ಮಣಿಪಾಲ ಎಂಐಟಿಯಲ್ಲಿ  10 ದಿನದಲ್ಲಿ 770 ವಿದ್ಯಾರ್ಥಿಗಳಿಗೆ ಕೊರೊನಾ  

ಉಡುಪಿ: ಮಣಿಪಾಲದ ಎಂಐಟಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಸೋಂಕಿನಿಂದಾಗಿ ಉಡುಪಿ ಜಿಲ್ಲೆಯಲ್ಲಿ ಏಕದಿನದ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಶುಕ್ರವಾರ 210ಕ್ಕೆ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ ಎಂಐಟಿ 184 ವಿದ್ಯಾರ್ಥಿಗಳಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. 10-12 ದಿನಗಳಲ್ಲಿ ಸುಮಾರು 770 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಎರಡುವಾರದ ಹಿಂದೆ ಎಂಐಟಿಯಲ್ಲಿ ಆಫ್’ಲೈನ್ ಎಂಜಿನಿಯರಿಂಗ್ ತರಗತಿಗಳನ್ನು ಆರಂಭವಾಗಿದ್ದವು. … Continued

ಶುಕ್ರವಾರ ಮಣಿಪಾಲ ಎಂಐಟಿಯ 184 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಉಡುಪಿ: ಕೋವಿಡ್ ಎರಡನೇ ಅಲೆಯ ಭೀತಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 210 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, . ಇವರಲ್ಲಿ 184 ಸೋಂಕಿತರು ಮಣಿಪಾಲ ಎಂಐಟಿ ಕ್ಯಾಂಪಸ್ ಒಳಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಸೇರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ. ಶುಕ್ರವಾರ ಜಿಲ್ಲೆಯಲ್ಲಿ ಒಟ್ಟು 210 ಜನರಿಗೆ ಕೊರೊನಾ ಸೋಂಕು … Continued

ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಳ: ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ ಸಂಪರ್ಕ ರಸ್ತೆಗಳು ಬಂದ್‌

ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೊನಾಪ್ರಕರಣಗಳ ದಾಖಲೆ ಮಟ್ಟದಲ್ಲಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯದ ರಸ್ತೆಗಳಿಗೆ ಮುಳ್ಳು ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಚಿಕ್ಕೋಡಿ, ಅಥಣಿ ಹಾಗೂ ಕಾಗವಾಡ ತಾಲೂಕಿನ ಮಹಾರಾಷ್ಟ್ರ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ – ದಾನವಾಡ, ಯಕ್ಸಂಬಾ – ದತ್ತವಾಡ, ಮಲಿಕವಾಡ – ದತ್ತವಾಡ … Continued

ಮಹಾರಾಷ್ಟ್ರದಲ್ಲಿ ಮಾ.೨೮ರಿಂದ ರಾತ್ರಿ ಕರ್ಫ್ಯೂ

ಮುಂಬೈ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 28 ರಿಂದ ಇಡೀ ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರದಿಂದ ರಾತ್ರಿ ಕರ್ಫ್ಯೂ ಆದೇಶಿಸಿದ್ದಾರೆ. ಜನರು ಕೋವಿಡ್ -19 ಸುರಕ್ಷತಾ ಪ್ರೋಟೋಕಾಲ್ ಅನ್ನು ಗಮನಿಸದಿದ್ದರೆ ಕಠಿಣ ನಿರ್ಬಂಧಗಳ ಬಗ್ಗೆ ಠಾಕ್ರೆ ಎಚ್ಚರಿಸಿದ್ದಾರೆ. ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು … Continued

ಬೆಂಗಳೂರಲ್ಲಿ ೧೪ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು..!

ಬೆಂಗಳೂರು: ಬೆಂಗಳೂರು ನಗರದ ಶಾಲಾ ಮಕ್ಕಳಲ್ಲಿ ೧೪ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬಿಬಿಎಂಪಿ ನಾಲ್ಕು ಶಾಲೆಗಳ ೧೪ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದು ಆಡಳಿತಕ್ಕೆ ತಲೆನೋವು ತಂದಿದೆ. ಹತ್ತು ವರ್ಷದೊಳಗಿನ ಮಕ್ಕಳಿಗೆ ಸೋಂಕು ಹರಡುತ್ತಿದೆ ಎಂಬ ತಜ್ಞರ ಎಚ್ಚರಿಕೆ ಹಿನ್ನಲೆಯಲ್ಲಿ ಬಿಬಿಎಂಪಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೊರೊನಾ ತಪಾಸಣೆ ನಡೆಸಲಾಗಿತ್ತು. ಜೋಗುಪಾಳ್ಯ ವಾರ್ಡ್‍ನಲ್ಲಿರುವ ಬಿಬಿಎಂಪಿಯ ಒಂದೇ … Continued

