಿ ನೇಮಿಸಲಾಗಿದೆ. ಕಳೆದ ವರ್ಷ, ಪನಾಯ್ ಅವರು ಅಮೆಜಾನ್‌ಗೆ ಸೇರಲು ತನ್ನ ಸ್ಥಾನವನ್ನು ತೊರೆದಿದ್ದರು. ಮೈಕ್ರೋಸಾಫ್ಟ್ … Continued

ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ : ರಾಜುಗೌಡಗೆ ಬಿಜೆಪಿ ಟಿಕೆಟ್‌

ಬೆಂಗಳೂರು: ಕಾಂಗ್ರೆಸ್ ಶಾಸಕ ರಾಜ ವೆಂಕಟಪ್ಪ ನಾಯಕ ನಿಧನದ ನಂತರ ತೆರುವಾಗಿದ್ದ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೇ 7 ರಂದು ಉಪಚುನಾವಣೆ ನಡೆಯಲಿದ್ದು, ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ರಾಜುಗೌಡ ಅವರಿಗೆ ಮತ್ತೆ ಟಿಕೆಟ್‌ ನೀಡಿದೆ. ಕಾಂಗ್ರೆಸ್ ಶಾಸಕರಾಗಿದ್ದ ದಿವಂಗತ ರಾಜ ವೆಂಕಟಪ್ಪ ನಾಯಕ ಅವರ ಪುತ್ರ … Continued

ವೀಡಿಯೊ..| ಹೊಳೆ ದಾಟಲು ನಿಂತಲ್ಲಿಂದಲೇ 20 ಅಡಿಗಳಷ್ಟು ದೂರ ಜಿಗಿದ ಬೃಹತ್‌ ಹುಲಿ ; ಅದ್ಭುತ ಜಿಗಿತಕ್ಕೆ ಬೆರಗಾದ ಇಂಟರ್ನೆಟ್‌…!

ಹುಲಿಗಳು ಕಾಣಿಸಿಕೊಳ್ಳುವುದು ಅಪರೂಪ ಮತ್ತು ಕಾಡಿನಲ್ಲಿ ಅದನ್ನು ಹುಡುಕುವುದು ಕಷ್ಟ, ಆದ್ದರಿಂದ ಹುಲಿಯನ್ನು ನೋಡುವುದು ಯಾವಾಗಲೂ ರೋಮಾಂಚನಕಾರಿಯಾಗಿದೆ. ಹುಲಿಯು ಹೊಳೆ ಮೇಲಿಂದ ಜಿಗಿದು ಅದನ್ನು ದಾಟುವುದನ್ನು ನೋಡುವುದು ಇನ್ನೂ ಅದ್ಭುತವಾಗಿದೆ. ಹುಲಿಯೊಂದು ನೀರಿರುವ ಹೊಳೆಯನ್ನು ದಾಟಲು ಜಿಗಿಯುತ್ತಿರುವ ಅತ್ಯಾಕರ್ಷಕ ವೀಡಿಯೊ ಅಂತರ್ಜಾಲ ಬಳಕೆದಾರರ ಗಮನ ಸೆಳೆದಿದೆ. ಐಆರ್‌ಎಎಸ್‌ (IRAS) ಅಧಿಕಾರಿ ಅನಂತ ರೂಪನಗುಡಿ ಅವರು X … Continued

ಅತಿಹೆಚ್ಚು ಬಿಲಿಯನೇರ್‌ ಗಳ ಸಂಖ್ಯೆ : ಮೊದಲ ಬಾರಿಗೆ ಏಷ್ಯಾದಲ್ಲಿ ಮೊದಲನೇ ಸ್ಥಾನಕ್ಕೆ ಏರಿದ ಮುಂಬೈ, ಜಾಗತಿಕವಾಗಿ ಎಷ್ಟನೇ ಸ್ಥಾನ ಗೊತ್ತಾ..?

