ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ, ಉಳುವರೆಗೆ ಸಂಸದ ಕಾಗೇರಿ ಭೇಟಿ : ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತ ಸಂಭವಿಸಿದ ಸ್ಥಳಕ್ಕೆ ಮತ್ತು ಘಟನೆಯಿಂದಾಗಿ ಹಾನಿ ಸಂಭವಿಸಿದ ಉಳುವರೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ರಕ್ಷಣಾ ಕಾರ್ಯಾಚರಣೆ ಕುರಿತು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರೊಂದಿಗೆ ಚರ್ಚೆ ನಡೆಸಿದ ಸಂಸದರು ದುರ್ಘಟನೆಯಲ್ಲಿ ನಾಪತ್ತೆ ಆಗಿರುವ ಸ್ಥಳೀಯ … Continued

ಶಿರೂರು ಗುಡ್ಡ ಕುಸಿತ | ನದಿಯಲ್ಲಿ ಟ್ರಕ್ ಇರುವಿಕೆ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ ತಜ್ಞ ಕಂಪನಿ; ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಆಗಮನ

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರುಬಳಿ ಗುಡ್ಡ ಕುಸಿತದ ದುರಂತದಲ್ಲಿ ಗಂಗಾವಳಿ ನದಿ ನೀರಿನಲ್ಲಿ ಮಣ್ಣಿನ ಅಡಿ ಸಿಲುಕಿರುವ ಕೇರಳದ ಲಾರಿ, ಮತ್ತಿತರ ವಾಹನಗಳು ಮತ್ತು ನಾಪತ್ತೆಯಾದವರ ಮೂವರ ಪತ್ತೆಗೆ ನದಿ ನೀರಿನಲ್ಲಿ ಶೋಧ ಕಾರ್ಯಾಚರಣೆ 12 ನೇ ದಿನವೂ ಮುಂದುವರಿದಿದೆ. ಪತ್ತೆಗಾಗಿ ದೆಹಲಿಯ ಕ್ವಿಕ್‌ಪೇ ಪ್ರೈವೇಟ್ ಲಿಮಿಟೆಡ್‌ ನಡೆಸಿದ ದ್ರೋಣ್‌ … Continued

ಶಿರೂರು ಗುಡ್ಡ ಕುಸಿತ | ನಾಪತ್ತೆಯಾದವರ ಹುಡುಕಾಟ ಮತ್ತಷ್ಟು ತೀವ್ರ ; ಟ್ರಕ್‌ ಸ್ಥಳ ನಿರ್ಧರಿಸಲು ಅಡ್ವಾನ್ಸ್ಡ್‌ ಡ್ರೋನ್ ಬಳಕೆ : ಮುಳುಗು ತಜ್ಞರಿಗೆ ನದಿಯ ಪ್ರವಾಹವೇ ಸವಾಲು

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ತಂಡಗಳು ಲಾರಿ ಗಂಗಾವಳಿ ನದಿಯಲ್ಲಿ ಇರುವುದರ ಬಗ್ಗೆ ಮತ್ತಷ್ಟು ಖಚಿತತೆ ವ್ಯಕ್ತಪಡಿಸಿವೆ. ಹೈರೆಸಲ್ಯೂಶನ್‌ ದ್ರೋಣ್ ಮೂಲಕ ಗುರುವಾರ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕ್ವಿಕ್ ಪೇ ಪ್ರೈವೇಟ್ ಲಿಮಿಟೆಡ್ ಆಪರೇಶನಲ್ ಸಲಹೆಗಾರ, ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ … Continued

ರಾಜ್ಯಸಭೆಯಲ್ಲಿ ಶಿರೂರು ಗುಡ್ಡ ಕುಸಿತ ಪ್ರಸ್ತಾಪಿಸಿದ ಮಾಜಿ ಪ್ರಧಾನಿ ದೇವೇಗೌಡ

ನವದೆಹಲಿ: ಕರ್ನಾಟಕದಲ್ಲಿ ಪ್ರಾಕೃತಿಕ ವಿಕೋಪದಿಂದ ಒಂಬತ್ತು ಮಂದಿ ಸಾವಿಗೀಡಾಗಿದ್ದರೂ, ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ನಿರ್ಲಕ್ಷಿಸಿದೆ ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್‌ಡಿ ದೇವೇಗೌಡ ಬುಧವಾರ ರಾಜ್ಯಸಭೆಯಲ್ಲಿ ಕಿಡಿಕಾರಿದರು. ರಾಜ್ಯ ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂದು ಆರೋಪಿಸಿದ ಮಾಜಿ ಪ್ರಧಾನಿ, ಗೌಡರ ಪುತ್ರ ಕೇಂದ್ರ ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಭೂಕುಸಿತ … Continued

ವೀಡಿಯೊ | ಶಿರೂರು ಗುಡ್ಡ ಕುಸಿತ ದುರಂತ : ರಾಷ್ಟ್ರೀಯ ಡಿಟೆಕ್ಟರ್ ಏಜನ್ಸಿಯ ತಜ್ಞರಿಂದ ಕಾರ್ಯಾಚರಣೆ

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ದೆಹಲಿ ಹಾಗೂ ಬೆಂಗಳೂರಿನಿಂದ ಬಂದ ರಾಷ್ಟ್ರೀಯ ಡಿಟೆಕ್ಟರ್ ಏಜನ್ಸಿಯ ತಜ್ಞರು ಗುರುವಾರ (ಜುಲೈ 25) ಕಾರ್ಯಾಚರಣೆ ಆರಂಭ ಮಾಡಿದ್ದಾರೆ. ಕೇರಳದ ಲಾರಿ ಇರುವಿಕೆ ಬಗ್ಗೆ ಮಧ್ಯಾಹ್ನದ ವರೆಗೆ ಅವರಿಗೆ ಯಾವುದೇ ನಿಖರ ಕುರುಹು ಸಿಕ್ಕಿಲ್ಲ. ಅತಿ ಹೆಚ್ಚಿನ ಸಾಮರ್ಥ್ಯದ ಡ್ರೋಣ್ … Continued

ಶಿರೂರು ಗುಡ್ಡ ಕುಸಿತ ಪ್ರಕರಣ: ಹೈಕೋರ್ಟ್‌ ಗೆ ಕೇಂದ್ರ ಸರ್ಕಾರದಿಂದ ಮಾಹಿತಿ ಸಲ್ಲಿಕೆ

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರು ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-66ರ ಅಂಚಿನಲ್ಲಿ ಉಂಟಾದ ಗುಡ್ಡ ಕುಸಿತದ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದವರ ಪೈಕಿ ಎಂಟು ಜನರ ಶವ ಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಕಾರ್ಯಾಚರಣೆ ತ್ವರಿತವಾಗಿ ಸಾಗಿದೆ ಎಂದು ಕೇಂದ್ರ ಸರ್ಕಾರವು ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ. ವಕೀಲ ಶಿಜಿ ಮಲಯಾಳಿ ಹಾಗೂ ನವದೆಹಲಿಯ … Continued

ಅಂಕೋಲಾ | ಶಿರೂರು ಗುಡ್ಡ ಕುಸಿತ ದುರಂತ : ನಾಪತ್ತೆಯಾಗಿದ್ದ ಟ್ರಕ್ ನದಿಯೊಳಗಿರುವ ಬಗ್ಗೆ ಸಿಕ್ಕ ಸುಳಿವು ; ಸಚಿವರಿಂದ ಟ್ವೀಟ್‌

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ದುರಂತದಲ್ಲಿ ಇನ್ನೂ ನಾಪತ್ತೆಯಾಗಿರುವ ಇಬ್ಬರ ಶೋಧಕ್ಕೆ ಸೇನೆ ಮತ್ತು ಎನ್.ಡಿ.ಆರ್ ಎಫ್ ತಂಡ ಬುಧವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭ ಮಾಡಿದ್ದು, ಇದರ ಮಧ್ಯೆಯೇ ಟ್ರಕ್  ಒಂದು ಗಂಗಾವಳಿ ನದಿ ನೀರಿನಲ್ಲಿ ಮುಳುಗಿರುವ ಸಾಧ್ಯತೆಯ ಸುಳಿವು ಸಿಕ್ಕಿದೆ. ಈ ಬಗ್ಗೆ ಕಂದಾಯ … Continued

ಅಂಕೋಲಾ | ಶಿರೂರು ಗುಡ್ಡ ಕುಸಿತದ ದುರಂತ ; ನಾಪತ್ತೆಯಾಗಿದ್ದ ಮಹಿಳೆಯ ಶವ ಪತ್ತೆ : ಮೃತರ ಸಂಖ್ಯೆ 8ಕ್ಕೆ ಏರಿಕೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ದುರಂತದಲ್ಲಿ ಕಣ್ಮರೆಯಾಗಿದ್ದ ಮಹಿಳೆಯ ಮೃತ ದೇಹ ಗಂಗಾವಳಿ ಬಳಿ ನದಿ ತೀರದಲ್ಲಿ ಮಂಗಳವಾರ ಮುಂಜಾನೆ ಪತ್ತೆಯಾಗಿದೆ. ಗಂಗಾವಳಿ ನದಿಯ ಅಳಿವೆ ಪ್ರದೇಶವಾದ ಗಂಗೆಕೊಳ್ಳದಲ್ಲಿ ಉಳುವರೆ ನಿವಾಸಿ ಸಣ್ಣಿ ಗೌಡ ಎಂಬವರ ಮೃತದೇಹ ಮಂಗಳವಾರ ನಸುಕಿನ ಜಾವ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಜುಲೈ 16 … Continued

ತ್ವರಿತ ಕಾರ್ಯಾಚರಣೆಗೆ ಸೂಚನೆ ; ಕ್ಷಿಪ್ರಗತಿಯಲ್ಲಿ ಮಣ್ಣು ತೆರವು, ಶೋಧ ಕಾರ್ಯಾಚರಣೆಗೆ ಮಿಲಿಟರಿ-ನೌಕಾಪಡೆ ನೆರವು ; ಸಿಎಂ ಸಿದ್ದರಾಮಯ್ಯ

 ಅಂಕೋಲಾ : ಶಿರೂರು ಭೂಕುಸಿತದ ಮಣ್ಣು ತೆರವು ಮತ್ತು ಸಿಲುಕಿಕೊಂಡಿರಬಹುದಾದವರ ಶೋಧ ಕಾರ್ಯಾಚರಣೆಯಲ್ಲಿ ಎಸ್.ಡಿ.ಆರ್. ಎಫ್ ನಿಂದ 46 ಜನ ಎನ್.ಡಿ.ಆರ್.ಎಫ್ ನಿಂದ 24 ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಇದಕ್ಕೆ 44 ಜನ ಮಿಲಿಟರಿ ಹಾಗೂ ನೌಕಾಪಡೆ ಯವರೂ ಕೂಡ ಕೈಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಭಾನುವಾರ (ಜುಲೈ 21) ಶಿರೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ … Continued

ವೀಡಿಯೊ..| ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಅಂಕೋಲಾ : ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಭಾರಿ ದುರಂತ ಸಂಭವಿಸಿದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಪ್ರದೇಶಕ್ಕೆ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯಾಚರಣೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದ ಅವರು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎಸ್‌ಡಿಆರ್‌ಎಫ್‌ (SDRF) ಹಾಗೂ ಎನ್‌ಡಿಆರ್‌ಎಫ್‌ (NDRF) ಜೊತೆ ಚರ್ಚಿಸಿದರು. … Continued