ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ದಾಳಿ: ಅಂಪೈರ್ ಸಾವು, ಹಲವು ಆಟಗಾರರಿಗೆ ಗಾಯ

ಉನ್ನಾವೋ: ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ಹಿಂಡು ದಾಳಿ ನಡೆಸಿದ ಪರಿಣಾಮ 65 ವರ್ಷದ ಅಂಪೈರ್ ಮೃತಪಟ್ಟಿದ್ದು, ಹಲವು ಆಟಗಾರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ಈ ಪಂದ್ಯವು ಶುಕ್ಲಾಗಂಜ್ ಪ್ರದೇಶದ ಸಪ್ರು ಮೈದಾನದಲ್ಲಿ ನಡೆಯುತ್ತಿತ್ತು. ಕಾನ್ಪುರ ಮೂಲದ ಮಾಣಿಕ್ ಗುಪ್ತಾ … Continued

ಜೇನುನೊಣಗಳ ದಾಳಿಯಿಂದ 20 ಮಕ್ಕಳ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಅರ್ಪಿಸಿದ ಅಂಗನವಾಡಿ ಅಡುಗೆಯವಳು…!

ನೀಮುಚ್ : ಪ್ರೀತಿ ಮತ್ತು ಸಾಹಸದ ಪರಾಕಾಷ್ಠೆಯೆಂಬಂತೆ, ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ರಣಪುರ ಗ್ರಾಮದಲ್ಲಿ ಸುಮಾರು 20 ಮಕ್ಕಳ ಪ್ರಾಣ ಉಳಿಸಲು ಅಂಗನವಾಡಿ ಅಡುಗೆಯವರೊಬ್ಬರು ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಮಡಾವಡ ಪಂಚಾಯತ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಆವರಣದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ, ಹಠಾತ್ತನೆ ಜೇನುನೊಣಗಳ ಗುಂಪು ದಾಳಿ ಮಾಡಿತು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಅಡುಗೆಯವರಾದ … Continued