ಶಿರಸಿ: ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರರಿಗೆ ‘ಲಕ್ಷ್ಮೀಧರ ಅಮಾತ್ಯ’ನ ಶಾಸನ ಫಲಕದ ಸ್ಮರಣಿಕೆ ಪ್ರದಾನ

ಶಿರಸಿ : ನಗರದ ಜೀವಜಲ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ ಅವರ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗೌರವಿಸಿ ಆಪ್ತರು ಗೆಳೆಯರೆಲ್ಲ ಸೇರಿ ಭಾನುವಾರ ವಿಶ್ವಾವಸು ಸಂವತ್ಸರದ ಯುಗಾದಿಯ ಸಂದರ್ಭವನ್ನು ಬಳಸಿ ‘ಲಕ್ಷ್ಮೀಧರ ಅಮಾತ್ಯ’ನ ಶಾಸನವನ್ನುದ್ಧೃತಗೊಳಿಸಿದ ಫಲಕವನ್ನು ಪ್ರದಾನ ಮಾಡಿ ಶುಭ ಹಾರೈಸಿದ್ದಾರೆ. ಫಲಕವನ್ನು ಸಿದ್ಧಪಡಿಸಿದ ಅಶೋಕ ಹಾಸ್ಯಗಾರ ಅವರು ಈ ಸಂಬಂಧವಾಗಿ ಮಾತನಾಡಿ, … Continued

ಶಿರಸಿ: ಕಚೇರಿಗೆ ತೆರಳಿ ಬಿಜೆಪಿ ಸಂಸದ ಕಾಗೇರಿ ಅಭಿನಂದಿಸಿದ ಕಾಂಗ್ರೆಸ್ ಶಾಸಕ ಭೀಮಣ್ಣ ನಾಯ್ಕ…!

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಬಿಜೆಪಿಯ ನೂತನ ಸಂಸದ ವರ್ಷದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕಾಂಗ್ರೆಸ್ ಶಾಸಕ ಭೀಮಣ್ಣ ಟಿ ನಾಯ್ಕ ಶುಕ್ರವಾರ ರಾತ್ರಿ ಶಿರಿಸಯಲ್ಲಿ ಅಭಿನಂದಿಸಿದ್ದಾರೆ..! ಸಂಸದರ  ಕಚೇರಿಗೆ ತೆರಳಿದ ಶಾಸಕ ಭೀಮಣ್ಣ ನಾಯ್ಕ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹಾರ ಹಾಕಿ, ಫಲ‌ ನೀಡಿ ಅಭಿನಂದಿಸಿದರು‌. ಈ ವೇಳೆ … Continued

ಶಿರಸಿ: ಪರಿಸರ ಹೋರಾಟಗಾರ ಅನಂತ ಅಶೀಸರಗೆ ನಾಗರಿಕ ಸನ್ಮಾನ, ಅಭಿನಂದನಾ ಗ್ರಂಥ ʼವೃಕ್ಷಮಿತ್ರʼ ಲೋಕಾರ್ಪಣೆ

ಶಿರಸಿ : ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ವೃಕ್ಷಲಕ್ಷ ಆಂದೊಲನ ಸಂಘಟಿಸಿದ್ದ ಪರಿಸರ ಸಂರಕ್ಷಣೆ-ಸುಸ್ಥಿರ ಅಭಿವೃದ್ಧಿ ರಾಜ್ಯಮಟ್ಟದ ಸಮ್ಮೇಳನದಲ್ಲಿ ಪರಿಸರ ಹೋರಾಟಗಾರ ವೃಕ್ಷಲಕ್ಷ ಆಂದೋಲನದ ಪ್ರಮುಖ ಅನಂತ ಹೆಗಡೆ ಅಶೀಸರ ಅವರಿಗೆ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ಅಲ್ಲದೆ, ಅನಂತ ಹೆಗಡೆ ಅಶೀಸರ ಅವರ ಅಭಿನಂದನಾ ಗ್ರಂಥ ʼವೃಕ್ಷಮಿತ್ರʼ ವನ್ನು ಲೋಕಾರ್ಪಣೆ ಮಾಡಲಾಯಿತು. ಇದೇವೇಳೆ … Continued

