ಇದು ಹಲ್ಲುಗಳ ಕಥೆ-ವ್ಯಥೆ..ಅಪರೂಪದ ಗೆಡ್ಡೆಯಿರುವ ಹದಿಹರೆಯದವನ ದವಡೆಯಿಂದ 82 ಹಲ್ಲುಗಳನ್ನು ಹೊರತೆಗೆದ ವೈದ್ಯರು..!

ಅಪರೂಪದ ಗೆಡ್ಡೆಯಿಂದ ಬಳಲುತ್ತಿದ್ದ ಬಿಹಾರದ ಹದಿಹರೆಯದ ಯುವಕನೊಬ್ಬ ದವಡೆಯಿಂದ 3 ಗಂಟೆಗಳ ಕಾರ್ಯಾಚರಣೆಯಲ್ಲಿ ವೈದ್ಯರು ಬರೋಬ್ಬರಿ 82 ಹಲ್ಲುಗಳನ್ನು ತೆಗೆದಿದ್ದಾರೆ..! ಅದು ಸರಾಸರಿ ವಯಸ್ಕರ ಹಲ್ಲುಗಳಿಗಿಂತ 50 ಹಲ್ಲುಗಳು ಹೆಚ್ಚು…! 17 ವರ್ಷದ ನಿತೀಶ್ ಕುಮಾರ್ ಅವರು ಕಳೆದ ಐದು ವರ್ಷಗಳಿಂದ ದವಡೆಯ ಗೆಡ್ಡೆಯಾದ ಸಂಕೀರ್ಣವಾದ ಒಡೊಂಟೊಮಾದಿಂದ ಬಳಲುತ್ತಿದ್ದರು. ಪರಿಸ್ಥಿತಿಯ ತೀವ್ರತೆಯು ಎರಡು ಬೃಹತ್ ಉಂಡೆಗಳಾಗಿ … Continued

ಕೇಂದ್ರ ಸಚಿವ ಪಿಯೂಷ್ ಗೋಯಲ್ ಈಗ ರಾಜ್ಯಸಭೆಯ ಸದನದ ನಾಯಕ

ನವದೆಹಲಿ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಬುಧವಾರ ರಾಜ್ಯಸಭೆಯಲ್ಲಿ ಸದನದ ನಾಯಕರನ್ನಾಗಿ ನೇಮಿಸಲಾಯಿತು. ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆ ನಾಯಕ ಹುದ್ದೆಯನ್ನು ಅಲಂಕರಿಸಿದ ಪಿಯೂಷ್ ಗೋಯಲ್, ಬಿಜೆಪಿಯ ಹಿರಿಯ ನಾಯಕ ಥಾವರ್‌ಚಂದ್‌ ಗೆಹ್ಲೋಟ್ ಅವರ ನಂತರ ಸದನದ ನಾಯಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹಿರಿಯ ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಥಾವರ್‌ಚಂದ್ ಗೆಹ್ಲೋಟ್ ಅವರು … Continued

ಭಾರತದ ಹೊಸ ಗ್ರಾಹಕರಿಗೆ ಮಾಸ್ಟರ್‌ಕಾರ್ಡ್‌ ವಿತರಿಸದಂತೆ ಆರ್‌ಬಿಐ ನಿರ್ಬಂಧ

ಮುಂಬೈ: ಪಾವತಿ ವ್ಯವಸ್ಥೆ ದತ್ತಾಂಶ ಸಂಗ್ರಹಣೆಯ ನಿರ್ದೇಶನ’ಗಳನ್ನು ಅನುಸರಿಸದ ಕಾರಣಕ್ಕಾಗಿ ಜುಲೈ 22 ರಿಂದ ಹೊಸ ದೇಶೀಯ ಗ್ರಾಹಕರನ್ನು (ಡೆಬಿಟ್, ಕ್ರೆಡಿಟ್ ಅಥವಾ ಪ್ರಿಪೇಯ್ಡ್) ಸೇವೆಗೆ ಒಳಪಡಿಸುವುದಕ್ಕೆ ಆರ್‌ಬಿಐ ಮಾಸ್ಟರ್‌ಕಾರ್ಡ್‌ಗೆ ನಿರ್ಬಂಧಗಳನ್ನು ವಿಧಿಸಿದೆ. ಅಂದ ಹಾಗೇ ಈ ಆದೇಶವು ಮಾಸ್ಟರ್‌ಕಾರ್ಡ್‌ನ ಅಸ್ತಿತ್ವದಲ್ಲಿರುವ ಗ್ರಾಹಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆರ್‌ಬಿಐ ಹೇಳಿದೆ. ಡೆಬಿಟ್, ಕ್ರೆಡಿಟ್ ಮತ್ತು … Continued

