ಆಂಧ್ರಪ್ರದೇಶದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಫೋಟ: ಆರು ಮಂದಿ ಸಾವು, 13 ಮಂದಿಗೆ ಗಾಯ

ಅಮರಾವತಿ: ಆಂಧ್ರಪ್ರದೇಶದ ಎಲೂರು ಜಿಲ್ಲೆಯ ಪೋರಸ್ ಲ್ಯಾಬೋರೇಟರೀಸ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಆರು ಜನರು ಮೃತಪಟ್ಟಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ. ಪ್ರಯೋಗಾಲಯದಲ್ಲಿ ಸ್ಫೋಟದ ನಂತರ, ಬೆಂಕಿ ಕಾಣಿಸಿಕೊಂಡು ಆರು ಜನರು ಮೃತಪಟ್ಟಿದರು, ಸುಮಾರು 13 ಮಂದಿ ಗಾಯಗೊಂಡರು ಮತ್ತು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಪಘಾತದ ವೇಳೆ ಬ್ಲಾಕ್‌ನಲ್ಲಿ 30 ಮಂದಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 13 … Continued

ಜಾರ್ಖಂಡ್‌ನಲ್ಲಿ ಕೇಬಲ್ ಕಾರುಗಳು ಡಿಕ್ಕಿ ಹೊಡೆದ ಕ್ಷಣದ ಚಿಲ್ಲಿಂಗ್ ವೀಡಿಯೊ ಬಹಿರಂಗ: ಭಯದಿಂದ ಕೆಲವರು ಕೂಗಿಕೊಳ್ಳುತ್ತಾರೆ, ಕೆಲವರು ದೇವರ ಸ್ಮರಿಸುತ್ತಾರೆ…ವೀಕ್ಷಿಸಿ

ನವದೆಹಲಿ: ಭಾರತೀಯ ವಾಯುಪಡೆಯು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸಿದ ನಂತರ ಜಾರ್ಖಂಡ್‌ನ ದಿಯೋಘರ್‌ನಲ್ಲಿ ಸಂಭವಿಸಿದ ದುರಂತ ರೋಪ್‌ವೇ ಅಪಘಾತದ ಕ್ಷಣಗಳ ವೀಡಿಯೊವೊಂದು ಬಹಿರಂಗವಾಗಿದೆ. ಕೇಬಲ್ ಕಾರ್ ಮತ್ತೊಬ್ಬರಿಗೆ ಡಿಕ್ಕಿ ಹೊಡೆದ ಜನರ ಮೊಬೈಲ್ ಫೋನ್ ಕ್ಯಾಮರಾದಿಂದ ಚಿತ್ರೀಕರಿಸಲಾದ ವೀಡಿಯೊ ಕ್ಲಿಪ್ ಹಿನ್ನೆಲೆಯಲ್ಲಿ ಸಂಭಾಷಣೆಗಳೊಂದಿಗೆ ತೋರಿಸುತ್ತದೆ ಮತ್ತು ಇದ್ದಕ್ಕಿದ್ದಂತೆ ಮುಂದೆ ಬರುತ್ತಿರುವ ಕೆಂಪು ಕೇಬಲ್ ಕಾರ್ ಡಿಕ್ಕಿ ಹೊಡೆದು … Continued

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ನವಾಬ್ ಮಲಿಕ್ ಆಸ್ತಿ ಜಪ್ತಿ ಮಾಡಿದ ಇಡಿ

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ವಿರುದ್ಧದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಹಲವಾರು ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಏಪ್ರಿಲ್ 13 ಬುಧವಾರ ತಿಳಿಸಿದೆ. ಮೊಹಮ್ಮದ್ ನವಾಬ್ ಮೊಹಮ್ಮದ್ ಇಸ್ಲಾಂ ಮಲಿಕ್ ಅಲಿಯಾಸ್ ನವಾಬ್ ಮಲಿಕ್, ಅವರ ಕುಟುಂಬ … Continued

ಐಎನ್ಎಸ್ ವಿಕ್ರಾಂತ್ ಹಣ ದುರುಪಯೋಗ ಪ್ರಕರಣ: ಬಾಂಬೆ ಹೈಕೋರ್ಟಿನಿಂದ ಬಿಜೆಪಿ ನಾಯಕ ಕಿರೀಟ್ ಸೋಮಯ್ಯಗೆ ಮಧ್ಯಂತರ ಪರಿಹಾರ

