ಯುವತಿಯಿಂದ ಅತ್ಯಾಚಾರ ಪ್ರಕರಣದ ಬೆದರಿಕೆ: ತೋಟಗಾರಿಕೆ ಅಧಿಕಾರಿಯಿಂದ ದೂರು, ಆತ ನನ್ನ ಗಂಡ ಎಂದ ಯುವತಿ

ಬೆಳಗಾವಿ: ಚನ್ನಪಟ್ಟಣದ ಯುವತಿಯೊಬ್ಬರು ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ. ₹ 50 ಲಕ್ಷ ನೀಡದಿದ್ದರೆ ಅತ್ಯಾಚಾರ ಹಾಗೂ ಸುಲಿಗೆ ಮಾಡಿದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ತೋಟಗಾರಿಕೆ ಇಲಾಖೆಯ ಖಾನಾಪುರ ಸಹಾಯಕ ನಿರ್ದೇಶಕ ಮಂಗಳವಾರ ದೂರು ದಾಖಲಿಸಿದ್ದಾರೆ. ತೋಟಗಾರಿಕೆ ಇಲಾಖೆ ಎ.ಡಿ ರಾಜಕುಮಾರ್ … Continued

ನನ್ನ ಸಂಬಂಧಿಕರಿಂದಲೇ ನನ್ನ ಮೇಲೆ ಗುಂಡಿನ ದಾಳಿ: ನಟ ಶಿವರಂಜನ್ ಆರೋಪ

ಬೈಲಹೊಂಗಲ:ಚಲನಚಿತ್ರ ನಟ, ಉದ್ಯಮಿ ಹಾಗೂ ಕನ್ನಡ ಹೋರಾಟಗಾರ ಶಿವರಂಜನ್ ಬೋಳನ್ನವರ ಅವರು ತಮ್ಮ ಮೇಲೆ ಸಂಬಂಧಿಗಳಿಂದಲೇ ಗುಂಡಿನ ದಾಳಿ ನಡೆದಿದೆ ಎಂದು ಆರೋಪಿಸಿದ್ದಾರೆ. ಗುಂಡಿನ ದಾಳಿಗೆ ಸಂಬಂಧಿಸಿದಂತೆ ಮಂಗಳವಾರ ರಾತ್ರಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವ್ಯಕ್ತಿ ಶಿವರಂಜನ್ ಬೋಳನ್ನವರ ಅವರ ಶಿವರಂಜನ್ ಅವರ ದೂರದ ಸಂಬಂಧಿ ಎಂದು ಗುರುತಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ … Continued

ಹೊಸ ಮೊಬೈಲ್‌ ಕೊಡಿಸಲಿಲ್ಲವೆಂದು ತಂದೆಯ ಜನ್ಮದಿನದಂದೇ ಮಗ ಆತ್ಮಹತ್ಯೆ

ಖಾನಾಪುರ:ಹೊಸ ಮೊಬೈಲ್ ಬೇಕು ಎಂದು ಹಟ ಹಿಡಿದ ವಿದ್ಯಾರ್ಥಿಯೊಬ್ಬ ಮೊಬೈಲ್‌ ಕೊಡಿಸಲಿಲ್ಲವೆಂದು ತಂದೆಯ ಜನ್ಮದಿನದಂದೇ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕು ಹಲಕರ್ಣಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಆತ್ಮಹತ್ಯೆಗೆ ಶರಣಾದವನನ್ನು ಮರಾಠಾ ಮಂಡಳ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಥಮೇಶ ರಾಜು ಕೋಳಿ (17) ಎಂದು ಗುರುತಿಸಲಾಗಿದೆ. ಎರಡು ದಿನಗಳಿಂದ ಪ್ರಥಮೇಶ ಮೊಬೈಲ್ ಬೇಕು … Continued

