ಮಧ್ಯಾಹ್ನ ಬಿಸಿಯೂಟ ಯೋಜನೆ ಅಡುಗೆ ತಯಾರಕರು ಕನಿಷ್ಠ ವೇತನ ಕಾಯಿದೆಯಡಿ ಸಂಬಳ ಪಡೆಯಲು ಅರ್ಹರಲ್ಲ: ಹೈಕೋರ್ಟ್‌ ತೀರ್ಪು

ಬೆಂಗಳೂರು: ರಾಜ್ಯ ಸರ್ಕಾರ ನಡೆಸುತ್ತಿರುವ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಮತ್ತು ಅಡುಗೆ ಸಹಾಯಕರು ಕನಿಷ್ಠ ವೇತನ ಕಾಯಿದೆಯಡಿ ವೇತನ ಪಡೆಯಲು ಅರ್ಹರಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆ ತಯಾಕರು ಮತ್ತು ಅಡುಗೆ ಸಹಾಯಕರಿಗೆ ಕನಿಷ್ಠ ವೇತನ ಕಾಯ್ದೆ … Continued

ಪರಿಶಿಷ್ಟ ಜಾತಿಗೆ ಸೇರಿದವರೆಂದು ತಿಳಿದು ಮಹಿಳೆಯ ದೇಹ ಮುಟ್ಟುತ್ತಾನೆಂಬುದು ನಂಬಲಸಾಧ್ಯ ಎಂದ ಕೇರಳ ಕೋರ್ಟ್ : ಸಿವಿಕ್‌ ಚಂದ್ರನ್‌ಗೆ ಜಾಮೀನು

ತಿರುವನಂತಪುರಂ: ಪರಿಶಿಷ್ಟ ಜಾತಿಗೆ ಸೇರಿದವಳು ಎಂದು ತಿಳಿದು ಆಕೆಯ ದೇಹವನ್ನು ಮುಟ್ಟುತ್ತಾನೆ ಎಂಬುದು ನಂಬಲಾಗದ ಸಂಗತಿ ಎಂದು ಕೋಯಿಕ್ಕೋಡ್‌ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಹೇಳಿದೆ. ಲೇಖಕ ಮತ್ತು ಸಾಮಾಜಿಕ ವಿಮರ್ಶಕ ಸಿವಿಕ್ ಚಂದ್ರನ್‌ ಅವರ ಮೇಲೆ 30 ವರ್ಷ ವಯಸ್ಸಿನ ಮಹಿಳೆಯೊಬ್ಬರು ಲೈಂಗಿಕ ಕಿರುಕುಳ ಮೊಕದ್ದಮೆ ದಾಖಲಿಸಿದ್ದರು ನಿರೀಕ್ಷಣಾ ಜಾಮೀನು ನೀಡುವಾಗ ಕೇರಳದ ಕೋಝಿಕ್ಕೋಡ್ ಜಿಲ್ಲಾ … Continued

ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರಲ್ಲದವರಿಗೆ ಮತ ಚಲಾವಣೆಗೆ ಅವಕಾಶ: 25 ಲಕ್ಷ ಹೊಸ ಮತದಾರರ ಸೇರ್ಪಡೆ ಸಾಧ್ಯತೆ, ಎನ್‌ಸಿ, ಪಿಡಿಪಿ ತೀವ್ರ ಆಕ್ಷೇಪ

ಶ್ರೀನಗರ: ಮುಂದಿನ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 25 ಲಕ್ಷ ಹೊಸ ಮತದಾರರು ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಸ್ಥಳೀಯರಲ್ಲದವರು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಈ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ, ಇದು ಚುನಾವಣೆಯ ಮೇಲೆ ಪ್ರಭಾವ ಬೀರುವ “ಅಪಾಯಕಾರಿ ಪ್ರಯತ್ನ” ಎಂದು ಅವರು … Continued

ಭಾರತದ ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಅನಾವರಣಗೊಳಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಮುಂಬೈ: ಅಶೋಕ್ ಲೇಲ್ಯಾಂಡ್ ಅಂಗಸಂಸ್ಥೆ ಸ್ವಿಚ್ ಮೊಬಿಲಿಟಿ ಹೊಸ EiV 22 ಡಬಲ್ ಡೆಕ್ಕರ್ ಇಲೆಕ್ಟ್ರಿಕಲ್‌ ಬಸ್ ಅನ್ನು ಬಿಡುಗಡೆ ಮಾಡುವ ಮೂಲಕ ಎಲೆಕ್ಟ್ರಿಕ್ ಬಸ್ ಮಾರುಕಟ್ಟೆಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ದೇಶದ ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಹವಾನಿಯಂತ್ರಿತ ಬಸ್ ಅನ್ನು ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) … Continued

ರಷ್ಯಾದಲ್ಲಿ 10 ಮಕ್ಕಳನ್ನು ಹೆರುವ ಮಹಿಳೆಯರಿಗೆ ಹಣಕಾಸಿನ ಬಂಪರ್‌ ಪ್ಯಾಕೇಜ್‌ ಘೋಷಿಸಿದ ಅಧ್ಯಕ್ಷ ಪುತಿನ್‌…! ಜನಸಂಖ್ಯೆ ಹೆಚ್ಚಿಸಲು ಈ ಕ್ರಮವಂತೆ

ಮಾಸ್ಕೋ: ಕೋವಿಡ್ -19 ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಹೊರಹೊಮ್ಮಿದ ದೇಶದ ಜನಸಂಖ್ಯಾ ಬಿಕ್ಕಟ್ಟನ್ನು ಪುನಃಸ್ಥಾಪಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಮಹಿಳೆಯರಿಗೆ 10 ಅಥವಾ ಹೆಚ್ಚಿನ ಮಕ್ಕಳನ್ನು ಪಡೆದರೆ ಅಂಥವರಿಗೆ ಹಣದ ರೂಪದಲ್ಲಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ…! 10 ಮಕ್ಕಳಿಗೆ ಜನ್ಮ ನೀಡಲು ಮತ್ತು ಅವರನ್ನು ಪೋಷಿಸಲು £13,500 (12,92,736 ರೂ.ಗಳು)) ನೀಡುವುದಾಗಿ ಪ್ರಕಟಿಸಿದ್ದಾರೆ. … Continued

ಜ್ಞಾನವಾಪಿ ಕೇಸ್‌ ಹಿಂಪಡೆಯದಿದ್ರೆ ಕನ್ಹಯ್ಯಲಾಲ್‌ಗೆ ಮಾಡಿದಂತೆ ತಲೆ ಕಡಿಯ್ತೇವೆ: ಫಿರ್ಯಾದಿ ಪತಿಗೆ ಪಾಕಿಸ್ತಾನದಿಂದ ಕೊಲೆ ಬೆದರಿಕೆ

ವಾರಾಣಸಿ: ಪಾಕಿಸ್ತಾನದ ನಂಬರ್‌ ಮೂಲಕ ಕರೆ ಮಾಡಿದ ಅಪರಿಚಿತರು ತಲೆ ಕಡಿಯುವುದಾಗಿ ನಮಗೆ ಬೆದರಿಕೆಯೊಡ್ಡಿದ್ದಾರೆ ಎಂದು ಶೃಂಗಾರ ಗೌರಿ-ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾದಿಯಾಗಿರುವ ಮಹಿಳೆಯ ಪತಿ ವಾರಣಾಸಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣದ ವಿಚಾರಣೆ ಗುರುವಾರದಿಂದ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪುನರಾರಂಭವಾಗಿದೆ. ಸೋಹನ್ ಲಾಲ್ ಆರ್ಯ ಅವರಿಂದ … Continued

ಕಾಬೂಲ್‌ನ ಮಸೀದಿಯಲ್ಲಿ ಭಾರೀ ಸ್ಫೋಟ: 20 ಮಂದಿ ಸಾವು, 40 ಕ್ಕೂ ಹೆಚ್ಚು ಜನರಿಗೆ ಗಾಯ-ವರದಿ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಬುಧವಾರ ಮಸೀದಿಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಸಾವು ನೋವು ಸಂಭವಿಸಿದ್ದು, ಸ್ಫೋಟದಲ್ಲಿ 20 ಜನರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ವಾಯವ್ಯ ಕಾಬೂಲ್‌ನ ಕೋಟಾಲ್-ಎ-ಖೈರ್ ಖಾನಾ ಬಳಿ ಈ ಘಟನೆ ನಡೆದಿದೆ.ಕಾಬೂಲ್ ಸೆಕ್ಯುರಿಟಿ ಕಮಾಂಡ್‌ನ ವಕ್ತಾರ ಖಲೀದ್ ಜದ್ರಾನ್ … Continued