ಮುಂಬೈ: ಮುಂಬೈ ಪೊಲೀಸರು ದಾಖಲಿಸಿರುವ ಹಣ ದುರುಪಯೋಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಕಿರೀಟ್ ಸೋಮಯ್ಯ ಅವರಿಗೆ ನಿರೀಕ್ಷಣಾ ಜಾಮೀನು ನೀಡುವ ಮೂಲಕ ಮಧ್ಯಂತರ ಪರಿಹಾರ ನೀಡಿದೆ. ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆ ಕಳಚದಂತೆ ರಕ್ಷಿಸಿ ಇಡಲು ಸಂಗ್ರಹಿಸಿದ್ದ ₹ 50 ಕೋಟಿಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಂಡ … Continued

ಪ್ರಧಾನಿ ಮೋದಿ ಬಳಿ ರಕ್ಷಣೆ ಕೋರಿದ ಗ್ಯಾಂಗ್ ರೇಪ್‌ನಿಂದ ಬದುಕುಳಿದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಹಿಳೆ

ಮುಜಫರಾಬಾದ್: ಕಳೆದ ಏಳು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಮಹಿಳೆ ಈಗ ತನಗೆ ಮತ್ತು ತನ್ನ ಮಕ್ಕಳಿಗೆ ಜೀವ ಬೆದರಿಕೆ ಇರುವ ಕಾರಣ ಆಶ್ರಯ ಮತ್ತು ರಕ್ಷಣೆ ನೀಡಿ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸಹಾಯವನ್ನು ಕೋರಿದ್ದಾರೆ. ಭಾವನಾತ್ಮಕ ವೀಡಿಯೊ ಸಂದೇಶದಲ್ಲಿ, ಮಾರಿಯಾ ತಾಹಿರ್, … Continued

ನಿಂತು ಮಾತನಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಸ್ಲ್ಯಾಬ್ ಕುಸಿದು ಚರಂಡಿಯ ಆಳ ಗುಂಡಿಯೊಳಗೆ ಬೈಕ್‌ ಸಮೇತ ಬಿದ್ದ ಐವರು…! ವೀಕ್ಷಿಸಿ

ಜೈಸಲ್ಮೇರ್: ರಾಜಸ್ತಾನದ ಜೈಸಲ್ಮೇರ್‌ನಿಂದ ಐದು ಪುರುಷರು ಚಪ್ಪಡಿ ಮೇಲೆ ನಿಂತಿದ್ದ ನಂತರ ಇದ್ದಕ್ಕಿದ್ದಂತೆ ಗುಂಡಿಗೆ ಬಿದ್ದ ನಾಟಕೀಯ ವೀಡಿಯೊ ಹೊರಬಂದಿದೆ. ಅವರ ಬಳಿ ನಿಂತಿದ್ದ ಬೈಕ್ ಕೂಡ ಗುಂಡಿಗೆ ಬಿದ್ದಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದಾಗ ಐವರು ಟೈರ್ ರಿಪೇರಿ ಅಂಗಡಿಯಲ್ಲಿ ನಿಂತಿದ್ದರು. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. … Continued

ಗೂಗಲ್ ಸಂಸ್ಥಾಪಕರಾದ ಲ್ಯಾರಿ ಪೇಜ್, ಸರ್ಜಿ ಬ್ರಿನ್ ಹಿಂದಿಕ್ಕಿದ ಗೌತಮ್ ಅದಾನಿ ಈಗ ವಿಶ್ವದ 6ನೇ ಅತ್ಯಂತ ಶ್ರೀಮಂತ

ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೌತಮ್ ಅದಾನಿ ಅವರು ಈಗ ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬಂದರು, ಗಣಿಗಾರಿಕೆ, ಇಂಧನ ಸೇರಿದಂತೆ ಇನ್ನಿತರ ಹಲವಾರು ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಅದಾನಿ ಸಂಸ್ಥೆಯ ಷೇರುಗಳಲ್ಲಿ ಭಾರಿ ಏರಿಕೆ ಕಂಡುಬಂದಿದ್ದರಿಂದ ಅವರ ಒಟ್ಟು ಆಸ್ತಿ ಮೌಲ್ಯ 118 ಬಿಲಿಯನ್ ಅಮೆರಿಕನ್ ಡಾಲರುಗಳಿಗೆ ಏರಿದ್ದು, ಈಗ ಅವರು ವಿಶ್ವದ 6 … Continued

ಟಿಪ್-ಆಫ್ ನಂತರ ಶಿಕ್ಷಕಿ ಬಳಿ ದೇಶ ನಿರ್ಮಿತ ಪಿಸ್ತೂಲ್ ಪತ್ತೆ…! ವೀಡಿಯೊ ವೈರಲ್‌

ಮೈನ್‌ಪುರಿ (ಉತ್ತರ ಪ್ರದೇಶ): ದೇಶ ನಿರ್ಮಿತ ಪಿಸ್ತೂಲ್ ಇಟ್ಟುಕೊಂಡು ತಿರುಗಾಡುತ್ತಿದ್ದ ಮಹಿಳೆಯೊಬ್ಬರನ್ನು ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಿನ್ನೆ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಆರೋಪಿಯನ್ನು ಕರಿಷ್ಮಾ ಸಿಂಗ್ ಯಾದವ್ ಎಂದು ಗುರುತಿಸಲಾಗಿದ್ದು, ಫಿರೋಜಾಬಾದ್‌ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಕೆಲವು ಕೆಲಸದ ಕಾರಣ ಅವಳು ನಿನ್ನೆ ಮೈನ್ಪುರಿಯಲ್ಲಿದ್ದಳು” ಎಂದು ಅವರು … Continued

‘ಅಸಮರ್ಪಕ ತರಬೇತಿ’ : 90 ಸ್ಪೈಸ್‌ಜೆಟ್ ಪೈಲಟ್‌ಗಳನ್ನು ಬೋಯಿಂಗ್ 737 ಮ್ಯಾಕ್ಸ್ ವಿಮಾನ ನಿರ್ವಹಿಸದಂತೆ ನಿರ್ಬಂಧಿಸಿದ ಡಿಜಿಸಿಎ

ನವದೆಹಲಿ: ಭಾರತೀಯ ವಿಮಾನಯಾನ ನಿಯಂತ್ರಕ ಡಿಜಿಸಿಎ 90 ಸ್ಪೈಸ್‌ಜೆಟ್ ಪೈಲಟ್‌ಗಳು ಬೋಯಿಂಗ್ 737 ಮ್ಯಾಕ್ಸ್ ವಿಮಾನ ನಿರ್ವಹಿಸಲು ಸರಿಯಾಗಿ ತರಬೇತಿ ಪಡೆದಿಲ್ಲ ಎಂದು ಕಂಡುಕೊಂಡ ನಂತರ ಅವರಿಗೆ ಅದನ್ನು ನಿರ್ವಹಿಸುವುದನ್ನು ನಿರ್ಬಂಧಿಸಿದೆ. ಸದ್ಯಕ್ಕೆ ನಾವು ಈ ಪೈಲಟ್‌ಗಳನ್ನು ಮ್ಯಾಕ್ಸ್ ವಿಮಾನ ಹಾರಿಸುವುದನ್ನು ನಿರ್ಬಂಧಿಸಿದ್ದೇವೆ ಮತ್ತು ಅವರು ವಿಮಾನವನ್ನು ಹಾರಿಸಲುಮರು ತರಬೇತಿ ಪಡೆಯಬೇಕಾಗಿದೆ ಎಂದು ಡಿಜಿಸಿಎ ಮುಖ್ಯಸ್ಥ … Continued

ಪಶ್ಚಿಮ ಬಂಗಾಳ: ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ-ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಕೋಲ್ಕತ್ತಾ ಹೈಕೋರ್ಟ್ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಯಿಂದ ತನಿಖೆಗೆ ಆದೇಶಿಸಿದೆ. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಪೊಲೀಸರಿಗೆ ಸೂಚಿಸಿದೆ. ಸಿಬಿಐ ಈ ಪ್ರಕರಣವನ್ನು ನ್ಯಾಯಯುತ ತನಿಖೆಗೆ ತೆಗೆದುಕೊಳ್ಳಬೇಕು ಮತ್ತು ಸಂತ್ರಸ್ತೆಯ ಕುಟುಂಬ ಸದಸ್ಯರು ಮತ್ತು ಸ್ಥಳೀಯ ಮತ್ತು … Continued