ಪಾವಗಡ : ಆಂಬುಲೆನ್ಸ್ ಸಿಗದೆ ಬೈಕಿನಲ್ಲೇ ತಂದೆಯ ಶವ ಸಾಗಿಸಿದ ಪುತ್ರರು…!

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್‌.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ 108 ಆಂಬ್ಯುಲೆನ್ಸ್ ಸಿಗದ ಕಾರಣ ತಮ್ಮ ತಂದೆಯ ಮೃತದೇಹವನ್ನು ಮಕ್ಕಳು ಬೈಕಿನಲ್ಲೇ ತಮ್ಮೂರಿಗೆ ಒಯ್ದ ವಿದ್ಯಮಾನ ನಡೆದಿದೆ ಎಂದು ವರದಿಯಾಗಿದೆ. ದಳವಾಯಿ ಹಳ್ಳಿ ಗ್ರಾಮದ ಗುಡುಗುಲ ಹೊನ್ನೂರಪ್ಪ (80) ಎಂಬವರಿಗೆ ಬುಧವಾರ ಮಧ್ಯಾಹ್ನ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. 108 ಆಂಬುಲೆನ್ಸ್​​ನಲ್ಲಿ … Continued

ವೀಡಿಯೊ..| ಹೋಳಿ ಸಂಭ್ರದಲ್ಲಿ ಕುಣಿಯುತ್ತಿದ್ದ ಲಕ್ಷಾಂತರ ಜನರ ಮಧ್ಯೆ ಬಂದ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟ ರೀತಿಗೆ ಬೆರಗಾಗಲೇ ಬೇಕು | ವೀಕ್ಷಿಸಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ರಂಗಪಂಚಮಿ ಸಂದರ್ಭದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಎಲ್ಲರೂ ಹಾಡಿನ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸುತ್ತಿದ್ದರು. ಜನಜಂಗುಳಿ ಎಷ್ಟಿತ್ತೆಂದರೆ ರಸ್ತೆಯಲ್ಲಿ ತಲೆ ಮಾತ್ರ ಕಾಣುತ್ತಿತ್ತು. ಆದರೆ, ಅಷ್ಟರಲ್ಲಿ ಒಬ್ಬ ರೋಗಿಯನ್ನು ಹೊತ್ತುಕೊಂಡು ಆಂಬುಲೆನ್ಸ್‌ ಅದೇ ಮಾರ್ಗದಲ್ಲಿ ಬಂದಿದ್ದು ಇದನ್ನು ನೋಡಿ   ಹೋಳಿ (Holi) ಆಚರಣೆಯಲ್ಲಿ ತೊಡಗಿದ್ದ ಸಾವಿರಾರು ಮಂದಿ ಆಂಬುಲೆನ್ಸ್‌ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ … Continued

ಕುಮಟಾ: ಆಂಬುಲೆನ್ಸ್‌ಗಳ ಖರೀದಿಗೆ ಸಾರ್ವಜನಿಕರ ಸಹಕಾರ ಕೋರಿದ ರೋಟರಿ ಕ್ಲಬ್‌

ರೋಟರಿ ಕ್ಲಬ್‌ ಕುಮಟಾ ಸಾರ್ವಜನಿಕರ ಜೀವ ರಕ್ಷಣೆಯ ಮಹತ್ತರ ಕಾರ್ಯಕ್ಕಾಗಿ ಸಾರ್ವಜನಿಕರ ಸಹಕಾರ ಬಯಸಿದೆ. ಕುಮಟಾದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ದಿಸೆಯಲ್ಲಿ ಸುಸಜ್ಜಿತ ಆಂಬುಲೆನ್ಸ್‌ಗಳನ್ನು ಹೊಂದಿಸಲು ಜನರಿಂದ ಸಹಾಯ ಕೇಳಿದೆ. ಕುಮಟಾ ಹಾಗೂ ಸುತ್ತಮುತ್ತಲಿನ ಜನರ ಜೀವ ರಕ್ಷಣೆಗೆ ಅಗತ್ಯವಾಗಿರುವ ಈ ಕಾರ್ಯಕ್ಕೆ ಜನರು ಉದಾರವಾಗಿ ದಾನ ಮಾಡಬೇಕೆಂದು ಕೋರಲಾಗಿದೆ. ಹಣ  ಸಂದಾಯಕ್ಕಾಗಿ ಬ್ಯಾಂಕ್‌ ವಿವರ … Continued