ಕಾಲುವೆಗೆ ಉರುಳಿದ ಕಾರು: ಇಬ್ಬರ ಸಾವು, ಒಬ್ಬ ಪಾರು

ಅಥಣಿ : ಬೆಳಗಾವಿಯ ಜಿಲ್ಲೆಯ ಅಥಣಿ ತಾಲೂಕಿ ರಡ್ಡೇರಹಟ್ಟಿ ಗ್ರಾಮದ ಕರಿಮಸೂತಿ ಲಿಫ್ಟ್ ನೀರಾವರಿ ಕಾಲುವೆಗೆ ಮೂವರು ಪ್ರಯಾಣಿಸಿದ್ದ ಕಾರು ಉರುಳಿ ಬಿದ್ದ ಘಟನೆ ಶುಕ್ರವಾರ ನಡೆದ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಒಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನೀರಿನಲ್ಲಿ ಮುಳುಗಿದ ಕಾರನ್ನು ಅಗ್ನಿಶಾಮಕ ದಳ ಮತ್ತು ಪೊಲೀಸರು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೃತರನ್ನು ರಡ್ಡೇರಹಟ್ಟಿ … Continued

ಮನೆಯೊಳಗೆ ಮಲಗಿಕೊಂಡಿರುವ ರೀತಿಯಲ್ಲಿ ವ್ಯಕ್ತಿಯ ಅಸ್ಥಿ ಪಂಜರ ಪತ್ತೆ: 8-9 ತಿಂಗಳ ಹಿಂದೆ ಮೃತಪಟ್ಟಿರುವ ಶಂಕೆ

ಬೆಳಗಾವಿ: ಮನೆಯಲ್ಲಿ ಮಲಗಿಕೊಂಡಿರುವ ರೀತಿಯಲ್ಲಿ ಮೃತಪಟ್ಟ ಮನುಷ್ಯನ ಅಸ್ಥಿಪಂಜರ ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಶಿವಾಪುರ ಗ್ರಾಮದಲ್ಲಿ ಪತ್ತೆಯಾದ ಬಗ್ಗೆ ವರದಿಯಾಗಿದೆ. ಶಿವಾಪುರ ಗ್ರಾಮದ ಮನೆಯೊಂದರಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆಯಾಗಿದ್ದು, ಮೃತನನ್ನು ಅದೇ ಗ್ರಾಮದ ಪ್ರಕಾಶ ತವನಪ್ಪ ಮುರಗುಂಡಿ ಎಂದು ಶಂಕಿಸಲಾಗಿದೆ. ಮನೆಯಲ್ಲಿಯೇಮೃತಪಟ್ಟ ವ್ಯಕ್ತಿಯ ಅಸ್ಥಿಪಂಜರ ಸುಮಾರಿ 8 ರಿಂದ 9 ತಿಂಗಳ ಹಿಂದಿನದಾಗಿರಬಹುದು ಎಂದು … Continued

ಬೆಳಗಾವಿ: ನಾಲಾಕ್ಕೆ ಬಿದ್ದ ಕ್ರೂಸರ್ ವಾಹನ, 7 ಜನರ ಸಾವು

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನ ಬಳ್ಳಾರಿ ನಾಲಾಕ್ಕೆ ಬಿದ್ದು 7 ಮಂದಿ ಸಾವಿಗೀಡಾದ ಘಟನೆ ಬೆಳಗಾವಿ ತಾಲೂಕಿನ ಕಣಬರಗಿ ಬಳಿಯ ಕಲ್ಯಾಳ ಫೂಲ್ ಬಳಿ ಭಾನುವಾರ (ಜೂನ್​ 26) ನಡೆದ ಬಗ್ಗೆ ವರದಿಯಾಗಿದೆ. ಹಲವರು ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲಾಕ್ಕೆ ಕ್ರೂಸರ್​ ವಾಹನ ಬಿದ್ದಿದೆ. ದಿನಗೂಲಿ ಕೆಲಸಕ್ಕೆಂದು ಗೋಕಾಕ್ ತಾಲೂಕಿನ … Continued