ಕೇಂದ್ರ ಸರ್ಕಾರಿ ನೌಕರರು-ಪಿಂಚಣಿದಾರರಿಗೆ ಸಿಹಿ ಸುದ್ದಿ.. ಜುಲೈ 1 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆ 28%ಕ್ಕೆ ಹೆಚ್ಚಳ..!

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ (ಡಿಎ) ಮತ್ತು ಡಿಯರ್ನೆಸ್ ರಿಲೀಫ್ (ಡಿಆರ್) ಅನ್ನು ಜುಲೈ 1, 2021 ರಿಂದ ಪುನಃಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದ್ದು, ಭತ್ಯೆಯ ದರವನ್ನು ಶೇಕಡಾ 28 ಕ್ಕೆ ಹೆಚ್ಚಿಸಿದೆ. ಡಿಎ ಮತ್ತು ಡಿಆರ್ ಹೆಚ್ಚಳವು ಬೊಕ್ಕಸಕ್ಕೆ ಹೆಚ್ಚುವರಿ ವಾರ್ಷಿಕ 34,401 ಕೋಟಿ ರೂ.ಗಳನ್ನು … Continued

ಸಫಾರಿ ವಾಹನಕ್ಕೇ ಕಾಲುಕೊಟ್ಟು ನಿಂತ ದೈತ್ಯಾಕಾರದ 3 ಹುಲಿಗಳು: ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ..ಒಳಗಿದ್ದವರ ಪರಿಸ್ಥಿತಿ..?!

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಕೆಲವಷ್ಟು ವಿಡಿಯೋಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ ಹಅಗೂ ಅಚ್ಚರಿ ಮೂಡಿಸುತ್ತವೆ. ಇಂಥದ್ದೇ ಈಗ ವೈರಲ್ ಆಗುತ್ತಿರುವ ವಿಡಿಯೋ ನಮ್ಮ ಗಮನ ಸೆಳೆಯುತ್ತದೆ. ವಿಡಿಯೋ ನೋಡಿದಾಕ್ಷಣ ಒಮ್ಮೆ ಎದೆ ಝಲ್‌ ಎನ್ನುತ್ತದೆ. ಈ ವಿಡಿಯೋ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸುಸಂತ ನಂದ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊವನ್ನು ಐಎಫ್​ಎಸ್​ ಅಧಿಕಾರಿ ಸುಸಂತಾ … Continued

ಟೆನಿಸ್‌ ತಾರೆ ಲಿಯಾಂಡರ್ ಪೇಸ್- ನಟಿ ಕಿಮ್ ಶರ್ಮಾ ಡೇಟಿಂಗ್? ಗೋವಾ ರಜಾದಿನದ ಈ ಚಿತ್ರಗಳಿಂದ ಸುಳಿವು..!

ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಕ್ರೀಡಾಪಟುಗಳು ಡೇಟಿಂಗ್ಹೊಸತಲ್ಲ. ಈಗ ಪಟ್ಟಿಯಲ್ಲಿ ಖ್ಯಾತ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮತ್ತು ನಟಿ ಕಿಮ್ ಶರ್ಮಾ ಸೇರಿದಂತೆ ಕಾಣುತ್ತಿದೆ. ಅವರು ಗೋವಾದಲ್ಲಿ ಒಟ್ಟಿಗೆ ವಿಹಾರಕ್ಕೆ ಹೋಗುವ ಫೋಟೋಗಳೊಂದಿಗೆ ಡೇಟಿಂಗ್ ವದಂತಿಗಳಿಗೆ ನಾಂದಿ ಹಾಡಿದ್ದಾರೆ. ಸ್ನ್ಯಾಪ್‌ಶಾಟ್‌ಗಳನ್ನು ಗೋವಾದ ರೆಸ್ಟೋರೆಂಟ್‌ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಲಿಯಾಂಡರ್ ಪೇಸ್ ಮತ್ತು ಕಿಮ್ ಶರ್ಮಾ ಅವರನ್ನು … Continued

ಕೊರೊನಾ ನಿಯಂತ್ರಣ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸಹಾಯ ಕೋರಿದ ಆಸ್ಟ್ರೇಲಿಯಾ ಸಂಸದ..!

