ಕುಕರ್ಮ ಹಿಟ್‌ ಬ್ಯಾಕ್‌…ದೇವಾಲಯದ ಆಭರಣ ಕದಿಯಲು ಹೋಗಿ ತಾನು ಕೊರೆದ ರಂಧ್ರದಲ್ಲಿಯೇ ಸಿಕ್ಕಿಕೊಂಡ ಕಳ್ಳ | ವೀಡಿಯೊ ವೀಕ್ಷಿಸಿ

ಶ್ರೀಕಾಕುಳಂ: ಸ್ವತಃ ದೈವಿಕ ಹಸ್ತಕ್ಷೇಪ ಎಂದು ಕರೆಯಬಹುದಾದ ಪ್ರಕರಣವೊಂದರಲ್ಲಿ ಕುಕರ್ಮಕ್ಕೆ ತಕ್ಷಣವೇ ಫಲಿತಾಂಶ ಸಿಕ್ಕಿದೆ. ಆಂಧ್ರಪ್ರದೇಶದ ದೇವಾಲಯದಿಂದ ಆಭರಣಗಳನ್ನು ಕದಿಯಲು ಕೊರೆದ ರಂಧ್ರದಲ್ಲಿ ಕಳ್ಳನೊಬ್ಬ ತಾನೇ ಸಿಲುಕಿಕೊಂಡಿದ್ದಾನೆ..! ದೇವಸ್ಥಾನದ ಗೋಡೆಯಲ್ಲಿ ಕೊರೆದಿದ್ದ ಕಿಂಡಿಯಲ್ಲಿ ಸಿಲುಕಿ ಸಹಾಯಕ್ಕಾಗಿ ಕೂಗಾಡಲು ಆರಂಭಿಸಿದ ಕಳ್ಳ ರೆಡ್ ಹ್ಯಾಂಡ್ ಆಗಿ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನ ಕರಾವಳಿ … Continued

ಸತ್ತ ವ್ಯಕ್ತಿ ಜೀವಂತ…! ಶವ ಸಮಾಧಿ ಮಾಡಿದ 24 ತಾಸಿನ ನಂತರ ಜೀವಂತ ಮನೆಗೆ ಬಂದ ವ್ಯಕ್ತಿ …!!

ಚೆನ್ನೈ: 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ಭಾವಿಸಿ, ಅವರ ಕುಟುಂಬದವರು ಸಮಾಧಿ ಮಾಡಿದ್ದು, ಆದರೆ ಸಮಾಧಿ ಮಾಡಿದ ಒಂದು ದಿನದೊಳಗೆ ಅವರು ಮನೆಮುಂದೆ ಪ್ರತ್ಯಕ್ಷರಾಗಿದ್ದಾರೆ..! ಸೋಮವಾರ ಈ ವಿದ್ಯಮಾನ ನಡೆದಿದ್ದು, ಸಮಾಧಿ ಮಾಡಲ್ಪಟ್ಟ ವ್ಯಕ್ತಿ ಮನೆಗೆ ಬಂದಿದ್ದು ನೋಡಿ ಮನೆಯವರು ಕ್ಷಣಕಾಲ ಆಘಾತಕ್ಕೊಳಗಾಗಿದ್ದರು. ಪೂಂಜೈ ತುರೈಯಂಪಾಳ್ಯದ ಮೂರ್ತಿ ಟಿ.ಎನ್. ಪಾಲಯಂ ಬ್ಲಾಕ್, ದಿನಗೂಲಿ, ಅವರು ಕೆಲವು … Continued

ರಾಜ್ ಠಾಕ್ರೆಯವರೇ ಬಾಳ್‌ ಠಾಕ್ರೆಯವರ ನಿಜವಾದ ವಾರಸುದಾರ ಎಂದು ಶಿವಸೇನಾ ಭವನದ ಮುಂದೆ ಬೃಹತ್‌ ಪೋಸ್ಟರ್ ಹಾಕಿದ ಎಂಎನ್‌ಎಸ್

ಮುಂಬೈ: ಕುರ್ಲಾದ ಮೈದಾನದಲ್ಲಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ನುಡಿಸಿದ ಆರು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರನ್ನು ಬಂಧಿಸಿದ ಒಂದು ದಿನದ ನಂತರ, ರಾಜ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಕ್ಷವು ಮುಂಬೈನ ದಾದರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಾದ ಶಿವಸೇನಾ ಭವನದ ಹೊರಗೆ ಬೃಹತ್‌ ಪೋಸ್ಟರ್ ಹಾಕಿದೆ. ಈ ಪೋಸ್ಟರ್ ಶಿವಸೇನೆ ಸಂಸ್ಥಾಪಕ ದಿವಂಗತ … Continued

ರಷ್ಯಾ-ಉಕ್ರೇನ್‌ ಯುದ್ಧ-ಬುಚಾ ಹತ್ಯೆಗಳಿಂದ ತೀವ್ರ ಆಘಾತ: ಸ್ವತಂತ್ರ ತನಿಖೆ ಕರೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಬೆಂಬಲ

ವಿಶ್ವಸಂಸ್ಥೆ: ಉಕ್ರೇನ್‌ನ ಬುಚಾ ನಗರದಲ್ಲಿನ ನಾಗರಿಕ ಹತ್ಯೆಗಳ “ತೀವ್ರ ಆಘಾತದ” ವರದಿಗಳನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಮಂಗಳವಾರ ನಿಸ್ಸಂದಿಗ್ಧವಾಗಿ ಖಂಡಿಸಿದೆ ಮತ್ತು ಸ್ವತಂತ್ರ ತನಿಖೆಯ ಕರೆಯನ್ನು ಬೆಂಬಲಿಸಿದೆ, ಮುಗ್ಧ ಮಾನವ ಜೀವಗಳು ಅಪಾಯದಲ್ಲಿದ್ದಾಗ ಕಾರ್ಯಸಾಧ್ಯವಾದ ಆಯ್ಕೆ ರಾಜತಾಂತ್ರಿಕತೆ ಮಾತ್ರ ಮೇಲುಗೈ ಸಾಧಿಸಬೇಕು ಎಂದು ಅದು ಒತ್ತಿಹೇಳಿದೆ. . ಕೌನ್ಸಿಲ್ ಈ ವಿಷಯವನ್ನು ಕೊನೆಯದಾಗಿ ಚರ್ಚಿಸಿದಾಗಿನಿಂದ … Continued

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಮತ್ತು ಅದರಾಚೆ…ಈ ಬಿಕ್ಕಟ್ಟನ್ನು ಪೋಷಿಸುವ ಸಾಲ ಎಂಬ ಚೀನಾದ ಕಬಂಧ ಬಾಹುಗಳು..

ನೀವು ಶ್ರೀಲಂಕಾದಲ್ಲಿದ್ದರೆ, ಬಹುಧ ನೀವು ಬಹುಶಃ ಪ್ರತಿಭಟನಾಕಾರರೊಂದಿಗೆ ಸೇರಲು ಸಿದ್ಧವಾಗುತ್ತಿದ್ದಿರೇನೋ ? ಯಾಕೆಂದರೆ, ಹಾಲು, ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಖಾದ್ಯ ತೈಲ, ಇಂಧನ ತೈಲ, ಅಡುಗೆ ಅನಿಲ, ಔಷಧಗಳು ಮತ್ತು ಪ್ರಾಯೋಗಿಕವಾಗಿ ನೀವು ಯೋಚಿಸಬಹುದಾದ ಎಲ್ಲದರ ಪೂರೈಕೆಗಳು ಅಲ್ಲಿ ಸ್ಥಗಿತಗೊಂಡಿವೆ. ಅಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಷ್ಟೇ ಅಲ್ಲ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ … Continued

2022ರ ಫೋರ್ಬ್ಸ್ ಭಾರತದ ಟಾಪ್‌ 10 ಶ್ರೀಮಂತರ ಪಟ್ಟಿ: ಮುಖೇಶ ಅಂಬಾನಿ ಭಾರತದ ಅತಿ ಶ್ರೀಮಂತ..

ನವದೆಹಲಿ: ಭಾರತದ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ ಮುಕೇಶ್ ಅಂಬಾನಿ ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಫೋರ್ಬ್ಸ್ ಬಿಡುಗಡೆ ಮಾಡಿರುವ 2022ನೇ ಸಾಲಿನ ಪಟ್ಟಿಯಲ್ಲಿ ದೇಶದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಎಚ್ ಸಿಎಲ್ ಟೆಕ್ನಾಲಜಿ ಚೇರ್ ಮೆನ್ ಶಿವ ನಾಡರ್ ದೇಶದ … Continued

ಗೋರಖನಾಥ ದೇಗುಲದ ಹೊರಗೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಝಾಕಿರ್ ನಾಯ್ಕ್ ವೀಡಿಯೊ ನೋಡುತ್ತಿದ್ದ: ಉತ್ತರ ಪ್ರದೇಶ ಸರ್ಕಾರದ ಉನ್ನತಾಧಿಕಾರಿ

ಲಕ್ನೋ: ಭಾನುವಾರ ಗೋರಕನಾಥ ದೇವಸ್ಥಾನದ ಹೊರಗೆ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್‌ ಅವರ ವೀಡಿಯೊವನ್ನು ಅಂತರ್ಜಾಲದಲ್ಲಿ ವೀಕ್ಷಿಸುತ್ತಿದ್ದ ಎಂದು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ತಿ ಹೇಳಿದ್ದಾರೆ. “ಯಾವುದನ್ನೂ ಅಲ್ಲಗಳೆಯುವಂತಿಲ್ಲ. ಆತನ ನ್ಯಾಯಾಂಗ ಬಂಧನ ಮುಗಿದ ನಂತರ ಆತನನ್ನು ಪೊಲೀಸ್ ಕಸ್ಟಡಿಗೆ … Continued

ಶಿವಸೇನಾ ಸಂಸದ ಸಂಜಯ್ ರಾವುತ್ ಪತ್ನಿ, ಇತರರ ಒಡೆತನದ 11 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

ಮುಂಬೈ: ಪತ್ರಾ ಚಾಲ್ ಯೋಜನೆಯ ಪುನರಾಭಿವೃದ್ಧಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ಪತ್ನಿ ವರ್ಷಾ ರಾವತ್ ಸೇರಿದಂತೆ ಮೂವರಿಂದ 11.15 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈನ ಗೋರೆಗಾಂವ್‌ನಲ್ಲಿ ಗುರು ಆಶಿಶ್ ಕನ್‌ಸ್ಟ್ರಕ್ಷನ್ … Continued

ದೆಹಲಿ ಸಚಿವ ಸತ್ಯೇಂದ್ರ ಜೈನ್ ಕುಟುಂಬ-ಸಂಸ್ಥೆಗಳ 4.8 ಕೋಟಿ ಮೌಲ್ಯದ ಆಸ್ತಿ ಲಗತ್ತಿಸಿದ ಇಡಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರ ಕುಟುಂಬಕ್ಕೆ ಸಂಬಂಧಿಸಿದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಲಗತ್ತಿಸಲಾದ ಸ್ಥಿರಾಸ್ತಿಗಳು ಅಕಿಂಚನ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್, ಇಂಡೋ ಮೆಟಲ್ ಇಂಪೆಕ್ಸ್ ಪ್ರೈವೇಟ್ … Continued

ಟಿವಿ ನ್ಯೂಸ್ ಚಾನೆಲ್‌ಗಳ ಲೋಗೊ ಬಳಸಿ ನಕಲಿ ಸುದ್ದಿಗಳನ್ನು ಹರಡುತ್ತಿದ್ದ ಭಾರತದ 18, ಪಾಕ್ ಮೂಲದ 4 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದ ಮಾಹಿತಿ-ಪ್ರಸಾರ ಸಚಿವಾಲಯ

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 18 ಭಾರತೀಯ ಮತ್ತು ನಾಲ್ಕು ಪಾಕಿಸ್ತಾನ ಮೂಲದ ಯೂ ಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ನಕಲಿ ಸುದ್ದಿ ಹಾಗೂ ಭಾರತ ವಿರೋಧಿ ವಿಷಯವನ್ನು ಪೋಸ್ಟ್ ಮಾಡಿದ್ದಕ್ಕಾಗಿ ನಿರ್ಬಂಧಿಸಿದೆ. ವೀಕ್ಷಕರನ್ನು ದಾರಿತಪ್ಪಿಸಲು ಈ ಯೂ ಟ್ಯೂಬ್ ಚಾನೆಲ್‌ಗಳು ಟಿವಿ ನ್ಯೂಸ್ ಚಾನೆಲ್‌ಗಳ ಲೋಗೊಗಳು ಮತ್ತು ಸುಳ್ಳು ಥಂಬ್‌ನೇಲ್‌ಗಳನ್ನು ಬಳಸಿಕೊಂಡಿವೆ ಎಂದು ಸಚಿವಾಲಯ … Continued