ಭಾರತದಲ್ಲಿ 8,865 ಹೊಸ ಕೋವಿಡ್ -19 ಪ್ರಕರಣಗಳು ದಾಖಲು, ಇದು 287 ದಿನಗಳಲ್ಲೇ ಕಡಿಮೆ ದೈನಂದಿನ ಪ್ರಕರಣ

ನವದೆಹಲಿ: ಕಳೆದ 24 ಗಂಟೆಗಳಲ್ಲಿ 8,865 ಹೊಸ ಪ್ರಕರಣಗಳೊಂದಿಗೆ ಮಂಗಳವಾರ ಕೋವಿಡ್ -19 ಪ್ರಕರಣಗಳಲ್ಲಿ ಭಾರತವು ಪ್ರಮುಖ ಇಳಿಕೆ ಕಂಡಿದೆ, ಇದು 287 ದಿನಗಳಲ್ಲಿ ಅತಿ ಕಡಿಮೆ ದೈನಂದಿನ ಪ್ರಕರಣವಾಗಿದೆ. ಇಂದು ವರದಿಯಾದ ಹೊಸ ಪ್ರಕರಣಗಳು ನಿನ್ನೆಗಿಂತ 13.3% ಕಡಿಮೆಯಾಗಿದೆ. ಇದು ಭಾರತದ ಒಟ್ಟು ಪ್ರಕರಣವನ್ನು 3,44,56,401 ಕ್ಕೆ ಒಯ್ದಿದೆ. ಕಳೆದ 24 ಗಂಟೆಗಳಲ್ಲಿ 197 … Continued

ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ರಿಕಟಿಗ ಹಾರ್ದಿಕ್ ಪಾಂಡ್ಯ 5 ಕೋಟಿ ಮೌಲ್ಯದ ಐಷಾರಾಮಿ ವಾಚ್‌ ವಶಪಡಿಸಿಕೊಂಡ ಕಸ್ಟಮ್ ಅಧಿಕಾರಿಗಳು…!

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಬಳಿಯಿದ್ದ 5 ಕೋಟಿ ರೂಪಾಯಿ ಮೌಲ್ಯದ ಎರಡು ಕೈ ಗಡಿಯಾರಗಳನ್ನು ಭಾನುವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಟಿ20 ವಿಶ್ವಕಪ್ ಮುಗಿಸಿ ಟೀಂ ಇಂಡಿಯಾ ಆಟಗಾರರು ದುಬೈನಿಂದ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಪಾಂಡ್ಯ ಅವರು ಎರಡು … Continued

ಕ್ರಿಪ್ಟೋ ಕರೆನ್ಸಿ ನಿಷೇಧ ಕಷ್ಟಸಾಧ್ಯ: ಆದರೆ ನಿಯಂತ್ರಣಕ್ಕೆ ಹೊಸ ನಿಯಮಾವಳಿ ಬೇಕು: ಕೇಂದ್ರದ ಸಂಸದೀಯ ಸಮಿತಿ

ನವದೆಹಲಿ: ಪ್ಟೋ ಕರೆನ್ಸಿ ಕುರಿತಾದ ವಿಷಯವನ್ನು ಕೇಂದ್ರದ ಸಂಸದೀಯ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಕ್ರಿಪ್ಟೋ ಕರೆನ್ಸಿ ನಿಷೇಧ ಬೇಡ. ಬದಲಿಗೆ ನಿಯಂತ್ರಣಕ್ಕೆ ಹೊಸ ನಿಯಮಾವಳಿ ರೂಪಿಸಬೇಕು ಎಂದು ಅದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ದೇಶದಲ್ಲಿ ಕ್ರಿಪ್ಟೋಕರೆನ್ಸಿಯನ್ನು ನಿಲ್ಲಿಸುವುದು ಕಷ್ಟಸಾಧ್ಯ ಎಂಬುದು ಈಗ ಗೊತ್ತಾಗಿದೆ. ಆದರೆ ನಿಯಂತ್ರಣ ಅವಶ್ಯ ಎಂದು ಸಂಸದರು ಸೋಮವಾರ ಸಂಸತ್ ಸಮಿತಿ ಸಭೆಯಲ್ಲಿ … Continued

