ವೀಡಿಯೊ..| ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕನ ಮೇಲೆ ಹರಿದ ಬಸ್‌ ; ಪವಾಡಸದೃಶ ರೀತಿಯಲ್ಲಿ ಪಾರಾದ ಪ್ರಯಾಣಿಕ…!

ಕೇರಳದ ಟರ್ಮಿನಲ್ ಬಸ್‌ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದಾಗ ಬಸ್ ಡಿಕ್ಕಿ ಹೊಡೆದರೂ ಯುವಕನೊಬ್ಬ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾನೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಡುಕ್ಕಿ ಜಿಲ್ಲೆಯ ಕುಮಲಿ ಮೂಲದ ವಿಷ್ಣು ಎಂದು ಗುರುತಿಸಲಾದ ವ್ಯಕ್ತಿ ಡಿಸೆಂಬರ್ 1 ರಂದು ಕಟ್ಟಪ್ಪನ ಹೊಸ ಬಸ್ ನಿಲ್ದಾಣ ಟರ್ಮಿನಲ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ.

ವೀಡಿಯೋದಲ್ಲಿ, ಬಸ್ ಬಂದು ಆತನಿಗೆ ಡಿಕ್ಕಿ ಹೊಡೆದಾಗ ನಿಲ್ದಾಣದ ಆತ ಬೆಂಚ್ ಮೇಲೆ ಕುಳಿತು ತನ್ನ ಫೋನ್‌ನಲ್ಲಿ ಯಾರೊಂದಿಗೂ ಮಾತನಾಡುತ್ತಿರುವಂತೆ ಕಂಡುಬಂದಿದೆ. ಬಸ್‌ ಬಂದು ಡಿಕ್ಕಿ ಹೊಡೆದಾಗ ಆತ ಬಸ್‌ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಆದರೆ ಬಸ್‌ ಅನ್ನು ಹಿಂದಕ್ಕೆ ತೆಗೆದುಕೊಂಡ ನಂತರ ಆತ ಕುಳಿತ ಸ್ಥಿತಿಯಲ್ಲೇ ಇರುವುದು ಕಂಡುಬಂದಿದೆ. ಜನರು ಆತನ ಕಡೆಗೆ ಧಾವಿಸುತ್ತಿದ್ದಾರೆ. ಆಗಲೂ ಆತ ಅದೇ ಸ್ಥಾನದಲ್ಲಿ ಕುಳಿತಿದ್ದಾನೆ. ಅದೃಷ್ವಶಾತ್‌ ಭಾರೀ ಅನಾಹುತ ತಪ್ಪಿದೆ.

ಸ್ಥಳೀಯರು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಯಾವುದೇ ಗಂಭೀರ ಗಾಯಗಳಿಲ್ಲದೆ ಆತ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಬಸ್ ನಿಲ್ದಾಣದ ಅಧಿಕಾರಿಗಳ ಪ್ರಕಾರ, ವಾಹನವು ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ. ಬಸ್ ಅನ್ನು ರಿವರ್ಸ್ ಗೇರ್‌ಗೆ ಹಾಕಲಾಯಿತು, ಅದು ವಿಫಲವಾದ ಕಾರಣ ಅದನ್ನು ಮುಂದಕ್ಕೆ ಒಮ್ಮೆಲೇ ಚಲಿಸಿದ್ದೇ ಈ ಘಟನೆಗೆ ಕಾರಣ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬಿಹಾರದಲ್ಲಿ ಮತಪಟ್ಟಿ ಪರಿಷ್ಕರಣೆ ; ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಆರ್‌ಜೆಡಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement