ಅಂಕೋಲಾ | ಶಿರೂರು ಗುಡ್ಡ ಕುಸಿತ ದುರಂತ ; ಇಬ್ಬರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 6ಕ್ಕೆ ಏರಿಕೆ

ಅಂಕೋಲಾ:  ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಸಾವೀಗಿಡಾದ ಮತ್ತೆರಡು ಮೃತ ದೇಹಗಳು ಗುರುವಾರ ಬೆಳಿಗ್ಗೆ ಪತ್ತೆಯಾಗಿದ್ದು, ದುರಂತದಲ್ಲಿ ಮೃತರ ಸಂಖ್ಯೆ ಆರಕ್ಕೆ ಏರಿದೆ. ಬಾಲಕಿಯ ಮೃತದೇಹ ಗೋಕರ್ಣ ಸಮೀಪ ಗಂಗೆಕೊಳ್ಳ ಸಮುದ್ರ ತೀರದಲ್ಲಿ ದೊರೆತಿದೆ. ತಾಲೂಕಿನ ಮಂಜಗುಣಿ ಬಳಿ ಪುರುಷನೋರ್ವನ ಮೃತ ದೇಹ ಪತ್ತೆಯಾಗಿದೆ ಈತ ಲಾರಿ ಚಾಲಕ ಇರಬಹುದು ಎಂದು ಅಂದಾಜಿಸಲಾಗಿದೆ ಆವಂತಿಕಾ (6) … Continued

ಶಿರೂರು ಗುಡ್ಡ ಕುಸಿತ ದುರಂತ ; ಮೃತರ ಕುಟುಂಬಕ್ಕೆ ೫ ಲಕ್ಷ ರೂ. ಪರಿಹಾರದ ಚೆಕ್ ನೀಡಿದ ಸಚಿವ ವೈದ್ಯ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿರುವ ಭೀಕರ ಭೂಕುಸಿತದಿಂದ ಮೃತಪಟ್ಟ ಮತ್ತು ಹಾನಿಗೊಳಗಾದವರ ಕುಟುಂಬಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬುಧವಾರ ಪರಿಹಾರ ಚೆಕ್ ವಿತರಿಸಿದ್ದಾರೆ. ಶಿರೂರುನಲ್ಲಿ ಗುಡ್ಡ ಕುಸಿತದಿಂದ ಮೃತಪಟ್ಟ ೩ ವ್ಯಕ್ತಿಗಳ ಕುಟುಂಬಗಳ ವಾರಿಸುದಾರರಿಗೆ ತಲಾ ೫ ಲಕ್ಷ ರೂ. ಗಳ ಪರಿಹಾರ ಚೆಕ್ ನೀಡಿದರು. … Continued

ಶಿರೂರು ಗುಡ್ಡ ಕುಸಿತ ದುರಂತ | ಐ ಆರ್ ಬಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ; ಉಸ್ತುವಾರಿ ಸಚಿವರ ಸೂಚನೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಜೀವ ಹಾನಿ ಆಗಿರುವ ಕುರಿತಂತೆ ಐ ಆರ್ ಬಿ ಕಂಪನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮತ್ತು ಅರಣ್ಯ … Continued

ಅಂಕೋಲಾ : ಶಿರೂರು ಬಳಿ ಗುಡ್ಡ ಕುಸಿತ ; ನಾಲ್ವರ ಮೃತದೇಹ ಪತ್ತೆ, ಇನ್ನೂ ಕೆಲವರು ಮಣ್ಣಿನಡಿ ಸಿಲುಕಿರುವ ಶಂಕೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಭಾರಿ ಪ್ರಮಾಣದ ಗುಡ್ಡ ಕುಸಿತದ ದುಘಟನೆಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಮೃತ ದೇಹಗಳು ಪತ್ತೆಯಾಗಿವೆ. ಇನ್ನೂ ಕೆಲವರು ಮಣ್ಣಿನಡಿ ಸಿಲುಕಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಕುಮಟಾ- ಕಾರವಾರ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶಿರೂರು ಬಳಿ ಮಂಗಳವಾರ ಗುಡ್ಡ ಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿ … Continued

ಅಂಕೋಲಾ-ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿದ ಗುಡ್ಡ , ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ

ಅಂಕೋಲಾ: ಸೋಮವಾರ ರಾತ್ರಿ ಸತತವಾಗಿ ಸುರಿದ ನಿರಂತರ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದು ಬಿದ್ದಿದ್ದು ಹೆದ್ದಾರಿ ಪಕ್ಕದ ಅಂಗಡಿ ಮನೆಗಳಲ್ಲಿ ರುವ ಸುಮಾರು  6-7 ಜನರು ಮಣ್ಣಿನ ಅಡಿ ಸಿಲುಕಿದ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಅಂಕೋಲಾ- ಕುಮಟಾ ಮಾರ್ಗದಲ್ಲಿ ಭಾರಿ … Continued