ಜಮ್ಮು ಕಾಶ್ಮೀರ: ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರ ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ನಗರದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಸೋಮವಾರ ಸಂಜೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕರು ಮತ್ತು ಭದ್ರತಾಪಡೆಗಳ ನಡುವೆ ಹೈದರ್​ಪೊರಾ ಬೈಪಾಸ್ ಸಮೀಪ ಗುಂಡಿನ ಚಕಮಕಿ ಆರಂಭವಾಗಿತ್ತು. ಶೂಟೌಟ್ ಆರಂಭವಾದ ಕೆಲವೇ ನಿಮಿಷಗಳ ನಂತರ ಭಯೋತ್ಪಾದಕರನ್ನು ಕೊಲ್ಲಲಾಯಿತು ಎಂದು ಪೊಲೀಸರು ಟ್ವೀಟ್​ ಮಾಡಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ … Continued

ಕನ್ನಡ ಕಡ್ಡಾಯ ಬಹುದಿನಗಳ ಬೇಡಿಕೆ: ಸರ್ಕಾರದ ಸಮರ್ಥನೆ

ಬೆಂಗಳೂರು; ಪದವಿ ಹಂತದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಒಂದು ವಿಷಯವನ್ನಾಗಿ ಬೋಧಿಸುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತನ್ನ ನಿಲುವು ಸ್ಪಷ್ಟಪಡಿಸಿ ಅಫಿಡವಿಟ್‌ ಸಲ್ಲಿಸಬೇಕು ಎಂದು ಸೋಮವಾರ ಕರ್ನಾಟಕ ಹೈಕೋರ್ಟ್‌ ಆದೇಶ ಮಾಡಿದೆ. ಎರಡು ತಾಸಿಗೂ ಹೆಚ್ಚು ಕಾಲ ಅರ್ಜಿದಾರರು ಮತ್ತು ರಾಜ್ಯ ಸರ್ಕಾರದ ವಾದವನ್ನು ಆಲಿಸಿದ ಪೀಠವು ವಿಚಾರಣೆಯನ್ನು … Continued

ಅತ್ಯಾಧುನಿಕ ಸೌಲಭ್ಯದ ರಾಣಿ ಕಮಲಾಪತಿ ರೈಲು ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಭೋಪಾಲ್: ಮಧ್ಯಪ್ರದೇಶದಲ್ಲಿಯೇ ಅತ್ಯಂತ ಅಧುನಿಕ ಎಂಬ ಪರಿಗಣಿಸಲ್ಪಟ್ಟ ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಗರದಲ್ಲಿ ಉದ್ಘಾಟಿಸಿದರು. ಈ ಮೊದಲು ಈ ನಿಲ್ದಾಣವನ್ನು ಹಬೀಬ್​ಗಂಜ್ ನಿಲ್ದಾಣ ಎಂದು ಕರೆಯುತ್ತಿದ್ದರು. ಗೋಂಡಾ ಬುಡಕಟ್ಟಿಗೆ ಸೇರಿದ ರಾಣಿ ಕಮಲಾಪತಿ ಅವರ ಸ್ಮರಣಾರ್ಥ ನಿಲ್ದಾಣದ ಹೆಸರು ಬದಲಿಸಲಾಗಿದೆ. ರಾಜ್ಯಪಾಲರಾದ ಮನ್​ಗುಭಾಯ್ ಪಟೇಲ್, … Continued

ತ್ರಿಪುರಾ ಕೋಮು ಗಲಭೆ ವರದಿ ಪ್ರಕರಣ: ಇಬ್ಬರು ಮಹಿಳಾ ಪತ್ರಕರ್ತರ ಬಂಧನ, ಜಾಮೀನು

ತ್ರಿಪುರಾ ಕೋಮು ಗಲಭೆ ವರದಿ ಪ್ರಕರಣ: ಇಬ್ಬರು ಮಹಿಳಾ ಪತ್ರಕರ್ತರ ಬಂಧನ, ಜಾಮೀನು ಗುವಾಹಟಿ: ಕ್ರಿಮಿನಲ್ ಪಿತೂರಿ ಸೇರಿದಂತೆ ವಿವಿಧ ಆರೋಪಗಳ ಮೇಲೆ ತ್ರಿಪುರಾದಲ್ಲಿ ಬಂಧಿತರಾಗಿದ್ದ ದೆಹಲಿ ಮೂಲದ ಇಬ್ಬರು ಮಹಿಳಾ ಪತ್ರಕರ್ತರಿಗೆ ಸ್ಥಳೀಯ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ. ಪತ್ರಕರ್ತರಾದ ಸಮೃದ್ಧಿ ಕೆ. ಸಕುನಿಯಾ ಮತ್ತು ಸ್ವರ್ಣಾ ಝಾ ಅವರಿಗೆ ತ್ರಿಪುರಾದ ಗೋಮತಿ ಜಿಲ್ಲಾ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ದೇಶಮುಖಗೆ 14 ದಿನ ನ್ಯಾಯಾಂಗ ಬಂಧನ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂಬೈ ನ್ಯಾಯಾಲಯ ಸೋಮವಾರ ಆದೇಶಿಸಿದೆ. . ಜಾರಿ ನಿರ್ದೇಶನಾಲಯಕ್ಕೆ ನೀಡಬಹುದಾಗಿದ್ದ ಕಸ್ಟಡಿ ಅವಕಾಶದ ಅವಧಿ 14 ದಿನಗಳು ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಪರ ವಕೀಲ ಶ್ರೀರಾಮ್ … Continued

ಪ್ರೇರಣಾದಾಯಕ..: ಕೇರಳದ ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದ 104 ವರ್ಷದ ಬೊಚ್ಚುಬಾಯಿಯ ಹಣ್ಣುಹಣ್ಣು ಮುದುಕಿ..!

ಕೇರಳದ 104 ವರ್ಷದ ಹಣ್ಣುಹಣ್ಣು ಮುದುಕಿಯೊಬ್ಬರು ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೊಟ್ಟಾಯಂನಲ್ಲಿ ವಾಸಿಸುವ ಈ 104 ವರ್ಷದ ಮಹಿಳೆ ಕುಟ್ಟಿಯಮ್ಮ ಎಂಬವರು ಕೇರಳ ರಾಜ್ಯ ಸಾಕ್ಷರತಾ ಮಿಷನ್‌ ನಡೆಸಿದ ಪರೀಕ್ಷೆಯಲ್ಲಿ 00 ಕ್ಕೆ 89 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ಇವರಿಗೆ ಕಿವಿ ಕೇಳಿಸುವುದಿಲ್ಲ, ಜೀವನದಲ್ಲಿ ಈ ಮೊದಲು ಶಾಲೆಗೇ ಹೋದವರಲ್ಲ. … Continued

ಹೊಸ ಪುಸ್ತಕದ ವಿವಾದದ ನಡುವೆ ಸಲ್ಮಾನ್ ಖುರ್ಷಿದ್ ನೈನಿತಾಲ್ ಮನೆ ಧ್ವಂಸ

ನವದೆಹಲಿ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಹೊಸ ಪುಸ್ತಕದ ಕೋಲಾಹಲದ ನಡುವೆ ಸೋಮವಾರ ನೈನಿತಾಲ್‌ನಲ್ಲಿರುವ ಅವರ ಮನೆಯನ್ನು ಧ್ವಂಸಗೊಳಿಸಲಾಯಿತು. ಅವರು ತಮ್ಮ ಪುಸ್ತಕದಲ್ಲಿ ಹಿಂದುತ್ವವನ್ನು ಐಸಿಸ್‌ ಹಾಗೂ ಬೊಕೊ ಹರಾಂಗೆ ಹೋಲಿಸಿದ ನಂತರ ಅನೇಕರಿಂದ ಆಕ್ರೋಶ ವ್ಯಕ್ತವಾಗಿದೆ. ಹಾಗೂ ದೆಹಲಿಯಲ್ಲಿ ಅವರ ವಿರುದ್ಧ ದೂರು ಸಹ ದಾಖಲಾಗಿದೆ. ಈ ಮಧ್ಯೆ ನೈನಿತಾಲ್ನಲ್ಲಿರುವ ಅವರ ಮನೆಯನ್ನು … Continued