ಪುಸ್ತಕದ ಮುನ್ನುಡಿಯಲ್ಲಿ ಡಾ.ಅಂಬೇಡ್ಕರ್ -ಪ್ರಧಾನಿ ಮೋದಿ ನಡುವಿನ ಸಮಾನಾಂತರದ ಬಗ್ಗೆ ಬರೆದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ

ನವದೆಹಲಿ: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ‘ಅಂಬೇಡ್ಕರ್ ಮತ್ತು ಮೋದಿ: ರಿಫಾರ್ಮರ್ಸ್ ಐಡಿಯಾಸ್, ಪರ್ಫಾಮರ್ಸ್ ಇಂಪ್ಲಿಮೆಂಟೇಶನ್’ ಎಂಬ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡಾ ಬಿಆರ್ ಅಂಬೇಡ್ಕರ್ ನಡುವಿನ ಸಮಾನಾಂತರಗಳ ಬಗ್ಗೆ ಬರೆದಿದ್ದಾರೆ. ಪುಸ್ತಕವನ್ನು ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಪ್ರಕಟಿಸಿದೆ. ಮುನ್ನುಡಿಯಲ್ಲಿ ಇಳಯರಾಜ ಹೀಗೆ ಬರೆದಿದ್ದಾರೆ, “ಈ ಪುಸ್ತಕವು ಡಾ. … Continued

ಮುಂದಿನ 20 ವರ್ಷಗಳಲ್ಲಿ ಅಖಂಡ ಭಾರತದ ಕನಸು ನನಸು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್

ಹರಿದ್ವಾರ (ಉತ್ತರ ಪ್ರದೇಶ): ಅಖಂಡ ಭಾರತದ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಹೇಳಿದ್ದಾರೆ. ಸ್ವಾಮಿ ವಿವೇಕಾನಂದ ಮತ್ತು ಮಹರ್ಷಿ ಅರವಿಂದರ ಕನಸಾದ ‘ಅಖಂಡ ಭಾರತ’ ಜನಸಾಮಾನ್ಯರೂ ಸ್ವಲ್ಪ ಪ್ರಯತ್ನ ಮಾಡಿದರೆ 10-15 ವರ್ಷಗಳಲ್ಲಿ ನನಸಾಗಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಹರಿದ್ವಾರದಲ್ಲಿ ನಡೆದ … Continued

ವ್ಯಾಟ್ಸಸ್‌ನಿಂದ ಅನೇಕ ಹೊಸ ಫೀಚರ್ಸ್​ ಘೋಷಣೆ ​: ವಾಟ್ಸಪ್‌ ಗ್ರುಪ್‌ಗಳಿಗೆ ಶೀಘ್ರವೇ 4 ಹೊಸ ವೈಶಿಷ್ಟ್ಯಗಳು ಲಭ್ಯ

ಮೆಟಾ ಒಡೆತನದ ಭಾರತದ ಅತ್ಯಂತ ಜನಪ್ರಿಯ ಮಸೇಜಿಂಗ್​ ವೇದಿಕೆ ವಾಟ್ಸ್​ಆಯಪ್​ ತನ್ನ ಬಳಕೆದಾರರಿಗೆ ‘ಕಮ್ಯೂನಿಟೀಸ್​’ ಹೆಸರಿನ ಹೊಸ ಫೀಚರ್​ ಅನ್ನು ಪರಿಚಯಿಸಲಿದೆ. ಶೀಘ್ರದಲ್ಲಿ ಈ ಹೊಸ ಫೀಚರ್​ ಜಾಗತಿಕವಾಗಿ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲೂ ಲಭ್ಯವಾಗಲಿದೆ. ಗ್ರುಪ್‌ ನಿರ್ವಾಹಕರಿಗೆ ಅಳಿಸುವಿಕೆಗೆ ಅವಕಾಶ (ಅಡ್ಮಿನ್ ಡಿಲೀಟ್), ವಿಸ್ತೃತ ಧ್ವನಿ ಕರೆಗಳಿಗೆ ಅವಕಾಶ, ಸಂದೇಶ ಪ್ರತಿಕ್ರಿಯೆಗಳು ಮತ್ತು ದೊಡ್ಡ ಫೈಲ್ ಹಂಚಿಕೆ … Continued

