ಉಕ್ರೇನ್‌ನಿಂದ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಸುರಕ್ಷಾ ಕಾರಿಡಾರ್‌ ಸ್ಥಾಪನೆ, ಕರ್ನಾಟಕದ ವಿದ್ಯಾರ್ಥಿಯ ಸಾವಿನ ತನಿಖೆ: ರಷ್ಯಾ ರಾಯಭಾರಿ

ನವದೆಹಲಿ: ರಷ್ಯಾ-ಉಕ್ರೇನ್ ಸಂಘರ್ಷ ವಲಯದಿಂದ ಪಾರಾಗಲು ಭಾರತೀಯ ಪ್ರಜೆಗಳಿಗೆ ಸುರಕ್ಷಿತ ಮಾರ್ಗವನ್ನು ನೀಡಲಾಗುವುದು ಎಂದು ರಷ್ಯಾದ ರಾಯಭಾರಿ-ನಿಯೋಜಿತ ಡೆನಿಸ್ ಅಲಿಪೋವ್ ಬುಧವಾರ ಭರವಸೆ ನೀಡಿದ್ದಾರೆ. ಮಂಗಳವಾರ ಖಾರ್ಕಿವ್‌ನಲ್ಲಿ ನಿಧನರಾದ ಭಾರತೀಯ ವಿದ್ಯಾರ್ಥಿ ನವೀನ್‌ಗೆ ಸಂತಾಪ ಸೂಚಿಸುವ ಮೂಲಕ ಡೆನಿಸ್ ಅಲಿಪೋವ್ ತಮ್ಮ ಪತ್ರಿಕಾಗೋಷ್ಠಿಯನ್ನು ಪ್ರಾರಂಭಿಸಿದರು. ನವೀನ್ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ರಷ್ಯಾ ರಾಯಭಾರಿ … Continued

ನವಾಬ್ ಮಲಿಕ್ ಹೇಬಿಯಸ್ ಕಾರ್ಪಸ್ ಅರ್ಜಿ: ಇಡಿ ಪ್ರತಿಕ್ರಿಯೆ ಕೇಳಿದ ಬಾಂಬೆ ಹೈಕೋರ್ಟ್

ಮುಂಬೈ: ತನ್ನ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ತಕ್ಷಣ ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಬಾಂಬೆ ಹೈಕೋರ್ಟ್ ಬುಧವಾರ ಜಾರಿ ನಿರ್ದೇಶನಾಲಯದ (ಇಡಿ) ಪ್ರತಿಕ್ರಿಯೆ ಕೇಳಿದೆ. ನ್ಯಾಯಮೂರ್ತಿಗಳಾದ ಎಸ್‌ಬಿ ಶುಕ್ರೆ ಮತ್ತು ಜಿಎ ಸನಪ್ ಅವರ … Continued

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಭಾರತದ ಎರಡನೇ ವಿದ್ಯಾರ್ಥಿ ಸಾವು

ನವದೆಹಲಿ: ರಷ್ಯಾದ ಸೇನೆಯ ಆಕ್ರಮಣದ ನಂತರ ಯುದ್ಧ ನಡೆಯುತ್ತಿರುವ ಉಕ್ರೇನ್‌ನಲ್ಲಿ ಬುಧವಾರ ಪಂಜಾಬ್‌ನ ಬರ್ನಾಲಾದ ಭಾರತೀಯ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿದ್ದಾನೆ. ಚಂದನ್ ಜಿಂದಾಲ್ (22) ಉಕ್ರೇನ್‌ನ ವಿನ್ನಿಟ್ಸಿಯಾ ನ್ಯಾಷನಲ್ ಪೈರೋಗೋವ್ ಸ್ಮಾರಕ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ. ಲಭ್ಯವಿರುವ ವರದಿಗಳ ಪ್ರಕಾರ, ಜಿಂದಾಲ್ ಪಾರ್ಶ್ವವಾಯುವಿಗೆ ಒಳಗಾದರು. ಅವರು ಸ್ವಲ್ಪ ಸಮಯ ಆಸ್ಪತ್ರೆಯಲ್ಲಿದ್ದರು. ನಂತರ ವಿನ್ನಿಟ್ಸಿಯಾ (ಕೈವ್ಸ್ಕಾ ಸ್ಟ್ರೀಟ್ … Continued

24 ಗಂಟೆಗಳಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ 1,377 ಭಾರತೀಯರ ಸ್ಥಳಾಂತರ, ಕೀವ್‌ನಲ್ಲಿ ಭಾರತದ ಯಾರೂ ಉಳಿದಿಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಯುದ್ಧಪೀಡಿತ ಉಕ್ರೇನ್‍ನಿಂದ ಭಾರತವು ತನ್ನ 1,377 ನಾಗರಿಕರನ್ನು ಸ್ಥಳಾಂತರಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇಂದು, ಬುಧವಾರ ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಪೋಲೆಂಡ್‍ನಿಂದ ಮೊದಲ ವಿಮಾನ ಸೇರಿದಂತೆ ಆರು ವಿಮಾನಗಳು ಈಗ ಭಾರತಕ್ಕೆ ಹೊರಟಿವೆ. ಉಕ್ರೇನಿಂದ 1377 ಭಾರತೀಯ ಪ್ರಜೆಗಳನ್ನು ವಾಪಸ್ ಕರೆದೊಯ್ದಿದ್ದಾರೆ ಎಂದು ಜೈಶಂಕರ್ ಟ್ವೀಟ್ … Continued

ಉಕ್ರೇನ್-ರಷ್ಯಾ ಯುದ್ಧ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಪಾರು ಮಾಡಲು ರಷ್ಯಾದಿಂದ ಸಹಾಯ ?!

  ನವದೆಹಲಿ: ಕಳೆದ ಏಳು ದಿನಗಳಿಂದ ರಷ್ಯಾ-ಉಕ್ರೇನ್ ಕದನ ಜೋರಾಗಿದೆ. ಆದರೆ ಈ ಯುದ್ಧದ ಹೊಡೆತ ಉಕ್ರೇನ್‌ನಲ್ಲಿರುವ ಭಾರತೀಯರ ಮೇಲೆ ಬೀಳುತ್ತಿದೆ. ವೈದ್ಯಕೀಯ ಶಿಕ್ಷಣಕ್ಕಾಗಿ ತೆರಳಿರುವ ಹಲವು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಭಾರತೀಯರನ್ನು ಸುರಕ್ಷಿತವಾಗಿ ಹೊರತರಲು ಭಾರತ ಆಪರೇಷನ್ ಗಂಗಾ ಆರಂಭಿಸಿದೆ. ಉಕ್ರೇನ್ ಯುದ್ಧದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹಲವು … Continued

ಮಲಯಾಳಂ ಸುದ್ದಿ ವಾಹಿನಿ ಪ್ರಸಾರದ ಮೇಲಿನ ಕೇಂದ್ರದ ನಿಷೇಧ ಎತ್ತಿಹಿಡಿದ ಆದೇಶದ ವಿರುದ್ಧ ಮೇಲ್ಮನವಿ ವಜಾಗೊಳಿಸಿದ ಕೇರಳ ಹೈಕೋರ್ಟ್

ಕೊಚ್ಚಿ: ಪರವಾನಿಗೆಯನ್ನು ನವೀಕರಿಸದೆ ಪ್ರಸಾರ ನಿಲ್ಲಿಸುವ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿದ ಏಕ ನ್ಯಾಯಾಧೀಶರ ಆದೇಶದ ವಿರುದ್ಧ ಮಲಯಾಳಂ ಸುದ್ದಿವಾಹಿನಿ ಮೀಡಿಯಾ ಒನ್ ಮಾಡಿದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರ ಪೀಠವು ಸಹ ಚಾನೆಲ್ಲಿನ ಮೇಲ್ಮನವಿಗಳನ್ನು ತಿರಸ್ಕರಿಸಿದೆ. ಚಾನೆಲ್‌ನ ಕೆಲವು ಉದ್ಯೋಗಿಗಳು, … Continued

ಉಕ್ರೇನ್‌ನಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನಿ ವಿದ್ಯಾರ್ಥಿಗಳಿಂದ ಭಾರತದ ಧ್ವಜ ಬಳಕೆ, ‘ಭಾರತ್ ಮಾತಾ ಕೀ ಜೈ’ ಘೋಷಣೆ… ವೀಡಿಯೊ ವೈರಲ್.. ವೀಕ್ಷಿಸಿ

ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರವು ಯುದ್ಧ ಪೀಡಿತ ವಲಯದಲ್ಲಿ ಸಿಕ್ಕಿಬಿದ್ದಿರುವ ಪಾಕಿಸ್ತಾನಿ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸದೇ ಇದ್ದುದಕ್ಕಾಗಿ ವಾಗ್ದಾಳಿ ಎದುರಿಸುತ್ತಿದ್ದರೆ, ಬಿಕ್ಕಟ್ಟಿನಿಂದ ಪಾರಾಗಲು ಪಾಕಿಸ್ತಾನಿ ವಿದ್ಯಾರ್ಥಿಗಳು ಭಾರತದ ಧ್ವಜವನ್ನು ಬಳಸುತ್ತಿದ್ದಾರೆ ಎಂಬ ವೀಡಿಯೋ ವೈರಲ್ ಆಗಿದೆ- ತಮ್ಮ ವಾಹನದ ಮೇಲೆ ತಮ್ಮ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದರೆ ಭಾರತೀಯರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಭರವಸೆಯನ್ನು ರಷ್ಯನ್ನರು ನೀಡಿದ್ದರಿಂದ … Continued

ಜಿಇಇ ಮೇನ್‌ ಪರೀಕ್ಷೆ-2022ರ ವೇಳಾಪಟ್ಟಿ ಪ್ರಕಟ, ನೋಂದಣಿಗಳು ಆರಂಭ

ನವದೆಹಲಿ: ಜೆಇಇ ಮುಖ್ಯ ಪರೀಕ್ಷೆಯ ಮೊದಲ ಹಂತದ ಪರೀಕ್ಷೆ ಏಪ್ರಿಲ್ 16 ಮತ್ತು 17ರಂದು ನಡೆಯಲಿದೆ. ಹಾಗೂ ಎರಡನೇ ಹಂತದ ಪರೀಕ್ಷೆ ಮೇ 24 ರಿಂದ 29ರ ವರೆಗೆ ನಡೆಸಲಾಗುತ್ತದೆ ಎಂಬುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಿಳಿಸಿದೆ. ಜೆಇಇ ಮುಖ್ಯ ಪರೀಕ್ಷೆ 2022 ರ ( JEE-Main 2022 ) ಅರ್ಜಿಗಳ ಸಲ್ಲಿಕೆ ಮಾರ್ಚ್ … Continued

10 ನಿಮಿಷದಲ್ಲಿ 11.71 ಲಕ್ಷ ಹಣತೆ ದೀಪ ಬೆಳಗಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ ಉಜ್ಜಯಿನಿ..! ವೀಕ್ಷಿಸಿ

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯ ದೇಗುಲ ಪಟ್ಟಣವು ಮಂಗಳವಾರ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ‘ಶಿವಜ್ಯೋತಿ ಅರ್ಪಣಂ ಮಹೋತ್ಸವ’ದ ಅಂಗವಾಗಿ ಮಹಾಕಾಳೇಶ್ವರ ದೇವಸ್ಥಾನ, ಕ್ಷಿಪ್ರಾ ನದಿಯ ದಡ ಮತ್ತು ಉಜ್ಜಯಿನಿಯ ಇತರ ಧಾರ್ಮಿಕ, ಸಾರ್ವಜನಿಕ ಸ್ಥಳಗಳು ಮತ್ತು ವೈಯಕ್ತಿಕ ಮನೆಗಳಲ್ಲಿ ಏಕಕಾಲದಲ್ಲಿ 11.71 ಲಕ್ಷ ಮಣ್ಣಿನ ದೀಪಗಳನ್ನು (ಹಣತೆಗಳು) ಬೆಳಗಿಸುವುದರ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಗಿನ್ನೆಸ್ ಬುಕ್ … Continued

ಫೆಬ್ರವರಿ ತಿಂಗಳ ಜಿಎಸ್​ಟಿ ಸಂಗ್ರಹ 1,33,026 ಕೋಟಿ ರೂ.ಗಳು

ನವದೆಹಲಿ: 2022ರ ಫೆಬ್ರವರಿ ತಿಂಗಳಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್​ಟಿ ಆದಾಯವು 1,33,026 ಕೋಟಿ ರೂ.ಗಳಾಗಿವೆ. ಜಿಎಸ್‌ಟಿ ಆದಾಯದಲ್ಲಿ ಸಿಜಿಎಸ್​ಟಿ 24,435 ಕೋಟಿ ರೂ.ಗಳು, ಎಸ್​ಜಿಎಸ್​ಟಿ 30,779 ಕೋಟಿ ರೂ.ಗಳು, ಐಜಿಎಸ್​ಟಿ 67,471 ಕೋಟಿ ರೂ.ಗಳು (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 33,837 ಕೋಟಿ ರೂ.ಗಳೂ ಸೇರಿದಂತೆ) ಮತ್ತು ಸೆಸ್ 10,340 ಕೋಟಿ ರೂ.ಗಳು ಒಳಗೊಂಡಿದೆ. ಸರ್ಕಾರವು … Continued