ದೇವೇ ಗೌಡ ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು : ಕೊರೊನಾ ಸೋಂಕಿನಿಂದಾಗಿ ನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನಲೆಯಲ್ಲಿ ಸೋಮವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಎರಡು ದಿನಗಳ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ … Continued

ರಮೇಶ ಜಾರಕಿಹೊಳಿಗೆ ಕೊರೊನಾ ಹೀಗಾಗಿ ಪ್ರಚಾರಕ್ಕೆ ಬಂದಿಲ್ಲ ಎಂದ ಬೈರತಿ

ಬೆಳಗಾವಿ :ಮಾಜಿ ಸಚಿವ ರಮೇಶ ಜಾರಕಿಹೊಳಿಯವರು ಕೊರೋನಾ ಸೋಂಕು ತಗುಲಿರುವ ಕಾರಣ ಬೆಳಗಾವಿ ಲೋಕಸಭಾ ಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದು ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹುಷಾರಾದ ನಂತರ ಚುನಾವಣಾ ಪ್ರಚಾರಕ್ಕೆ ಬರುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ರಮೇಶ ಜಾರಕಿಹೊಳಿ‌ ಬೆಂಗಳೂರಿನಲ್ಲಿಯೇ ಇದ್ದಾರೆ, ಕೇವಲ ಚುನಾವಣಾ ಪ್ರಚಾರ ಕುರಿತು … Continued

ಬಾಲಿವುಡ್‌ ನಟ ಗೋವಿಂದಾಗೆ ಕೊರೊನಾ ಸೋಂಕು

ಮುಂಬೈ: ಖ್ಯಾತ ಬಾಲಿವಿಡ್‌ ನಟ ಗೋವಿಂದ ಅವರು ಕೊರೊನಾಸೋಂಕಿಗೆ ಒಳಗಾಗಿದ್ದಾರೆ. ಅವರೀಗ ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಅವರ ಪತ್ನಿ ಸುನೀತಾ ಅಹುಜಾ ಭಾನುವಾರ ಹೇಳಿದ್ದಾರೆ. 57 ವರ್ಷದ ನಟನಿಗೆ ಕೊರೊನಾದ “ಸೌಮ್ಯ ಲಕ್ಷಣಗಳಿದ್ದು, ಅಗತ್ಯ ಕೊವಿಡ್‌ ಪ್ರೋಟೋಕಾಲ್ ಅನುಸರಿಸುತ್ತಿದ್ದಾರೆ. ಗೋವಿಂದ ಅವರಿಗೆ ಭಾನುವಾರ ಬೆಳಿಗ್ಗೆ ಕೊರೊನಾ ದೃಢಪಟ್ಟಿದೆ. ಕೊರೊನಾ ಲಕ್ಷಣಗಳು ಸಂಪೂರ್ಣವಾಗಿ ಸೌಮ್ಯವಾಗಿವೆ. ಚಿಂತೆ … Continued

ಬಾಲಿವುಡ್‌ ನಟ ಅಕ್ಷಯಕುಮಾರಗೆ ಕೊರೊನಾ ಸೋಂಕು

ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಭಾನುವಾರ ಬೆಳಿಗ್ಗೆ ಅಕ್ಷಯ್ ಕುಮಾರ್ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಬೆಳಿಗ್ಗೆ, ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದಾನೆ ಎಂದು ಎಲ್ಲರಿಗೂ ತಿಳಿಸಲು ನಾನು ಬಯಸುತ್ತೇನೆ. ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ, ನಾನು ತಕ್ಷಣ ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ. ನಾನು ಮನೆಯ ಸಂಪರ್ಕತಡೆಗೆ ಒಳಗಾಗಿದ್ದೇನೆ ಮತ್ತು ಅಗತ್ಯವಾದ ವೈದ್ಯಕೀಯ ಆರೈಕೆ … Continued

ಮಹಾರಾಷ್ಟ್ರದಲ್ಲಿ 1ರಿಂದ 8ನೇ ತರಗತಿ ಎಲ್ಲ ವಿದ್ಯಾರ್ಥಿಗಳೂ ಪರೀಕ್ಷೆಯಿಲ್ಲದೆ ಪಾಸ್‌..

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಸಾರ್ವಕಾಲಿಕ ಹೆಚ್ಚಳ ಕಂಡ ಹಿನ್ನೆಲೆಯಲ್ಲಿ 1ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಪಾಸ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸೆಕಂಡರಿ ಮತ್ತು ಪ್ರೌಢ ಶಿಕ್ಷಣ ಮಂಡಳಿ ಈ ನಿರ್ಧಾರ ಕೈಗೊಂಡಿದೆ.ಮುಂಬೈ ಸೇರಿದಂತೆ ಮಹಾರಾಷ್ಟ್ರ ರಾಜ್ಯದಲ್ಲಿ ಕೊವಿಡ್‌ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿವೆ. … Continued

ಐಪಿಲ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯುವ ವಾಂಖೆಡೆ ಸ್ಟೇಡಿಯಂನ ಎಂಟು ಮಂದಿ ಗ್ರೌಂಡ್ಸ್‌ಮನ್‌ಗಳಿಗೆ ಕೊರೊನಾ

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ತಯಾರಿ ಹಿನ್ನಡೆ ಅನುಭವಿಸಿದೆ. ಕ್ರೀಡಾಂಗಣದಲ್ಲಿ 19 ಗ್ರೌಂಡ್ಸ್ಮನ್‌ಗಳಲ್ಲಿ ಎಂಟು ಮಂದಿಗೆ ಶುಕ್ರವಾರ ಕೊರೊನಾ ಸೋಂಕು ದೃಢಪಟ್ಟಿದೆ. ಐಪಿಎಲ್ ಏಪ್ರಿಲ್ 9ರಂದು ಚೆನ್ನೈನಲ್ಲಿ ಕಿಕ್-ಆಫ್ ಆಗಲು ಸಜ್ಜಾಗಿದ್ದು, ಮುಂಬೈನಲ್ಲಿ ಪಂದ್ಯಗಳು ಏಪ್ರಿಲ್ 10 ಮತ್ತು ಏಪ್ರಿಲ್ 25 ರ ನಡುವೆ ನಡೆಯಲಿದೆ. ಮೊದಲ ಪಂದ್ಯ … Continued

ಕೊರೊನಾ ಪ್ರಕರಣ ಏರುತ್ತಲೇ ಇದ್ದರೆ ಲಾಕ್‌ಡೌನ್‌ ವಿಧಿಸದೆ ಬೇರೆ ಮಾರ್ಗವಿಲ್ಲ:ಉದ್ಧವ್ ಠಾಕ್ರೆ

ಮುಂಬೈ; ಕೊರೊನಾ ಪ್ರಕರಣಗಳು ಹೀಗೆ ಏರುಗತಿಯಲ್ಲೇ ಸಾಗುತ್ತಿದ್ದರೆ ಲಾಕ್‌ಡೌನ್ ವಿಧಿಸದೇ ಬೇರೆ ದಾರಿಯೇ ಇಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಶುಕ್ರವಾರ ಮಹಾರಾಷ್ಟ್ರದಲ್ಲಿ 47,827 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 202 ಮಂದಿ ಮೃತಪಟ್ಟ ಬೆನ್ನಲ್ಲೇ ಮುಖ್ಯಮಂತ್ರಿ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಲಾಕ್‌ಡೌನ್ ಹೇರುವುದಿಲ್ಲ. ಆದರೆ ಪರಿಸ್ಥಿತಿ ಹೀಗೇ ಕೆಟ್ಟದಾಗಿ … Continued

ರಾಬರ್ಟ್‌ ವಾದ್ರಾಗೆ ಕೊರೊನಾ ಸೋಂಕು.. ಪ್ರಿಯಾಂಕಾ ಗಾಂಧಿ ಹೋಮ್‌ಕ್ವಾರಂಟೈನ್‌

ನವ ದೆಹಲಿ: ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್​ ವಾದ್ರಾಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಪ್ರಿಯಾಂಕಾ ಗಾಂಧಿ ಕೂಡ ಹೋಮ್​ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ತಮಗೆ ಕೊರೋನಾ ಸೋಂಕು ದೃಢಪಟ್ಟಿದ್ದರ ಕುರಿತು ರಾಬರ್ಟ್​ ವಾದ್ರಾ ಫೇಸ್​ಬುಕ್​ ಮೂಲಕ ಅಧಿಕೃತ ಪಡಿಸಿದ್ದರು. ಪರೀಕ್ಷೆ ವೇಳೆ ಕೋವಿಡ್​ ದೃಢಪಟ್ಟಿರುವುದಾಗಿ ತಿಳಿಸಿದ್ದರು. ರಾಬರ್ಟ್​ ವಾದ್ರಾಗೆ … Continued

ಗುಜರಾತಿನಲ್ಲಿ ನವಜಾತ ಅವಳಿ ಶಿಶುಗಳಿಗೆ ಕೊರೊನಾ ಸೋಂಕು..!

ಅಹಮದಾಬಾದ್: ಗುಜರಾತಿನ ವಡೋದರಾದಲ್ಲಿ ನವಜಾತ ಅವಳಿ ಶಿಶುಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ…! ಶಿಶುಗಳು ಜನಿಸಿದ ಬಳಿಕ ಕೆಲವೇ ದಿನಗಳಲ್ಲಿ ಅತಿಸಾರ ಹಾಗೂ ಡೀಹೈಡ್ರೇಷನ್‌ ತೊಂದರೆಯಾಗಿತ್ತು. ಹಾಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಪರೀಕ್ಷೆ ಬಳಿಕ ಶಿಶುಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ತಿಳಿಸಲಾಗಿದೆ. ಈಗ ಆರೋಗ್ಯ ಸ್ಥಿರವಾಗಿದೆ. ಇನ್ನೂ ಆಸ್ಪ್ತೆರಯಲ್ಲಿಯೇ ಇದ್ದಾರೆ ಎಂದು ಎಸ್‌ಎಸ್‌ಜಿ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ … Continued

ಕೊರೊನಾ ಹೆಚ್ಚಳ : ಬೆಂಗಳೂರಲ್ಲಿ 6 ರಿಂದ 9ನೇ‌ ತರಗತಿ ಸ್ಥಗಿತಗೊಳಿಸಿ ಆದೇಶ

ಬೆಂಗಳೂರು ನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಪರಿಗಣಿಸಿ ಪ್ರಸ್ತುತ ನಡೆಯುತ್ತಿರುವ 6-9ನೇ‌ ಭೌತಿಕ ತರಗತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ  ಎಂದು ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ. ಮುಂದಿನ‌ ಆದೇಶದ ವರೆಗೆ ಭೌತಿಕ ತರಗತಿಗಳನ್ನು ನಿಲ್ಲಿಸಲಾಗುತ್ತದೆ ಎಂದು ತಿಳಿಸಿರುವ ಸಚಿವರು, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ, ಈ ವಯೋಮಾನದ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ‌ … Continued