ನನ್ನ ಮಾತುಗಳನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ: ಪಕ್ಷದಿಂದ ಅಮಾನತುಗೊಂಡ ನಂತರ ಪ್ರವಾದಿ ಮಹಮ್ಮದ್‌ ಮೇಲಿನ ಟೀಕೆಗ ಬಗ್ಗೆ ಬಿಜೆಪಿಯ ನೂಪುರ್ ಶರ್ಮಾ ಹೇಳಿಕೆ

ನವದೆಹಲಿ: ಇತ್ತೀಚಿನ ಟಿವಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮಹಮ್ಮದ್ ಅವರ ಹೇಳಿಕೆಗಳ ಕುರಿತು ನೂಪುರ್ ಶರ್ಮಾ ಅವರನ್ನು ಬಿಜೆಪಿ ಅಮಾನತುಗೊಳಿಸಿದ ನಂತರ ಅವರು ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. ನನ್ನ ಮಾತುಗಳಿಂದ ಯಾರಿಗಾದರೂ ತೊಂದರೆ ಅಥವಾ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದರೆ, ನಾನು ಈ ಮೂಲಕ ನನ್ನ ಹೇಳಿಕೆಯನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ. ಯಾರ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ … Continued

ಪ್ರವಾದಿ ಮಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ: ಪಕ್ಷದ ವಕ್ತಾರೆ ನೂಪುರ್ ಶರ್ಮಾ ಅಮಾನತು ಮಾಡಿದ ಬಿಜೆಪಿ

ನವದೆಹಲಿ: ಇತ್ತೀಚಿನ ಟಿವಿ ಚರ್ಚೆಯೊಂದರಲ್ಲಿ ಪ್ರವಾದಿ ಮುಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಅವರನ್ನು ಬಿಜೆಪಿ ಹೈಕಮಾಂಡ್ ಭಾನುವಾರ ಅಮಾನತುಗೊಳಿಸಿದೆ. ದೆಹಲಿ ಬಿಜೆಪಿಯ ಮಾಧ್ಯಮ ಉಸ್ತುವಾರಿ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪಕ್ಷವು ಕಿತ್ತುಹಾಕಿದೆ. ಪಕ್ಷದ ಕೇಂದ್ರ ಶಿಸ್ತು ಸಮಿತಿಯು ಅಮಾನತು ಪತ್ರದಲ್ಲಿ ನೂಪುರ್‌ ಶರ್ಮಾ … Continued

ಕಾನ್ಪುರ ಹಿಂಸಾಚಾರ: 29 ಮಂದಿ ಬಂಧನ; ಪಿಎಫ್‌ಐಗೆ ಸಂಬಂಧಿಸಿದ ದಾಖಲೆಗಳು ಪತ್ತೆ ಎಂದ ಉನ್ನತ ಪೊಲೀಸ್ ಅಧಿಕಾರಿ

ನವದೆಹಲಿ: ಶುಕ್ರವಾರ, ಜೂನ್ 3 ರಂದು ನಗರದ ಪರೇಡ್ ಚೌಕ್ ಪ್ರದೇಶದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಒಟ್ಟು 29 ಜನರನ್ನು ಕಾನ್ಪುರ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಮುಸ್ಲಿಂ ನಾಯಕ ಹಯಾತ್ ಜಾಫರ್ ಹಶ್ಮಿ ಹಿಂಸಾಚಾರದ ಹಿಂದಿನ ಪ್ರಮುಖ ಸಂಚುಕೋರ ಎಂದು ಪೊಲೀಸರು ಗುರುತಿಸಿದ್ದಾರೆ. ಮೌಲಾನಾ ಮುಹಮ್ಮದ್ ಜೌಹರ್ ಅಲಿ ಅಭಿಮಾನಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಹಯಾತ್ … Continued

ಕಾರಿನಲ್ಲಿ ಆಡುತ್ತಿದ್ದಾಗ ಡೋರ್ ಲಾಕ್ ಆಗಿ ಉಸಿರುಗಟ್ಟಿ ಮೂವರು ಮಕ್ಕಳು ಸಾವು

ತಿರುನಲ್ವೇಲಿ (ತಮಿಳುನಾಡು): ಕಾರಿನೊಳಗೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಡೋರ್‍ ಲಾಕ್ ಆದ ಪರಿಣಾಮ ಮೂವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ಶನಿವಾರ ನಡೆದ ಬಗ್ಗೆ ವರದಿಯಾಗಿದೆ. ಮೃತ ಮಕ್ಕಳನ್ನು ನಿತೀಶ್ (7), ಆತನ ಸಹೋದರಿ ನಿತೀಶಾ (5) ಮತ್ತು ಕಪಿಚಂದ್ (4) ಎಂದು ಗುರುತಿಸಲಾಗಿದೆ. ನಿತೀಶ್ ಮತ್ತು ನಿತೀಶಾ ಇಬ್ಬರೂ ನಾಗರಾಜ ಎಂಬುವರ … Continued

ರಾಜ್ಯಸಭೆಗೆ 41 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ | ಸಂಪೂರ್ಣ ಪಟ್ಟಿ ಇಲ್ಲಿದೆ

ನವದೆಹಲಿ: 11 ರಾಜ್ಯಗಳಿಂದ ರಾಜ್ಯಸಭೆಗೆ ನಲವತ್ತೊಂದು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಇತ್ತೀಚಿಗಷ್ಟೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಕಪಿಲ್ ಸಿಬಲ್, ಆರ್‌ಜೆಡಿಯ ಮಿಸಾ ಭಾರತಿ ಮತ್ತು ಆರ್‌ಎಲ್‌ಡಿಯ ಜಯಂತ್ ಚೌಧರಿ ಶುಕ್ರವಾರ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ವಿಜೇತರಲ್ಲಿ ಸೇರಿದ್ದಾರೆ.ಉತ್ತರ ಪ್ರದೇಶದಲ್ಲಿ ಎಲ್ಲಾ 11 ಅಭ್ಯರ್ಥಿಗಳು, ತಮಿಳುನಾಡಿನ 6, ಬಿಹಾರದಲ್ಲಿ 5, … Continued

ವೀಸಾ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ

ನವದೆಹಲಿ: ಚೀನಾ ವೀಸಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಶನಿವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಪಟ್ಟಿ ಮಾಡುವ ಸಾಧ್ಯತೆ ಇದೆ. ಅವರ ಹಿಂದಿನ ಮನವಿಯನ್ನು ದೆಹಲಿಯ ವಿಶೇಷ ನ್ಯಾಯಾಲಯವು ಶುಕ್ರವಾರ ನಿರಾಕರಿಸಿತು.ವಿಚಾರಣಾ ನ್ಯಾಯಾಲಯವು ಕಾರ್ತಿ ಚಿದಂಬರಂ ಮತ್ತು … Continued

ಸಿಕ್ಸರ್‌ ಪಾಂಡೆ….T10 ಪಂದ್ಯದಲ್ಲಿ ಒಂದು ಓವರ್‌ನಲ್ಲಿ 6 ಸಿಕ್ಸರ್‌ ಸಿಡಿಸಿದ ಭಾರತದ ಹದಿಹರೆಯದ ಹುಡುಗ ಕೃಷ್ಣ ಪಾಂಡೆ: ವೀಕ್ಷಿಸಿ

ಭಾರತದ ಹದಿಹರೆಯದ ಕೃಷ್ಣ ಪಾಂಡೆ T10 ಪಂದ್ಯದಲ್ಲಿ ಒಂದು ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ ಪಾಂಡಿಚೇರಿ T10 ಟೂರ್ನಮೆಂಟ್‌ನಲ್ಲಿ, 15 ವರ್ಷದ ಕೃಷ್ಣ ಪಾಂಡೆ ಅವರು ಯುವರಾಜ್ ಸಿಂಗ್, ರವಿಶಾಸ್ತ್ರಿ ಮತ್ತು ಕೀರಾನ್ ಪೊಲಾರ್ಡ್‌ರನ್ನು ಅನುಕರಿಸಿದ್ದಾರೆ. ಮತ್ತು ಅವರು ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಪೇಟ್ರಿಯಾಟ್ಸ್ ಮತ್ತು ರಾಯಲ್ಸ್ ನಡುವಿನ ಪಂದ್ಯದಲ್ಲಿ, ನಂತರದವರು 158 … Continued

ಕೊಚ್ಚಿ: ಇಬ್ಬರು ಮಕ್ಕಳನ್ನು ನದಿಗೆ ಎಸೆದು ಸಾಯಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ

ಕೊಚ್ಚಿ: ತಂದೆಯೊಬ್ಬರು ಶನಿವಾರ ಸಂಜೆ ತನ್ನ ಇಬ್ಬರು ಮಕ್ಕಳನ್ನು ಪೆರಿಯಾರ್ ನದಿಗೆ ಎಸೆದು ಕೊಂದು ಅದೇ ನದಿಗೆ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ವರದಿಯಾಗಿದೆ. ಶನಿವಾರ ಸಂಜೆ 4:30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ತಂದೆ ಮೊದಲು ತನ್ನ ಮಗನನ್ನು ಹಾಗೂ ನಂತರ ಮಗಳನ್ನು ನದಿಗೆ ಎಸೆದಿದ್ದಾನೆ. ಘಟನೆಯನ್ನು ನೋಡಿದ … Continued

ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ ಮಾಡಬೇಕು, 1 ಲಕ್ಷ ರೂ. ಗೋ ಶಾಗೆ ಠೇವಣಿ ಮಾಡಬೇಕು”: ಗೋಹತ್ಯೆ ಆರೋಪಿಗೆ ಷರತ್ತು ವಿಧಿಸಿ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್

ಲಕ್ನೋ: ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯಿದೆ, 1955 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಜೈಲಿನಿಂದ ಬಿಡುಗಡೆಯಾದ ನಂತರ ಗೋಶಾಲೆಯಲ್ಲಿ ಒಂದು ತಿಂಗಳ ಕಾಲ ಗೋವುಗಳಿಗೆ ಸೇವೆ ಮಾಡಬೇಕು ಎಂದು ಸೂಚಿಸಿದೆ. ನ್ಯಾಯಮೂರ್ತಿ ಶೇಖರಕುಮಾರ ಯಾದವ್ ಅವರ ಪೀಠವು ಗೋಹತ್ಯೆ ಸೆಕ್ಷನ್ 3/8 ರ ಅಡಿಯಲ್ಲಿ ಪ್ರಕರಣ … Continued

ಸಿಪಿಆರ್ ಮಾಡುವ ಮೂಲಕ ಬೀದಿ ನಾಯಿಯನ್ನು ಮತ್ತೆ ಜೀವಂತಗೊಳಿಸಿದ ವ್ಯಕ್ತಿ… ಹೃದಯಸ್ಪರ್ಶಿ ವೀಡಿಯೊ ವೈರಲ್‌

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಬೀದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾಯಿಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಕ್ಲಿಪ್ ಅನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಬದುಕಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸ್ಥಳ ಮತ್ತು ವ್ಯಕ್ತಿ ಯಾರೆಂದು ಗುರುತಿಸಲಾಗಿಲ್ಲ, ಆದರೆ ನಾಯಿಯನ್ನು ಮತ್ತೆ ಜೀವಂತಗೊಳಿಸಲು … Continued