ಬೆಂಗಳೂರಿನಲ್ಲಿ ಇಥಿಯೋಪಿಯದಿಂದ ಬಂದ ವ್ಯಕ್ತಿಯಲ್ಲಿ ಶಂಕಿತ ಮಂಕಿಪಾಕ್ಸ್‌ ಪತ್ತೆ

ಬೆಂಗಳೂರು: ಶಂಕಿತ ಮಂಕಿಪಾಕ್ಸ್ ಪ್ರಕರಣ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ. ಮಂಕಿಪಾಕ್ಸ್ ಗುಣಲಕ್ಷಣಗಳಿರುವ ವಿದೇಶಿ ಪ್ರಜೆಯನ್ನು ಆರೋಗ್ಯ ಇಲಾಖೆ ಪತ್ತೆ ಮಾಡಿದೆ. ಆಫ್ರಿಕಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಗುಣಲಕ್ಷಣಗಳು ಪತ್ತೆಯಾಗಿರುವುದರಿಂದ ಶಂಕಿತ ರೋಗಿಯನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ. ಜುಲೈ 4ರಂದು ಇಥಿಯೋಪಿಯಾದಿಂದ ಬೆಂಗಳೂರಿಗೆ ಬಂದಿದ್ದ ಈ ವ್ಯಕ್ತಿಗೆ ಗುಣಲಕ್ಷಣಗಳು ಕಂಡು … Continued

ಕಾಮನ್​ವೆಲ್ತ್ ಗೇಮ್ಸ್​​-2022: ವೇಟ್‌ಲಿಫ್ಟಿಂಗ್​ನಲ್ಲಿ ಕಂಚಿನ ಪದಕ ಗೆದ್ದ ಕನ್ನಡಿಗ ಗುರುರಾಜ್​​ ಪೂಜಾರಿ, ಭಾರತಕ್ಕೆ ಎರಡನೇ ಪದಕ,

ಬರ್ಮಿಂಗ್​ಹ್ಯಾಮ್​​(ಯುಕೆ): ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ವೇಟ್​ ಲಿಫ್ಟಿಂಗ್​​ನಲ್ಲಿ ಕನ್ನಡಿಗರಾದ ಪಿ. ಗುರುರಾಜ್​​ ಪೂಜಾರಿ ಅವರು ಶನಿವಾರ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟಿದ್ದಾರೆ. 61 ಕೆಜಿ ವಿಭಾಗದಲ್ಲಿ ಒಟ್ಟು 269 ಕೆಜಿ ಭಾರ ಎತ್ತುವ ಮೂಲಕ ಗುರುರಾಜ್​ ಪೂಜಾರಿ ಈ ಸಾಧನೆ ಮಾಡಿದ್ದಾರೆ. 118+151 ಕೆಜಿ … Continued

ಭಾರತದ ಸಾವಿತ್ರಿ ಜಿಂದಾಲ್ ಈಗ ಏಷ್ಯಾದ ಅತ್ಯಂತ ಶ್ರೀಮಂತ ಮಹಿಳೆ

ನವದೆಹಲಿ: ಚೀನಾದ ಆಸ್ತಿ ಬಿಕ್ಕಟ್ಟು ಅದೇ ದೇಶದ ಕಂಟ್ರಿ ಗಾರ್ಡನ್ ಹೋಲ್ಡಿಂಗ್ಸ್ ಕಂ ಸೇರಿದಂತೆ ರಾಷ್ಟ್ರದ ಡೆವಲಪರ್‌ಗಳಿಗೆ ನಷ್ಟ ತಂದಿದ್ದರಿಂದ ಯಾಂಗ್ ಹುಯಿಯಾನ್ ಈಗ ಏಷ್ಯಾದ ಶ್ರೀಮಂತ ಮಹಿಳೆಯಾಗಿ ಉಳಿದಿಲ್ಲ. ಈವರೆಗೆ ಏಶಿಯಾದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಭಾರತದ ಪುರುಷರು ಕಾಣಿಸಿಕೊಳ್ಳುತ್ತಿದ್ದರೆ ಈಗ ಭಾರತದ ಸಾವಿತ್ರಿ ಜಿಂದಾಲ್‌ ಏಶಿಯಾದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. … Continued

