ವೀಡಿಯೊ…| ಎರಡು ಬಿಎಂಟಿಸಿ ಬಸ್​ ಮಧ್ಯೆ ಸಿಲುಕಿ ಆಟೋ ಅಪ್ಪಚ್ಚಿ ; ಅಪಘಾತದಲ್ಲಿ ಇಬ್ಬರು ಸಾವು

ಬೆಂಗಳೂರು: ಬೆಂಗಳೂರಿನ ಹನುಮಂತನಗರದ ಸೀತಾ ಸರ್ಕಲ್ ಬಳಿ ಶುಕ್ರವಾರ ಎರಡು ಬಿಎಂಟಿಸಿ ಬಸ್ ಗಳ​ ಮಧ್ಯೆ ಸಿಲುಕಿದ ಆಟೋ ಅಪ್ಪಚ್ಚಿಯಾಗಿದ್ದು, ಈ ಭೀಕರ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಆಟೋ ಚಾಲಕ ವಿಜಯಕುಮಾರ (50) ಹಾಗೂ ಪ್ರಯಾಣಿಕ ವಿಷ್ಣು ಬಾಪಟ್‌(70) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮುಂದೆ … Continued

ಬಸ್ ಟಿಕೆಟ್ ದರ ಹೆಚ್ಚಳ ; ಇಂದಿನಿಂದಲೇ (ಜನವರಿ 5) ಜಾರಿ

ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನಿಗಮಗಳ ಟಿಕೆಟ್‌ ದರದಲ್ಲಿ ಶೇ. 15ರಷ್ಟು ಏರಿಕೆ ಮಾಡಿದ್ದು, ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಇಂದು (ಜನವರಿ 5) ಮಧ್ಯರಾತ್ರಿಯಿಂದ ಶೇ 15ರಷ್ಟು ಏರಿಕೆಯ ಪರಿಷ್ಕೃತ ದರ ಅನ್ವಯವಾಗಲಿದೆ. ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), … Continued

ವೀಡಿಯೊ…| ಬೆಂಗಳೂರು : ಬಸ್‌ ಚಾಲನೆ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಚಾಲಕ ಸಾವು : ಬಸ್ಸಿನಲ್ಲಿದ್ದವರ ಪ್ರಾಣ ಉಳಿಸಿದ ಕಂಡಕ್ಟರ್…

ಬೆಂಗಳೂರು: ಬೆಂಗಳೂರು ಮಹಾನಗರದ ನೆಲಮಂಗಲದಿಂದ ದಾಸನಪುರಕ್ಕೆ ಬಿಎಂಟಿಸಿ ಬಸ್ ಚಾಲನೆ ಮಾಡುತ್ತಿದ್ದಾಗ 40 ವರ್ಷದ ಬಸ್ ಚಾಲಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಸ್ ನೆಲಮಂಗಲದಿಂದ ದಾಸನಪುರಕ್ಕೆ ತೆರಳುತ್ತಿದ್ದಾಗ ಚಾಲನೆ ಮಾಡುತ್ತಿರುವಾಗಲೇ ಚಾಲಕ ಕಿರಣಕುಮಾರ ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದು, ಬುಧವಾರ ಬೆಳಗ್ಗೆ 11 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಅವರು ಬಿಎಂಟಿಸಿ ಡಿಪೋ 40ರಲ್ಲಿ ಕಾರ್ಯನಿರ್ವಹಿಸುತ್ತಿದ್ದರು … Continued

ವೀಡಿಯೊ..| ಚಲಿಸುತ್ತಿರುವಾಗ ಹೊತ್ತಿ ಉರಿದ ಬಿಎಂಟಿಸಿ ಬಸ್‌

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್​ ಅಗ್ನಿಗಾಹುತಿಯಾದ ಘಟನೆ ಇಂದು, ಮಂಗಳವಾರ ಬೆಳಿಗ್ಗೆ ಎಂ.ಜಿ.ರಸ್ತೆಯ ಅನಿಲ ಕುಂಬ್ಳೆ ಸರ್ಕಲ್ ಸಮೀಪ ನಡೆದಿದೆ. ಕೂಡಲೇ ಎಚ್ಚೆತ್ತ ಬಸ್ ಚಾಲಕ ಹಾಗೂ ನಿರ್ವಾಹಕ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ಇಡೀ ಬಸ್ ಅನ್ನು ಆವರಿಸಿಕೊಂಡಿತು. ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಎಚ್ಚೆತ್ತ ಚಾಲಕ ಕಾರ್ಯಾಚರಣೆಗೆ ಧಾವಿಸಿ … Continued

ವೀಡಿಯೊ..| ಸ್ಕ್ರ್ಯಾಪ್‌ ಬಸ್ ಅನ್ನು ಹೈಫೈ ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಿದ ಬಿಎಂಟಿಸಿ…!

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಇತ್ತೀಚೆಗೆ ಸ್ಕ್ರ್ಯಾಪ್ ಮಾಡಿದ ಬಸ್ಸನ್ನು ವಿನೂತನವಾಗಿ ರೂಪಾಂತರಗೊಳಿಸಿದ್ದು, ಅದನ್ನು ಹೈಪೈ ಮೊಬೈಲ್‌ ಕ್ಯಾಂಟೀನ್‌ ಆಗಿ ಪರಿವರ್ತಿಸುವ ಮೂಲಕ ಗಮನ ಸೆಳೆದಿದೆ. ಸ್ಕ್ರ್ಯಾಪ್‌ ವಾಹನವನ್ನು ತನ್ನ ಕೆಲವು ಉದ್ಯೋಗಿಗಳಿಗಾಗಿ ಅದು ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಿದೆ. ಈ ಉಪಕ್ರಮವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಗಮನ ಸೆಳೆಯಲು ಕಾರಣವಾಯಿತು. … Continued

ವೀಡಿಯೊ…| ಬೆಂಗಳೂರು ಬಿಎಂಟಿಸಿ ಬಸ್ಸಿನಲ್ಲಿ ಕಿಟಕಿ ತೆರೆದ ಬಗ್ಗೆ ನಡೆದ ವಾಗ್ವಾದದ ನಂತರ ಚಪ್ಪಲಿಯಿಂದ ಹೊಡೆದಾಡಿಕೊಂಡ ಇಬ್ಬರು ಮಹಿಳೆಯರು…!

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ಸಿನಲ್ಲಿ ಇತ್ತೀಚೆಗೆ ಆಘಾತಕಾರಿ ಘಟನೆ ನಡೆದಿರುವುದು ವರದಿಯಾಗಿದೆ. ವೈರಲ್ ದೃಶ್ಯಗಳಲ್ಲಿ, ಇಬ್ಬರು ಮಹಿಳಾ ಪ್ರಯಾಣಿಕರು ತೀವ್ರ ಘರ್ಷಣೆಯಲ್ಲಿ ತೊಡಗಿರುವುದು ಕಂಡುಬರುತ್ತದೆ, ಅದು ನಂತರ ದೈಹಿಕ ವಾಗ್ವಾದಕ್ಕೆ ತಿರುಗುತ್ತದೆ. ನಂತರ ಮಹಿಳೆಯರಿಬ್ಬರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಳ್ಳುವುದು ಕಂಡುಬರುತ್ತದೆ. ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ತೆರಳುತ್ತಿದ್ದ ಬಸ್‌ ನಲ್ಲಿ ಈ ಘಟನೆ … Continued

ನಾಳೆ ಕರ್ನಾಟಕ ಬಂದ್ : ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ; ನೌಕರರಿಗೆ ಕಡ್ಡಾಯ ಹಾಜರಾತಿಗೆ ಸೂಚನೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಶುಕ್ರವಾರ (ಸೆಪ್ಟೆಂಬರ್‌ 29) ನಡೆಯುವ ಅಖಂಡ ಕರ್ನಾಟಕ ಬಂದ್ ಗೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಕರ್ನಾಟಕ ಬಂದ್‌ ಇದ್ದರೂ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳು ಎಂದಿನಂತೆ ಸಂಚರಿಸಲಿವೆ. ಸಾರಿಗೆ ನಿಗಮಗಳು ತಮ್ಮ ನೌಕರರಿಗೆ ಮೌಖಿಕ ಸೂಚನೆ ನೀಡಿದ್ದು, ನೌಕರರು ಶುಕ್ರವಾರ (ಸೆಪ್ಟೆಂಬರ್‌ 29) ಎಂದಿನಂತೆ … Continued

ಸಂಜೆ ಬಳಿಕವೂ ವಿದ್ಯಾರ್ಥಿಗಳು ಬಸ್ ಪಾಸ್ ನಲ್ಲಿ ಪ್ರಯಾಣಿಸಬಹುದು: ಬಿಎಂಟಿಸಿ

ಬೆಂಗಳೂರು: ವಿದ್ಯಾರ್ಥಿಗಳ ಬಸ್ ಪಾಸ್ ಕುರಿತು ಸಂಜೆ 7:30 ರ ನಂತರ ಮಾನ್ಯವಿಲ್ಲವೆಂದು ಬಸ್ ನಿರ್ವಾಹಕರು ವಿದ್ಯಾರ್ಥಿಗಳಿಗೆ ಟಿಕೆಟ್ ನೀಡಬಾರದು ಎಂದು ಬಿಎಂಟಿಸಿ ಸೂಚನೆ ನೀಡಿದೆ. ಈ ಮೊದಲು ವಿದ್ಯಾರ್ಥಿಗಳು ಸಂಜೆ 7:30ರ ಬಳಿಕ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವ ಹಾಗಿಲ್ಲ ಎಂಬ ಸೂಚನೆ ಸಾಕಷ್ಟು ತೊಂದರೆಯಾಗುತ್ತಿತ್ತು. ಹೀಗಾಗಿ ವಿದ್ಯಾರ್ಥಿಗಳು ಬಿಎಂಟಿಸಿ ಕಚೇರಿಗೆ ದೂರು ಸಲ್ಲಿಸಿದ್ದರು. ವಿದ್ಯಾರ್ಥಿಗಳ … Continued

ಗುತ್ತಿಗೆ ಆಧಾರದಲ್ಲಿ 1500 ಬಸ್‌ಗಳಿಗೆ ಬಿಎಂಟಿಸಿ ಟೆಂಡರ್ ಆಹ್ವಾನ, ಖಾಸಗೀಕರಣದ ಆರಂಭವೇ..?

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಗುತ್ತಿಗೆ ಆಧಾರದಲ್ಲಿ 1500 ಡೀಸೆಲ್ ಬಸ್ ಪಡೆಯಲು ಟೆಂಡರ್ ಆಹ್ವಾನಿಸಿದೆ. ಕೇಂದ್ರದ ಫೇಮ್ ಯೋಜನೆ ಎರಡನೇ ಹಂತದ ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಲ್ಲಿ 300 ವಿದ್ಯುತ್ ಬಸ್ ಪಡೆಯುವ ಸಂಬಂಧ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರ ಬೆನ್ನಲ್ಲೇ ಗುತ್ತಿಗೆ ಮಾದರಿಯಲ್ಲಿ 1500 ಡೀಸೆಲ್ ಪಡೆಯುವ ಸಂಬಂಧ ಬಿಎಂಟಿಸಿ … Continued

ಬಿಎಂಟಿಸಿ ಮಾಸಿಕ ಪಾಸ್‌ ವಿತರಣೆ

ಬೆಂಗಳೂರು: ಬಿಎಂಟಿಸಿ ರಿಯಾಯ್ತಿ ದರದಲ್ಲಿ ಮಾಸಿಕ ಪಾಸ್‍ಗಳ ವಿತರಣೆ ಆರಂಭಿಸಿದೆ. ಮಾರ್ಚ್ ತಿಂಗಳ ಪಾಸುಗಳನ್ನು 65 ಸ್ಥಳಗಳಲ್ಲಿ ವಿತರಿಸಲು ಕ್ರಮ ಕೈಗೊಳ್ಳಾಗಿದೆ ಎಂದು ತಿಳಿಸಲಾಗಿದೆ. ನಗರದ ಎಲ್ಲಾ 200 ಬೆಂಗಳೂರು ಒನ್ ಕೇಂದ್ರಗಳಲ್ಲಿ 17 ಸ್ಥಳಗಳಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಹಾಗೂ ಪಾಸ್ ಕೌಂಟರ್ ಲಭ್ಯವಿಲ್ಲದ 12 ಬಸ್ ನಿಲ್ದಾಣಗಳಲ್ಲಿ ಸಾರಥಿ ವಾಹನಗಳ ಮೂಲಕ ಮೂಲಕ … Continued