ಭಾರಿ ಮಳೆ : ಜುಲೈ 6ರಂದು ಉತ್ತರ ಕನ್ನಡ ಜಿಲ್ಲೆ 5 ತಾಲೂಕುಗಳ ಶಾಲೆ-ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದು, ಹಲವೆಡೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶನಿವಾರ (ಜುಲೈ 6) ಜಿಲ್ಲೆಯ ಕರಾವಳಿ ಭಾಗದ ಐದು ತಾಲೂಕಿನ ಶಾಲೆ- ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ … Continued

ಅಂಕೋಲಾ: ಖ್ಯಾತ ಸಾಹಿತಿ ವಿಷ್ಣು ನಾಯ್ಕ ಇನ್ನಿಲ್ಲ

ಅಂಕೋಲಾ : ಖ್ಯಾತಸಾಹಿತಿ, ಪ್ರಕಾಶಕ, ಪತ್ರಕರ್ತರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ವಿಷ್ಣು ನಾಯ್ಕ (81) ಶನಿವಾರ ತಡರಾತ್ರಿ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಅಂಕೋಲಾದ ಅಂಬಾರಕೊಡ್ಲದವರಾಗಿರುವ ವಿಷ್ಣು ನಾಯ್ಕ ಅವರು 1944ರಲ್ಲಿ ತಾಲ್ಲೂಕಿನ ಅಂಬಾರಕೊಡ್ಲಾದಲ್ಲಿ ಜನಿಸಿದರು. ಎಂ.ಎ ಪದವೀಧರರಾಗಿದ್ದು, ದಿನಕರ ದೇಸಾಯಿ ಅವರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. … Continued

ಅಂಕೋಲಾ : ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇಬ್ಬರು ಪದ್ಮಶ್ರೀ ಪುರಸ್ಕೃತರಿಗೆ ಆಹ್ವಾನ

ಕಾರವಾರ: ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ನಡೆಯಲಿರುವ ‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಇಬ್ಬರು ಪದ್ಮಶ್ರೀ ಪುರಸ್ಕೃತರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಅಂಕೋಲಾದ ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ (Sukri Bommagowda) ಹಾಗೂ ತುಳಸಿ ಗೌಡ (Tulasi Gowda) ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಪ್ರಾಂತ್ಯ ಪ್ರಚಾರಕರು ಆಹ್ವಾನ ಪತ್ರಿಕೆ … Continued

ವೀಡಿಯೊ | ಅಂಕೋಲಾದಲ್ಲಿ ಬೃಹತ್‌ ಕಾಳಿಂಗ ಸರ್ಪ ಸೆರೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕೃಷ್ಣಾಪುರದಲ್ಲಿ ಬೃಹತ್‌ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿಯಲಾಗಿದೆ. ಅಂಕೋಲಾದ ಕೃಷ್ಣಾಪುರದಲ್ಲಿ ಪ್ರಶಾಂತ ನಾಯಕ ಎಂಬವರ ಮನೆಯ ಸಮೀಪ ಬೃಹತ್ ಕಾಳಿಂಗ ಸರ್ಪ (King Cobra) ಕಾಣಿಸಿಕೊಂಡಿತ್ತು. ಮನೆಯವರು ಕೂಡಲೇ ಸ್ಥಳೀಯ ಉರಗ ತಜ್ಞ ಮಹೇಶ ನಾಯ್ಕ ಎಂಬವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಮಹೇಶ ನಾಯ್ಕ ಅವರು ಗಿಡಗಂಟಿಗಳ … Continued

ಅಂಕೋಲಾ : ಗಂಗಾವಳಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ, ಸ್ಥಳೀಯರಿಗೆ ಆತಂಕ | ವೀಕ್ಷಿಸಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸಕಂಬಿ ಸೇತುವೆ ಬಳಿ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಇದು ಸುಮಾರು 7 ಅಡಿಗಳಷ್ಟು ಉದ್ದವಿರುವ ಬೃಹತ್ ಮೊಸಳೆ ಎನ್ನಲಾಗಿದೆ. ಮೊಸಳೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನದಿ ಪಾತ್ರದ ನಿವಾಸಿಗಳಲ್ಲಿ ಆತಂಕ ಎದುರಾಗಿದೆ. ಅವರು ಹೆಚ್ಚಾಗಿ ನದಿಯನ್ನು ಅವಲಂಬಿಸಿರುವುದರಿಂದ ಅವರಿಗೆ ಆತಂಕ ಎದುರಾಗಿದೆ. ನದಿ ತೀರದಲ್ಲಿ … Continued