ಲಂಡನ್‌ಗೆ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಅಮೃತಸರ್‌ ನಿಲ್ದಾಣದಲ್ಲಿ ಅಮೃತ್‌ಪಾಲ್ ಸಿಂಗ್ ಪತ್ನಿಯನ್ನು ತಡೆದ ಅಧಿಕಾರಿಗಳು

ನವದೆಹಲಿ: ಪರಾರಿಯಾಗಿರುವ ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಹಾಗೂ ಖಾಲಿಸ್ತಾನೀ ಪ್ರತಿಪಾದಕ ಅಮೃತಪಾಲ್ ಸಿಂಗ್ ಪತ್ನಿ ಕಿರಣ್‌ದೀಪ್ ಕೌರ್ ಲಂಡನ್‌ಗೆ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಅಮೃತಸರದ ಶ್ರೀ ಗುರು ರಾಮದಾಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಂಜಾಬ್ ಪೊಲೀಸರು ಅವರನ್ನು ತಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಮೃತಪಾಲ್ ಅವರ ಪತ್ನಿ ಮಧ್ಯಾಹ್ನದ ವಿಮಾನದಲ್ಲಿ ಲಂಡನ್‌ಗೆ ತೆರಳಲಿದ್ದರು. … Continued

ಮೋದಿ ಉಪನಾಮ ಮಾನನಷ್ಟ ಪ್ರಕರಣದಲ್ಲಿ ರಾಹುಲ್‌ ಗಾಂಧಿಗೆ ಹಿನ್ನಡೆ: ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ಸೂರತ್‌ : “ಮೋದಿ ಉಪನಾಮ” ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತಮ್ಮ ಮೇಲಿನ ಶಿಕ್ಷೆಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಸೂರತ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಗುರುವಾರ ವಜಾಗೊಳಿಸಿದೆ. ಆ ಮೂಲಕ ರಾಹುಲ್ ಗಾಂಧಿ ಅವರಿಗೆ ಹಿನ್ನಡೆಯಾಗಿದ್ದು, ಅವರ ಲೋಕಸಭಾ ಸದಸ್ಯತ್ವದ ಅನರ್ಹತೆ ಮುಂದುವರಿಯಲಿದೆ. 2019ರ ಮಾನಹಾನಿ … Continued

ರಕ್ಷಣಾ ಸಚಿವ ರಾಜನಾಥ ಸಿಂಗ್‌ ಗೆ ಕೊರೊನಾ ಸೋಂಕು

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಗುರುವಾರ ಅವರ ಕೋವಿಡ್ -19 ಪರೀಕ್ಷೆ ವರದಿಯಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ, ಹೀಗಾಗಿ ಅವರು ಪ್ರಸ್ತುತ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಅವರು ಗುರುವಾರ ನವದೆಹಲಿಯಲ್ಲಿ ಭಾರತೀಯ ವಾಯುಪಡೆಯ ಕಮಾಂಡರ್‌ಗಳ ಸಮ್ಮೇಳನದಲ್ಲಿ ಭಾಗವಹಿಸಲು ನಿರ್ಧರಿಸಿದ್ದರು ಆದರೆ ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ವರದಿ ಬಂದ ನಂತರ … Continued

ಆಘಾತಕಾರಿ ಘಟನೆ ..: ಮದುವೆ ಮಂಟಪದಲ್ಲಿ ವಧು-ವರರ ಮೇಲೆ ಎಸಿಡ್‌ ಎರಚಿದ ದುಷ್ಕರ್ಮಿಗಳು, 12 ಜನರಿಗೆ ಗಂಭೀರ ಗಾಯ

ಜಗದಲ್‌ಪುರ: ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಬುಧವಾರ ರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ವಧು-ವರರ ಮೇಲೆ ಯಾರೋ ಎಸಿಡ್ ಎರಚಿದ್ದಾರೆ. ಘಟನೆಯಲ್ಲಿ ವಧು-ವರರು, ಆರು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳು ಸೇರಿದಂತೆ 12 ಜನರು ಗಾಯಗೊಂಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಎಲ್ಲ ಗಾಯಾಳುಗಳನ್ನು ವೈದ್ಯಕೀಯ ಕಾಲೇಜು-ಆಸ್ಪತ್ರೆಗೆ ದಾಖಲಿಸಲಾಗಿದೆ. … Continued

ಭಾರತದ ಶೇ.90 ರಷ್ಟು ಪ್ರದೇಶ ಬಿಸಿಗಾಳಿ ‘ಅಪಾಯಕಾರಿ ವಲಯ’ದಲ್ಲಿದೆ : ಅಧ್ಯಯನ

ನವದೆಹಲಿ : ಭಾರತದ ಒಟ್ಟು ಪ್ರದೇಶದ ಶೇಕಡಾ 90 ಕ್ಕಿಂತ ಹೆಚ್ಚು ಪ್ರದೇಶವು “ಅತ್ಯಂತ ಎಚ್ಚರಿಕೆಯ” ಅಥವಾ “ಅಪಾಯ ವಲಯ” ದಲ್ಲಿದೆ, ಇದು ಹವಾಮಾನ ಬದಲಾವಣೆಯಿಂದಾಗಿ ಪದೇಪದೇ ಆಗುತ್ತಿರುವ ಶಾಖದ ಅಲೆಗಳಿಂದಾಗಿ ತೊಂದರೆಗೊಳಗಾಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ರಮಿತ್ ದೇಬನಾಥ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಹೋದ್ಯೋಗಿಗಳು ನಡೆಸಿದ ಅಧ್ಯಯನದ ಪ್ರಕಾರ, ದೆಹಲಿಯು ವಿಶೇಷವಾಗಿ ತೀವ್ರವಾದ … Continued

ತನ್ನ ಬಗ್ಗೆ ಸುಳ್ಳು ಸುದ್ದಿ ವರದಿ ಮಾಡಿದ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಅಮಿತಾಬ್ ಬಚ್ಚನ್ ಮೊಮ್ಮಗಳು ಆರಾಧ್ಯ

ಸೂಪರ್‌ ಸ್ಟಾರ್‌ ಅಮಿತಾಬ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗಳು ಹಾಗೂ ಅಭಿಷೇಕ ಮತ್ತು ಐಶ್ವರ್ಯಾ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರು ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ವರದಿ ಮಾಡಿದ್ದಕ್ಕಾಗಿ ಅನೇಕ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಇದರ ವಿಚಾರಣೆಯು ಗುರುವಾರ, ಏಪ್ರಿಲ್ 20 … Continued

ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ ಮಾಡ್ಯಾರ : ಕಾರಿಗೆ ಸೆಗಣಿ ಲೇಪಿಸಿ ತಂಪು ತಂಪು ʼಕೂಲ್‌ ಕೂಲ್‌ʼ ಆದ ವೈದ್ಯ | ವೀಕ್ಷಿಸಿ

ಸಾಗರ (ಮಧ್ಯಪ್ರದೇಶ) : ಬೇಸಿಗೆ ತಾಪಮಾನಕ್ಕೆ ಇಡೀ ದೇಶವೇ ತತ್ತರಿಸುತ್ತಿದೆ. ಮಹಾರಾಷ್ಟ್ರದಲ್ಲಿ ಬಿಸಿ ಅಲೆಗೆ 13 ಜನ ಮೃತಪಟ್ಟ ಘಟನೆಯೂ ನಡೆದಿದೆ. ಅನೇಕ ರಾಜ್ಯಗಳಲ್ಲಿ ಬಿಸಿಲಿನ ತಾಪದಿಂದಾಗಿ ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳಲ್ಲಿ ಸಂಚರಿಸುವಾಗ ಜನ ಸೆಖೆಯಿಂದ ತಪ್ಪಿಸಿಕೊಳ್ಳಲು ಹವಾನಿಯಂತ್ರಣಕ್ಕೆ(ಎಸಿ)ಮೊರೆ ಹೋಗುತ್ತಿದ್ದಾರೆ. ಆದರೆ ಬಹಳ ಹೊತ್ತು ಎಸಿ ಬಳಿ ಕುಳಿತುಕೊಂಡರೆ ಅನಾರೋಗ್ಯಕ್ಕೆ ಸಮಸ್ಯೆ ಕಾಡಬಹುದು. … Continued

ಈ ವರ್ಷವೇ ಚೀನಾ ಹಿಂದಿಕ್ಕಿ ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾಗಲಿರುವ ಭಾರತ…!

ನವದೆಹಲಿ: ಈ ವರ್ಷದ ಮಧ್ಯಭಾಗದಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗುವ ಹಾದಿಯಲ್ಲಿದೆ ಎಂದು ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (UNFPA) “ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್-2023” ರ ಜನಸಂಖ್ಯಾ ದತ್ತಾಂಶವು ಭಾರತದ ಜನಸಂಖ್ಯೆಯನ್ನು 142.86 ಕೋಟಿ ಜನಸಂಖ್ಯೆ ಹೊಂದಲಿದೆ ಎಂದು … Continued

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾದಿಂದ 38 ಸಾವು

ನವದೆಹಲಿ: ಭಾರತವು ದೈನಂದಿನ ಕೋವಿಡ್ -19 ಪ್ರಕರಣಗಳಲ್ಲಿ ಜಿಗಿತವನ್ನು ದಾಖಲಿಸಿದೆ, ಕಳೆದ 24 ಗಂಟೆಗಳಲ್ಲಿ 10,542 ಪ್ರಕರಣಗಳು ಮತ್ತು 38 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 38 ಸಾವುಗಳು ವರದಿಯಾಗಿದ್ದು ಸಾವಿನ ಸಂಖ್ಯೆ 5,31,190 ಕ್ಕೆ ಏರಿದೆ.ಮಹಾರಾಷ್ಟ್ರದಲ್ಲಿ ಆರು, ದೆಹಲಿಯಲ್ಲಿ ಐದು, ಛತ್ತೀಸ್‌ಗಢದಲ್ಲಿ 4, ಕರ್ನಾಟಕದಲ್ಲಿ ಮೂರು, … Continued