ಲೋಕಸಭೆ ಚುನಾವಣೆ 2024 : ಉತ್ತರಪ್ರದೇಶ ಸೇರಿದಂತೆ ಹಿಂದಿ ಬೆಲ್ಟ್‌ ರಾಜ್ಯಗಳಲ್ಲಿ ಎನ್‌ಡಿಎಗೆ ಹೆಚ್ಚು ಸ್ಥಾನ ಎಂದ ಎಕ್ಸಿಟ್ ಪೋಲ್‌ಗಳು

ನವದೆಹಲಿ: ಶನಿವಾರ (ಜೂನ್ 1)ದಂದು ಲೋಕಸಭೆ ಚುನಾವಣೆ 2024ರ ಮತದಾನ ಮುಗಿದ ಸ್ವಲ್ಪ ಸಮಯದ ನಂತರ, ಅನೇಕ ಎಕ್ಸಿಟ್ ಪೋಲ್ ಸರ್ವೆಗಳನ್ನು ಬಿಡುಗಡೆ ಮಾಡಲಾಯಿತು. ಎಕ್ಸಿಟ್ ಪೋಲ್‌ಗಳು ಚುನಾವಣೋತ್ತರ ಸಮೀಕ್ಷೆಗಳಾಗಿದ್ದು, ಚುನಾವಣೆಯಲ್ಲಿ ರಾಷ್ಟ್ರದ ಮನಸ್ಥಿತಿಯನ್ನು ನಿರೀಕ್ಷಿಸಲು ಪ್ರಯತ್ನಿಸುತ್ತವೆ. ಹಿಂದಿ ಬೆಲ್ಟ್ ಅನ್ನು ಸಾಮಾನ್ಯವಾಗಿ ಹಿಂದಿ ಹೃದಯಭೂಮಿ ಎಂದು ಕರೆಯಲಾಗುತ್ತದೆ, ಸಂಖ್ಯಾ ಬಲದ ಕಾರಣದಿಂದಾಗಿ, ಲೋಕಸಭೆ ಚುನಾವಣೆಯಲ್ಲಿ … Continued

ಲೋಕಸಭೆ ಚುನಾವಣೆ 2024: ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಂಪರ್‌ ಸೀಟುಗಳು ? ಎಕ್ಸಿಟ್ ಪೋಲ್ ಗಳು ಹೇಳಿದ್ದೇನು..?

 ನವದೆಹಲಿ: ಲೋಕಸಭೆ ಚುನಾವಣೆ 2024ರ ಏಳನೇ ಮತ್ತು ಕೊನೆಯ ಹಂತವು ಶನಿವಾರ ಮುಕ್ತಾಯವಾದ ಮತಗಟ್ಟೆ ನಿರ್ಗಮನ ಸಮೀಕ್ಷೆ (Exit Poll 2024)ಗಳು ಹೊರಬಂದಿವೆ. ಇದು ಜೂನ್ 4 ರಂದು ಅಧಿಕೃತ ಎಣಿಕೆಯ ನಂತರ ಏನಾಗಲಿದೆ ಎಂಬುದರ ಕುರಿತು ನಮಗೆ ಕಲ್ಪನೆಯನ್ನು ನೀಡುತ್ತದೆ. ಎಲ್ಲ ಎಕ್ಸಿಟ್ ಪೋಲ್‌ಗಳು ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ … Continued

ಲೋಕಸಭಾ ಚುನಾವಣೆ 2024: ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ; ವಿವಿಧ ಸಮೀಕ್ಷೆಗಳು ಏನು ಹೇಳಿವೆ ಎಂಬುದು ಇಲ್ಲಿದೆ…

ದೇಶದ ಹಲವು ಸಮೀಕ್ಷಾ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದೆ. ಈವರೆಗೆ ಬಂದಿರುವ ಸಮೀಕ್ಷೆಗಳ ಪ್ರಕಾರ ಕೇಂದ್ರದಲ್ಲಿ 3ನೇ ಬಾರಿಗೆ ಬಿಜೆಪಿ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕಾಗಿದ್ದು, ಪೋಲ್‌ ಆಫ್‌ ಪೋಲ್‌ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ 365 ಸ್ಥಾನಗಳನ್ನು … Continued

ಲೋಕಸಭೆ ಚುನಾವಣೆ 2024 : ಸಟ್ಟಾ ಬಜಾರ್ ಬೆಟ್ಟಿಂಗ್‌ ಭವಿಷ್ಯ ; ಸೀಟು ಗೆಲ್ಲುವ ಲೆಕ್ಕಾಚಾರದಲ್ಲಿ ಬಿಜೆಪಿ ಮುಂದೆ ; ಆದರೆ….

