ನೋಡನೋಡುತ್ತಿದ್ದಂತೆಯೇ ನೀರಿನದಲ್ಲಿ ಕೊಚ್ಚಿಹೋದ ಶಾಲಾ ಬಸ್‌ | ವೀಕ್ಷಿಸಿ

ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಬೀಳುತ್ತಿದೆ. ರಾಜ್ಯದಲ್ಲಿ ಮಳೆಯಿಂದಾಗಿ ನದಿಗಳು ಮತ್ತು ಚರಂಡಿಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ಭೂಕುಸಿತದ ವರದಿಯಾಗಿದೆ. ಏತನ್ಮಧ್ಯೆ, ಚಂಪಾವತ್ ಪ್ರದೇಶದಲ್ಲಿ ಮಂಗಳವಾರ ಚಂಪಾವತ್‌ನಲ್ಲಿ ಭಾರಿಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ಶಾಲಾ ವಾಹನವೊಂದು ಬಲವಾದ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ತನಕ್‌ಪುರದ ಕಿರೋರಾ ಮಳೆಗಾಲದ ಹಳ್ಳದಲ್ಲಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯರ ನೆರವಿನಿಂದ … Continued

ವೈದ್ಯನಾಗುವ ಕನಸು ಹೊತ್ತು ನೀಟ್‌ ಪರೀಕ್ಷೆ ಬರೆದ ಮಧುರೈನ 56 ವರ್ಷದ ರೈತ…!

ಮಧುರೈ: 56ರ ಹರೆಯದ ರೈತ ಕೆ.ರಾಜ್ಯಕ್ಕೋಡಿ ಅವರು, ವೇಲಮ್ಮಾಳ್ ವಿದ್ಯಾಲಯ ಕೇಂದ್ರದಲ್ಲಿ ಭಾನುವಾರ ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆ (ನೀಟ್) ಬರೆದಿದ್ದಾರೆ. ನೀಟ್‌ ಪರೀಕ್ಷೆ ಬರೆಯಲು ಬಂದಾಗ ವಯೋಮಿತಿ ಮೀರಿದೆ ಎಂಬ ಕಾರಣ ನೀಡಿ ಕೇಂದ್ರದೊಳಗೆ ಪ್ರವೇಶಿಸುವಾಗ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಆದರೆ, ಅವರು ಅವರಿಗೆ ಹಾಲ್ ಟಿಕೆಟ್ ತೋರಿಸಿದಾಗ, ಇತರ ಆಕಾಂಕ್ಷಿಗಳು ಮತ್ತು ಅವರ … Continued

ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠಮಟ್ಟಕ್ಕೆ ತಲುಪಿದ ರೂಪಾಯಿ

ನವದೆಹಲಿ: ಮಂಗಳವಾರ, ಜುಲೈ 19 ರಂದು ಭಾರತೀಯ ರೂಪಾಯಿಯು ಸತತ ಎರಡನೇ ದಿನದ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್‌ ಡಾಲರ್‌ಗೆ 80 ರೂ.ಗಳ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಸೋಮವಾರ, ಇದು ಪ್ರತಿ ಡಾಲರ್‌ಗೆ 80-ಮಾರ್ಕ್ ಅನ್ನು ದಾಟಿತ್ತು. ಆದರೆ ಕ್ಲೋಸಿಂಗ್‌ ಸಮಯದಲ್ಲಿ 79.97ಕ್ಕೆ ಸ್ವಲ್ಪ ಚೇತರಿಸಿಕೊಂಡಿತು. ಕಳೆದ ಎಂಟು … Continued

ಸಂಯುಕ್ತ ಕಿಸಾನ್ ಮೋರ್ಚಾದ 3 ಸದಸ್ಯರನ್ನು ಒಳಗೊಂಡ ಕನಿಷ್ಠ ಬೆಂಬಲ ಬೆಲೆ ಸಮಿತಿ ರಚಿಸಿದ ಕೇಂದ್ರ

ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ಕೃಷಿ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರವು ಅಂತಿಮವಾಗಿ ಸಮಿತಿಯನ್ನು ರಚಿಸಿದ್ದು, ಮಾಜಿ ಕೃಷಿ ಕಾರ್ಯದರ್ಶಿ ಸಂಜಯ್ ಅಗರವಾಲ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಮಿತಿಯು ನೈಸರ್ಗಿಕ ಕೃಷಿ, ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸಲು ಮತ್ತು ಎಂಎಸ್‌ಪಿ(MSP)ಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿಸುವ ಗುರಿಯನ್ನು ಹೊಂದಿದೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ … Continued

ನೀಟ್ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಬ್ರಾಗಳನ್ನು ತೆಗೆದುಹಾಕಲು ಸೂಚನೆ: ದೂರು ದಾಖಲು

ತಿರುವನಂತಪುರಂ: ವೈದ್ಯಕೀಯ ಪ್ರವೇಶ ಪರೀಕ್ಷೆ – NEET 2022 ಅನ್ನು ತೆಗೆದುಕೊಳ್ಳುವ ಮೊದಲು ತಮ್ಮ ಬ್ರಾಗಳನ್ನು ತೆಗೆಯುವಂತೆ ಕೇಳುವ ಮೂಲಕ ಸುಮಾರು 100 ವಿದ್ಯಾರ್ಥಿನಿಯರನ್ನು ಭಾನುವಾರ ಅವಮಾನಿಸಲಾಗಿದೆ, ಈ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ. NEET ಪರೀಕ್ಷೆ ಬರೆದ ವಿದ್ಯಾರ್ಥಿನಿಯ ತಂದೆ ಕೊಟ್ಟಾರಕ್ಕ ಪೊಲೀಸರಿಗೆ ದೂರು ನೀಡಿದ್ದು, ಚಾತಮಂಗಲಂನಲ್ಲಿರುವ ಪರೀಕ್ಷಾ ಕೊಠಡಿಗೆ … Continued