ಕೇಸರಿ ಬಣ್ಣ ಅವಮಾನಿಸಿದರೆ ಕಠಿಣ ಕ್ರಮ: ಜೆಎನ್‌ಯು ಬಳಿ ಭಿತ್ತಿಪತ್ರ ಹಾಕಿದ ಹಿಂದೂ ಸೇನೆ ಸಂಘಟನೆ

ನವದೆಹಲಿ: ರಾಮನವಮಿಯಂದು ಮಾಂಸಾಹಾರ ನೀಡಿದ್ದಕ್ಕಾಗಿ ಹಾಸ್ಟೆಲ್‌ನಲ್ಲಿ ಘರ್ಷಣೆ ನಡೆದ ಒಂದು ವಾರದ ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮುಖ್ಯ ದ್ವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂದೂ ಸೇನೆಯು ಪೋಸ್ಟರ್‌ಗಳು ಮತ್ತು ಕೇಸರಿ ಧ್ವಜಗಳನ್ನು ಹಾಕಿದೆ. ಕೇಸರಿ ಬಣ್ಣಕ್ಕೆ ಅವಮಾನವಾದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅದು ಎಚ್ಚರಿಸಿದೆ. ಬಲಪಂಥೀಯ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಸುರ್ಜಿತ್ ಸಿಂಗ್ … Continued

ಚಹಾ ಜೊತೆ ಬೆಳಗಿನ ಉಪಾಹಾರ ಕೊಡಲಿಲ್ಲವೆಂದು ಸೊಸೆಗೆ ತನ್ನ ರಿವಾವಲ್ವರ್‌ನಿಂದ ಗುಂಡು ಹಾರಿಸಿದ ಮಾವ..!

ಥಾಣೆ: ಚಹಾದ ಜೊತೆಗೆ ಉಪಾಹಾರ ನೀಡಲಿಲ್ಲ ಎಂಬ ಕಾರಣಕ್ಕೆ ಸಿಟಿಗೆದ್ದ ಮಾವ ತನ್ನ ರಿವಾಲ್ವರ್‌ನಿಂದ ತನ್ನ ಸೊಸೊಗೆ ಗುಂಡು ಹಾರಿಸಿದ ಘಟನೆ ಥಾಣೆ ನಗರದಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಥಾಣೆಯ ರಾಬೋಡಿ ಪ್ರದೇಶದ ನಿವಾಸಿ 42 ವರ್ಷದ ಮಹಿಳೆಯ ಹೊಟ್ಟೆಯಲ್ಲಿ ಗುಂಡು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ … Continued

ಸಮಾಧಾನದ ಸುದ್ದಿ…ಈ ವರ್ಷವೂ ದೇಶಾದ್ಯಂತ ಉತ್ತಮ ಮುಂಗಾರು ಮಳೆ ನಿರೀಕ್ಷೆ: ಭಾರತೀಯ ಹವಾಮಾನ ಇಲಾಖೆ

ನವದೆಹಲಿ: ನವದೆಹಲಿ: ಈ ವರ್ಷವೂ ವಾಡಿಕೆಯ 99%ರಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಲಾ ನಿನಾ ವಿದ್ಯಮಾನದ ಪರಿಣಾಮ ಪ್ರಸಕ್ತ ವರ್ಷವೂ ನೈರುತ್ಯ ಮಾನ್ಸೂನ್ ಅವಧಿ ಭಾರತದಲ್ಲಿ ಉತ್ತಮ ಮಳೆ ತರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದು, ಸತತ 4ನೇ ವರ್ಷವೂ … Continued

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ: ಪಂಜಾಬ್‌ನಲ್ಲಿ ಖಾಸಗಿ ವ್ಯಾಪಾರಿಗಳಿಂದ ಸಾರ್ವಕಾಲಿಕ ಗರಿಷ್ಠ ಗೋಧಿ ಖರೀದಿ..!

