ʼಕಾಂಗ್ರೆಸ್ ಫೈಲ್ಸ್ʼ : ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್‌ ವಿರುದ್ಧ ವೀಡಿಯೊ ಸರಣಿ ಅಭಿಯಾನ ಆರಂಭಿಸಿದ ಬಿಜೆಪಿ

ನವದೆಹಲಿ: ಭಾರತೀಯ ಜನತಾ ಪಕ್ಷವು 70 ವರ್ಷಗಳ ಕಾಂಗ್ರೆಸ್‌ ಆಡಳಿತದಲ್ಲಿ ಭ್ರಷ್ಟಾಚಾರಗಳನ್ನು ಆರೋಪಿಸುವ ವೀಡಿಯೊ ಸರಣಿಯ ‘ಕಾಂಗ್ರೆಸ್ ಫೈಲ್ಸ್’ ನ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡುವ ಮೂಲಕ ಭಾನುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಮೂರು ನಿಮಿಷಗಳ ವೀಡಿಯೊದಲ್ಲಿ ಎರಡು ಅವಧಿಗೆ ಯುಪಿಎ ಸರ್ಕಾರ ಮುನ್ನಡೆಸಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಕಾಂಗ್ರೆಸ್ ಅಧ್ಯಕ್ಷರಾದ … Continued

ಇತಿಹಾಸ ತಿರುಚುವುದಲ್ಲಿ ಬಿಜೆಪಿ ಎತ್ತಿದ ಕೈ: ಈಗ ಒಕ್ಕಲಿಗರ ಇತಿಹಾಸ ತಿರುಚಲು ಹೊರಟಿದೆ-ಡಿಕೆ ಶಿವಕುಮಾರ ಕಿಡಿ

ಬೆಳಗಾವಿ : ಯುವ ಕ್ರಾಂತಿ ಸಮಾವೇಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಬೆಳಗಾವಿ ಕಾರ್ಯಕ್ರಮ ಆಯೋಜಿತಗೊಂಡಿದೆ. ಈ ಹಿನ್ನಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಂದಿನಂತೆ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ಇತಿಹಾಸ ತಿರುಚುವಲ್ಲಿ ಬಿಜೆಪಿಯವರದು ಎತ್ತಿದ ಕೈ. ಬಸವಣ್ಣ, ಕುವೆಂಪು, ನಾರಾಯಣ ಗುರು, ಡಾ. … Continued

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರ ಒತ್ತಾಯದ ಮೇರೆಗೆ ನಮ್ಮ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲಾಗಿತ್ತು: ಎಸ್‌ಡಿಪಿಐ ಮುಖಂಡ

ಬೆಂಗಳೂರು: 2018 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತಮ್ಮ ನಡುವೆ ಒಪ್ಪಂದ ಇದ್ದರೂ ಅದನ್ನು ಕಾಂಗ್ರೆಸ್ ಅದನ್ನು ಮುರಿದಿದೆ ಎಂದು ಎಸ್‌ಡಿಪಿಐ (SDPI) ಹೇಳಿಕೊಂಡಿದೆ. ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ, ನಾವು ಮತ್ತೆ (ಕಾಂಗ್ರೆಸ್ ಜೊತೆ ಸೇರುವ) ತಪ್ಪನ್ನು ಮಾಡಲು … Continued

ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಅನಂತ ನಾಗ್‌ ಗೈರು: ಕುತೂಹಲ ಮೂಡಿಸಿದ ನಟನ ನಡೆ

 ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಮತ್ತು ಮಾಜಿ ಸಚಿವ ಅನಂತ ನಾಗ್ ಅವರು ಇಂದು, ಬುಧವಾರ ಸಂಜೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಕಾರಣಾಂತರದಿಂದ ಅವರು ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಅವರು ಆಗಮಿಸಲಿಲ್ಲ ಎಂದು ವರದಿಯಾಗಿದೆ. ನಟ ಅನಂತ ನಾಗ್ ಅವರು ಇಂದು, ಬುಧವಾರ ಸಂಜೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಸಂಜೆ 4:30ಕ್ಕೆ … Continued

ರಾಜಕೀಯ ಸೇರುವ ಬಗ್ಗೆ ಮೌನ ಮುರಿದ ನಟ ಕಿಚ್ಚ ಸುದೀಪ

ಬೆಂಗಳೂರು : ರಾಜಕೀಯ ಪ್ರವೇಶ ಕುರಿತು ಕೊನೆಗೂ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ ಮೌನ ಮುರಿದಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರು ನಟ ಸುದೀಪ ಅವರನ್ನ ಭೇಟಿಯಾಗಿದ್ದು ಸಾಕಷ್ಟು ಸುದ್ದಿಯಾಗಿ ನಟ ಸುದೀಪ ರಾಜಕೀಯ ಪ್ರವೇಶಿಸುತ್ತಾರೆಯೇ ಎಂಬ ಕುತೂಹಲ ಉಂಟಾಗಿತ್ತು. ಈಗ ಈ ಕುರಿತು ಪ್ರತಿಕ್ರಿಯಿಸಿರುವ ನಟ ಸುದೀಪ ಬಿಜೆಪಿ ಹಾಗೂ … Continued

ಮಹದಾಯಿ: ಬಿಜೆಪಿ ರಾಜಕೀಯ ನಾಟಕವನ್ನು ರೈತರು, ಜನರು ನಂಬುವುದಿಲ್ಲ- ಕಾಂಗ್ರೆಸ್

ಹುಬ್ಬಳ್ಳಿ : ಡಿಪಿಆರ್ ಅನುಮೋದನೆಗೊಂಡಿದೆ, ಮಹದಾಯಿ ಜಲ ವಿವಾದ ಸಂಪೂರ್ಣ ಬಗೆಹರಿಸಿದ್ದೇವೆ, ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ, ಮಹದಾಯಿ ನಮ್ಮದೇ ಕೊಡುಗೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರ ಹೇಳಿಕೆ ಸುಳ್ಳೆಂದು ಜನ ತಿಳಿದುಕೊಂಡಿದ್ದಾರೆ. ಆರಂಭದಿಂದಲೂ ಬಿಜೆಪಿ ಮಹದಾಯಿ-ಕಳಸಾ ಬಂಡೂರಿ ನಾಲಾ ಯೋಜನೆಗೆ ಒಂದಿಲ್ಲ ಒಂದು ಕಾರಣ ಅಡ್ಡಿ ಅಡ್ಡಪಡಿಸುತ್ತಲೇ ಬಂದಿದೆ. ಇಂದಿಗೂ ಅಡ್ಡಪಡಿಸುತ್ತಲಿದೆ ಎಂದು ಕಾಂಗ್ರೆಸ್‌ … Continued

ಸುವರ್ಣ ಸೌಧದಲ್ಲಿ ಸೋಮವಾರ ಸಾವರ್ಕರ್ ಫೋಟೋ ಅನಾವರಣಕ್ಕೆ ಬಿಜೆಪಿ ಸಿದ್ಧತೆ

ಬೆಳಗಾವಿ: ಸೋಮವಾರದಿಂದ (ನಾಳೆಯಿಂದ) ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ವೇಳೆ ಸಾವರ್ಕರ್‌ ಅವರ ಫೋಟೋ ಅನಾವರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿಯಿದ್ದು, ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಮತ್ತೆ ಸಾವರ್ಕರ್ ಸಮಯ ಜೋರಾಗುವ ಸಾಧ್ಯತೆ ಇದೆ. ವಿಧಾನಸಭೆಯಲ್ಲಿ ಗಾಂಧೀಜಿ, ನೆಹರೂ, … Continued

ಪ್ರಧಾನಿ ಸಲಹೆಯ ತಿಂಗಳ ನಂತರ ನಾಳೆ ಪಸ್ಮಾಂಡ (ಹಿಂದುಳಿದ) ಮುಸ್ಲಿಮರ ಸಭೆ ಕರೆದ ಬಿಜೆಪಿ

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಬಿಜೆಪಿ ಮತ್ತು ಪಸ್ಮಾಂಡ ಅಥವಾ ಹಿಂದುಳಿದ ಮುಸ್ಲಿಮರ ಪ್ರಮುಖ ಸದಸ್ಯರ ಸಭೆ ಭಾನುವಾರ ನಡೆಯಲಿದ್ದು, ರಾಜ್ಯದಲ್ಲಿ ಇಂತಹ ಮೊದಲ ಔಪಚಾರಿಕ ಸಭೆಯಾಗಿದೆ. ಉತ್ತರ ಪ್ರದೇಶದಲ್ಲಿ ಪಸ್ಮಾಂಡ ಮುಸ್ಲಿಮರನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷ ಬಿಜೆಪಿಯನ್ನು ಕೇಳಿಕೊಂಡ ಸುಮಾರು ನಾಲ್ಕು ತಿಂಗಳ ನಂತರ … Continued

ನಾಳೆಯಿಂದ ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯ ಸಂಘಟನಾ ಪ್ರವಾಸ ಆರಂಭ

ಬೆಂಗಳೂರು: ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಮತ್ತೆ ಅಧಿಕಾರ ಹಿಡಿಯಲು ರಣತಂತ್ರ ರೂಪಿಸುತ್ತಿರುವ ಆಡಳಿತಾರೂಢ ಬಿಜೆಪಿ, ನಾಳೆ, ಮಂಗಳವಾರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ರಾಯಚೂರಿನಿಂದ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಲಿದೆ. ವಿಜಯ ಸಂಕಲ್ಪ ಯಾತ್ರೆ ಗಿಲ್ಲೇಸೂಗೂರು ಗ್ರಾಮದಿಂದ ಶುರುವಾಗಲಿದೆ. ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ವಿಜಯ ಸಂಕಲ್ಪ ಯಾತ್ರೆ … Continued

ನಮ್ಮ ಬಿಜೆಪಿ ಆಡಳಿತದಲ್ಲಿ ಟಿಪ್ಪು ಹೆಸರನ್ನು ಯಾವುದಕ್ಕೂ ಬಳಕೆ ಮಾಡುವುದಿಲ್ಲ: ಎನ್.ರವಿಕುಮಾರ

ರಾಯಚೂರು: ಬಿಜೆಪಿ (BJP) ಆಡಳಿತದಲ್ಲಿ ಬಸ್, ಟ್ರೈನ್ ಸೇರಿದಂತೆ ಯಾವುದಕ್ಕೂ ಟಿಪ್ಪು ಹೆಸರನ್ನು ಇಡುವುದಿಲ್ಲ. ಟಿಪ್ಪು ಒಬ್ಬ ಧರ್ಮಾಂಧ, ದೇವಸ್ಥಾನಗಳನ್ನು ನಾಶ ಮಾಡಿದಂತಹ ವ್ಯಕ್ತಿ ಎಂದು ವಿಧಾನ ಪರಿಷತ್‌ ಸದಸ್ಯ ಎನ್.ರವಿಕುಮಾರ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಟಿಪ್ಪು ಎಕ್ಸ್‌ಪ್ರೆಸ್ ಬದಲು ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಆಡಳಿತದ … Continued