ಮುಂಬೈ: ಭಾರತದ ಆರ್ಥಿಕ ರಾಜಧಾನಿ ಮುಂಬೈ ಈಗ ಮತ್ತೊಂದು ಟ್ಯಾಗ್‌ ಅನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿದೆ. ಈಗ ಏಷ್ಯಾದ ‘ಬಿಲಿಯನೇರ್ (ಶತಕೋಟ್ಯಧಿಪತಿಗಳು) ರಾಜಧಾನಿ’ಯಾಗಿ ಹೊರಹೊಮ್ಮಿದೆ. ಮುಂಬೈನಲ್ಲಿ ವಾಸಿಸುವ ಬಿಲಿಯನೇರ್‌ಗಳ ಸಂಖ್ಯೆ ಈಗ ಚೀನಾದ ಶಾಂಘೈ ಮತ್ತು ಅದರ ರಾಜಧಾನಿ ಬೀಜಿಂಗ್‌ಗಿಂತ ಹೆಚ್ಚಾಗಿದೆ. ಮುಂಬೈ ನಗರವು ಮೊದಲ ಬಾರಿಗೆ ಏಷ್ಯಾದ ಬಿಲಿಯನೇರ್ ರಾಜಧಾನಿಯಾಗಿ ಹೊರಹೊಮ್ಮಿದೆ. ಈ ಮಾಹಿತಿಯನ್ನು … Continued

ವಿವಾದಕ್ಕೆ ಕಾರಣವಾದ ಕಂಗನಾ ರಣಾವತ್ ಕುರಿತ ಕಾಂಗ್ರೆಸ್ ನಾಯಕಿ ಇನ್ಸ್ಟಾಗ್ರಾಮ್ ಪೋಸ್ಟ್

ನವದೆಹಲಿ: ನಟಿ ಕಂಗನಾ ರಣಾವತ್ ಅವರ ಚುನಾವಣಾ ಪ್ರಚಾರದ ಕುರಿತು ಕಾಂಗ್ರೆಸ್ ನಾಯಕರೊಬ್ಬರು ಅವಹೇಳನಕಾರಿ ಪೋಸ್ಟ್ ಮಾಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗವು ರಾಜಕಾರಣಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರಿನಾಟೆ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಕಂಗನಾ ರಣಾವತ್ ಅವರ ಫೋಟೋದೊಂದಿಗೆ ಪೋಸ್ಟ್ ರಾಷ್ಟ್ರೀಯ ಚುನಾವಣೆಗೆ ವಾರಗಳ ಮೊದಲು ಬಂದಿದೆ. … Continued

ಶಸ್ತ್ರಚಿಕಿತ್ಸೆ ನಂತರ ಚೇತರಿಕೆ : ವೀಡಿಯೊ ಹಂಚಿಕೊಂಡ ಸದ್ಗುರು

ನವದೆಹಲಿ: ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 66 ವರ್ಷದ ಅಧ್ಯಾತ್ಮ ಗುರು ಜಗ್ಗಿ ವಾಸುದೇವ (ಸದ್ಗುರು) ಅವರು ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಆರೋಗ್ಯದಲ್ಲಿನ ಚೇತರಿಕೆಯ ಬಗ್ಗೆ ಈಶಾ ಫೌಂಡೇಶನ್‌ ಸಂಸ್ಥಾಪಕರಾದ ಸದ್ಗುರು ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ‘ಸದ್ಗುರು ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ’ ಎಂದು ವೀಡಿಯೊಕ್ಕೆ ಕ್ಯಾಪ್ಶನ್‌ ನೀಡಲಾಗಿದ್ದು, ಸದ್ಗುರು ಅವರು … Continued

