ಅದ್ಭುತ ವೀಡಿಯೊ…| ಔಷಧದ ಅಂಗಡಿ ಹುಡುಕಿಕೊಂಡು ಬಂದು ತನ್ನ ಗಾಯಕ್ಕೆ ಬ್ಯಾಂಡೇಜ್‌ ಹಾಕಿಸಿಕೊಂಡ ಮಂಗ….!

ಅಪರೂಪ ಮತ್ತು ಹೃದಯಸ್ಪರ್ಶಿ ಘಟನೆಯೊಂದು ನಡೆದಿದ್ದು, ಗಾಯಗೊಂಡ ಕೋತಿ ಅಗತ್ಯ ಆರೈಕೆ ಮಾಡಿಸಿಕೊಳ್ಳಲು ಮೆಡಿಕಲ್ ಶಾಪ್ ಗೆ ಬಂದಿದೆ. ಈ ಘಟನೆ ಈ ತಿಂಗಳು ಬಾಂಗ್ಲಾದೇಶದ ಮೆಹರ್‌ಪುರ ಪಟ್ಟಣದಲ್ಲಿ ನಡೆದಿದ್ದು, ಆ ಪ್ರದೇಶದಲ್ಲಿನ ಅಲ್ಹೇರಾ ಫಾರ್ಮಸಿಯಲ್ಲಿ ಮಂಗ ತನ್ನ ಗಾಯಕ್ಕೆ ಸೂಕ್ತ ಬ್ಯಾಂಡೇಜ್‌ ಹಾಕಿಸಿಕೊಂಡ ಆರೈಕೆ ಮಾಡಿಸಿಕೊಂಡಿದೆ. ವೀಡಿಯೋದಲ್ಲಿ ಸೆರೆಯಾಗಿರುವ ಈ ಅಸಾಮಾನ್ಯ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗಾಯಗೊಂಡಿದ್ದ ಕೋತಿ, ಮನುಷ್ಯರು ತನಗೆ ಸಹಾಯವನ್ನು ನೀಡಬಹುದೆಂಬ ನಿರೀಕ್ಷಿಸಿ ತನ್ನಷ್ಟಕ್ಕೆ ತಾನೇ ಔಷಧದ ಅಂಗಡಿಗೆ ಬಂದಿದೆ. ಮಂಗಕ್ಕೆ ಹೇಗೆ ಗಾಯವಾಯಿತು ಹಾಗೂ ಅಂಗಡಿಯನ್ನು ಪ್ರವೇಶಿಸುವ ಮೊದಲು ಅದು ಎಲ್ಲಿತ್ತು ಎಂಬುದು ವೀಡಿಯೊದಲ್ಲಿ ಇಲ್ಲ.

ಆದರೆ ಔಷಧದ ಅಂಗಡಿಯಲ್ಲಿದ್ದ ಜನರು ಗಾಯಗೊಂಡ ಸ್ಥಿತಿಯಲ್ಲಿದ್ದ ಮಂಗಕ್ಕೆ ಆರೈಕೆ ಮಾಡಿದರು. ಹಾಗೂ ಅದರ ಗಾಯಕ್ಕೆ ಸೂಕ್ತ ಬ್ಯಾಂಡೇಜ್‌ ಮಾಡಿದ್ದು ವೀಡಿಯೊದಲ್ಲಿ ಕಂಡುಬಂದಿದೆ. .
ಮಂಗ ಔಷಧದ ಅಂಗಡಿಯ ಕೌಂಟರ್‌ನಲ್ಲಿ ಶಾಂತವಾಗಿ ಕುಳಿತಿರುವುದನ್ನು ದೃಶ್ಯಾವಳಿಗಳು ತೋರಿಸಿವೆ. ಔಚಧದ ಅಂಗಡಿ ಸಿಬ್ಬಂದಿ ಮತ್ತು ಪಕ್ಕದವರು ಮಂಗದ ಸಹಾಯಕ್ಕೆ ಧಾವಿಸಿದರು. ವ್ಯಕ್ತಿಯೊಬ್ಬರು ಅದರ ಗಾಯಕ್ಕೆ ದ್ರಾವಣ ಹಾಗೂ ಮುಲಾಮು ಹಚ್ಚುವುದನ್ನು ವೀಡಿಯೊ ತೋರಿಸಿದೆ, ಇನ್ನೊಬ್ಬನು ತನ್ನ ಕೈಗಳಿಂದ ಕೋತಿಯನ್ನು ಅಲ್ಲಾಡದಂತೆ ಹಿಡಿದುಕೊಂಡಿದ್ದಾನೆ. ಔಷಧ ಹಚ್ಚಿದ ನಂತರ ಜನರು ಮಂಗ ಗಾಯಗೊಂಡ ಜಾಗಕ್ಕೆ ಬ್ಯಾಂಡೇಜ್ ಅನ್ನು ಎಚ್ಚರಿಕೆಯಿಂದ ಸುತ್ತಿದ್ದಾರೆ. ಇದನ್ನು ಮಾಡುವಾಗ ಮಂಗ ಏನೂ ಮಾಡದೆ, ಶರೀರವನ್ನೂ ಅಲ್ಲಾಡಿಸದೆ ಸುಮ್ಮನೆ ಕುಳಿತುಕೊಂಡಿತ್ತು.

ಪ್ರಮುಖ ಸುದ್ದಿ :-   ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಬೆಂಕಿ ಉಂಡೆಯಾದ ಟರ್ಮಿನಲ್, ವಿನಾಶದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ಅಸಾಮಾನ್ಯ ಘಟನೆ ಆನ್‌ಲೈನ್ ವೀಕ್ಷಕರನ್ನು ಬೆರಗುಗೊಳಿಸಿತು. ವೀಡಿಯೊದಲ್ಲಿ, ಫಾರ್ಮಸಿಗೆ ಕಾಲಿಟ್ಟ ನಂತರ ಕೋತಿಗೆ ಸಾಂತ್ವನ ನೀಡುತ್ತಿರುವುದು ಕಂಡುಬಂದಿದೆ. ಪ್ರಥಮ ಚಿಕಿತ್ಸಾ ಡ್ರೆಸ್ಸಿಂಗ್ ಮಾಡುವ ಮೊದಲು ಅವರು ಮಂಗದ ಗಾಯವನ್ನು ಸ್ವಚ್ಛಗೊಳಿಸುವುದು ಕಂಡುಬಂದಿದೆ. ಮಂಗ ಗಾಯವಾಗಿದ್ದರೂ ಅದಕ್ಕೆ ಆರೈಕೆ ಮಾಡುವಾಗ ಶಾಂತವಾಗಿ ಕುಳಿತುಕೊಂಡಿದೆ.
ನೆಟಿಜನ್‌ಗಳು ಫಾರ್ಮಸಿ ಸಿಬ್ಬಂದಿ ದಯೆ ಮತ್ತು ಅದರ ಗಾಯಕ್ಕೆ ಚಿಕಿತ್ಸೆ ನೀಡಲು ಔಷಧ ಅಂಗಡಿ ಹುಡುಕಿಕೊಂಡು ಬಂದ ಮಂಗನ ಬುದ್ಧಿವಂತಿಕೆಗೆ ಶ್ಲಾಘಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement