ಉತ್ಸಾಹವೂ ಇಲ್ಲ, ನಾಯಕತ್ವವೂ ಇಲ್ಲ: ಕಾಂಗ್ರೆಸ್‌ ಬಗ್ಗೆ ಝಾ ಟೀಕೆ

ಕಾಂಗ್ರೆಸ್ ಮಾಜಿ ನಾಯಕ ಸಂಜಯ್ ಝಾ ಪುದುಚೇರಿ ಸರ್ಕಾರದ ಪತನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ನಾಯಕತ್ವ, ಉತ್ಸಾಹ ಯಾವುದೂ ಇಲ್ಲ ಎಂದು ಟೀಕಿಸಿದ್ದಾರೆ. ಅತ್ಯಂತ ಸಣ್ಣ ಪ್ರದೇಶವಾದ ಪುದುಚೇರಿಯಲ್ಲಿ ಸಹ ಕಾಂಗ್ರೆಸ್ ಸರ್ಕಾರದ ಪತನವು ಅತ್ಯಂತ ಹಳೆಯ ಪಕ್ಷಕ್ಕೆ ಹೇಗೆ ಉತ್ಸಾಹವಿಲ್ಲ ಎಂಬುದನ್ನು ತೋರಿಸುತ್ತದೆ. ಅದಕ್ಕೆ ಹಸಿವೂ ಇಲ್ಲ. ನಾಯಕತ್ವವೂ ಇಲ್ಲ” ಎಂದು ಝಾ … Continued

ಕೇಂದ್ರ-ರಾಜ್ಯದ ಬಿಜೆಪಿ ಸರ್ಕಾರಗಳೇ ಕಾಂಗ್ರೆಸಿಗೆ ಅವಕಾಶ ಮನೆ ಬಾಗಿಲಿಗೆ ತಂದುಕೊಂಡುತ್ತಿವೆ:ಡಿಕೆಶಿ

ಬೆಂಗಳೂರು: ಕಾಂಗ್ರೆಸಿಗರು ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳೇ ನಮ್ಮ ಮನೆ ಬಾಗಿಲಿಗೆ ಅವಕಾಶಗಳನ್ನು ತಂದು ಕೊಡುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಭಾನುವಾರ ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ದೇಶದಲ್ಲಿ ಯಾವ ವರ್ಗವು ಕೂಡ … Continued

ಪುದುಚೆರಿ: ಮತ್ತಿಬ್ಬರು ಶಾಸಕರು ರಾಜೀನಾಮೆ, ಸಂಕಷ್ಟದಲ್ಲಿ ಕಾಂಗ್ರೆಸ್‌ ಸರ್ಕಾರ

ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆಗೆ ಒಂದು ದಿನ ಮೊದಲು, ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟು ಉಲ್ಬಣಗೊಂಡಿದೆ. ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಇನ್ನೆರಡು ಶಾಸಕರು ಭಾನುವಾರ ರಾಜೀನಾಮೆ ನೀಡಿದರು. ಡಿಎಂಕೆ ಶಾಸಕ ವೆಂಕಟೇಶನ್ ಮತ್ತು ಕಾಂಗ್ರೆಸ್ ಶಾಸಕ ಕೆ. ಲಕ್ಷ್ಮೀನಾರಾಯಣನ್ ಅವರ ರಾಜೀನಾಮೆಯೊಂದಿಗೆ, ಆಡಳಿತಾರೂಢ ಮೈತ್ರಿಕೂಟದ ಬಲ ಈಗ 12 ಕ್ಕೆ ಇಳಿಸಲಾಗಿದೆ. 33 ಸದಸ್ಯರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು 14 … Continued

ಫೆ.೨೬ರಂದು ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಶಾಸಕ ಶರತ್‌ ಕಾಂಗ್ರೆಸ್‌ ಸೇರ್ಪಡೆ

ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ ಫೆ.೨೬ರಂದು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿದ್ದಾರೆ. ಕ್ವೀನ್ದ್‌ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ನ ಮುಖಂಡರಾದ ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ಸಮ್ಮುಖದಲ್ಲಿ ಅವರು ಕೈ ಪಾಳೆಯಕ್ಕೆ ಸೇರಲಿದ್ದಾರೆ. ರಾಜ್ಯ ಕಾಂಗ್ರೆಸ್‌ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ಬಳಿಕೆ ಶರತ್‌ ಕಾಂಗ್ರೆಸ್‌ ಸೇರ್ಪಡೆಗೊಳ್ಳಲುಮ ನಿರ್ಧರಿಸಿದ್ದಾರೆ. ೨೦೧೮ರ … Continued

ಪಂಜಾಬ್‌ ಸ್ಥಳಿಯ ಸಂಸ್ಥೆ ಚುನಾವಣೆ: ಕಾಂಗ್ರೆಸ್‌ಗೆ ಭಾರಿ ಗೆಲುವು

ಪಂಜಾಬ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಚುನಾವಣೆ ನಡೆದ ೮ ಪುರಸಭೆಗಳಲ್ಲಿ ೭ರಲ್ಲಿ ಜಯಭೇರಿ ಬಾರಿಸಿದೆ. ಮೊಗಾ, ಹೋಶಿಯಾರ್‌ಪುರ್, ಕಪುರ್ಥಲಾ, ಅಬೋಹರ್, ಪಠಾಣ್‌ಕೋಟ್, ಬಟಾಲಾ, ಮತ್ತು ಬಟಿಂಡಾ ಎಂಬ ಏಳು ನಿಗಮಗಳ ಫಲಿತಾಂಶಗಳನ್ನು ಬುಧವಾರ ಘೋಷಿಸಲಾಗಿದ್ದು, ಕಾಂಗ್ರೆಸ್ ಸ್ಪಷ್ಟವಾಗಿ ಬಹುಮತ ಪಡೆದುಕೊಂಡಿದೆ. ಬಿಜೆಪಿ, ಶಿರೋಮಣಿ ಅಕಾಲಿದಳ ಹಾಗೂ ಆಮ್‌ ಆದ್ಮಿ … Continued

ಅಸ್ಸಾಂ: ಕಾಂಗ್ರೆಸ್‌ ಚುನಾವಣಾ ಬಸ್‌ ‌ಮತ್ತೆ ತಪ್ಪಿಸಿಕೊಳ್ಳುವುದೇ..?

ಅಸ್ಸಾಂನಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದೆ. ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸಿಎಎ ಪ್ರಬಲ ಅಸ್ತ್ರವಾಗಿದ್ದು, ಆಡಳಿತಾರೂಢ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್‌ ಇದ್ನು ಪರಿಣಾಮಕಾರಿ ಅಸತ್ರವಾಗಿ ಬಳಸಲಿದೆ ಎಂದು ಭಾವಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಪಕ್ಷವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಿರಂತರ ಅಭಿಯಾನವನ್ನು ಪ್ರಾರಂಭಿಸುವ ಅವಕಾಶ ಮತ್ತು ಸಮಯ ಕಳೆದುಕೊಂಡಿದೆ ಎಂದು ಹೇಳಬಹುದು. … Continued

ವೈಫಲ್ಯ ಮರೆಮಾಚಲು ಕೇಂದ್ರ ಸರ್ಕಾರ ಸಂಚು: ಕಾಂಗ್ರೆಸ್‌ ಆರೋಪ

ಕೇಂದ್ರ ಸರಕಾರ ವೈಫಲ್ಯಗಳು ಹಾಗೂ ದುಷ್ಕೃತ್ಯಗಳಿಂದ ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು ಭಾವನಾತ್ಮಕ ಹಾಗೂ ಅಪ್ರಸ್ತುತ ವಿಷಯಗಳಲ್ಲಿ ನಿರತರಾಗಿರುವಂತೆ ಮೋದಿ ಸರಕಾರ ಸಂಚು ರೂಪಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಪಕ್ಷದ ವಕ್ತಾರ ಪವನ್ ಖೇರಾ ಮಾತನಾಡಿ, ಸರ್ಕಾರವು ಯಾವಾಗಲೂ ವಿವಾದಗಳನ್ನು ಸೃಷ್ಟಿಸುತ್ತದೆ, ಜನರನ್ನು ಕಾರ್ಯನಿರತವಾಗಿಸಲು ಕೋಪ, ದ್ವೇಷ ಹಾಗೂ ಭಯದಂಥ ಭಾವನೆಗಳನ್ನು ಹುಟ್ಟುಹಾಕಲಾಗುತ್ತಿದೆ. ಜನರು … Continued

ಬಿಎಂಸಿ ಚುನಾವಣೆ: ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧ

ಮುಂಬೈ: ಶಿವಸೇನೆ, ಕಾಂಗ್ರೆಸ್ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ತ್ರಿಪಕ್ಷೀಯ ಮೈತ್ರಿಕೂಟದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಹೊರತಾಗಿಯೂ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಪಕ್ಷ ಎಲ್ಲ ಸ್ಥಾನಗಳಲ್ಲಿ ಏಕಾಂಗಿಯಾಗಿ   ಸ್ಪರ್ಧಿಸಲು ಸಿದ್ಧ ಎಂದು ಹೊಸದಾಗಿ ನೇಮಕಗೊಂಡ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮಂಗಳವಾರ ಹೇಳಿದ್ದಾರೆ. ಬಿಎಂಸಿ ಚುನಾವಣೆಗೆ ಸಂಬಂಧಿಸಿದ … Continued

ಕಾಂಗ್ರೆಸ್‌ ಶಾಸಕರಾರೂ ಬಿಜೆಪಿಗೆ ಸೇರಲ್ಲ: ಸತೀಶ ಜಾರಕಿಹೊಳಿ

ಬೆಳಗಾವಿ: ಕಾಂಗ್ರೆಸ್‌ನ ಯಾವ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಯವರು ಹಿಂದೆ ೧೦ ಜನ ಕಾಂಗ್ರೆಸ್‌ನಿಂದ ಬಿಜೆಪಿಗೆ ಬರುತ್ತಾರೆ ಎಂದು ಹೇಳುತ್ತಿದ್ದರು, ಈಗ ಐದು ಶಾಸಕರು ಬರಲಿದ್ದಾರೆ ಎಂದು ಹೇಳುತ್ತಿದ್ದಾರೆ. ಯಾವುದೇ ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಯಾರು … Continued

ಪುದುಚೆರಿಯಲ್ಲಿ ಅಲ್ಪ ಮತಕ್ಕೆ ಕುಸಿದ ಕಾಂಗ್ರೆಸ್‌ ಸರಕಾರ

ನವದೆಹಲಿ: ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗ ಇಬ್ಬರು ಕಾಂಗ್ರೆಸ್‌ ಶಾಸಕರು ರಾಜಿನಾಮೆ ನೀಡಿರುವುದರಿಂದ ಪುದುಚೆರಿಯಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಇಬ್ಬರು ಶಾಸಕರ ರಾಜಿನಾಮೆಯೊಂದಿಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ಸಂಖ್ಯೆ ಸಮಬಲವಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪುದುಚೇರಿ ಭೇಟಿಗೂ ಮುನ್ನ ಇಬ್ಬರು ಶಾಸಕರು ರಾಜೀನಾಮೆ ನಿಡಿರುವುದರಿಂದ ಕಾಂಗ್ರೆಸ್‌ಗೆ ಭಾರೀ ಆಘಾತವಾಗಿದೆ. … Continued