ಕರ್ನಾಟಕದಲ್ಲಿ ೯೦೦ ದಾಟಿದ ದಿನವೊಂದರ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ನಿಧಾನವಾಗಿ ಕೊರೊನಾಪ್ರಕರಣ ಹೆಚ್ಚಳವಾಗುತ್ತಿದ್ದು, ಕಳೆದ ೨೪ ತಾಸಿನಲ್ಲಿ ದಿನ ನಿತ್ಯದ ಸೋಂಕು ೯೦೦ ಅನ್ನು ದಾಟಿದೆ. ರಾಜ್ಯದಲ್ಲಿ ಕಳೆದ ೨೪ ತಾಸಿನಲ್ಲಿ ೯೨೧ ಜನರಿಗೆ ಕೊರೊನಾ ಸೋಂಕು ತಗುಲಿದೆ. ಓರ್ವ ಮೃತಪಟ್ಟಿದ್ದಾರೆ. ಇದೇ ವೇಳೆ ೯೯೨ ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ೧೨೩ ಜನರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗಿರುತ್ತಿರುವುದರಿಂದ ರಾಜ್ಯ … Continued

೨೫ ಸಾವಿರದ ಸಮೀಪ ತಲುಪಿದ ದೇಶದ ದಿನವೊಂದರ ಕೊರೋನಾ ಪ್ರಕರಣಗಳ ಸಂಖ್ಯೆ ..!

ನವದೆಹಲಿ: ಕಳೆದ 24 ತಾಸಿನಲ್ಲಿ ದೇಶದಲ್ಲಿ 24,882 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದು ಈ ವರ್ಷದಲ್ಲಿ ದಿನವೊಂದಕ್ಕೆ ದಾಖಲಾಗಿರುವ ಅತೀ ಹೆಚ್ಚು ಸಂಖ್ಯೆಯ ಪ್ರಕರಣಗಳಾಗಿವೆ. ಇದರಲ್ಲಿ ಮಾಹಾರಷ್ಟ್ರದ ಪ್ರಕರಣಗಳೇ ಅಧಿಕ. ಕಳೆದ ಒಂದು ದಿನದಲ್ಲಿ 140 ಸೋಂಕಿತರುಮೃತಪಟ್ಟಿದ್ದಾರೆ. ಈವರೆಗೆ ವರದಿಯಾದ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 1,13,33,728 … Continued

ಕೊರೊನಾ ಹೆಚ್ಚಳ ಆತಂಕ: ರಾತ್ರಿ ಪಾರ್ಟಿಗಳಿಗೆ ರಾಜ್ಯ ಸರ್ಕಾರ ನಿಷೇಧ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ರಾತ್ರಿ ಪಾರ್ಟಿಗಳಿಗೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಗುರುವಾರದಿಂದ (ಮಾ.೧೧) ರಾಜ್ಯಾದ್ಯಂತ, ಪ್ರಮುಖವಾಗಿ ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತ ರಾತ್ರಿ ಹೊತ್ತು ಪಾರ್ಟಿಗಳನ್ನು ನಡೆಸುವುದರ ಮೇಲೆ ನಿಷೇಧ ಹೇರಿದ್ದು, ಸ್ಟಾರ್ ಹೋಟೆಲ್, ರೆಸ್ಟೊರೆಂಟ್‍ಗಳಿಗೆ ಸೂಚಿಸಿರುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. … Continued

ಬಾಲಿವುಡ್‌ ನಟ ರಣಬೀರ್ ಕಪೂರ್‌ಗೆ ಕೊರೊನಾ

ನವ ದೆಹಲಿ:ಬಾಲಿವುಡ್‌ನ ಖ್ಯಾತ ನಟ ರಣಬೀರ್ ಕಪೂರ್ ಅವರಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಕುರಿತಂತೆ ನಟ ರಣಬೀರ್ ಕಪೂರ್ ತಾಯಿ ನೀತು ಕಪೂರ್ ಮಂಗಳವಾರ ಇನ್ ಸ್ಟಾಗ್ರಾಂ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಮಗ ರಣಬೀರ್ ಕಪೂರ್‌ ಅವರಿಗೂ ಕೊರೋನಾ ಪಾಸಿಟಿವ್ ಎಂಬುದು ಈಗ ದೃಢಪಟ್ಟಿದೆ. ಮನೆಯಲ್ಲೇ ಕ್ವಾರಂಟೈನ್ ಆಗಿರುವ ಅವರು, ವೈದ್ಯರ ಸಲಹೆಯ … Continued

ಕರ್ನಾಟಕ: ೬೨೨ ಕೊರೊನಾ ಸೋಂಕು, ೩ ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೋನಾಕಳೆದ ೨೪ ತಾಸಿನಲ್ಲಿ 622 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,55,015ಕ್ಕೆ ಏರಿಕೆಯಾಗಿದೆ. ಕೊರೋನಾ ಸೋಂಕಿನಿಂದ ಮೂವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,362ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಭಾನುವಾರ 389 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ … Continued

ಬಜೆಟ್‌ ಮಂಡನೆಗೆ ಕ್ಷಣಗಣನೆ:ಆರ್ಥಿಕ ಮುಗ್ಗಟ್ಟಿನಲ್ಲಿ ಬಿಎಸ್‌ವೈ ಲೆಕ್ಕದ ಬಗ್ಗೆ ಕುತೂಹಲ

ಬೆಂಗಳೂರು: ಪ್ರಸಕ್ತ ಸಾಲಿನ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ೮ನೇ ಬಾರಿಗೆ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಕೊರೊನಾ ಸಂಕಷ್ಟ ಗಮನದಲ್ಲಿಟ್ಟುಕೊಂಡು ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಬಜೆಟ್‌ ಮಂಡಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಸೋಮವಾರ (ಮಾ.೮) ವಿಧಾನಸಭೆಯಲ್ಲಿ ೧೨.೦೫ ನಿಮಿಷಕ್ಕೆ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಲಿದ್ದಾರೆ. ಕೊರೊನಾ ಸಮಯದಲ್ಲಿ ನಿರೀಕ್ಷೆಗಳು … Continued

ಮಹಾರಾಷ್ಟ್ರ: ಮೂರು ತಿಂಗಳ ನಂತರ ಮತ್ತೆ 11 ಸಾವಿರ ದಾಟಿದ ಪ್ರತಿದಿನದ ಕೊರೋನಾ ಸೋಂಕಿತರ ಸಂಖ್ಯೆ..!

ಮುಂಬೈ: ಮೂರು ತಿಂಗಳ ಅಂತರದ ನಂತರ ಮಹಾರಾಷ್ಟ್ರದಲ್ಲಿ ಭಾನುವಾರ ಕಳೆದ ೨೪ ತಾಸಿನಲ್ಲಿ ಪ್ರತಿದಿನದ 11,000ಕ್ಕೂ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳನ್ನು ದಾಖಲು ಮಾಡಿದೆ. ರಾಜ್ಯಾದ್ಯಂತ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿದ್ದು, ರಾಜ್ಯವು ಭಾನುವಾರ 11,141 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು ಶನಿವಾರಕ್ಕಿಂತ (10,187) ಸುಮಾರು ಒಂದು ಸಾವಿರದಷ್ಟು ಹೆಚ್ಚಾಗಿದೆ. 38 … Continued

ಮಹಾರಾಷ್ಟ್ರ: ಸತತ ೨ನೇ ದಿನವೂ ೧೦ ಸಾವಿರದ ಮೇಲೆ ಕೊರೊನಾ ಸೋಂಕು

ಮುಂಬೈ: ಸತತ ಎರಡನೇ ದಿನವೂ ಮಹಾರಾಷ್ಟ್ರದಲ್ಲಿ 10,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಶನಿವಾರ (ಮಾರ್ಚ್ 6) ಮಹಾರಾಷ್ಟ್ರದಲ್ಲಿ 10,187 ಪ್ರಕರಣಗಳು ದಾಖಲಾಗಿದ್ದರೆ, 10,216 ಪ್ರಕರಣಗಳು ವರದಿಯಾಗಿತ್ತು. ಶನಿವಾರ 47 ಕೊವಿಡ್‌ ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 52,440 ಕ್ಕೆ ತಲುಪಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ 2.37%.ರಷ್ಟಿದೆ. ದಿನದಲ್ಲಿ 6,080 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. … Continued

ದೇಶದಲ್ಲಿ ಮತ್ತೆ ೧೮ ಸಾವಿರದ ಗಡಿ ದಾಟಿದ ಕೊರೊನಾ..!

ನವದೆಹಲಿ: ದೇಶದಲ್ಲಿ ಬಹುದಿನಗಳ ನಂತರ ಕೊರಿನಾ ಮತ್ತೆ ೧೮ ಸಾವಿರದ ಗಡಿ ದಾಟಿದೆ. ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ ಕೊರೊನಾ ೧೦ ಸಾವಿರದ ಗಡಿ ದಾಟಿದ್ದು,  ಮತ್ತೆ ಎಚ್ಚರಿಕೆಗಂಟೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 18,327 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ ಒ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಒಂದೇ ದಿನ ಮಹಾಮಾರಿ ವೈರಸ್ಸಿಗೆ … Continued

ಕರ್ನಾಟಕದಲ್ಲಿ ೬೫೦ರ ಗಡಿ ದಾಟಿದ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬಹಳ ದಿನಗಳ ನಂತರ 650 ಗಡಿ ದಾಟಿದೆ.ಒಟ್ಟು ೬೭೭ ಜನರಿಗೆ ಕೊರೊನಾ ಸೋಂಕು ತಗಲಿದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಐನೂರರ ಹತ್ತಿರ ಬಂದಿದೆ. ಕಳೆದ ಕೆಲ ತಿಂಗಳಿಂದ ಇಳಿಕೆಯಾಗಿದ್ದ ಸೋಂಕು ಪ್ರಕರಣಗಳು ಐದಾರು ದಿನಗಳಿಂದ ಏರಿಕೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ರಾಜ್ಯದಲ್ಲಿ ಕಳೆದ 24 … Continued