ಚಂಡೀಗಡ: ಜಾಗತಿಕ ಗೋಧಿ ಪೂರೈಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಸುಮಾರು 40 ಪ್ರತಿಶತದಷ್ಟು ಪಾಲು ಹೊಂದಿದ್ದು, ರ್ಷಯಾ-ಉಕ್ರೇನ್‌ ಯುದ್ಧದಿಂದಾಗಿ ಪೂರೈಕೆಗೆ ಅಡ್ಡಿಯಾಗಿದೆ. ಹೀಗಾಗಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚಿದೆ. ದೇಶದಲ್ಲೇ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯವಾಗಿರುವ ಪಂಜಾಬಿನಲ್ಲಿ ಕೇವಲ ಎರಡು ವಾರಗಳಲ್ಲಿ ರಾಜ್ಯಾದ್ಯಂತ ಧಾನ್ಯ ಮಾರುಕಟ್ಟೆಗಳಿಂದ ಖಾಸಗಿ ಕಂಪನಿಗಳು ಈಗಾಗಲೇ ಒಂದು ಲಕ್ಷ ಟನ್‌ಗಳಷ್ಟು … Continued

ಪ್ರವಾಸದ ಸಂದರ್ಭದಲ್ಲಿ ಹೋಟೆಲ್‌ಗಳಲ್ಲಿ ಬೇಡ, ಸರ್ಕಾರಿ ಗೆಸ್ಟ್‌ಹೌಸ್‌ಗಳಲ್ಲಿ ಉಳಿಯಿರಿ: ಉತ್ತರ ಪ್ರದೇಶದ ಸಚಿವರಿಗೆ, ಅಧಿಕಾರಿಗಳಿಗೆ ಸಿಎಂ ಆದಿತ್ಯನಾಥ ತಾಕೀತು

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಸಂಪುಟದ ಸಚಿವರ ಕಾರ್ಯವೈಖರಿಗಾಗಿ ಹಲವು ನಿಯಮಗಳನ್ನು ರೂಪಿಸಿದ್ದಾರೆ. ಇನ್ನು ಮುಂದೆ ಸಚಿವರು ರಾಜ್ಯದ ಯಾವುದೇ ನಗರಗಳಿಗೆ ತೆರಳಿದರೆ ಐಷಾರಾಮಿ ಹೋಟೆಲ್‌ಗಳ ಬದಲು ಸರಕಾರಿ ಅತಿಥಿ ಗೃಹಗಳಲ್ಲಿಯೇ ತಂಗಬೇಕು ಎಂಬುದು ಸೇರಿ ಹಲವು ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಉತ್ತರ ಪ್ರದೇಶದ ಸಚಿವರು ಯಾವುದೇ ಭಾಗಗಳಿಗೆ ತೆರಳಿದರೂ … Continued

ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ನಾಲ್ವರು ಭಯೋತ್ಪಾದಕರ ಹತ್ಯೆ, ಸೇನಾ ವಾಹನ ಪಲ್ಟಿಯಾಗಿ ಇಬ್ಬರು ಸೇನಾ ಸಿಬ್ಬಂದಿ ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 4 ಭಯೋತ್ಪಾದಕರು ಹತರಾಗಿದ್ದಾರೆ. ಇವರು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್ಇಟಿ) ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ. ಅವರಲ್ಲದೆ, ಕಾರ್ಯಾಚರಣೆಯ ವೇಳೆ ಅವರ ವಾಹನ ಪಲ್ಟಿಯಾಗಿ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ರಸ್ತೆ ಒದ್ದೆಯಾಗಿದ್ದರಿಂದ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ … Continued

ಮದುವೆಗೆ ಮಾನ್ಯತೆ: ಅಲಾಹಾಬಾದ್ ಹೈಕೋರ್ಟಿನಿಂದ ಸಲಿಂಗಿ ಜೋಡಿಯ ಮನವಿ ತಿರಸ್ಕಾರ

ಪ್ರಯಾಗ: ತಮ್ಮ ಮದುವೆಗೆ ಮಾನ್ಯತೆ ಕೋರಿ ಸಲಿಂಗ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ಕಳೆದ ವಾರ ತಿರಸ್ಕರಿಸಿದೆ. ತಮ್ಮ ಮಗಳನ್ನು ಇನ್ನೊಬ್ಬ ಮಹಿಳೆ ಬಲವಂತ ಮತ್ತು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾಳೆ ಎಂದು ಆರೋಪಿಸಿ ಹಾಗೂ ಮಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ತಾಯಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಲೇವಾರಿ ಮಾಡಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ … Continued