ಮೂಡಲಗಿ ಹಳ್ಳದಲ್ಲಿ 7 ಭ್ರೂಣಗಳ ಪತ್ತೆ ಪ್ರಕರಣ: ಹೆರಿಗೆ ಆಸ್ಪತ್ರೆ ಸೀಜ್​

ಬೆಳಗಾವಿ: ನಿನ್ನೆ ಜಿಲ್ಲೆಯ ಮೂಡಲಗಿ ಪಟ್ಟಣದ ಹಳ್ಳದಲ್ಲಿ 7 ಭ್ರೂಣಗಳು ಪತ್ತೆಯಾದ ಆಘಾತಕಾರಿ ಪ್ರಕರಣವನ್ನು ಅಧಿಕಾರಿಗಳು ಭೇದಿಸಿದ್ದು, ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆಯನ್ನು ಸೀಜ್​ ಮಾಡಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಮಹೇಶ ಕೋಣಿ ನೇತೃತ್ವದ ತಂಡ ಪೊಲೀಸರ ಜೊತೆ ಸೇರಿ ಮೂಡಲಗಿ ವೆಂಕಟೇಶ್ವರ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಹಾಗೂ … Continued

ಬೆಳಗಾವಿ: ಗುಂಡು ಹೊಡೆದು ಬೆಳ್ಳಂಬೆಳಿಗ್ಗೆ ಕೊಲೆ ಆರೋಪಿ ಬಂಧಿಸಿದ ಪೊಲೀಸರು

ಬೆಳಗಾವಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯ ಕಾಲಿಗೆ, ಮಂಗಳವಾರ ನಸುಕಿನಲ್ಲಿ ಪೊಲೀಸರು ಗುಂಡು ಹೊಡೆದು ಬಂಧಿಸಲಾಗಿದೆ. ರಾಜು ದೊಡ್ಡಬೊಮ್ಮನವರ ಎಂಬ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಯ ಆರೋಪ ಹೊತ್ತಿರುವ ವಿಶಾಲ ಸಿಂಗ್ ಚವ್ಹಾಣ ಎಂಬ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಅನೇಕ ದಿಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬೆಳಗಾವಿ ವೀರಭದ್ರ … Continued

ಬೆಳಗಾವಿ: ಬಿಜೆಪಿಯ ನೂಪುರ್ ಶರ್ಮಾ ಪ್ರತಿಕೃತಿ ಗಲ್ಲಿಗೇರಿಸಿದ್ದ ಮೂವರ ಬಂಧನ

ಬೆಳಗಾವಿ: ಪ್ರವಾದ ಮೊಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಅವರ ಪ್ರತಿಕೃತಿಯನ್ನು ಗಲ್ಲಿಗೇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ ಮೂವರು ಆರೋಪಿಗಳಾದ ಮೊಹಮ್ಮದ್ ಶೋಯಬ್, ಅಮನ್ ಮೊಕಾಶಿ, ಅರ್ಬಾಜ್ ಮೊಕಾಶಿ ಅವರನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರವಾದಿ ಮೊಹಮ್ಮದ್ … Continued

ಬೆಳಗಾವಿ: 810 ಚೀಲ ರಸಗೊಬ್ಬರ ಕಳುವು, ಐವರ ಬಂಧನ

ಬೆಳಗಾವಿ : ಸಮೀಪದ ದೇಸೂರ ರೈಲ್ವೆ ಸ್ಟೇಶನ್ ಗೂಡ್ಸ್ ಶೆಡ್ ನ ಗೋದಾಮಿನಿಂದ ರಸಗೊಬ್ಬರ ಚೀಲ ಕಳವು ಮಾಡಿದ್ದ ಐವರನ್ನು ಸೆರೆ ಹಿಡಿಯುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿರುವ 25,93,500 ರೂ.ಗಳ ಮೌಲ್ಯದ ಡಿಎಪಿ ರಸಗೊಬ್ಬರ 810 ಚೀಲಗಳು ಹಾಗೂ 2 ಟ್ರಕ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧಬೆಳಗಾವಿ … Continued