ಜೈಲಿನಲ್ಲಿರುವ ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸರಿಗೆ ಜಾಮೀನು ನಿರಾಕರಿಸಿದ ಬಾಂಗ್ಲಾದೇಶ ಕೋರ್ಟ್‌

ಢಾಕಾ: ಕಳೆದ ವರ್ಷದ ನವೆಂಬರ್ 25ರಂದು ಬಾಂಗ್ಲಾದೇಶದಲ್ಲಿದ್ದ ಬಂಧಿಸಲ್ಪಟ್ಟಿದ್ದ ಮಾಜಿ ಇಸ್ಕಾನ್ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಅವರಿಗೆ ಬಾಂಗ್ಲಾದೇಶದ ನ್ಯಾಯಾಲಯವು ಗುರುವಾರ ಜಾಮೀನನ್ನು ತಿರಸ್ಕರಿಸಿದೆ. ಢಾಕಾದಿಂದ ಚಟ್ಟೋಗ್ರಾಮ್‌ಗೆ ತೆರಳಿದ್ದ ಸುಪ್ರೀಂ ಕೋರ್ಟ್‌ನ 11 ವಕೀಲರ ತಂಡವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶ ಎಂ.ಡಿ. ಸೈಫುಲ್ ಇಸ್ಲಾಂ ಸುಮಾರು 30 … Continued

ಬಾಂಗ್ಲಾದೇಶ | ಬಂಧಿತ ಹಿಂದೂ ಸ್ವಾಮೀಜಿಯ ವಕೀಲರ ಮೇಲೆ ದಾಳಿ ; ಐಸಿಯುನಲ್ಲಿ ಚಿಕಿತ್ಸೆ : ಇಸ್ಕಾನ್

ನವದೆಹಲಿ: ಬಂಧಿತ ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಬ್ರಹ್ಮಚಾರಿಯ ಪರ ವಾದಿಸುತ್ತಿರುವ ಬಾಂಗ್ಲಾದೇಶದ ವಕೀಲರ ಮೇಲೆ “ಇಸ್ಲಾಮಿಸ್ಟ್‌ಗಳು ಅವರ ಮನೆಯಲ್ಲಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ” ಮತ್ತು ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ಇಸ್ಕಾನ್ ಇಂಡಿಯಾ ಹೇಳಿಕೊಂಡಿದೆ. ದೇಶದ್ರೋಹದ ಆರೋಪದ ಮೇಲೆ ಸನ್ಯಾಸಿಯ ಬಂಧನದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಹಿಂಸಾಚಾರದ … Continued

ಬಾಂಗ್ಲಾದೇಶದ ಚಟ್ಟೋಗ್ರಾಮದಲ್ಲಿ 3 ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿ ಹಾನಿ ಮಾಡಿದ ಗುಂಪು..

ಢಾಕಾ: ಹಿಂದೂ ಧಾರ್ಮಿಕ ನಾಯಕ ಚಿನ್ಮಯ ಕೃಷ್ಣ ದಾಸ್‌ ವಿರುದ್ಧ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಿದಾಗಿನಿಂದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಬಾಂಗ್ಲಾದೇಶದ ಚಟ್ಟೋಗ್ರಾಮದಲ್ಲಿ ಶುಕ್ರವಾರ ಮೂರು ಹಿಂದೂ ದೇವಾಲಯಗಳಿಗೆ ಹಾನಿ ಮಾಡಲಾಗಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ಬಂದರು ನಗರದ ಹರೀಶ್ ಚಂದ್ರ ಮುನ್ಸೆಫ್ ಲೇನ್‌ನಲ್ಲಿ ಮಧ್ಯಾಹ್ನ ಶುಕ್ರವಾರ 2:30 ರ ಸುಮಾರಿಗೆ ದಾಳಿ ನಡೆದಿದ್ದು, … Continued

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಇಸ್ಕಾನ್‌ ಸನ್ಯಾಸಿಯನ್ನು ಢಾಕಾದಲ್ಲಿ ಬಂಧಿಸಿದ ಆಡಳಿತ

ಕೋಲ್ಕತ್ತಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ವ್ಯಾಪಕ ರಾಜಕೀಯ ಹಿಂಸಾಚಾರವನ್ನು ಕಂಡಿರುವ ಬಾಂಗ್ಲಾದೇಶದಲ್ಲಿ ದೇಶದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ದಾಳಿ ನಡೆಯುತ್ತಿದೆ ಎಂಬ ಆರೋಪಗಳ ಮಧ್ಯೆ ಬಾಂಗ್ಲಾದೇಶದ ಹಿಂದೂ ಸಂನ್ಯಾಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ನಾಯಕ ಚಿನ್ಮಯ ಕೃಷ್ಣ ದಾಸ ಬ್ರಹ್ಮಚಾರಿ ಅವರನ್ನು ಢಾಕಾದಲ್ಲಿ ಬಂಧಿಸಲಾಗಿದೆ. ಢಾಕಾದಿಂದ ಉತ್ತರಕ್ಕೆ ಸುಮಾರು 300 … Continued