ಬಾಡ -ಗುಡೆಅಂಗಡಿ ಹವ್ಯಕ ವಲಯದ ವಾರ್ಷಿಕೋತ್ಸವ ; ನರಸಿಂಹ ಭಟ್ಟರಿಗೆ ಸನ್ಮಾನ

ಕುಮಟಾ : ಹವ್ಯಕರ ಭಾಷೆ, ಸಂಪ್ರದಾಯಗಳು ಸೊಗಸು, ಸೊಗಡಿನಿಂದ ಕೂಡಿದೆ, ಹವ್ಯಕರ ಆಚಾರ-ವಿಚಾರಗಳು, ಖಾದ್ಯಗಳು, ತಿಂಡಿ-ತಿನಿಸುಗಳನ್ನು ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ, ಹವ್ಯಕರ ಹಾಡು, ಹವ್ಯಕರ ಗ್ರಾಮೀಣ ಕ್ರೀಡೆಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಹವ್ಯಕರ ಕರ್ತವ್ಯ ಎಂದು ಪ್ರೊ. ಡಿ. ಪಿ. ಹೆಗಡೆ ಹೇಳಿದರು. ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ -ಗುಡೆ ಅಂಗಡಿ ಹವ್ಯಕ … Continued

ಹೊನ್ನಾವರ: ಶಿಷ್ಯರು-ಅಭಿಮಾನಿಗಳಿಂದ ಇಂದು ಹಿಂದೂಸ್ಥಾನೀ ಗಾಯಕ ಡಾ.ಅಶೋಕ ಹುಗ್ಗಣ್ಣವರಿಗೆ ಅಭಿನಂದನೆ, ಪುಸ್ತಕ ಲೋಕಾರ್ಪಣೆ, ನಾದಾರಾಧನೆ

ಹೊನ್ನಾವರ: ಶಿಷ್ಯರು, ಅಭಿಮಾನಿಗಳು ಹಾಗೂ ಸ್ನೇಹಿತರಿಂದ ಖ್ಯಾತ ಹಿಂದುಸ್ಥಾನೀ ಗಾಯಕ ಹಾಗೂ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಎಸ್‌ಡಿಎಂ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಡಾ.ಅಶೋಕ ಹುಗ್ಗಣ್ಣವರ ಅವರಿಗೆ ಬೃಹತ್‌ ಅಭಿನಂದನೆ, ಚಂದ್ರಪ್ರಭಾ ಅಭಿನಂದನಾ ಗ್ರಂಥದ ಲೋಕಾರ್ಪಣೆ ಹಾಗೂ ನಾದಾಭಿನಂದನೆ ಕಾರ್ಯಕ್ರಮ ಹೊನ್ನಾವರದ ಕರ್ಕಿ ಸಮೀಪದ ಹವ್ಯಕ ಸಭಾಭವನದಲ್ಲಿ ಮೇ 1 ರಂದು ಅಪರಾಹ್ನ … Continued

ರಾಷ್ಟ್ರಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿ: ಜೆಎಸ್ಎಸ್‌ ನಿಂದ ಸನ್ಮಾನ

ಧಾರವಾಡ: ಜೆಎಸ್‌ಎಸ್ ಬನಶಂಕರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಕ್ಕೆ ಅತ್ಯತ್ತಮ ಘಟಕ ಮತ್ತು ಸುರೇಶಪ್ಪ ಸಜ್ಜನ ಅವರಿಗೆ ೨೦೧೯-೨೦೨೦ನೇ ಸಾಲಿನ ರಾಷ್ಟ್ರಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಯನ್ನು ೨೪ ಸಪ್ಟೆಂಬರ್ ೨೦೨೧ ರಂದು ದೆಹಲಿಯ ಸುಶ್ಮಾಸ್ವರಾಜ ಭವನದಲ್ಲಿ ನೀಡಿ ಗೌರವಿಸಲಾಯಿತು. ಕಳೆದ ಆರು ವರ್ಷಗಳ ಅವಧಿಯಲ್ಲಿ ೧೦ ರಕ್ತದಾನ ಶಿಬಿರ, ೧೨ ಉಚಿತ … Continued