ಅಂಕೋಲಾ: ಸ್ಕೂಟಿಗೆ ಬೈಕ್‌ ಡಿಕ್ಕಿ-ಹೊಟೇಲ್‌ ಮಾಲಕ ಸಾವು

ಅಂಕೋಲಾ: ಸ್ಕೂಟಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೋರ್ವರು ಮೃತ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೇಗುಳಿ ಕೃಷ್ಣಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಭವಿಸಿದೆ. ಅವರ್ಸಾ ನಿವಾಸಿ ಹೊಟೇಲ್ ಶಿಲ್ಪಾ ಮಾಲಕ ಗಾಂಧಿ ಶೆಟ್ಟಿ (60) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಅವರ್ಸಾದಿಂದ ಸ್ಕೂಟಿ ಮೇಲೆ ಅಂಕೋಲಾ … Continued

ಅಂಕೋಲಾ: ಕಪ್ಪೆ ಚಿಪ್ಪು ತೆಗೆಯಲು ಹೋದಾಗ ಗಂಗಾವಳಿ ನದಿಯಲ್ಲಿ ಮುಳುಗಿ ಹುಡುಗಿ ಸೇರಿ ಮೂವರು ಸಂಬಂಧಿಗಳು ಸಾವು

ಅಂಕೋಲಾ: ಕಪ್ಪೆ ಚಿಪ್ಪು ತೆಗೆಯಲು ಹೋಗಿ ನೀರು ಪಾಲಾದ ಸಂಬಂಧಿಕರು-ಹುಡುಗಿ ಸೇರಿ ಮೂವರ ಸಾವು ಅಂಕೋಲಾ: ರಜಾ ದಿನದ ಮೋಜಿಗೆಂದು ಗಂಗಾವಳಿ ನದಿಯ ಹಿನ್ನೀರಿನಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿದ್ದ ಮೂವರು ಕಾಲು ಜಾರಿ ಬಿದ್ದು ನೀರಿನಲ್ಲಿ ಬಿದ್ದು ಮುಳುಗಿ ಮೃತ ಪಟ್ಟ ಘಟನೆ ಹಿಲ್ಲೂರು ಗ್ರಾಮ ಪಂಚಾಯತ ವ್ಯಾಪ್ತಿಯ ಕರಿಕಲ್ ಕಡಕಾರ್ ಬಳಿ ಸಂಭವಿಸಿದೆ. … Continued

ಉತ್ತರ ಕನ್ನಡ ಜಿಲ್ಲೆಯ ಇ ಸ್ವತ್ತು ಸಮಸ್ಯೆಗೆ ತಿಂಗಳೊಳಗೆ ಮುಕ್ತಿ: ಕಂದಾಯ ಸಚಿವ ಅಶೋಕ ಭರವಸೆ

ಅಚವೆ (ಅಂಕೋಲಾ) : ಉತ್ತರ ಕನ್ನಡ ಜಿಲ್ಲೆಯಲ್ಲಿ ಗಂಭೀರವಾಗಿರುವ ಇ ಸ್ವತ್ತು ಸಮಸ್ಯೆ ಬಗೆಹರಿಸಲು ಸಂಪುಟ ಉಪ ಸಮಿತಿ ರಚಿಸಲಾಗಿದೆ. ಜಿಲ್ಲೆಯ ಈ ಸಮಸೆಯನ್ನ ಉಪಸಮಿತಿ ಮುಂದಿಟ್ಟು ಒಂದು ತಿಂಗಳಲ್ಲಿ ಈ ಸಮಸ್ಯೆಗೆ ಮುಕ್ತಿ ನೀಡಲಾಗುವುದು’ ಎಂದು ಕಂದಾಯ ಸಚಿವ ಅಶೋಕ ಭರವಸೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ … Continued

ಅಂಕೋಲಾ: ಬೆಂಕಿ ಹೊತ್ತಿಕೊಂಡು ಒಣಹುಲ್ಲು ಸಾಗಿಸುತ್ತಿದ್ದ ವಾಹನ ಸುಟ್ಟು ಕರಕಲು, ಚಾಲಕನಿಗೆ ಗಾಯ: ದೃಶ್ಯ ಮೊಬೈಲ್‌ನಲ್ಲಿ ಸೆರೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ತಳಗದ್ದೆಯ ಸಮೀಪ ಚಲಿಸುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ವಾಹನ ಮತ್ತು ಅದರಲ್ಲಿದ್ದ ಒಣಹುಲ್ಲು ಸುಟ್ಟು ಕರಕಲಾದ ಘಟನೆ ಗುರುವಾರ ಮುಂಜಾನೆ ನಡೆದ ಬಗ್ಗೆ ವರದಿಯಾಗಿದೆ. ವಾಹನ ಚಾಲಕ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಬೊಲೆರೋ ಪಿಕಪ್ ವಾಹನದಲ್ಲಿ ಅಂಕೋಲಾದ ತಳಗದ್ದೆಯಿಂದ ಕುಮಟಾದ ಖಂಡಗಾರಕ್ಕೆ ಭತ್ತದ ಒಣಹುಲ್ಲು ಸಾಗಿಸಲಾಗುತ್ತಿತ್ತು. ಮಾರ್ಗಮಧ್ಯದಲ್ಲಿ … Continued

