ಟೋಲ್ ನಲ್ಲಿ ಮಹಿಳೆಯ ದಾದಾಗಿರಿ..: ಟೋಲ್ ಪಾವತಿಸಿ ಎಂದಿದ್ದಕ್ಕೆ ಸಿಬ್ಬಂದಿ ಕೂದಲು ಜಗ್ಗಾಡಿ, ಕುರ್ಚಿಯಿಂದ ನೆಲಕ್ಕೆ ಕೆಡಹಿದ ಮಹಿಳೆ | ದೃಶ್ಯ ಸೆರೆ

ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ಮಹಿಳೆಯೊಬ್ಬರು ಟೋಲ್ ಪ್ಲಾಜಾ ಉದ್ಯೋಗಿಯ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಲುಹರ್ಲಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಟೋಲ್ ಪಾವತಿ ಮಾಡುವಂತೆ ಟೋಲ್‌ ಸಿಬ್ಬಂದಿ ಹೇಳಿದ್ದಕ್ಕಾಗಿ ಮಹಿಳೆಯು ಟೋಲ್ ಪ್ಲಾಜಾ ಉದ್ಯೋಗಿ ಮಹಿಳೆಯ ಕೂದಲನ್ನುಹಿಡಿದು ಜಗ್ಗಿದ್ದಾಳೆ, ಎಳೆದಾಡಿದ್ದಾಳೆ ಮತ್ತು … Continued

ವಿರೋಧ ಪಕ್ಷಗಳ ಒಕ್ಕೂಟ VS ಬಿಜೆಪಿ ಮೈತ್ರಿ : ಪ್ರತಿಪಕ್ಷಗಳ ಸಭೆಗೆ ಸಮಾನಾಂತರವಾಗಿ ನಾಳೆ ಬಿಜೆಪಿ ನೇತೃತ್ವದಲ್ಲಿ 38 ಪಕ್ಷಗಳ ಎನ್‌ಡಿಎ ಸಮಾವೇಶ

ನವದೆಹಲಿ : ಮಂಗಳವಾರ (ಜುಲೈ 18) ದೆಹಲಿಯಲ್ಲಿ ನಡೆಯಲಿರುವ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಭೆಯಲ್ಲಿ ಭಾಗವಹಿಸುವುದನ್ನು 38 ಪಕ್ಷಗಳ ನಾಯಕರು ಖಚಿತಪಡಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಎನ್‌ಡಿಎ ಬೆಳವಣಿಗೆ ಕುರಿತು ಮಾತನಾಡಿದ ಅವರು, ಎನ್‌ಡಿಎ ಮೈತ್ರಿ ಅಧಿಕಾರಕ್ಕಾಗಿ ಅಲ್ಲ, ಈ … Continued

ಜಮ್ಮು-ಕಾಶ್ಮೀರ ಶಾಕರ್…: 27 ಜನರನ್ನು ಮದುವೆಯಾಗಿ ಹಣದೊಂದಿಗೆ ಪರಾರಿಯಾದ ಚಾಲಾಕಿ ಮಹಿಳೆ…!

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮಹಿಳೆಯೊಬ್ಬಳು ಮದುವೆಯ ಹೆಸರಿನಲ್ಲಿ ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ 27 ಪುರುಷರನ್ನು ವಂಚಿಸಿದ್ದಾಳೆ…! ಬುದ್ಗಾಮ್ ಜಿಲ್ಲೆಯ 12 ಜನರು ತಮ್ಮ ಪತ್ನಿ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಗಳಲ್ಲಿ ದೂರು ನೀಡಿ ತಮ್ಮ ಜೊತೆಗಿರುವ ಮಹಿಳೆಯ ಫೋಟೋವನ್ನು ಪೊಲೀಸರಿಗೆ ತೋರಿಸಿದ ನಂತರ ಅವಳಿ ಎಲ್ಲರಿಗೂ ಮೋಸ ಮಾಡಿರುವುದು ಗೊತ್ತಾಗಿದೆ. ಏಕೆಂದರೆ ಅವರ ಎಲ್ಲಾ ಫೋಟೋಗಳಲ್ಲಿ ಮಹಿಳೆ … Continued