ಉತ್ತರ ಕನ್ನಡಕ್ಕೆ ಬೇಕೇಬೇಕು ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ: ಬೆಂಗಳೂರಿನಲ್ಲಿರುವ ಉತ್ತರ ಕನ್ನಡದವರಿಂದ ನಡೆಯಿತು ಹಕ್ಕೊತ್ತಾಯ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಬೇಕು ಎಂದು ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನಲ್ಲಿ ವಾಸವಾಗಿರುವ ಉತ್ತರ ಕನ್ನಡ ಜಿಲ್ಲೆ ಜನರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಇಂದು, ಶನಿವಾರ ಹಕ್ಕೊತ್ತಾಯದ ಮತಪ್ರದರ್ಶನ ನಡೆಸಿದರು. ಎಲ್ಲರೂ WeNeedSuperSpecialityHospitalInUttaraKannada” ಎಂಬ ಘೋಷ ವಾಕ್ಯದೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ … Continued

ಎಸ್​ಡಿಪಿಐ, ಪಿಎಫ್​ಐ ನಿಷೇಧಕ್ಕೆ ಒತ್ತಾಯಿಸಿ ಗೃಹ ಸಚಿವರ ಸರ್ಕಾರಿ ನಿವಾಸಕ್ಕೆ ಎಬಿವಿಪಿ ಮುತ್ತಿಗೆ; ಲಘು ಲಾಠಿ ಪ್ರಹಾರ

ಬೆಂಗಳೂರು: ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಳ ಹಿನ್ನೆಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಾಗೂ ಪಿಎಫ್​ಐ, ಎಸ್​ಡಿಪಿಐ ಸಂಘಟನೆಗಳನ್ನು ನಿಷೇಧ ಮಾಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು ಇಂದು ಶುಕ್ರವಾರ ಗೃಹಸಚಿವರ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಿದರು. ಜಯಮಹಲ್​ನಲ್ಲಿರುವ ಗೃಹ ಸಚಿವರ ಸರ್ಕಾರಿ ನಿವಾಸದ ಎದುರು ಭಾರೀ ಪ್ರತಿಭಟನೆ ನಡೆಸಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ … Continued

ಸಿಇಟಿ ಫಲಿತಾಂಶ ಪ್ರಕಟ: ವಿವಿಧ ಕೋರ್ಸ್‌ಗಳ ಟಾಪರ್ಸ್​ ಪಟ್ಟಿ ಇಲ್ಲಿದೆ

ಬೆಂಗಳೂರು : ವಿವಿಧ ವೃತ್ತಿಪರ ಕೋರ್ಸ್​ಗಳಿಗೆ ಕಳೆದ ತಿಂಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ಫಲಿತಾಂಶ ಇಂದು ಪ್ರಕಟವಾಗಿದ್ದು, ಒಟ್ಟಾರೆ ಯುವತಿಯರೇ ಮೇಲುಗೈ ಸಾಧಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದ ಸಿಇಟಿ ಕೇಂದ್ರ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ, ಇಂಜಿನಿಯರಿಂಗ್, ಪಶುಸಂಗೋಪನೆ, ಕೃಷಿ … Continued

ರಾಜ್ಯದಲ್ಲಿ ಇಂದು ಎರಡು ಸಾವಿರದ ಗಡಿ ದಾಟಿದ ದೈನಂದಿನ ಕೊರೊನಾ ಪ್ರಕರಣ, ನಾಲ್ಕು ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇಂದು ಶುಕ್ರವಾರ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ ಎರಡು ಸಾವಿರದ ಗಡಿ ದಾಟಿದೆ. ಬೆಂಗಳೂರು ನಗರದಲ್ಲೇ 1,615 ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿಂದು 2,130 ಹೊಸ ಪ್ರಕರಣಗಳು ದಾಖಲಾಗಿದ್ದು, ನಾಲ್ವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ನಿನ್ನೆ 1,800 ಪ್ರಕರಣಗಳು ದಾಖಲಾಗಿತ್ತು. ರಾಜ್ಯದಲ್ಲಿ 1,395 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ … Continued