ಅಂಕೋಲಾ ಉದ್ಯಮಿ ಆರ್ ಎನ್. ನಾಯಕ ಹತ್ಯೆ ಪ್ರಕರಣ: ಬನ್ನಂಜೆ ರಾಜಾ ಸೇರಿ 8 ಮಂದಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ : ಉತ್ತರ ಕನ್ನಡದ ಅಂಕೋಲಾದ ಉದ್ಯಮಿ, ಬಿಜೆಪಿ ಮುಖಂಡ ಆರ್ ಎನ್. ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಮಬಂಧಿಸಿ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯ ಆಪಾದಿತರಿಗೆ ಶಿಕ್ಷೆಯ ಪ್ರಮಾಣ ಘೋಷಿಸಿದ್ದು, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿದಂತೆ 8 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ಮಹತ್ವದ ತೀರ್ಪು ನೀಡಿದೆ. ಭೂಗತ … Continued

ಅಂಕೋಲಾ: ಶಾಲೆಯ ಮೇಲ್ಛಾವಣಿ ಪ್ಲಾಸ್ಟರಿಂಗ್ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಶಾಲೆಯ 4 ತರಗತಿ ಕೊಠಡಿಯ ಮೇಲ್ಛಾವಣಿಯ ತಳಬಾಗದ ಕಾಂಕ್ರೀಟ್ ಪದರು ಕುಸಿದು ಬಿದ್ದು ನಾಲ್ಕೈದು ವಿದ್ಯಾರ್ಥಿಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ 12:30ರ ಸಮಯಕ್ಕೆ ಊಟದ ವಿರಾಮ ಇದ್ದ ಸಮಯದಲ್ಲಿ … Continued

ಬೇಲೆಕೇರಿ ಅದಿರು ಪ್ರಕರಣ: ಸಚಿವ ಆನಂದ ಸಿಂಗ್‌, ಜನಾರ್ದನ ರೆಡ್ಡಿ, ನಾಗೇಂದ್ರಗೆ ಜಾಮೀನು

ಅಂಕೋಲಾ : 2009ರಲ್ಲಿ ತಾಲೂಕಿನ ಬೇಲೆಕೇರಿಯಲ್ಲಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆನಂದ್ ಸಿಂಗ್, ಶಾಸಕ ನಾಗೇಂದ್ರ ಅವರಿಗೆ ಸೋಮವಾರ ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜಾಮೀನು ನೀಡಿದೆ. ಬೇಲೆಕೇರಿಯಲ್ಲಿ 2009-10ರ ಅದಿರು ಪ್ರಕರಣಕ್ಕೆ ಆನಂದ ಸಿಂಗ್ ಅವರ ಮಾಲಿಕತ್ವದ ವೈಷ್ಣವಿ ಮಿನರಲ್ಸ್ ಸೇರಿದಂತೆ … Continued

ಅಂಕೋಲಾ: ರಸ್ತೆ ಕಾರ್ಮಿಕರ ವಾಹನ ಪಲ್ಟಿ: ಮೂವರಿಗೆ ಗಂಭೀರ ಗಾಯ

ಕಾರವಾರ: ರಸ್ತೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕರ ವಾಹನ ಪಲ್ಟಿಯಾಗಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಆಚವೆ ಗ್ರಾಪಂ ವ್ಯಾಪ್ತಿಯ ವಾಡಗಾರದಲ್ಲಿನಡೆದಿದೆ. ಅಂಕೋಲಾ ತಾಲೂಕಿನ ವಾಡಗಾರ ಘಟ್ಟದ ಪ್ರದೇಶದ ಶನಿವಾರ  ಈ ಘಟನೆ ನಡೆದಿದ್ದು,   ಟಾಟಾ 407 ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ವಾಹನದಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯರು, ಆಸ್ಪತ್ರೆಗೆ … Continued

ಪ್ರಜಾರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭ

ಅಂಕೋಲಾ : ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಅಂಕೋಲಾ ಪ್ರಜಾರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿ ಸೋಮವಾರ ಜೈಹಿಂದ ಕ್ರೀಡಾಂಗೆಣದಲ್ಲಿ ಆರಂಭವಾಯಿತು. ಒಟ್ಟಾರೆ 16 ತಂಡಗಳು ಈ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ. ಪುರಸಭೆಯ ಮುಖ್ಯಾಧಿಕಾರಿ ಶೃತಿ ಗಾಯಕವಾಡ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಲು ಇಂತಹ ಪಂದ್ಯಾವಳಿ ಅಗತ್ಯ ಎಂದರು. ಪತ್ರಕರ್ತ ವಿಠ್ಠಲದಾಸ … Continued

ಅಂಕೋಲಾ: ಜನರೇ ಸ್ಮಶಾನ ಸ್ವಚ್ಛಗೊಳಿಸಿದರು..!

ಅಂಕೋಲಾ : ಇಲ್ಲಿಯ ತೆಂಕಣಕೇರಿಯ ಹಿಂದೂ ಸ್ಮಶಾನವನ್ನು ಭಾನುವಾರ ಊರ ಜನರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ. ಹೊಳೆಯ ಅಂಚಿನಲ್ಲಿರುವ ಈ ಸ್ಮಶಾನ ಭೂಮಿಯಲ್ಲಿ ಗಿಡಗಂಟಿಗಳು ಬೆಳೆದಿದ್ದವು. ಕೆಲವರು ಮಣ್ಣು ಕಸಕಡ್ಡಿ ತಂದು ಎಸೆದ ಕಾರಣ ಅಸಹ್ಯ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದಾಗಿ ಶವ ಸಂಸ್ಕಾರಕ್ಕೆ ಬಂದವರು ಕಿರಿಕಿರಿ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶ್ರಮದಾನದ ಮೂಲಕ ಎಲ್ಲ … Continued