ಬಾಲಿವುಡ್‌ ನಟ ಅಮೀರ್‌ ಖಾನಗೆ ಕೊರೊನಾ ಸೋಂಕು

ಮುಂಬೈ: ಖ್ಯಾತ ಬಾಲಿವುಡ್‌ ನಟ ಅಮೀರ್ ಖಾನಗೆ  ಕೊರೊನಾ ಸೋಂಕು ದೃಢಪಟ್ಟಿದೆ. ಕ ರಣಬೀರ್ ಕಪೂರ್ ಮತ್ತು ಕಾರ್ತಿಕ್ ಆರ್ಯನ್ ನಂತರ ಅಮೀರ್ ಖಾನ್ ಕೊರೊನಅ ಸೋಂಕಿಗೆ ಒಳಗಾಗಿದ್ದು, ನಟ ಹೋಮ್‌ ಕ್ಯಾರೆಂಟೈನ್‌ನಲ್ಲಿದ್ದಾರೆ. ನಟ ಅಮೀರ್ ಖಾನ್ ಪರೀಕ್ಷೆ ಮಾಡಿಸಿದಾಗ ಕೊರೊನಾ ಪಾಸಿಟಿವ್‌ ಬಂದಿದೆ. ಅಮೀರ್ ವಕ್ತಾರರು, ಅಮೀರ್ ಖಾನ್ ಅವರಿಗೆ ಕೊರೊನಅ ಸೋಖು ದೃಢಪಟ್ಟಿದೆ. … Continued

ಕೊರೊನಾ ಕ್ರಮ: ನಾಳೆಯಿಂದ ತೆಲಂಗಾಣ ಶಾಲೆಗಳು ಬಂದ್‌

ಹೈದರಾಬಾದ್‌: ಕ್ಯಾಂಪಸ್‌ಗಳಲ್ಲಿ ಹೆಚ್ಚುತ್ತಿರುವ ಕೊವಿಡ್‌-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಮಾರ್ಚ್ 24ರಿಂದ ರಾಜ್ಯದಾದ್ಯಂತ ವೈದ್ಯಕೀಯ ಕಾಲೇಜುಗಳನ್ನು ಹೊರತುಪಡಿಸಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಶಿಕ್ಷಣ ಸಚಿವ ಸಬಿತಾ ಇಂದ್ರ ರೆಡ್ಡಿ ಮಂಗಳವಾರ ವಿಧಾನಸಭೆಗೆ ತಿಳಿಸಿದರು. ಮಾ.ಮಾರ್ಚ್ 24ರಿಂದ ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸರ್ಕಾರ … Continued

ಉತ್ತರಾಖಂಡ್‌ ಸಿಎಂಗೆ ಕೊರೊನಾ ಸೋಂಕು‌

ಡೆಹ್ರಾಡೂನ್: ಉತ್ತರಾಖಂಡ್ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ವೈದ್ಯರ ಸಲಹೆಯ ಮೇರೆಗೆ ಪ್ರತ್ಯೇಕವಾಗಿದ್ದಾರೆ. ಟ್ವೀಟ್‌ ಮೂಲಕ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ರಾವತ್, ‘ ನನ್ನು ಪರೀಕ್ಷಾ ವರದಿ ಪಾಸಿಟಿವ್‌ ಬಂದಿದೆ. ನಾನು ಚೆನ್ನಾಗಿದ್ದೇನೆ ಮತ್ತು ನನಗೆ ಯಾವುದೇ ಸಮಸ್ಯೆ ಇಲ್ಲ. ವೈದ್ಯರ ಸಲಹೆಯ ಮೇರೆಗೆ ಪ್ರತ್ಯೇಕವಾಗಿದ್ದೇನೆ. ಕಳೆದ ಕೆಲವು … Continued

ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಕೊರೊನಾ ಸೋಂಕು ದೃಢ

ನವ ದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರನ್ನು ಮಾರ್ಚ್ 20 ರಂದು ಏಮ್ಸ್ ಕೋವಿಡ್ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಈಗ ಸ್ಥಿರವಾಗಿದೆ. ಕೆಲವು ದಿನಗಳ ಹಿಂದೆ ಓಂ ಬಿರ್ಲಾ ಅವರು ಸಂಸತ್ ಭವನದಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಹೆಚ್ಎಸ್) ಆರೋಗ್ಯ ಶಿಬಿರ ಉದ್ಘಾಟಿಸಿದ್ದರು. ಕಳೆದ 24 … Continued

ಕೊರೊನಾ ಹೆಚ್ಚಳ: ಶಾಲಾ-ಕಾಲೇಜುಗಳ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅಬ್ಬರ ಹೆಚ್ಚಳವಾಗುತ್ತಿದೆ. ಹೀಗಾಗಿ ಶಾಲಾ-ಕಾಲೇಜುಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ನಾವು ಮಕ್ಕಳ ಆರೋಗ್ಯದ … Continued