ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಇಡಿ ವಿಚಾರಣೆ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣವಾಗಿ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಇಡಿ ವಿಚಾರಣೆಗೆ ಒಳಗಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದು, ಸತತ ಐದು ಗಂಟೆಗಳ ಕಾಲ ಈ ವಿಚಾರಣೆ ನಡೆದಿದೆ ಎನ್ನಲಾಗಿದೆ. ಸುಕೇಶ್ ಚಂದ್ರಶೇಖರ್ ನಡೆಸುತ್ತಿದ್ದ … Continued

ಹೆಂಡ್ತಿ ಕಾಟಕ್ಕೆ ಬೇಸತ್ತು ಜೈಲೇ ವಾಸಿ ಎಂದು ಬಂಧನಕ್ಕೊಳಗಾಗಲು ಪೊಲೀಸ್ ಚೌಕಿಗೆ ಬೆಂಕಿಯಿಟ್ಟ ಮಹಾಶಯ..!

ರಾಜಕೋಟ್(ಗುಜರಾತ್: ವಿಚಿತರ ಘಟನೆಯೊಂದರಲ್ಲಿ ಹೆಂಡತಿ ಕಾಟಕ್ಕೆ ಬೇಸತ್ತು ಜೈಲಿನಲ್ಲಿರುವುದೇ ಒಳಿತೆಂದು ಆಲೋಚಿಸಿದ ಯುವಕನೊಬ್ಬ, ಪೊಲೀಸರು ತನ್ನನ್ನು ಬಂಧಿಸಲಿ ಎಂದು ಪೊಲೀಸ್ ಚೌಕಿಗೆಬೆಂಕಿ ಹಚ್ಚಿರುವ ಘಟನೆ ಗುಜರಾತ್ ರಾಜ್‍ಕೋಟ್ ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್‌ ಚೌಕಿಗೆ ಬೆಂಕಿ ಹಚ್ಚಿದ ಯುವಕನನ್ನುದೇವ್ಜಿ ಚವ್ಡಾ(23) ಎಂದು ಗುರುತಿಸಲಾಗಿದೆ. ನಿನ್ನೆ (ಭಾನುವಾರ) … Continued

ಮಧ್ಯಪ್ರದೇಶದ ರೈತ ಎರಡು ವರ್ಷಗಳಲ್ಲಿ ಆರನೇ ಬಾರಿ ಅದೃಷ್ಟಶಾಲಿ.. ಕಲ್ಲುಗಣಿಯಲ್ಲಿ ಸಿಕ್ಕ ವಜ್ರದ ಮೌಲ್ಯ 30 ಲಕ್ಷ ರೂ…!

ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರೈತ ಸರ್ಕಾರದಿಂದ ಗುತ್ತಿಗೆಗೆ ಪಡೆದ ಭೂಮಿಯಲ್ಲಿ 6.47 ಕ್ಯಾರೆಟ್ ತೂಕದ ಉತ್ತಮ ಗುಣಮಟ್ಟದ ವಜ್ರವನ್ನು ಸರ್ಕಾರದಿಂದ ಗುತ್ತಿಗೆಗೆ ಪಡೆದ ಭೂಮಿಯಲ್ಲಿ ಗಣಿಗಾರಿಕೆ ಮಾಡಿದ್ದಾನೆ…! ರೈತ ಪ್ರಕಾಶ್ ಮಜುಂದಾರ್ ಅವರು ಶುಕ್ರವಾರ ಜಿಲ್ಲೆಯ ಜರುವಾಪುರ ಗ್ರಾಮದ ಗಣಿಯಿಂದ ಈ ವಜ್ರವನ್ನು ಪತ್ತೆ ಮಾಡಿದ್ದಾರೆ ಎಂದು ಉಸ್ತುವಾರಿ ವಜ್ರದ ಅಧಿಕಾರಿ ನೂತನ್ ಜೈನ್ ತಿಳಿಸಿದ್ದಾರೆ. … Continued

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ : ಜಾವೆಲಿನ್’ನಲ್ಲಿ ಚಿನ್ನ ಗೆದ್ದ ಸುಮಿತ್ ಆಂಟಿಲ್

ಟೋಕಿಯೊ: ಸುಮಿತ್ ಆಂಟಿಲ್ ಅವರು ಸೋಮವಾರ ಪ್ಯಾರಾಲಿಂಪಿಕ್ಸ್‌ನಲ್ಲಿ ಮೂರು ಸಲ ವಿಶ್ವದಾಖಲೆಯನ್ನು ಮುರಿದು ಚಿನ್ನದ ಪದಕ ಗೆದ್ದಿದ್ದಾರೆ. ಟೋಕಿಯೊದಲ್ಲಿ ಪುರುಷರ ಜಾವೆಲಿನ್ ಎಫ್ 64 ಫೈನಲ್‌ನಲ್ಲಿ ಸುಮಿತ್ ಆಂಟಿಲ್ ( Sumit Antil ) 68.55 ಮೀ. ಹೊಸ ವಿಶ್ವ ದಾಖಲೆಯ ಎಸೆತದೊಂದಿಗೆ ಚಿನ್ನ ಗೆದ್ದರು. ಟೋಕಿಯೊದಲ್ಲಿ ನಡೆದ ಫೈನಲ್ ನಲ್ಲಿ ಸುಮಿತ್ ಆಂಟಿಲ್ ಒಮ್ಮೆಯಲ್ಲ, … Continued

ಟೋಕಿಯೊ ಪ್ಯಾರಾಲಿಂಪಿಕ್ಸ್ :ಜಾವಲಿನ್ ಥ್ರೋದಲ್ಲಿ ದೇವೇಂದ್ರ ಜಜಾರಿಯಾಗೆ ಬೆಳ್ಳಿ, ಗುರ್ಜರಗೆ ಕಂಚು

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ದೇವೇಂದ್ರ ಜಜಾರಿಯಾ ಮತ್ತು ಸುಂದರ್ ಸಿಂಗ್ ಗುರ್ಜರ್ ಪುರುಷರ ಜಾವೆಲಿನ್ ಥ್ರೋನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆಲ್ಲುವ ಮೂಲಕ ಒಂದು ಕಂಚಿನ ಪದಕ ಪಡೆಯುವ ಮೂಲಕ ಭಾರತ ಆರು ಪದಕಗಳನ್ನು ತಲುಪಿದೆ. ಅಥೆನ್ಸ್ 2004 ಮತ್ತು ರಿಯೊ 2016 ರಲ್ಲಿ ಚಿನ್ನ ಗೆದ್ದ ಜಜಾರಿಯಾದ ಮೂರನೇ ಪ್ಯಾರಾಲಿಂಪಿಕ್ ಪದಕ … Continued

ಅವನಿ ಲೇಖಾರಾ ಪ್ಯಾರಾಲಿಂಪಿಕ್ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ, 10 ಮೀಟರ್ ಏರ್ ರೈಫಲ್‌ ನಲ್ಲಿ ಚಿನ್ನದ ಪದಕ

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕವನ್ನು ಅವನಿ ಲೇಖಾರಾ ಗೆದ್ದಿದ್ದಾರೆ. ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಮತ್ತು ಕ್ರೀಡಾಕೂಟದಲ್ಲಿ ಅಗ್ರ ಪದಕ ಗೆದ್ದ ಐದನೇ ಭಾರತೀಯರಾಗಿದ್ದಾರೆ. ಲೇಖಾರಾ ಫೈನಲ್‌ನಲ್ಲಿ ಒಟ್ಟು 249.6 ಅಂಕಗಳನ್ನು ಗಳಿಸಿದರು, ಡಿಸೆಂಬರ್ 2018 ರಲ್ಲಿ ಉಕ್ರೇನ್‌ನ ಇರಿನಾ ಶ್ಚೆಟ್ನಿಕ್ ಸ್ಥಾಪಿಸಿದ ವಿಶ್ವ ದಾಖಲೆಯನ್ನು ಸರಿಗಟ್ಟಿದರು. … Continued