ನವದೆಹಲಿ : ದೇಶದ ಏಳನೇ ಹಂತದ ಲೋಕಸಭಾ ಚುನಾವಣೆಗಿಂತ ಮೊದಲು ದೇಶದ ಅನಧಿಕೃತ ಎಕ್ಸಿಟ್‌ ಪೋಲ್‌ ಎನಿಸಿಕೊಂಡಿರುವ ಸಟ್ಟಾ ಬಜಾರದಲ್ಲಿ ಹೊಸ ಲೆಕ್ಕಾಚಾರಗಳು ಹೊರಬಿದ್ದಿದೆ. ದೇಶದಲ್ಲಿ 6 ಹಂತದ ಮತದಾನ ಮುಕ್ತಾಯವಾಗಿದ್ದು, ಜೂನ್‌ 1ರಂದು ಏಳನೇ ಹಂತದ ಮತದಾನ ನಡೆಯಲಿದೆ. 6ನೇ ಹಂತದ ಚುನಾವಣೆ ಮುಗಿದ ಬಳಿಕ ಸಟ್ಟಾ ಬಜಾರ್‌ ಬಿಜೆಪಿ 290 ಸೀಟ್‌ ಗೆಲ್ಲಬಹುದು … Continued

ಇವಿಎಂ ಧ್ವಂಸ : ಬಿಜೆಪಿ ಅಭ್ಯರ್ಥಿ ಪ್ರಶಾಂತ ಜಗದೇವ ಬಂಧನ

ಭುವನೇಶ್ವರ : ಒಡಿಶಾದ ಖುರ್ದಾದಲ್ಲಿ ಇವಿಎಂ ಧ್ವಂಸಗೊಳಿಸಿದ ಆರೋಪದ ಮೇರೆಗೆ ಬಿಜೆಪಿ ಅಭ್ಯರ್ಥಿಯನ್ನು ಬಂಧಿಸಲಾಗಿದೆ. ಖುರ್ದಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಚಿಲಿಕಾದ ಬಿಜೆಪಿ ಶಾಸಕ ಪ್ರಶಾಂತ ಜಗದೇವ ಅವರನ್ನು ಶನಿವಾರ ಇವಿಎಂಗೆ ಹಾನಿಗೊಳಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಬೇಗನಿಯಾ ವಿಧಾನಸಭಾ ಕ್ಷೇತ್ರದ ಬೋಲಗಾಡ್ ಬ್ಲಾಕ್‍ನ ಕೌನ್ರಿಪಟ್ನಾದ ಮತಗಟ್ಟೆಗೆ ಮತ ಚಲಾಯಿಸಲು ಪ್ರಶಾಂತ ಜಗದೇವ ಅವರು ಪತ್ನಿಯೊಂದಿಗೆ … Continued

“ಮತದಾನ ಮಾಡಿಲ್ಲ, ಸಮಾವೇಶಗಳಿಗೆ ಹಾಜರಾಗಿಲ್ಲ” ಎಂಬ ಬಿಜೆಪಿ ನೋಟಿಸಿಗೆ 2 ಪುಟಗಳ ಉತ್ತರ ನೀಡಿದ ಸಂಸದ ಜಯಂತ್ ಸಿನ್ಹಾ..

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಏಕೆ ಮತ ಹಾಕಲಿಲ್ಲ ಮತ್ತು ಚುನಾವಣಾ ಪ್ರಚಾರದಲ್ಲಿ ಯಾಕೆ ಭಾಗವಹಿಸಲಿಲ್ಲ ಎಂದು ಬಿಜೆಪಿ ಶೋಕಾಸ್ ನೋಟಿಸ್ ನೀಡಿದ್ದು ಆಶ್ಚರ್ಯ ತಂದಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಜಯಂತ ಸಿನ್ಹಾ ಹೇಳಿದ್ದಾರೆ. ಬಿಜೆಪಿಯ ಜಾರ್ಖಂಡ್ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, “ವೈಯಕ್ತಿಕ ಬದ್ಧತೆಗಳಿಗಾಗಿ”” … Continued

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದ ಅಮೆರಿಕದ ರಾಜಕೀಯ ವಿಜ್ಞಾನಿ; ಅವರ ಪ್ರಕಾರ ಬಿಜೆಪಿ ಗೆಲ್ಲುವ ಸ್ಥಾನಗಳೆಷ್ಟು ಗೊತ್ತೆ..?

ಮುಂಬೈ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 305 (+/- 10) ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಮೆರಿಕದ ರಾಜಕೀಯ ವಿಜ್ಞಾನಿ ಇಯಾನ್ ಬ್ರೆಮ್ಮರ್ ಮಂಗಳವಾರ ಹೇಳಿದ್ದಾರೆ. ರಿಸ್ಕ್‌ ಮತ್ತು ಸಂಶೋಧನಾ ಸಲಹಾ ಸಂಸ್ಥೆಯಾದ ಯುರೇಷಿಯಾ ಗ್ರೂಪ್‌ನ ಸಂಸ್ಥಾಪಕರಾದ ಬ್ರೆಮ್ಮರ್ ಅವರು ಎನ್‌ಡಿಟಿವಿ ಪ್ರಾಫಿಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಜಾಗತಿಕ ರಾಜಕೀಯ ದೃಷ್ಟಿಕೋನದಿಂದ ಭಾರತೀಯ ಸಾರ್ವತ್ರಿಕ ಚುನಾವಣೆಯು “ಅಚಲವಾಗಿದೆ … Continued

ಎನ್‌ಡಿಎ ಅಭ್ಯರ್ಥಿ ವಿರುದ್ಧ ಸ್ಪರ್ಧೆ : ಬಿಜೆಪಿಯಿಂದ ಭೋಜಪುರಿ ನಟನ ಉಚ್ಛಾಟನೆ

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಭೋಜಪುರಿ ನಟ ಮತ್ತು ಗಾಯಕ ಪವನ್ ಸಿಂಗ್ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಪಕ್ಷದಿಂದ ಬುಧವಾರ ಉಚ್ಛಾಟಿಸಿದೆ. ಈ ಹಿಂದೆ ಪಶ್ಚಿಮ ಬಂಗಾಳದ ಅಸನ್ಸೋಲ್‌ ಕ್ಷೇತ್ರದಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ ಅವರು ಅಸನ್ಸೋಲ್‌ ಕ್ಷೇತ್ರದಲ್ಲಿ ಸ್ಪರ್ಧಿಸುವುದರಿಂದ ಹಿಂದೆ … Continued

ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳು 3 ಅವಕಾಶಗಳನ್ನು ಕಳೆದುಕೊಂಡಿವೆ…ಆದರೆ ಈಗ…: ರಾಜಕೀಯ ತಂತ್ರಜ್ಞ ಪ್ರಶಾಂತ ಕಿಶೋರ

ನವದೆಹಲಿ : 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಬಿಜೆಪಿಯನ್ನು ಸೋಲಿಸುವ ಸಾಧ್ಯತೆಗಳನ್ನು ತಳ್ಳಿಹಾಕಿದ ತಂತ್ರಗಾರ ಪ್ರಶಾಂತ ಕಿಶೋರ ಅವರು, ಪ್ರಧಾನಿ ಮೋದಿ ಸರ್ಕಾರ ಹಿನ್ನಡೆಯ ಸ್ಥಿತಿಯಲ್ಲಿದ್ದಾಗ ವಿಪಕ್ಷಗಳ ಒಕ್ಕೂಟ ಅದರ ಲಾಭ ಪಡೆಯಲು ಅನೇಕ ಬಾರಿ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಮಮಂದಿರ (ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶಂಕುಸ್ಥಾಪನೆ) ಬಗ್ಗೆ ನಿರ್ದಿಷ್ಟವಾಗಿ … Continued

“ನೀವು ಮತವನ್ನೂ ಹಾಕಿಲ್ಲ…”: ತಮ್ಮದೇ ಪಕ್ಷದ ಸಂಸದನಿಗೆ ಶೋಕಾಸ್ ನೋಟಿಸ್ ನೀಡಿದ ಬಿಜೆಪಿ..

ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಜಯಂತ ಸಿನ್ಹಾ ಅವರು ಸೋಮವಾರ ಮತದಾನ ಮಾಡದೇ ಇದ್ದ ಹಿನ್ನೆಲೆಯಲ್ಲಿ ಬಿಜೆಪಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಜಾರ್ಖಂಡ್‌ನ ಹಜಾರಿಬಾಗ್ ಕ್ಷೇತ್ರದಿಂದ ಅವರ ಬದಲಿಗೆ ಮನೀಶ ಜೈಸ್ವಾಲ್ ಅವರಿಗೆ ಟಿಕೆಟ್‌ ಘೋಷಿಸಿದಾಗಿನಿಂದ ಅವರು “ಸಂಘಟನಾ ಕೆಲಸ ಮತ್ತು ಚುನಾವಣಾ ಪ್ರಚಾರ” ದಲ್ಲಿ ಭಾಗವಹಿಸುತ್ತಿಲ್ಲ ಎಂದು ಆರೋಪಿಸಿ ಪಕ್ಷವು … Continued