ನಟಿ, ಮಾಜಿ ಸಂಸದೆ ವಿಜಯಶಾಂತಿ ಬಿಜೆಪಿಗೆ ಗುಡ್‌ ಬೈ

ಹೈದರಾಬಾದ್: ತೆಲಂಗಾಣ ವಿಧಾನಸಭೆಗೆ ಕೆಲವೇ ದಿನಗಳಿರುವಾಗ ಮಾಜಿ ಸಂಸದೆ, ನಟಿ ವಿಜಯಶಾಂತಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ ವಿಜಯಶಾಂತಿ ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಜಿ.ಕಿಶನ್ ರೆಡ್ಡಿ ಅವರಿಗೆ ಕಳುಹಿಸಿದ್ದಾರೆ. ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಭಾಗವಹಿಸುವ ಸಮಾರಂಭದಲ್ಲಿ … Continued

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ವಿಜಯೇಂದ್ರ ನೇಮಕದ ನಿರೀಕ್ಷೆ ಇರಲಿಲ್ಲ : ಯಡಿಯೂರಪ್ಪ

ಬೆಂಗಳೂರು : ಬಹಳ ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಬಿಜೆಪಿಗೆ ಸಂಬಂಧಪಟ್ಟಂತೆ ಬಹಳ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ. ರಾಜ್ಯಾಧ್ಯಕ್ಷರ ಹುದ್ದೆಗೆ ವಿಜಯೇಂದ್ರ ನೇಮಕ ಆಗುತ್ತಾರೆ ಎಂದು ನಿರೀಕ್ಷೆಯಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಜಯೇಂದ್ರ ನೇಮಕದ ಬಗ್ಗೆ ನನಗೆ ಗೊತ್ತಿರಲಿಲ್ಲ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ … Continued

ಅನೇಕ ಕಾಂಗ್ರೆಸ್ ನಾಯಕರು ಭಗವಾನ್ ರಾಮ, ‘ಹಿಂದೂ’ ಎಂಬ ಪದವನ್ನು ದ್ವೇಷಿಸುತ್ತಾರೆ ; ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ

ನವದೆಹಲಿ: ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ ಕೃಷ್ಣಂ ಅವರು ಶುಕ್ರವಾರ ತಮ್ಮ ಪಕ್ಷದಲ್ಲಿ ಶ್ರೀರಾಮನನ್ನು ಮತ್ತು ‘ಹಿಂದೂ’ ಪದವನ್ನು ದ್ವೇಷಿಸುವ ಅನೇಕ ನಾಯಕರು ಇದ್ದಾರೆ ಎಂದು ಹೇಳಿದ್ದಾರೆ. “ಕಾಂಗ್ರೆಸ್‌ನಲ್ಲಿ ರಾಮನನ್ನು ದ್ವೇಷಿಸುವ ಕೆಲವು ನಾಯಕರಿದ್ದಾರೆ ಎಂದು ನನಗೆ ಅನಿಸಿದೆ, ಈ ನಾಯಕರೂ ಹಿಂದೂ ಪದವನ್ನು ದ್ವೇಷಿಸುತ್ತಾರೆ, ಅವರು ಹಿಂದೂ ಧಾರ್ಮಿಕ ಗುರುಗಳನ್ನು ಅವಮಾನಿಸಲು ಬಯಸುತ್ತಾರೆ, ಪಕ್ಷದಲ್ಲಿ … Continued

ಮಾಜಿ ಸಚಿವ, ಹಿರಿಯ ರಾಜಕಾರಣಿ ಡಿ.ಬಿ. ಚಂದ್ರೇಗೌಡ ನಿಧನ

ಬೆಂಗಳೂರು: ಮಾಜಿ ಸಚಿವ, ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡ (DB Chandregowda) ಅವರು ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಿ.ಬಿ.ಚಂದ್ರೇಗೌಡ ಸೋಮವಾರ ಮಧ್ಯರಾತ್ರಿ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಅಂತಿಮ ಇಂದು ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ … Continued

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ : ಎನ್‌ಡಿಟಿವಿ ಸಮೀಕ್ಷೆ; ತುರುಸಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ಸಿನ ಕಮಲನಾಥರಿಗಿಂತ ಬಿಜೆಪಿ ಶಿವರಾಜ ಸಿಂಗ್ ಸ್ವಲ್ಪ ಮುಂದೆ

ಮಧ್ಯಪ್ರದೇಶವು ತನ್ನ ಹೊಸ ಸರ್ಕಾರವನ್ನು ಆಯ್ಕೆ ಮಾಡುವ ಎರಡು ವಾರಗಳ ಮೊದಲು, ಎನ್‌ಡಿಟಿವಿ (NDTV-CSDS) ಲೋಕನೀತಿ ಸಮೀಕ್ಷೆಯು ಕಾಂಗ್ರೆಸ್‌ನ ಕಮಲನಾಥ ಅವರಿಗಿಂತ ಹಾಲಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್‌ ಅವರಿಗೆ ಆದ್ಯತೆ ನೀಡುತ್ತಾರೆ ಎಂದು ಬಹಿರಂಗಪಡಿಸಿದೆ. ಆದಾಗ್ಯೂ, ಅಂತರವು ಕೇವಲ 4% ಮಾತ್ರ ಇದೆ. ರಾಜ್ಯದ 230 ವಿಧಾನಸಭಾ ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳಲ್ಲಿ ಅಕ್ಟೋಬರ್ … Continued

ರಾಜಸ್ಥಾನ ವಿಧಾನಸಭೆ ಚುನಾವಣೆ: ಬಿಜೆಪಿ-ಕಾಂಗ್ರೆಸ್‌ ಮಧ್ಯದ ತುರುಸಿನ ಸ್ಪರ್ಧೆಯಲ್ಲಿ ಗೆಲುವಿನತ್ತ ಯಾರು…? ಇಂಡಿಯಾ ಟಿವಿ-ಸಿಎನ್‌ಎಕ್ಸ್ 2ನೇ ಸಮೀಕ್ಷೆಯಲ್ಲಿ ಬಹಿರಂಗ

ಈ ತಿಂಗಳು ನಡೆಯುವ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತವನ್ನು ಪಡೆಯಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎರಡನೇ  ಸಮೀಕ್ಷೆ ಹೇಳಿದೆ. ರಾಜಸ್ಥಾನದ 200 ವಿಧಾನಸಭಾ ಸ್ಥಾನಗಳ ಸದನದಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಪ್ರಕ್ಷೇಪಗಳು ತೋರಿಸಿವೆ, ಕಳೆದ ಚುನಾವಣೆಯಲ್ಲಿ ಬಿಜೆಪಿ 73 ಸ್ಥಾನಗಳನ್ನು ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ … Continued

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ : ಈಸಲ ಬಿಜೆಪಿಯೋ-ಕಾಂಗ್ರೆಸ್ಸೋ..? ಹೊರಬಿತ್ತು ಇಂಡಿಯಾ ಟಿವಿ-ಸಿಎನ್‌ಎಕ್ಸ್ ನ ಮತ್ತೊಂದು ಸಮೀಕ್ಷೆ

ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಒಟ್ಟು 230 ಸ್ಥಾನಗಳಲ್ಲಿ 119 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳಿದೆ. 230 ಸದಸ್ಯ ಬಲದ ವಿಧಾನಸಭೆಯಲ್ಲಿ ಐದು ವರ್ಷಗಳ ಹಿಂದೆ ಬಿಜೆಪಿ 109 ಸ್ಥಾನಗಳನ್ನು ಗೆದ್ದಿತ್ತು. ಇದಕ್ಕೆ ಹೋಲಿಸಿದರೆ … Continued

ರಾಜಸ್ಥಾನ ವಿಧಾನಸಭೆ ಚುನಾವಣೆ: ಯಾವ್ಯಾವ ಸಮುದಾಯಗಳ ಒಲವು ಯಾವ ಪಕ್ಷಗಳತ್ತ ? ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಹೇಳುವುದೇನು..?

ಮುಂದಿನ ತಿಂಗಳು ನವೆಂಬರ್ 25 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ವಿವಿಧ ಸಮುದಾಯಗಳಿಗೆ ಯಾವ್ಯಾವ ಪಕ್ಷಗಳು ಪ್ರಮುಖ ಆಯ್ಕೆಯಾಗಿವೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ತಿಳಿಸಿದೆ. ರಜಪೂತ, ಬನಿಯಾ, ಜಾಟ್ ಮತ್ತು ಮೀನಾ ಸೇರಿದಂತೆ ಹಲವು ಸಮುದಾಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ ಎಂದು ಸಮೀಕ್ಷೆಗಳು ತೋರಿಸಿವೆ. ರಾಜ್ಯದಲ್ಲಿ ಗುಜ್ಜರ್, ಮಾಲಿ ಮತ್ತು ಮುಸ್ಲಿಮರ ಮತಗಳನ್ನು … Continued

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ : ವಿವಿಧ ಸಮುದಾಯಗಳ ಮತದಾರರ ಒಲವು ಯಾರತ್ತ..? ಬಿಜೆಪಿಯೋ-ಕಾಂಗ್ರೆಸ್ಸೋ..? ಇಂಡಿಯಾ ಟಿವಿ ಸಿಎನ್‌ಎಕ್ಸ್ ಸಮೀಕ್ಷೆ ಏನು ಹೇಳುತ್ತದೆ..?

ಮುಂದಿನ ತಿಂಗಳು ನವೆಂಬರ್ 17 ರಂದು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು (ಬಿಜೆಪಿ) ವಿವಿಧ ಸಮುದಾಯಗಳಿಗೆ ನಂಬರ್ ಒನ್ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯಲ್ಲಿ ಕಂಡುಬಂದಿದೆ. ಬ್ರಾಹ್ಮಣ, ಬನಿಯಾ, ಕಿರಾರ್-ಧಕಡ್, ಕುರ್ಮಿ, ಯಾದವ್, ಜಾತವ್-ಸತ್ನಾಮಿ ಮತ್ತು ರಜಪೂತ್, ಅಲ್ಪಸಂಖ್ಯಾತ ಸೇರಿದಂತೆ … Continued

ಟಿವಿ ಶೋ ನೇರ ಪ್ರಸಾರದ ವೇಳೆ ಬಿಜೆಪಿ ಅಭ್ಯರ್ಥಿ ಕತ್ತು ಹಿಸುಕಿದ ಬಿಆರ್‌ಎಸ್ ಶಾಸಕ | ವೀಕ್ಷಿಸಿ

ಚುನಾವಣಾ ಕಣಕ್ಕಿಳಿದಿರುವ ತೆಲಂಗಾಣದಲ್ಲಿ ರಾಜಕೀಯ ತಾಪಮಾನ ತಾರಕಕ್ಕೇರುತ್ತಿದೆ. ಪ್ರತಿಸ್ಪರ್ಧಿ ರಾಜಕೀಯ ಬಿರುಸಿನ ವಾತಾವರಣದಲ್ಲಿ ಕೆಲ ಕೊಳಕು ಘಟನೆಗಳೂ ರಾಜ್ಯದಲ್ಲಿ ನಡೆಯುತ್ತಿವೆ. ತಾಜಾ ಘಟನೆಯೊಂದರಲ್ಲಿ, ತೆಲುಗು ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಬಹಿರಂಗ ಚರ್ಚೆಯ ಕಾರ್ಯಕ್ರಮದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಕೆ.ಪಿ. ವಿವೇಕಾನಂದ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಶ್ರೀಶೈಲಂ ಗೌರ್ ಅವರ … Continued