ಚಲನಚಿತ್ರ ನಿರ್ದೇಶಕ ರವಿ ಟಂಡನ್ ನಿಧನ : ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಪುತ್ರಿ, ಬಾಲಿವುಡ್‌ ನಟಿ ರವೀನಾ ಟಂಡನ್

ಮುಂಬೈ: ಬಾಲಿವುಡ್‌ ನಟಿ, ರವೀನಾ ಟಂಡನ್ ಅವರ ತಂದೆ ಹಾಗೂ ಖ್ಯಾತ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರ ರವಿ ಟಂಡನ್ ಅವರು 85ನೇ ವಯಸ್ಸಿನಲ್ಲಿ ಶುಕ್ರವಾರ ನಿಧನರಾದರು. ಅವರ ಅಂತಿಮ ವಿಧಿಗಳನ್ನು ಸಂಜೆ ನೆರವೇರಿಸಲಾಯಿತು. ಪುತ್ರಿ ರವೀನಾ ಟಂಡನ್‌ ಅವರೇ ತಮ್ಮ ತಂದೆಯ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದರು ಮತ್ತು ಆಕೆಯ ಸಹೋದರ ರಾಜೀವ್ ಟಂಡನ್ ಮತ್ತು … Continued

ಚರ್ಮಕ್ಕೆ ಚರ್ಮ ತಾಗಿದರೆ ಮಾತ್ರ ಲೈಂಗಿಕ ದೌರ್ಜನ್ಯ ಎಂದು ವಿವಾದಿತ ತೀರ್ಪು ನೀಡಿದ್ದ ಜಡ್ಜ್‌ ರಾಜೀನಾಮೆ

ಮುಂಬೈ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ‘ಲೈಂಗಿಕ ದೌರ್ಜನ್ಯ’ ಎಂದು ವ್ಯಾಖ್ಯಾನಿಸುವ ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪಾ ಗಣೆಡಿವಾಲಾ ಅವರು ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಜಸ್ಟಿಸ್ ಗಣೆಡಿವಾಲಾ ಅವರು ಗುರುವಾರ ತಮ್ಮ ಹೆಚ್ಚುವರಿ ನ್ಯಾಯಾಧೀಶರಾಗಿ ಅಧಿಕಾರಾವಧಿ ಕೊನೆಗೊಳ್ಳುವ ಒಂದು … Continued

ದೇಶದ ಹಲವೆಡೆ ಏರ್ ಟೆಲ್ ನೆಟ್ವರ್ಕ್ ಡೌನ್; ಈಗ ಸರಿಪಡಿಸಲಾಗಿದೆ ಎಂದ ಕಂಪನಿ

ನವದೆಹಲಿ: ದೇಶಾದ್ಯಂತ ಏರ್‌ಟೆಲ್ ಬಳಕೆದಾರರು ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಹಲವಾರು ಬಳಕೆದಾರರು ಟ್ವಿಟರ್‌ನಲ್ಲಿ ತಮ್ಮ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಥಟ್ಟನೆ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದು ವರದಿ ಮಾಡಿದ್ದಾರೆ. ಹಲವು ಬಳಕೆದಾರರಿಗೆ ತಮ್ಮ ಮೊಬೈಲ್ ಫೋನ್‌ಗಳಿಂದ ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಹ ಸಾಧ್ಯವಾಗಲಿಲ್ಲ. ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಸೇವೆಗಳ ಹೊರತಾಗಿ, … Continued

ಎಸ್‌ಪಿ ನಾಯಕನ ಪ್ಲಾಟ್‌ನಲ್ಲಿ ದಲಿತ ಮಹಿಳೆ ಶವ ಪತ್ತೆ, ಮಾಜಿ ಸಚಿವರ ಮಗನ ಕೈವಾಡದ ಬಗ್ಗೆ ಮೊದಲೇ ಅಖಿಲೇಶ್‌ ಯಾದವ್‌ ಬಳಿ ನ್ಯಾಯಕ್ಕಾಗಿ ಮನವಿ ಮಾಡಿದ್ದ ತಾಯಿ

ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ನಡುವೆ, ಅಖಿಲೇಶ್ ಯಾದವ್ ಸರ್ಕಾರದ ಮಾಜಿ ಸಚಿವರೊಬ್ಬರ ಜಾಗದಲ್ಲಿ ದಲಿತ ಮಹಿಳೆಯ ಶವ ಪತ್ತೆಯಾಗಿದೆ ಎಂಬ ಸುದ್ದಿ ರಾಜ್ಯದಲ್ಲಿ ರಾಜಕೀಯ ಕಾವು ಹೆಚ್ಚಿಸಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಮತ್ತು ಬಿಎಸ್ಪಿ ನ್ಯಾಯ ವಿಳಂಬಕ್ಕಾಗಿ ಅವರ ಮೇಲೆ ದಾಳಿ ನಡೆಸಿವೆ. ಶವಪರೀಕ್ಷೆಯಲ್ಲಿ ಯುವತಿಯ ಕತ್ತು ಹಿಸುಕಿ … Continued

ಸಂಸ್ಕೃತ ಎಂಎಯಲ್ಲಿ ಐದು ಚಿನ್ನದ ಪದಕಗಳನ್ನು ಬಾಚಿಕೊಂಡ ಮುಸ್ಲಿಂ ವಿದ್ಯಾರ್ಥಿನಿ..!

ಲಕ್ನೋ ವಿಶ್ವವಿದ್ಯಾನಿಲಯದಲ್ಲಿ (LU) ಮುಸ್ಲಿಂ ಹುಡುಗಿ ಸಂಸ್ಕೃತದಲ್ಲಿ ಎಂಎಯಲ್ಲಿ ಐದು  ಚಿನ್ನದ ಪದಕಗಳನ್ನು ಪಡೆದಿದ್ದಾರೆ. ನವೆಂಬರ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಗಜಾಲಾ ಅವರ ಹೆಸರನ್ನು ಘೋಷಿಸಲಾಯಿತು, ಆದರೆ ಕೋವಿಡ್ -19 ಕಾರಣ, ಸಮಾರಂಭದಲ್ಲಿ ಅದನ್ನು ಪ್ರದಾನ ಮಾಡಲು ಸಾಧ್ಯವಾಗಿರಲಿಲ್ಲ.. ಗುರುವಾರ, ಅಧ್ಯಾಪಕರ ಮಟ್ಟದ ಪದಕ ವಿತರಣಾ ಸಮಾರಂಭದಲ್ಲಿ ಡೀನ್ ಆರ್ಟ್ಸ್ ಪ್ರೊ.ಶಶಿ ಶುಕ್ಲಾ ಅವರು ಗಜಾಲಾ … Continued

ಹಿಜಾಬ್ ವಿವಾದ: ‘ಇದನ್ನು ರಾಷ್ಟ್ರೀಯ ವಿಷಯವನ್ನಾಗಿ ಮಾಡಬೇಡಿ’, ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಕರ್ನಾಟಕ ಹೈಕೋರ್ಟ್‌ ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸೂಕ್ತ ಸಮಯದಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕರ್ನಾಟಕದಲ್ಲಿ ಏನಾಗುತ್ತಿದೆ ಮತ್ತು ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನು ರಾಷ್ಟ್ರೀಯ ಮಟ್ಟದ ವಿಷಯವನ್ನಾಗಿ … Continued

ಹಿಜಾಬ್ ನಿಷೇಧ: ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ

ನವದೆಹಲಿ: ಕೋರ್ಟ್‌ನಲ್ಲಿ ವಿಷಯ ಬಾಕಿ ಇರುವವರೆಗೆ ವಿದ್ಯಾರ್ಥಿಗಳು ಹಿಜಾಬ್ ಅಥವಾ ಯಾವುದೇ ಧಾರ್ಮಿಕ ಉಡುಗೆ ತೊಡದಂತೆ ನಿರ್ಬಂಧ ಹೇರಿರುವ ಕರ್ನಾಟಕ ಹೈಕೋರ್ಟ್‌ನ ನಿರ್ದೇಶನದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ವರದಿ ಪ್ರಕಾರ, ಮೇಲ್ಮನವಿ ಸಲ್ಲಿಸಿದ ಮಸೀದಿ ಮದಾರೀಸ್ ಮತ್ತು ವಕ್ಫ್ ಸಂಸ್ಥೆಗಳ ಡಾ.ಜೆ.ಹಳ್ಳಿ ಫೆಡರೇಶನ್, ಕರ್ನಾಟಕ … Continued

ಭಾರತದಲ್ಲಿ ಹೊಸದಾಗಿ 58,077 ಹೊಸ ಕೋವಿಡ್ ಪ್ರಕರಣಗಳು ದಾಖಲು..ಇದು ನಿನ್ನೆಗಿಂತ 13.4% ಕಡಿಮೆ

ನವದೆಹಲಿ: ಭಾರತವು ಶುಕ್ರವಾರ 58,077 ಹೊಸ ಕೋವಿಡ್ -19 ಸೋಂಕುಗಳನ್ನು ವರದಿ ಮಾಡಿದೆ, ಇದು ನಿನ್ನೆಗಿಂತ 13.4 ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ಹಂಚಿಕೊಂಡಿದೆ. ಇದು ದೇಶದ ಒಟ್ಟು ಪ್ರಕರಣವನ್ನು 4,25,36,137ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,50,407 ರೋಗಿಗಳು ಚೇತರಿಸಿಕೊಂಡಿದ್ದಾರೆ.ದೇಶಾದ್ಯಂತ ಒಟ್ಟು 4,13,31,158 ಜನರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ … Continued

ಹಿಂದೂಗಳಲ್ಲದವರಿಗೆ ದೇವಸ್ಥಾನ ನಿಷೇಧ ಕೋರಿದ್ದ ಅರ್ಜಿ ವಿಚಾರಣೆ: ಮದ್ರಾಸ್ ಹೈಕೋರ್ಟ್ ತೀಕ್ಷ್ಣ ಪ್ರತಿಕ್ರಿಯೆ

ಚಹೆನ್ನೈ: ತಮಿಳುನಾಡಿನ ದೇವಾಲಯಗಳಿಗೆ ಹಿಂದೂಗಳಲ್ಲದವರು ಪ್ರವೇಶ ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಶುಕ್ರವಾರ ಕೆಲ ತೀಕ್ಷ್ಣ ಅವಲೋಕನಗಳನ್ನು ಮಾಡಿದೆ. ಧರ್ಮದ ಆಧಾರದಲ್ಲಿ ದೇಶ ಒಡೆಯುವ ಯತ್ನಗಳು ನಡೆಯುತ್ತಿವೆ ಎಂಬುದನ್ನು ಇತ್ತೀಚಿನ ಘಟನೆಗಳು ತೋರಿಸುತ್ತಿವೆ ಎಂದು ಮುಖ್ಯ ನ್ಯಾಯಮೂರ್ತಿ ಎಂ. ಎನ್. ಭಂಡಾರಿ … Continued

ಉತ್ತರಪ್ರದೇಶ ಚುನಾವಣೆ: ಮೊದಲ ಹಂತದ ಮತದಾನದಲ್ಲಿ ಸಂಜೆ 6ರ ವರೆಗೆ ಶೇ.59ರಷ್ಟು ಮತದಾನ

ನವದೆಹಲಿ: 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ಸ್ಥಾನಗಳಲ್ಲಿ 73 ಮಹಿಳೆಯರು ಸೇರಿದಂತೆ ಒಟ್ಟು 623 ಅಭ್ಯರ್ಥಿಗಳು ಕಣದಲ್ಲಿದ್ದರು. ಗುರುವಾರ ಸಂಜೆ 6 ಗಂಟೆ ವರೆಗೆ ಬಂದ ಮಾಹಿತಿ ಪ್ರಕಾರ ಅಂದಾಜು ಶೇ.58.77ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ತಿಳಿಸಿದೆ. … Continued