ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

ಕಾಸರಗೋಡು : ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ.ಗಳನ್ನು ದರೋಡೆ ಮಾಡಿದ ಘಟನೆ ಬುಧವಾರ ಮಧ್ಯಾಹ್ನ ಕೇರಳ ಕಾಸರಗೋಡಿನ ಉಪ್ಪಳ ಪೇಟೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ವಾಹನದ ಗಾಜನ್ನು ಒಡೆದು ಹಣ ದರೋಡೆ ಮಾಡಿದ್ದಾರೆ. ಉಪ್ಪಳ ಪೇಟೆಯಲ್ಲಿರುವ ಆಕ್ಸಿಸ್ ಬ್ಯಾಂಕಿನ ಎಟಿಎಂ ಯಂತ್ರಕ್ಕೆ ಹಣ ತುಂಬಿಸಲು ಬಂದಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. … Continued

2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ…!

ನವದೆಹಲಿ: ಉತ್ತರ ಪ್ರದೇಶದ ರಾಂಪುರ ಮತ್ತು ಮೊರಬಾಬಾದ್ ಲೋಕಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಕುರಿತು ಗೊಂದಲ ಉಂಟಾಗಿದೆ. ಯಾಕೆಂದರೆ ತಾವೇ ಅಧಿಕೃತ ಪಕ್ಷದ ಅಭ್ಯರ್ಥಿಗಳು ಎಂದು ಹೇಳಿಕೊಂಡು ಈ ಎರಡೂ ಕ್ಷೇತ್ರಗಳಿಂದ ತಲಾ ಇಬ್ಬರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ರಾಂಪುರದಲ್ಲಿ, 2022 ರ ಲೋಕಸಭಾ ಉಪಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಸೀಮ್ ರಾಜಾ … Continued

ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

ಭೋಪಾಲ್: ಭೋಪಾಲ್‌ನಲ್ಲಿ ವ್ಯಕ್ತಿ ಮತ್ತು ಆತನ ಪತ್ನಿ ತನ್ನ ಅಜ್ಜಿಯ ಮೇಲೆ ಕರುಣೆಯಿಲ್ಲದೆ ಕೋಲಿನಿಂದ ಹಲ್ಲೆ ಮಾಡಿದ ಕರುಳು ಹಿಂಡುವ ವೀಡಿಯೊ ಬುಧವಾರ ವೈರಲ್ ಆಗಿದ್ದು, ನಂತರ ನಗರದಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ದಂಪತಿಯನ್ನು ಬಂಧಿಸಲಾಗಿದೆ. ಈ ಅಮಾನವೀಯ ವರ್ತನೆಗೆ ಸುಮಾರು 80 ಹರೆಯದ ವೃದ್ಧೆ ಈ ದಂಪತಿಗಳ ಇಚ್ಛೆಯಂತೆ ಆಹಾರವನ್ನು ಬೇಯಿಸದಿರುವುದೇ ಕಾರಣ ಎಂದು ಪೊಲೀಸ್ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇಜ್ರಿವಾಲಗೆ ದೆಹಲಿ ಹೈಕೋರ್ಟ್‌ ನಿಂದ ಸಿಗದ ಜಾಮೀನು

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾರಿ ನಿರ್ದೇಶನಾಲಯದ (ಇ ಡಿ) ಕ್ಸಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡುವ ಕುರಿತು ಮಧ್ಯಂತರ ಆದೇಶ ನೀಡಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ತನ್ನ ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ … Continued

ಎಎಪಿಗೆ ಆಘಾತ: ಪಕ್ಷದ ಏಕೈಕ ಲೋಕಸಭಾ ಸದಸ್ಯ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಆಮ್‌ ಆದಮಿ ಪಕ್ಷಕ್ಕೆ ಆಘಾತದಲ್ಲಿ ಪಂಜಾಬಿನ ಆಮ್ ಆದ್ಮಿ ಪಕ್ಷದ ಏಕೈಕ ಲೋಕಸಭಾ ಸದಸ್ಯ ಸುಶೀಲಕುಮಾರ ರಿಂಕು ಅವರು ಪಕ್ಷದ ಶಾಸಕ ಶೀತಲ ಅಂಗುರಲ್ ಅವರೊಂದಿಗೆ ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಂಗುರಲ್ ಅವರು ಜಲಂಧರ್ ಪಶ್ಚಿಮ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಜಲಂಧರ ಸಂಸದ ಸುಶೀಲಕುಮಾರ ರಿಂಕು ಅವರೊಂದಿಗೆ ಶಾಸಕರು ಕೇಂದ್ರ … Continued

ಹುಕ್ಕಾ ಬಾರ್‌ನಲ್ಲಿ ದಾಳಿ ವೇಳೆ ಬಿಗ್ ಬಾಸ್ 17 ರ ವಿಜೇತ ಮುನಾವರ್ ಫರೂಕಿ ಬಂಧನ ; ನಂತರ ಬಿಡುಗಡೆ

ಮುಂಬೈ: ಮುಂಬೈನ ಹುಕ್ಕಾ ಪಾರ್ಲರ್‌ನಲ್ಲಿ ನಡೆದ ದಾಳಿಯಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಬಿಗ್ ಬಾಸ್ 17 ರ ವಿಜೇತ ಮುನಾವರ್ ಫರೂಕಿ ಸೇರಿದಂತೆ 14 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ರಿಯಾಲಿಟಿ ಟಿವಿ ಸ್ಟಾರ್ ಮುನಾವರ್ ಫರೂಕಿ ಅವರನ್ನು ನಂತರ ಬಿಡುಗಡೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ. ನಗರದ ಕೋಟೆ ಪ್ರದೇಶದಲ್ಲಿ ಅಕ್ರಮವಾಗಿ … Continued

ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ನಿಧನ

ಕೋಲ್ಕತ್ತಾ : ರಾಮಕೃಷ್ಣ ಮಠ ಮತ್ತು ಮಿಷನ್‌ನ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜ ಅವರು ಮಂಗಳವಾರ 95 ನೇ ವಯಸ್ಸಿನಲ್ಲಿ ನಿಧನರಾದರು. ಅವರು ವಯೋಸಹಜ ಕಾಯಿಲೆಗಳಿಂದಾಗಿ ಜನವರಿ 29 ರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸ್ವಾಮಿ ಆತ್ಮಸ್ಥಾನಂದರ ಮರಣದ ನಂತರ ಸ್ವಾಮಿ ಸ್ಮರಣಾನಂದ ಮಹಾರಾಜ ಅವರು ರಾಮಕೃಷ್ಣ ಮಠ ಮತ್ತು ಮಿಷನ್‌ನ 16 ನೇ ಅಧ್ಯಕ್ಷರಾದರು. ಮೂತ್ರನಾಳದ … Continued

ವೀಡಿಯೊ..| ಹೋಳಿಯ ವೇಳೆ ಚಲಿಸುತ್ತಿರುವ ಸ್ಕೂಟರಿನಲ್ಲಿ ಮಹಿಳೆ ಟೈಟಾನಿಕ್‌ ಸ್ಟಂಟ್ ಮಾಡುವಾಗ ಯಡವಟ್ಟು : ಪೊಲೀಸರಿಂದ 33,000 ರೂ ದಂಡ..!

ವ್ಯಾಪಕ ಗಮನ ಸೆಳೆದಿರುವ ಘಟನೆಯೊಂದರಲ್ಲಿ, ಹೋಳಿ ಆಚರಣೆಯ ಮಧ್ಯೆ ಚಲಿಸುವ ಸ್ಕೂಟರ್‌ನಲ್ಲಿ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಲು ಯಡವಟ್ಟು ಮಾಡಿಕೊಂಡ ನಂತರ ಇಬ್ಬರು ವ್ಯಕ್ತಿಗಳಿಗೆ ನೋಯ್ಡಾ ಪೊಲೀಸರು ಸೋಮವಾರ 33,000 ರೂಪಾಯಿಗಳ ಭಾರಿ ದಂಡವನ್ನು ವಿಧಿಸಿದ್ದಾರೆ…! ಅಜಾಗರೂಕ ವರ್ತನೆಯ ವೀಡಿಯೊಗಳು ವೈರಲ್ ಆಗಿದ್ದು, ನೆಟಿಜನ್‌ಗಳು ಮತ್ತು ಅಧಿಕಾರಿಗಳಿಂದ ಕೋಪ ಮತ್ತು ಕಳವಳದ ನಂತರ ಈ ದಂಡದ ಕ್ರಮ … Continued

ಮಹಾರಾಷ್ಟ್ರದ ಸೆಮಿಕಂಡಕ್ಟರ್ ಉದ್ಯಮದಲ್ಲಿ 5,000 ಕೋಟಿ ಹೂಡಿಕೆ ಮಾಡಲಿರುವ ಸಚಿನ್ ತೆಂಡೂಲ್ಕರ್ ಬೆಂಬಲಿತ ಕಂಪನಿ

ಮುಂಬೈ : ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಬೆಂಬಲಿತ ಆರ್‌ಆರ್‌ಪಿ ಎಲೆಕ್ಟ್ರಾನಿಕ್ಸ್ ಕಂಪನಿಯು ಮಹಾರಾಷ್ಟ್ರದಲ್ಲಿ ಸೆಮಿಕಂಡಕ್ಟರ್ ಸೌಲಭ್ಯಕ್ಕಾಗಿ 5,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಮಂಗಳವಾರ ಪ್ರಕಟಿಸಿದೆ. ಮುಂದಿನ ಐದು ವರ್ಷಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟಾರೆ ಹೂಡಿಕೆಯಲ್ಲಿ ತೆಂಡೂಲ್ಕರ್ ಅಥವಾ ಇತರ ಷೇರುದಾರರ ವಿವರಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಮಾರ್ಚ್ 23 … Continued

ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ಸಿಗೆ ಆಘಾತ: ಲೂಧಿಯಾನದ ಕಾಂಗ್ರೆಸ್ ಸಂಸದ ಬಿಜೆಪಿ ಸೇರ್ಪಡೆ

ನವದೆಹಲಿ : ಲೋಕಸಭೆ ಚುನಾವಣೆಗೂ ಮುನ್ನ ಪಂಜಾಬಿನ ಲೂಧಿಯಾನದ ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟು ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರು ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ. “ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞನಾಗಿದ್ದೇನೆ…ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಂಜಾಬ್‌ನ ಬಗ್ಗೆ ಬಹಳಷ್ಟು ಪ್ರೀತಿಯನ್ನು … Continued