ಕಾಲುವೆಯ ಕಂಬದ ದುರಸ್ತಿ ಕಾರ್ಯ ಚುರುಕಿಗೆ ಪಟ್ಟು: ಸ್ಥಳದಲ್ಲೇ ಸಚಿವ ಶೀರಾಮುಲು ವಾಸ್ತವ್ಯ

ಬಳ್ಳಾರಿ: ತಾಲೂಕಿನ ಬರದಾನಹಳ್ಳಿ ಸಮೀಪದ ವೇದಾವತಿ ನದಿಯ ಸೇತುವೆಗೆ ಅಂಟಿಕೊಂಡಂತೆ ತುಂಗಭದ್ರಾ ನದಿಯ ಎಲ್ಎಲ್‌ಸಿ ಕಾಲುವೆಯಿದ್ದರೂ ವೇದಾವತಿ ನದಿಯ ಸೇತುವೆಯ ಪಿಲ್ಲರ್‌ಗಳು ಕುಸಿದ ಪರಿಣಾಮ ಎಲ್ಎಲ್‌ಸಿ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಅಕ್ಟೋಬರ್ 13ರಿಂದ ರೈತರ ಜಮೀನುಗಳಿಗೆ ನೀರಿಲ್ಲದ ಕಾರಣ ಬೆಳೆಗಳು ಒಣಗುತ್ತಿವೆ. ತುಂಗಭದ್ರಾ ಜಲಾಶಯದ ನೀರು ನಂಬಿಕೊಂಡು ಭತ್ತ, ಮೆಣಿಸಿನಕಾಯಿ ಮೊದಲಾದ ಬೆಳೆ ಬೆಳೆದವರಿಗೆ … Continued

ಬಳ್ಳಾರಿ: ಭಾರತ್ ಜೋಡೋ ಯಾತ್ರೆ ವೇಳೆ 4 ಮಂದಿಗೆ ವಿದ್ಯುತ್ ಸ್ಪರ್ಶ, ಆಸ್ಪತ್ರೆಗೆ ದಾಖಲು

ಬಳ್ಳಾರಿ: ಭಾನುವಾರ ಬಳ್ಳಾರಿ ಬಳಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ವೇಳೆ ವಿದ್ಯುತ್ ಸ್ಪರ್ಶದಿಂದ ನಾಲ್ವರು ಗಾಯಗೊಂಡ ಘಟನೆ ವರದಿಯಾಗಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದವರೊಬ್ಬರು ಕಾಂಗ್ರೆಸ್ ಬಾವುಟವಿರುವ ಕಬ್ಬಿಣದ ರಾಡ್ ಹಿಡಿದಿದ್ದರು. ಮೋಕಾ ಗ್ರಾಮದ ಸಮೀಪ ಅದು ವಿದ್ಯುತ್‌ ತಂತಿಗೆ ತಗುಲಿ ವಿದ್ಯುತ್‌ ಪ್ರವಹಿಸಿದೆ. ಅವರು ಇತರ ಮೂವರನ್ನು ಸ್ಪರ್ಶಿಸಿದ್ದರಿಂದ ಅವರಲ್ಲಿಯೂ ವಿದ್ಯುತ್‌ ಪ್ರವಹಿಸಿದೆ. … Continued

ಮದುವೆ ಆರತಕ್ಷತೆ ವೇಳೆ‌ ಹೃದಯಾಘಾತದಿಂದ ವರ ಸಾವು

ಹೊಸಪೇಟೆ: ಮದುವೆ ಆರತಕ್ಷತೆ ಸಮಾರಂಭದಲ್ಲಿ ವರನಿಗೆ ತ್ರೀವ ಎದೆನೋವು‌ ಕಾಣಿಸಿಕೊಂಡು, ಕುಸಿದು‌ ಬಿದ್ದು ಮೃತಪಟ್ಟ ದುರ್ಘಟನೆ ತಾಲೂಕಿನ ಪಾಪಿನಾಯಕಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಬಗ್ಗೆ ವರದಿಯಾಗಿದೆ. ಹೊನ್ನೂರು ಸ್ವಾಮಿ (26)ಹೃದಯಾಘಾತದಿಂದ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಎದೆ ನೋವಿನಿಂದ ಕುಸಿದು ಬಿದ್ದ ವರ ಅಸ್ವಸ್ಥಗೊಂಡ ಹೊನ್ನೂರಸ್ವಾಮಿಯನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಕರೆದ್ಯೊಯಲಾಯಿತು. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು … Continued

ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ರುಂಡದೊಂದಿಗೆ ಠಾಣೆಗೆ ಬಂದ ಪಾಗಲ್ ಪ್ರೇಮಿ…!

ಬಳ್ಳಾರಿ: ಪಾಗಲ್ ಪ್ರೇಮಿಯೊಬ್ಬ ತನ್ನ ಮಾಜಿ ಪ್ರೇಯಸಿಯ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರನಯ್ಯನ ಹಟ್ಟಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಹತ್ಯೆಯಾದ ಯುವತಿಯನ್ನು ನಿರ್ಮಲಾ(23) ಎಂದು ಗುರುತಿಸಲಾಗಿದೆ. ಹತ್ಯೆ ಮಾಡಿದ ಆರೋಪಿಯನ್ನು ಬೋಜರಾಜ ಎಂದು ಗುರುತಿಸಲಾಗಿದೆ. ಬಿಎಸ್‍ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ ಪರೀಕ್ಷೆ ಇದ್ದ ಹಿನ್ನೆಲೆ … Continued

ಪರಿಷತ್‌ ಚುನಾವಣೆ: ಬೆಳಗಾವಿಯಲ್ಲಿ ಕಾಂಗ್ರೆಸ್‌-ಪಕ್ಷೇತರ, ಕಲಬುರ್ಗಿ-ಬಳ್ಳಾರಿಯಲ್ಲಿ ಬಿಜೆಪಿ, ರಾಯಚೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ

ಬೆಳಗಾವಿ/ಕಲಬುರಗಿ/ಬಳ್ಳಾರಿ/ರಾಯಚೂರು: ಬೆಳಗಾವಿ ದ್ವಿಸದಸ್ಯ ಪರಿಷತ್ ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನೊಂದು ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಅವರು ಆಯ್ಕೆಯಾಗಿದ್ದಾರೆ. ಮೊದಲ ಪ್ರಾಶಸ್ತ್ಯದಲ್ಲಿ ಕಾಂಗ್ರೆಸಗೆ 3715 ಮತಗಳು ಬಂದರೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ 2526 ಮತಗಳು ಬಂದಿವೆ. ಬಿಜೆಪಿಯ ಮಹಾಂತೇಶ ಕವಟಗಿಮಠ ಗೆ 2454 … Continued

ಬಳ್ಳಾರಿಗೂ ಬಂತು ಆಫ್ರಿಕಾ ರೂಪಾಂತರಿ ಕೊರೊನಾ..!

ಬಳ್ಳಾರಿ : ದುಬೈನಿಂದ ಬಳ್ಳಾರಿಗೆ ಬಂದ ಇಬ್ಬರಿಗೆ ಕೊರೊನಾ ದೃಢಪಟ್ಟಿದ್ದು, ಒಬ್ಬರಿಗೆ  ಆಫ್ರಿಕಾ ರೂಪಾಂತರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವಿಷಯವನ್ನು ಜಿಲ್ಲಾಧಿಕಾರಿ ಪವನಕುಮಾರ ಜೈನ್‌ ತಿಳಿಸಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಜಿಲ್ಲಾಧಿಕಾರಿ ಪವನ್‌ಕುಮಾರ್ ಜೈನ್, ದುಬೈನಿಂದ ಈ ಇಬ್ಬರು ವ್ಯಕ್ತಿಗಳು ಬೆಂಗಳೂರಿಗೆ ಬಂದ ವೇಳೆ ಅವರಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಕೆಲ … Continued