ಬಿಜೆಪಿಯಲ್ಲೇ ಇರುತ್ತೇನೆ, ಆದ್ರೆ ತಂದೆ ವಿರುದ್ಧ ಪ್ರಚಾರ ಮಾಡಲ್ಲ: ಸ್ವಾಮಿ ಪ್ರಸಾದ್ ಮೌರ್ಯ ಪುತ್ರಿ

ಲಕ್ನೋ : ಉತ್ತರ ಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರ ಪುತ್ರಿ ಹಾಗೂ ಬಿಜೆಪಿ ಸಂಸದೆ ಸಂಘಮಿತ್ರ ಮೌರ್ಯ, ನಾನು ಬಿಜೆಪಿಯನ್ನು ತ್ಯಜಿಸುವುದಿಲ್ಲ ಆದರೆ ತನ್ನ ತಂದೆಯ ವಿರುದ್ಧ ಪ್ರಚಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಡೌನ್‌ನಿಂದ ಮೊದಲ ಬಾರಿಗೆ ಬಿಜೆಪಿಯಿಂದ ಸಂಸದರಾಗಿರುವ ಸಂಘಮಿತ್ರ ಮೌರ್ಯ ಅವರು ರಾಷ್ಟ್ರೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ನನ್ನ … Continued

ಪಕ್ಷದ ವಿರುದ್ಧ ತಿರುಗಿಬಿದ್ದ ಬಿಜೆಪಿ ಕಾರ್ಯಕರ್ತರು: ಮೋದಿ ಪ್ರತಿಕೃತಿ ದಹನ, ಹಲವೆಡೆ ಪ್ರತಿಭಟನೆ

ಇಂಫಾಲ: ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎನ್ ಬೀರೆನ್ ಸಿಂಗ್ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಣಿಪುರದಲ್ಲಿ ಭಾನುವಾರ ನಡೆದಿದೆ. ಮುಂದಿನ ತಿಂಗಳು ನಡೆಯಲಿರುವ ಮಣಿಪುರ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ಅನೇಕ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಅವರ ಬೆಂಬಲಿಗರು ಬಿಜೆಪಿ ವಿರುದ್ಧ … Continued

ಉತ್ತರ ಪ್ರದೇಶ ಚುನಾವಣೆ: ತ್ರಿವಳಿ ತಲಾಖ್ ಸಂತ್ರಸ್ತೆ, ಮೌಲಾನಾ ತೌಕೀರ್ ರಜಾ ಅವರ ಸೊಸೆ ನಿದಾ ಖಾನ್ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಇತ್ತಿಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ತೌಕೀರ್ ರಜಾ ಖಾನ್ ಅವರ ಸೊಸೆ ನಿದಾ ಖಾನ್ ಅವರು ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ಭಾನುವಾರ ಲಕ್ನೋದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡರು. ಒಂದು ಕಾಲದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತನ್ನ ಸಹೋದರಿ ಎಂದು ಕರೆದಿದ್ದ ನಿದಾ … Continued

ಇಬ್ರಾಹಿಂ ಆರೋಪಕ್ಕೆ ಉತ್ತರ: ವಿಪಕ್ಷ ಉಪನಾಯಕರಾಗಿ ಯು.ಟಿ.ಖಾದರ್

ಬೆಂಗಳೂರು : ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಹಾಗೂ ವಿಪಕ್ಷದ ಉಪನಾಯಕರಾಗಿ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಅವರನ್ನು ನೇಮಕ ಮಾಡಲಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಅಲ್ಪಸಂಖ್ಯಾತರು ಕಾಂಗ್ರೆಸ್ಸಿಗೆ ಗೇಣಿದಾರರು, ಆದರೆ ಯಾರಿಗೂ ಸ್ಥಾನಮಾನ ನೀಡಿಲ್ಲ ಎಂದು ಆರೋಪಿಸಿ ಪಕ್ಷ ತೊರೆಯುವುದಾಗಿ ಹೇಳಿದ ಬೆನ್ನಲ್ಲೇ ಕಾಂಗ್ರೆಸ್‌ ಖಾದರ್ ಅವರನ್ನು ಎಐಸಿಸಿ ನೇಮಕ ಮಾಡಿದೆ. … Continued

ಕೋವಿಡ್‌ ಎರಡೂ ಲಸಿಕೆ ಪಡೆದ ಭಾರತದ 75%ಕ್ಕಿಂತ ಹೆಚ್ಚು ಅರ್ಹರು

ನವದೆಹಲಿ: ಭಾರತವು ತನ್ನ ರಾಷ್ಟ್ರವ್ಯಾಪಿ ಕೋವಿಡ್‌ ಲಸಿಕೆ ಅಭಿಯಾನ ಪ್ರಾರಂಭಿಸಿದ ಒಂದು ವರ್ಷದ ನಂತರ, ಅರ್ಹ ಜನಸಂಖ್ಯೆಯ 75% ಕ್ಕಿಂತ ಹೆಚ್ಚು ಜನರು ಈಗ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ದೇಶದಲ್ಲಿ ನೀಡಲಾದ ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ ಈಗ 165.70 ಕೋಟಿ ದಾಟಿದೆ. ಎಲ್ಲ ವಯಸ್ಕರಲ್ಲಿ 75%ರಷ್ಟು ಜನರಿಗೆ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ. ಈ ಮಹತ್ವದ … Continued

ಭಾರತದಲ್ಲಿ 2.34 ಲಕ್ಷ ಹೊಸ ಕೋವಿಡ್-19 ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಭಾನುವಾರ 2,34,281 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣ 4,10,92,522 ಕ್ಕೆ ತಲುಪಿದೆ. ನಿನ್ನೆ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ 0.5% ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 893 ಸಾವುಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 4,94,091 ಕ್ಕೆ ತಲುಪಿದೆ. ಭಾರತದ ಸಕ್ರಿಯ ಪ್ರಕರಣ 18,84,937 ಆಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 3,52,784 ರೋಗಿಗಳು … Continued

ಎರಡು ಎನ್‌ಕೌಂಟರ್‌ಗಳಲ್ಲಿ ಜೆಇಎಂ ಉನ್ನತ ಕಮಾಂಡರ್ ಜಾಹಿದ್ ವಾನಿ ಸೇರಿ 5 ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಸಕ್ರಿಯ ಉಗ್ರಗಾಮಿ ಗುಂಪು ಲಷ್ಕರ್-ಎ-ತೈಬಾ (ಲೆಟ್) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಐವರು ಭಯೋತ್ಪಾದಕರು ರಾತ್ರೋರಾತ್ರಿ ಹತರಾಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಕಳೆದ 12 ಗಂಟೆಗಳಲ್ಲಿ ಭದ್ರತಾ ಪಡೆಗಳಿಂದ ಹತರಾದ ಉಗ್ರರಲ್ಲಿ ಜೆಇಎಂ ಕಮಾಂಡರ್ ಜಾಹಿದ್ ವಾನಿ … Continued

ತನ್ನ ಮೊಟ್ಟೆ ರಕ್ಷಿಸಿಕೊಳ್ಳಲು ಬಲಿಷ್ಠ ನಾಗರಹಾವಿನೊಂದಿಗೆ ತಾಯಿ ಕೋಳಿಯ ಸೆಣಸಾಟ..!: ಮಾತೃಶಕ್ತಿ ಎದುರು ಮಣಿದ ಹಾವು

ಯಾವುದೇ ಜೀವಿ ಇರಲಿ, ಮಕ್ಕಳಿಗಾಗಿ ಎಂಥ ಪ್ರಬಲ ಶಕ್ತಿಯ ವಿರುದ್ಧವೂ ನಿಲ್ಲುವುದಕ್ಕೆ  ಹೆದರುವುದಿಲ್ಲ ತಾಯಿ. ಇದು ಮನುಷ್ಯರಲ್ಲಿ ಮಾತ್ರ ಅಲ್ಲ,  ನಾವು ಇಂತಹದ್ದೊಂದು ಪ್ರೀತಿ, ಮಮಕಾರವನ್ನು ಪ್ರಾಣಿ-ಪಕ್ಷಗಳಲ್ಲಿಯೂ ಕಾಣುತ್ತೇವೆ.  ಸದ್ಯ ಅಂತಹದ್ದೇ ವಿಡಿಯೊವೊಂದು ಈಗ ವೈರಲ್ ಆಗುತ್ತಿದೆ. ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲರೂ ಭಯ ಪಡುತ್ತಾರೆ. ಅದು ವಿಷವಿರುವ ಹಾವಾಗಿರಲಿ ಅಥವಾ ಇಲ್ಲದೇ ಇರುವ ಹಾವಾಗಿರಲಿ,  ನೋಡಿದ … Continued

ವಿಧಾನಸಭೆ ಚುನಾವಣೆ: ಮಾರ್ಚ್ 7ರ ವರೆಗೆ ಎಕ್ಸಿಟ್‌ ಪೋಲ್‌ ಚುನಾವಣೆ ನಿಷೇಧ

ನವದೆಹಲಿ: ಚುನಾವಣಾ ಆಯೋಗ (EC) ಶನಿವಾರ ಮಾರ್ಚ್ 7ರ ವರೆಗೆ ನಿರ್ಗಮನ ಸಮೀಕ್ಷೆಗಳ ಡೇಟಾವನ್ನು ಪ್ರಕಟಿಸುವುದನ್ನು ಅಥವಾ ಪ್ರಚಾರ ಮಾಡುವುದನ್ನು ನಿಷೇಧಿಸಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ವಿಧಾನಸಭೆ ಚುನಾವಣೆಗೆ ಮುನ್ನ ಹೊಸ ಆದೇಶ ಬಂದಿದೆ. ಅಧಿಕೃತ ಅಧಿಸೂಚನೆಯಲ್ಲಿ, ಯಾವುದೇ ವ್ಯಕ್ತಿಯು ಯಾವುದೇ ನಿರ್ಗಮನ ಸಮೀಕ್ಷೆಯನ್ನು ನಡೆಸಬಾರದು ಮತ್ತು ಯಾವುದೇ ಎಕ್ಸಿಟ್ … Continued

227ನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲೆಕ್ಷನ್ ಕಿಂಗ್…!

ಕೊಯಮತ್ತೂರು : ‘ಎಲೆಕ್ಷನ್ ಕಿಂಗ್’ ಎಂದೇ ಹೆಸರಾಗಿರುವ ಕೆ. ಪದ್ಮರಾಜನ್ ಅವರು ದಾಖಲೆಯ 227ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದಾರೆ…! ಫೆಬ್ರವರಿ 19 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ ಆರಂಭವಾದ ಬಳಿಕ ನಾಮಪತ್ರ ಸಲ್ಲಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಪದ್ಮರಾಜನ್ ಅವರು ಅತ್ಯಂತ ವಿಫಲಗೊಂಡ ಅಭ್ಯರ್ಥಿ ಎಂದು ದಾಖಲೆ … Continued