ಬಿಜೆಪಿಯಲ್ಲಿ ದೆಹಲಿ ಸಿಎಂ ಹುದ್ದೆಗೆ ಯಾರು. ? ಇಲ್ಲಿವೆ ಪ್ರಮುಖ ಹೆಸರುಗಳು…

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ)ವು 27 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೇರಲು ಸಿದ್ಧತೆ ನಡೆಸಿದೆ. ದೆಹಲಿಯ ವಿದಾನಸಭೆಯ ಒಟ್ಟು 70 ಸ್ಥಾನಗಳಲ್ಲಿ ಬಿಜೆಪಿ 48 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ದೆಹಲಿಯಲ್ಲಿ ತನ್ನ ಅಧಿಕಾರದ ʼಬರʼವನ್ನು ನೀಗಿಸಿದೆ. ಬಿಜೆಪಿಯು ಚುನಾವಣೆ ವೇಳೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. … Continued

ವೀಡಿಯೊ…| ಎರಡು ದಿನದಲ್ಲಿ ದೆಹಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ; ಅರವಿಂದ ಕೇಜ್ರಿವಾಲ್ ಘೋಷಣೆ…!

ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಇಂದು, ಭಾನುವಾರ (ಸೆಪ್ಟೆಂಬರ್ 15) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಶೀಘ್ರ ಚುನಾವಣೆ ನಡೆಸುವಂತೆ ಒತ್ತಾಯಿಸುವುದಾಗಿ ಹೇಳಿದ್ದಾರೆ. ಜನರು ‘ಪ್ರಾಮಾಣಿಕತೆಯ ಪ್ರಮಾಣಪತ್ರ’ ನೀಡುವವರೆಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಬಾರದು ಎಂದು ನಿರ್ಧರಿಸಿರುವುದಾಗಿ ಹೇಳಿದ್ದಾರೆ. … Continued

‘ಸಿಎಂ ಆಕಾಂಕ್ಷಿ’ ನಾಯಕರಿಗೆ ಎಚ್ಚರಿಕೆ ನೀಡಿ : ರಾಹುಲ್ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್‌ ಮುಖಂಡರು

ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ಸಂಬಂಧ 6ಕ್ಕೂ ಹೆಚ್ಚು ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವುದರ ಜೊತೆಗೆ ಎಚ್ಚರಿಕೆ ನೀಡಬೇಕು ಎಂದು ಕೋರಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್​ ಗಾಂಧಿ ಅವರಿಗೆ ರಾಜ್ಯದ ಕೆಲ ಕಾಂಗ್ರೆಸ್​ ನಾಯಕರು ಪತ್ರ ಬರೆದು ಒತ್ತಾಯಿಸಿದ್ದಾರೆ. ಮಾಜಿ ಸಚಿವರಾದ ಬಿ.ಎಲ್.ಶಂಕರ​, ವಿ.ಎಸ್​.ಉಗ್ರಪ್ಪ, ಎಚ್.ಎಂ.ರೇವಣ್ಣ, ಎಲ್.ಹನುಮಂತಯ್ಯ, ಪ್ರಕಾಶ​ ರಾಥೋಡ್, ಸಿ.ಎಸ್‌. … Continued

ರಾಜಸ್ಥಾನದ ಸಿಎಂ ಹುದ್ದೆಗೆ ಮುಂಚೂಣಿಯಲ್ಲಿರುವ ಬಿಜೆಪಿ ನಾಯಕರು ಇವರು

ನವದೆಹಲಿ: ರಾಜಸ್ಥಾನದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು, ಅಶೋಕ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿದೆ. ಆದರೆ ಅಧಿಕಾರಕ್ಕೆ ಬಂದ ಬಿಜೆಪಿಯು ಚುನಾವಣೆಗೆ ಮುಂಚೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ ಮತ್ತು ಬಿಜೆಪಿ ವರಿಷ್ಠರು ಶೀಘ್ರದಲ್ಲೇ ಮುಖ್ಯಮಂತ್ರಿ ಹುದ್ದೆಗೆ ಘೋಷಣೆ ಮಾಡುವ ನಿರೀಕ್ಷೆಯಿದೆ. ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಐವರು ಬಿಜೆಪಿ ನಾಯಕರ ಹೆಸರು ಮುಂಚೂಣಿಯಲ್ಲಿದೆ. … Continued

ಲೋಕಸಭಾ ಚುನಾವಣೆ ಸನಿಹದಲ್ಲಿ ಕಾಂಗ್ರೆಸ್‌ ವರಿಷ್ಠರಿಗೆ ತಲೆನೋವಾದ ಕರ್ನಾಟಕದ ನಾಯಕರ ʼಸಿಎಂ ಕುರ್ಚಿʼ ಜಗಳ

ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಧಾನವಿಲ್ಲ. ನಮ್ಮಲ್ಲಿ ಒಡಕಿಲ್ಲ, ನಾವೆಲ್ಲ ಒಂದೇ ಎಂದು ಎಷ್ಟೇ ಬಾರಿ ಪಕ್ಷದ ಮುಖಂಡರು ಮಾಧ್ಯಮಗಳ ಮುಂದೆ ಹೇಳಿಕೊಂಡರೂ ಒಡಕು ಹಾಗೂ ಅಸಮಾಧಾನ ಪದೇ ಪದೇ ಬಹಿರಂಗವಾಗುತ್ತಲೇ ಇದೆ. ಈಗ ಎರಡು ಬಣಗಳ ನಡುವೆ ಈಗ ಮುಖ್ಯಮಂತ್ರಿ ಕುರ್ಚಿಯ ಬಗ್ಗೆ ಹೇಳಿಕೆಗಳ ಸಮರ ಜೋರಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನೇ ಐದು … Continued

ಪ್ರವಾಹ ಪರಿಸ್ಥಿತಿ, ಬಿಎಸ್‌ವೈ ಪರ ಸ್ವಾಮೀಜಿಗಳ ಪ್ರದರ್ಶನ:ಆದ್ರೂ ಹೈಕಮಾಂಡಿನಿಂದ ನಾಳೆಯೇ ಸಂದೇಶವೂ? ಬಿಸಿ ತಣ್ಣಗಾಗುವ ವರೆಗೆ ವಿಳಂಬವೋ..?

ಬೆಂಗಳೂರು: ಹೈಕಮಾಂಡ್‍ನಿಂದ ನಾಳೆ (ಜುಲೈ 25) ಸೂಚನೆ ಬಂದ ನಂತರ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆದರೆ ಅವರ ನಡೆ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಯಡಿಯೂರಪ್ಪ ಪರವಾಗಿ ನಾಳೆಯೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸ್ವಾಮೀಜಿಗಳ ಸಮಾವೇಶ ನಡೆಯಲಿದೆ. ಸುಮಾರು ಒಂದು ಸಾವಿರ ಸ್ವಾಮೀಜಿಗಳು ಸೇರಿಲಿದ್ದಾರೆ ಎಂದು ಹೇಳಲಾಗಿದೆ. ಯಡಿಯೂರಪ್ಪ ಅವರನ್ನು … Continued