ಪತ್ರಕರ್ತ ಜುಬೈರ್‌ ವಿರುದ್ಧ ಆತುರದ ಕ್ರಮ ಸಲ್ಲ: ಉತ್ತರ ಪ್ರದೇಶ ಪೊಲೀಸರಿಗೆ ಸುಪ್ರೀಂಕೋರ್ಟ್‌ ತಾಕೀತು

ನವದೆಹಲಿ: ಪತ್ರಕರ್ತ, ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್‌ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ 5 ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ʼಆತುರದ ಕ್ರಮʼ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ. ಸೀತಾಪುರದಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಪತ್ರಕರ್ತ ಜುಬೈರ್‌ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ಬಳಿಕ ಅವರ ವಿರುದ್ಧ ‘ಒಂದಾದ ಮೇಲೊಂದರಂತೆ … Continued

ತಮ್ಮನ್ನು ಬಂಧಿಸದಂತೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಕೋರ್ಟ್‌ ಮೆಟ್ಟಿಲೇರಿದ ನೂಪುರ್‌ ಶರ್ಮಾ

ನವದೆಹಲಿ: ಪ್ರವಾದಿ ಮೊಹ್ಮಮದ್‌ ಅವರ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿದ್ದ ತಮ್ಮ ಹಿಂದಿನ ಮನವಿಯನ್ನು ಮರುಸ್ಥಾಪಿಸಲು ಹಾಗೂ ತಮ್ಮನ್ನು ಬಂಧಿಸದಂತೆ ತಡೆ ನೀಡಬೇಕು ಕೋರಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಜುಲೈ 1ರಂದು ಶರ್ಮಾ ವಿರುದ್ಧ … Continued

ಖ್ಯಾತ ಹಿನ್ನೆಲೆ-ಗಜಲ್‌ ಗಾಯಕ ಭೂಪಿಂದರ್ ಸಿಂಗ್ ನಿಧನ

 ಮುಂಬೈ: ಹಿರಿಯ ಬಾಲಿವುಡ್‌ ಹಿನ್ನೆಲೆ ಗಾಯಕ ಹಾಗೂ ಖ್ಯಾತ ಗಜಲ್‌ ಗಾಯಕ ಭೂಪಿಂದರ್ ಸಿಂಗ್ (82 ವರ್ಷ ) ಸೋಮವಾರ ಸಂಜೆ ಮುಂಬೈನಲ್ಲಿ ನಿಧನರಾದರು ಎಂದು ಅವರ ಪತ್ನಿ ಮತ್ತು ಗಾಯಕಿ ಮಿತಾಲಿ ಸಿಂಗ್ ಹೇಳಿದ್ದಾರೆ. ಅವರು ಕೆಲವು ಸಮಯದಿಂದ ಮೂತ್ರದ ಸಮಸ್ಯೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು” ಎಂದು ಪತ್ನಿ ಮಿತಾಲಿ ತಿಳಿಸಿದ್ದಾರೆ. … Continued

ನೀಟ್‌ ಪರೀಕ್ಷೆಯಲ್ಲಿ ‘ರಿಗ್ಗಿಂಗ್’ ಆರೋಪದಡಿ 8 ಮಂದಿಯನ್ನು ಬಂಧಿಸಿದ ಸಿಬಿಐ

ನವದೆಹಲಿ: ಭಾನುವಾರ ನಡೆದ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ರಿಗ್ಗಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ಎಂಟು ಜನರನ್ನು ಕೇಂದ್ರ ತನಿಖಾ ದಳ (ಸಿಬಿಐ) ಇಂದು, ಸೋಮವಾರ ಬಂಧಿಸಿದೆ. 2022ರ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ NEET UG ಪರೀಕ್ಷೆಯಲ್ಲಿ ನಿಜವಾದ ಅಭ್ಯರ್ಥಿಗಳ ಬದಲಿಗೆ ನಕಲಿ ಅಭ್ಯರ್ಥಿಗಳು ಹಾಜರಾಗಲು ಮತ್ತು ಹೆಚ್ಚಿನ ಮೊತ್ತದ ಹಣದ ಬದಲಿಗೆ ಪರೀಕ್ಷೆಯನ್ನು … Continued

ರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ ಕಾಂಗ್ರೆಸ್-ಎಸ್‌ಪಿ-ಎನ್‌ಸಿಪಿ ಶಾಸಕರಿಂದ ಅಡ್ಡ ಮತದಾನ…!?

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ ಅಡ್ಡ ಮತದಾನವು ಕಾಂಗ್ರೆಸ್ ಮತ್ತು ಎನ್‌ಸಿಪಿ ಎರಡರಿಂದಲೂ ನಡೆದ ಬಗ್ಗೆ ವರದಿಯಾಗಿದೆ. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಪಾಳಯ, ಗುಜರಾತ್‌ನಲ್ಲಿ ಎನ್‌ಸಿಪಿ ಮತ್ತು ಒಡಿಶಾ ಮತ್ತು ಅಸ್ಸಾಂನಲ್ಲಿ ಕಾಂಗ್ರೆಸ್‌ನಿಂದ ಅಡ್ಡ ಮತದಾನ ವರದಿಯಾಗಿದೆ. ಉತ್ತರ ಪ್ರದೇಶ ಬರೇಲಿಯ ಭೋಜಿಪುರದ ಸಮಾಜವಾದಿ ಪಕ್ಷದ ಶಾಸಕರಾದ … Continued