ಲೋಕಸಭೆ ಚುನಾವಣೆ 2024 : 6ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ನವದೆಹಲಿ : ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಕಾಂಗ್ರೆಸ್ ಸೋಮವಾರ (ಮಾರ್ಚ್ 25) ಬಿಡುಗಡೆ ಮಾಡಿದೆ. ಪಕ್ಷವು ರಾಜಸ್ಥಾನದ ನಾಲ್ವರು ಮತ್ತು ತಮಿಳುನಾಡಿಗೆ ಒಬ್ಬ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ರಾಜಸ್ಥಾನದ ಅಜ್ಮೀರ್‌ನಿಂದ ರಾಮಚಂದ್ರ ಚೌಧರಿ, ರಾಜಸಮಂದ್‌ನಿಂದ ಸುದರ್ಶನ ರಾವತ್ ಮತ್ತು ಭಿಲ್ವಾರದಿಂದ ಡಾ.ದಾಮೋದರ ಗುರ್ಜರ್ ಅವರನ್ನು ಪಕ್ಷದ ಅಭ್ಯರ್ಥಿಗಳಾಗಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಿಜೆಪಿಯ … Continued

ವೀಡಿಯೊ..| ಖಲಿಸ್ತಾನಿ ಸಂಘಟನೆಗಳಿಂದ ₹133.54 ಕೋಟಿ ಪಡೆದ ಆಮ್‌ ಆದ್ಮಿ ಪಕ್ಷ : ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ಆರೋಪ

ನವದೆಹಲಿ; 2014 ಮತ್ತು 2022 ರ ನಡುವೆ ಆಮ್ ಆದ್ಮಿ ಪಕ್ಷವು ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್ ಡಾಲರ್ (ಅಂದಾಜು 133.54 ಕೋಟಿ ರೂ.) ಹಣ ಪಡೆದಿದೆ ಎಂದು ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್ ಆರೋಪಿಸಿದ್ದಾನೆ. ಅಮೆರಿಕ ಮತ್ತು ಕೆನಡಾದ ಉಭಯ ಪೌರತ್ವವನ್ನು ಹೊಂದಿರುವ ಭಾರತೀಯ ಮೂಲದ ಪನ್ನುನ್, ಸೋಮವಾರ ಸಾಮಾನಿಕ ಮಾಧ್ಯಮದ ಮೂಲಕ … Continued

ಅಬಕಾರಿ ನೀತಿ ಪ್ರಕರಣ: ಅರವಿಂದ ಕೇಜ್ರಿವಾಲ್‌ ಬಳಸಿದ್ದ ಮೊಬೈಲ್ ನಾಪತ್ತೆ ; ವರದಿ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಬಕಾರಿ ನೀತಿ ರೂಪಿಸುವಾಗ ಬಳಸುತ್ತಿದ್ದರು ಎನ್ನಲಾದ ತಮ್ಮ ಮೊಬೈಲ್ ಫೋನ್ ಅನ್ನು ಎಲ್ಲಿ ಇರಿಸಿದ್ದಾರೆ ಎಂಬುದು ನೆನಪಿಲ್ಲ ಎಂದು ಜಾರಿ ನಿರ್ದೇಶನಾಲಯಕ್ಕೆ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇ ಟಿವಿ ವರದಿ ಮಾಡಿವೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆಮ್ ಆದ್ಮಿ … Continued

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಭಾರೀ ಅಗ್ನಿಅವಘಡ : 14 ಅರ್ಚಕರಿಗೆ ಗಾಯ

ಉಜ್ಜಯಿನಿ : ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ 14 ಅರ್ಚಕರಿಗೆ ಗಾಯವಾಗಿದೆ. ಆವರಣದಲ್ಲಿ ಹೋಳಿ ಆಚರಣೆಯ ನಡುವೆ ಮುಂಜಾನೆ ‘ಭಸ್ಮ ಆರತಿ’ ವೇಳೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇವಾಲಯದ ಗರ್ಭಗೃಹದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಉಜ್ಜಯಿನಿ ಜಿಲ್ಲಧಿಕಾರಿ ನೀರಜಕುಮಾರ ಸಿಂಗ್ ಹೇಳಿದ್ದಾರೆ. “14 ಪುರೋಹಿತರಿಗೆ … Continued