ಖ್ಯಾತ ಗಣಿತಜ್ಞೆ ಡಾ. ಮಂಗಳಾ ನಾರ್ಲಿಕರ್ ನಿಧನ

ಪುಣೆ : ಖ್ಯಾತ ಗಣಿತಜ್ಞೆ ಡಾ.ಮಂಗಳಾ ಜೆ.ನಾರ್ಲಿಕರ್ ಅವರು ಸೋಮವಾರ ಮುಂಜಾನೆ ನಿಧನರಾಗಿದ್ದಾರೆ ಎಂದು ಮಾಜಿ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಕಳೆದ ಒಂದು ವರ್ಷದಿಂದ ಕ್ಯಾನ್ಸರ್‌ ಜೊತೆ ಹೋರಾಟ ನಡೆಸಿದ್ದರು. ಅವರು ಪತಿ, ಪ್ರಸಿದ್ಧ ಖಗೋಳ ಭೌತಶಾಸ್ತ್ರಜ್ಞ ಮತ್ತು ವಿಶ್ವಶಾಸ್ತ್ರಜ್ಞ ಡಾ ಜಯಂತ್ ನಾರ್ಲಿಕರ್ ಮತ್ತು ಮೂವರು ಪುತ್ರಿಯರಾದ ಲೀಲಾವತಿ, … Continued

ಎರಡನೇ ಬಾರಿಗೆ ಚಂದ್ರಯಾನ-3ರ ಕಕ್ಷೆ ಎತ್ತರಿಸಿದ ಇಸ್ರೋ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎರಡನೇ ಬಾರಿಗೆ ಚಂದ್ರಯಾನ-3 ಮಿಷನ್‌ನ ಕಕ್ಷೆಯನ್ನು ಯಶಸ್ವಿಯಾಗಿ ಏರಿಸಿದೆ. ಬಾಹ್ಯಾಕಾಶ ನೌಕೆಯು ಈಗ 200 ಕಿಲೋಮೀಟರ್‌ಗಿಂತಲೂ ಹೆಚ್ಚು ಪರಿಧಿಯಲ್ಲಿ ಹಾರುತ್ತಿದೆ. ಭೂಮಿಯ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಳ್ಳಲು ಮತ್ತು ಚಂದ್ರನ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಲು ಅಗತ್ಯವಾದ ನಿಖರವಾದ ಎತ್ತರವನ್ನು ಸಾಧಿಸಲು, ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಇನ್ನೂ ಮೂರು ಕಕ್ಷೆಯನ್ನು … Continued

ಇದು ʼತಮಾಷೆʼ ಮಾಡುವ ವಿಷಯವಲ್ಲ..: ‘ತಮಾಷೆಗಾಗಿ’ ಶಾಲೆಯಲ್ಲಿ ಬಾಲಕಿಯರಿಗೆ ವಿದ್ಯುತ್‌ ಶಾಕ್‌ ; ಇಬ್ಬರು ಎಲೆಕ್ಟ್ರಿಷಿಯನ್‌ಗಳ ಬಂಧನ…!

ಅಮರಾವತಿ : ಆಂಧ್ರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹುಡುಗಾಟ ಮಾಡಲು ಹೋಗಿ ಅದು ವಿದ್ಯಾರ್ಥಿನಿಯರ ಜೀವಕ್ಕೇ ಆಪತ್ತು ತಂದೊಡ್ಡುವಂತಹ ಸನ್ನಿವೇಶ ನಿರ್ಮಾಣವಾದ ಕಾರಣಕ್ಕೆ ವಿಜಯವಾಡದಲ್ಲಿ ಇಬ್ಬರು ಎಲೆಕ್ಟ್ರಿಷಿಯನ್‌ಗಳನ್ನು ಬಂಧಿಸಲಾಗಿದೆ. ಬೆಂಚ್‌ ಮೇಲೆ ಕುಳಿತಾಕ್ಷಣ ವಿದ್ಯಾರ್ಥಿನಿಯರಿಗೆ ವಿದ್ಯುತ್‌ ಶಾಕ್‌ ಹೊಡೆಯುವ ನಿಗೂಢವನ್ನು ಬಯಲೆಗಳೆಯಲು ಪೊಲೀಸರೇ ಬರಬೇಕಾಯಿತು. ಆಂಧ್ರಪ್ರದೇಶದ ಈಡುಪುಗಲ್ಲು ಗ್ರಾಮದ ಜಿಲ್ಲಾ ಪರಿಷತ್‌ ಶಾಲೆಯಲ್ಲಿ ಈ … Continued

ಈ ವಾರ ಬಿಜೆಪಿ ನೇತೃತ್ವದ ಎನ್‌ಡಿ ಮೈತ್ರಿಕೂಟದ 30 ಪಕ್ಷಗಳು Vs 24 ಪ್ರತಿಪಕ್ಷಗಳ ಶಕ್ತಿ ಪ್ರದರ್ಶನ

ನವದೆಹಲಿ : ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷಗಳು ಅಂಕಿ-ಅಂಶಗಳೊಂದಿಗೆ ಹೈ ವೋಲ್ಟೇಜ್ ರಾಜಕೀಯ ಹಣಾಹಣಿಗೆ ಸಿದ್ಧತೆ ನಡೆಸಿವೆ. ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಮಂಗಳವಾರ ನವದೆಹಲಿಯಲ್ಲಿ ಬೃಹತ್‌ ಸಭೆ ಮಾಡುವ ಬಗ್ಗೆ ಘೋಷಿಸಿದ್ದು, ಇದಕ್ಕೆ ಸುಮಾರು 30 ಪಕ್ಷಗಳು ಮೈತ್ರಿಗೆ ಬೆಂಬಲವನ್ನು ಪುನರುಚ್ಚರಿಸುವ ನಿರೀಕ್ಷೆಯಿದೆ. ಇದೇವೇಳೆ ತಮ್ಮ … Continued

ಇಂದಿನಿಂದ ದೆಹಲಿ-ಇತರ ನಗರಗಳಲ್ಲಿ ಕೆಜಿಗೆ 80 ರೂ.ನಂತೆ ಟೊಮೆಟೊ ಮಾರಾಟ : ಕೇಂದ್ರ ಸರ್ಕಾರ

ನವದೆಹಲಿ: ಟೊಮ್ಯಾಟೊ ಬೆಲೆಗಳು ಗಗನಕ್ಕೇರುತ್ತಿರುವ ಮಧ್ಯೆ, ಕೇಂದ್ರ ಸರ್ಕಾರವು ಭಾನುವಾರ ದೆಹಲಿ-ಎನ್‌ಸಿಆರ್ ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿನ ಇತರ ಸ್ಥಳಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಟೊಮೆಟೊಗಳ 80 ರೂ.ಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿದೆ. ದೇಶದ 500ಕ್ಕೂ ಹೆಚ್ಚು ಅಧಿಕ ಕಡೆಗಳಲ್ಲಿ ಪರಿಸ್ಥಿತಿಯ ಮರು ಮೌಲ್ಯಮಾಪನದ ನಂತರ ಟೊಮೆಟೊ ಬೆಲೆಯನ್ನು ಕಡಿಮೆ ಮಾಡುವ ನಿರ್ಧಾರಕ್ಕೆ ಬಂದಿತು. ಗ್ರಾಹಕರಿಗೆ ಪರಿಹಾರ … Continued

ದೆಹಲಿ ಸುಗ್ರೀವಾಜ್ಞೆ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲಿಸಿದ ನಂತರ ಬೆಂಗಳೂರು ಪ್ರತಿಪಕ್ಷಗಳ ಸಭೆಯಲ್ಲಿ ಭಾಗಿಯಾಗ್ತೇವೆ ಎಂದ ಎಎಪಿ

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಒಗ್ಗಟ್ಟಿನ ಕಾರ್ಯತಂತ್ರವನ್ನು ನಿರ್ಧರಿಸಲು ಆಮ್ ಆದ್ಮಿ ಪಾರ್ಟಿ ನಾಳೆ (ಜುಲೈ ೧೭) ಕರ್ನಾಟಕದ ಬೆಂಗಳೂರಿನಲ್ಲಿ ನಡೆಯಲಿರುವ ಪ್ರಮುಖ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಲಿದೆ. ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಪ್ರಮುಖ ರಾಜಕೀಯ ಸಮಿತಿಯ ಸಭೆಯ ನಂತರ ಮತ್ತು ದೆಹಲಿಯ ಅಧಿಕಾರಶಾಹಿಯ ಮೇಲೆ ಹಿಡಿತ … Continued

ಸಹೋದರಿಯರ ಮೇಲೆ ಲೈಂಗಿಕ ದೌರ್ಜನ್ಯ : ಬಿಜೆಪಿ ಮುಖಂಡನ ಮಗ ಸೇರಿ ನಾಲ್ವರ ವಿರುದ್ಧ ಆರೋಪ

ಭೋಪಾಲ್: ಮಧ್ಯಪ್ರದೇಶದ ದತಿಯಾ ಜಿಲ್ಲೆಯಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಅಪ್ರಾಪ್ತ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಾಲ್ವರು ಆರೋಪಿಗಳಲ್ಲಿ ಮಧ್ಯಪ್ರದೇಶ ಬಿಜೆಪಿ ನಾಯಕನ ಮಗ ಸೇರಿದ್ದಾನೆ. ಸಂತ್ರಸ್ತ ಹೆಣ್ಣುಮಕ್ಕಳ ಸಂಬಂಧಿಕರು ಮತ್ತು ಸ್ಥಳೀಯರು ಕ್ರಮಕ್ಕಾಗಿ ಒತ್ತಾಯಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ನಂತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರದೇಶವು … Continued