58 ವಂದೇ ಭಾರತ್ ಎಕ್ಸ್​ಪ್ರೆಸ್ ರೈಲುಗಳ ನಿರ್ಮಾಣಕ್ಕೆ ಟೆಂಡರ್ ಕರೆದ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೆ ಇನ್ನೂ 58 ವಂದೇ ಭಾರತ್ ಎಕ್ಸ್​ಪ್ರೆಸ್ ರೈಲುಗಳ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. ಮುಂದಿನ ವರ್ಷ ಆಗಸ್ಟ್​ 23ರ ಒಳಗೆ 75 ಹೊಸ ರೈಲುಗಳನ್ನು ಓಡಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 75 ಹೊಸ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲುಗಳನ್ನು ಆರಂಭಿಸುವುದಾಗಿ ಘೋಷಿಸಿದ್ದರು. … Continued

ರಾಂಚಿಯಲ್ಲಿ 13 ವರ್ಷದ ಬಾಲಕಿ ಮೇಲೆ 7 ಜನರ ಸಾಮೂಹಿಕ ಅತ್ಯಾಚಾರ; 4 ಅಪ್ರಾಪ್ತರ ಬಂಧನ..!

ರಾಂಚಿ: ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಏಳು ಜನರು ಗುರುವಾರ 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ವರದಿಯಾಗಿದೆ. ರಾಂಚಿಯ ಮಂದಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಏಕಾಂತ ಸ್ಥಳದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತ ಹುಡುಗಿಯ ಸ್ನೇಹಿತ ಎಂದು ಹೇಳಲಾಗಿದೆ. ರಾಂಚಿ (ಗ್ರಾಮಾಂತರ) ಪೊಲೀಸ್ ಅಧೀಕ್ಷಕ ನೌಶಾದ್ ಆಲಂ … Continued

ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಹೈಜಂಪ್​ನಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್

ಟೋಕಿಯೊ: ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ನಿಶಾದ್ ಕುಮಾರ್ ಪುರುಷರ ಟಿ 47 ಎತ್ತರ ಜಿಗಿತದಲ್ಲಿ 2.06 ಮೀಟರ್ ಜಿಗಿದು ಭಾರತಕ್ಕೆ ಬೆಳ್ಳಿ ಪದಕ ಪದಕ ತಂದುಕೊಟ್ಟಿದ್ದಾರೆ. ಅವರು ತಮ್ಮ ಎರಡನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದರು. ಟೋಕಿಯೊ ಪ್ಯಾರಾ ಒಲಿಂಪಿಕ್ಸ್ -2020 ರಲ್ಲಿ ಭಾರತಕ್ಕೆ ಈ ಮೊದಲು ಭಾವಿನಾ ಪಟೇಲ್‌ ಟೇಬಲ್‌ ಟೆನ್ನಿಸ್‌ನಲ್ಲಿ ಬೆಳ್ಳಿ ಪದಕ … Continued

ಡ್ರಗ್ ಪ್ರಕರಣ: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಬಂಧನ

ಮುಂಬೈ: ಬಾಲಿವುಡ್ ಡ್ರಗ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, ಎನ್‍ಸಿಬಿ ಅಧಿಕಾರಿಗಳು ಬಾಲಿವುಡ್‌ ನಟ ಅರ್ಮಾನ್ ಕೋಹ್ಲಿ ಅವರನ್ನು ಬಂಧಿಸಿದ್ದಾರೆ. ಬಾಲಿವುಡ್ ಡ್ರಗ್ ಕೇಸ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದ ಎನ್‍ಸಿಬಿ ಅಧಿಕಾರಿಗಳು ಅರ್ಮಾನ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಅವರ ಮನೆಯಲ್ಲಿದ್ದ ನಿಷೇಧಿತ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದರು. ಇಂದು ಅರ್ಮಾನ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ … Continued