ನವದೆಹಲಿ: ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಆಸ್ಟ್ರೇಲಿಯಾದ ಸಂಸದ ಕ್ರೇಗ್ ಕೆಲ್ಲಿ ಶ್ಲಾಘಿಸಿದ್ದಾರೆ. ಅಲ್ಲದೆ, ನಮ್ಮ ಆಸ್ಟ್ರೇಲಿಯಾದಲ್ಲೂ ಕೊರೊನಾ ಸಾಂಕ್ರಾಮಿಕ ನಿಯಂತ್ರಿಸಲು ನೀವು ಸಹಾಯ ಮಾಡಬಹುದೇ ಎಂದು ಕೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಆಸ್ಟ್ರೇಲಿಯಾ ಸಂಸದ ಕ್ರೇಗ್​ ಕೆಲ್ಲಿ, ಭಾರತದ ಉತ್ತರಪ್ರದೇಶದಲ್ಲಿ ಕೊರೊನಾ 2ನೇ ಅಲೆ … Continued

ದೇಶಾದ್ಯಂತ ನೈರುತ್ಯ ಮುಂಗಾರು ಮಳೆ ಆರ್ಭಟ: ಜನಜೀವನ ಅಸ್ತವ್ಯಸ್ತ

ಬೆಂಗಳೂರು:  ರಾಜ್ಯದ ಹಲವು ಜಿಲ್ಲೆಗಳಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಮಳೆಯಾಗುತ್ತಿದೆ. ದೇಶದಲ್ಲೂ ಮೊದಲ ಬಾರಿಗೆ ನೈರುತ್ಯ ಮುಂಗಾರು ಆರ್ಭಟ ಎಲ್ಲೆಡೆ ವ್ಯಾಪಿಸಿದೆ. ದೇಶಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಹಲವೆಡೆ ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದಲ್ಲಿ  ಜುಲೈ ೧೬ರವರೆಗೂ ಕರ್ನಾಟಕದಲ್ಲಿ ಅತಿ ಹೆಚ್ಚಿನ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಅವಧಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಧಿಕ … Continued

ಭಾರತದಲ್ಲಿ ದೈನಂದಿನ ಕೋವಿಡ್ ಪ್ರಕರಣ ತುಸು ಏರಿಕೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಬುಧವಾರ 24 ಗಂಟೆಗಳಲ್ಲಿ 38,792 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 624 ಸಾವುಗಳು ವರದಿಯಾಗಿದೆ. ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ಈಗ 3.09 ಕೋಟಿ ಮತ್ತು ಒಟ್ಟು ಸಾವು 4,11,408 ಆಗಿದೆ.ಇದೇ ಅವಧಿಯಲ್ಲಿ ದೇಶದಲ್ಲಿ 41,000 ಜನರು ಚೇತರಿಸಿಕೊಂಡಿದ್ದು, ಪ್ರಸ್ತುತ ಸಕ್ರಿಯ ಪ್ರಕರಣ 4,29,946ಕ್ಕೆ … Continued

ಪಾಕಿಸ್ತಾನದ ಎಲ್‌ಇಟಿ ಕಮಾಂಡರ್ ಸೇರಿ ಮೂವರು ಭಯೋತ್ಪಾದಕರ ಹತ್ಯೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (ಎಲ್ ಇಟಿ) ಕಮಾಂಡರ್ ಐಜಾಜ್ (ಆಲಿಯಾಸ್ ಅಬು ಹುರೈರಾ) ಸೇರಿ ಮೂವರು ಭಯೋತ್ಪಾದಕರನ್ನು ಭಾರತೀಯ ಭದ್ರತಾ ಪಡೆಗಳು ಕೊಂದು ಹಾಕಿವೆ. ಪುಲ್ವಾಮಾ ಪಟ್ಟಣದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿತು … Continued