ಬಿಜೆಪಿ ಸಂಸದೀಯ ಮಂಡಳಿಗೆ ನೇಮಕ: ಯಡಿಯೂರಪ್ಪ ಕಮ್‌ಬ್ಯಾಕ್, 2023ಕ್ಕೆ ಬಿಜೆಪಿ ಅಧಿಕಾರಕ್ಕೆ ತರುವುದಾಗಿ ಪ್ರತಿಜ್ಞೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗಿದೆ, ದೂರವಿಡಲಾಗಿದೆ ಎಂದು ಕೇಳಿಬರುತ್ತಿರುವಾಗಲೇ ಬಿಜೆಪಿಯ ಅತ್ಯಂತ ಉನ್ನತ ಸಮಿತಿಯಾದ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಅವರನ್ನು ಬುಧವಾರ ನೇಮಕ ಮಾಡಿ ಅವರಿಗೆ ಮಹತ್ವದ ಹೊಣೆಗಾರಿಕೆ ನೀಡಲಾಗಿದೆ. ತಮ್ಮ ಹೊಸ ಹುದ್ದೆ ನೀಡಿದ್ದಕ್ಕಾಗಿ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಹಾಗೂ … Continued

ಮುಧೋಳ ನಾಯಿಗಳು ಪ್ರಧಾನಿ ಮೋದಿ ಭದ್ರತೆಗೆ ಸೇರ್ಪಡೆ ಬಹುತೇಕ ಖಚಿತ : ಎಸ್‌ಪಿಜಿಯಿಂದ ನಡೆಯುತ್ತಿದೆ ಪ್ರಯೋಗ

ಬೆಂಗಳೂರು: ರಾಜ್ಯದ ಬಾಗಲಕೋಟೆ ಜಿಲ್ಲೆಯ ಕಾರವಾನ್‌ ಹೌಂಡ್‌ ಎಂದು ಕರೆಯಲ್ಪಡುವ ಮುಧೋಳ ನಾಯಿಗಳು ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯ ಹೊಣೆ ಹೊತ್ತಿರುವ ವಿಶೇಷ ರಕ್ಷಣಾ ಗುಂಪಿನ (ಎಸ್‌ಪಿಜಿ) ಭಾಗವಾಗುವ ಎಲ್ಲ ಸಾಧ್ಯೆತಗಳೂ ಇವೆ ಎಂದು ವರದಿಗಳು ತಿಳಿಸಿವೆ. ಈ ಬೆಳವಣಿಗೆಯನ್ನು ದೃಢೀಕರಿಸಿರುವ ತಿಮ್ಮಾಪುರದ ಕೋರೆಹಲ್ಲು ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ ಸುಶಾಂತ್ ಹಂಡಗೆ … Continued

ಯಡಿಯೂರಪ್ಪಗೆ ಬಿಜೆಪಿಯಲ್ಲಿ ಉನ್ನತ ಸ್ಥಾನ, ಸಂಸದೀಯ ಮಂಡಳಿಗೆ ಸೇರ್ಪಡೆ: ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್ ಹೊರಕ್ಕೆ

ನವದೆಹಲಿ: ಪ್ರಮುಖ ಪುನರ್ರಚನೆಯಲ್ಲಿ, ಬಿಜೆಪಿ ಬುಧವಾರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಸರ್ಬಾನಂದ ಸೋನೋವಾಲ್ ಅವರಿಗೆ  ಪಕ್ಷದ ನಿರ್ಧಾರ ತೆಗೆದುಕೊಳ್ಳುವ ಉನ್ನತ ಸಮಿತಿಯಾದ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ. ಸಂಸದೀಯ ಮಂಡಳಿಯು ಬಿಜೆಪಿಯ ಉನ್ನತ … Continued