ಉದ್ಧವ್ ಠಾಕ್ರೆಗೆ ದೊಡ್ಡ ಹಿನ್ನಡೆ: ಏಕನಾಥ್ ಶಿಂಧೆಗೆ ಬೆಂಬಲ ಘೋಷಿಸಿದ ಹಿರಿಯಣ್ಣನ ಮಗ ನಿಹಾರ್‌ ಠಾಕ್ರೆ

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಂಡ ನಂತರ ಶಿವಸೇನೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಹೆಣಗಾಡುತ್ತಿರುವ ಉದ್ಧವ್ ಠಾಕ್ರೆ ಇಂದು, ಶುಕ್ರವಾರ ಮತ್ತೊಂದು ಹಿನ್ನಡೆಯನ್ನು ಅನುಭವಿಸಿದ್ದಾರೆ. ಅವರ ಅಣ್ಣನ ಮಗ ನಿಹಾರ್ ಠಾಕ್ರೆ, ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆ ಪರಂಪರೆಯನ್ನು ಪ್ರತಿಪಾದಿಸುತ್ತಿರುವ ಬಂಡಾಯ ಸೇನಾ ನಾಯಕ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಿ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. 1996 … Continued

ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಉತ್ತರ ಪ್ರದೇಶಕ್ಕಿಂತ 5 ಹೆಜ್ಜೆ ಮುಂದೆ ಇರ್ತೇವೆ, ಅವಶ್ಯಕತೆ ಬಿದ್ರೆ ಎನ್‌ಕೌಂಟರ್‌ ಸಹ ಮಾಡಬಹುದು: ಸಚಿವ ಡಾ.ಅಶ್ವತ್ಥ ನಾರಾಯಣ

ಬೆಂಗಳೂರು : ಬಿಜೆಪಿ ಕಾರ್ಯಕರ್ತನ ಹತ್ಯೆಯ ಬಗ್ಗೆ ಆಕ್ರೋಶ ಭುಗಿಲೆದ್ದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಅಗತ್ಯಬಿದ್ದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾದರಿ ಬಳಸುವುದಾಗಿ ಹೇಳಿದ ಒಂದು ದಿನದ ನಂತರ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, ರಾಜ್ಯ ಸರ್ಕಾರವು “ಉತ್ತರ ಪ್ರದೇಶಕ್ಕಿಂತ ಐದು ಹೆಜ್ಜೆ ಮುಂದೆ ಹೋಗ್ತೇವೆ. … Continued

‘ರಾಷ್ಟ್ರಪತ್ನಿ’ ಹೇಳಿಕೆಗೆ ವ್ಯಾಪಕ ಟೀಕೆ: ರಾಷ್ಟ್ರಪತಿ ಮುರ್ಮು ಅವರಿಗೆ ಪತ್ರ ಬರೆದು ಕ್ಷಮೆಯಾಚಿಸಿದ ಅಧೀರ್ ರಂಜನ್ ಚೌಧರಿ

ನವದೆಹಲಿ: ತಮ್ಮ ‘ರಾಷ್ಟ್ರಪತ್ನಿ’ ಹೇಳಿಕೆಗಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ. ನೀವು ಹೊಂದಿರುವ ಸ್ಥಾನವನ್ನು ವಿವರಿಸಲು ತಪ್ಪಾದ ಪದವನ್ನು ಬಳಸಿದ್ದಕ್ಕಾಗಿ ನನ್ನ ವಿಷಾದವನ್ನು ವ್ಯಕ್ತಪಡಿಸಲು ನಾನು ಬರೆಯುತ್ತಿದ್ದೇನೆ. ಇದು ಬಾಯ್ತಪ್ಪಿ ಹೇಳಿದ್ದು ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. … Continued