ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸ್ವಂತ ವಿಮಾನ ನಿರ್ಮಿಸಿದ ಕೇರಳದ ವ್ಯಕ್ತಿ…! ಕುಟುಂಬದೊಟ್ಟಿಗೆ ಯುರೋಪ್‌ ಟೂರ್

ಲಂಡನ್: ಕೋವಿಡ್ -19 ಸಾಂಕ್ರಾಮಿಕದ ಪ್ರತಿಕೂಲ ಪರಿಣಾಮದಿಂದ ವಾಯುಯಾನ ಉದ್ಯಮವು ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ, ಕೇರಳದ ವ್ಯಕ್ತಿಯೊಬ್ಬರು ತಮ್ಮ ಕುಟುಂಬದೊಂದಿಗೆ ತಾವೇ ನಿರ್ಮಿಸಿದ ವಿಮಾನದಲ್ಲಿ ಯುರೋಪ್ ಮೂಲಕ ಪ್ರಯಾಣಿಸುತ್ತಿದ್ದಾರೆ. ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಈಗ ಲಂಡನ್‌ನಲ್ಲಿ ನೆಲೆಸಿರುವ ಅಶೋಕ್ ಅಲಿಸೆರಿಲ್ ಥಾಮರಕ್ಷಣ್‌ ಅವರು ಈ ವಿಮಾನವನ್ನು ನಿರ್ಮಿಸಿದ್ದಾರೆ. ಕೇರಳದ ಅಲಪ್ಪುಳ ಮೂಲದ ಅಶೋಕ ಥಾಮರಕ್ಷನ್‌ ಅವರು … Continued

ಬಗೆದಷ್ಟು ಹಣ…20 ಕೋಟಿ ರೂ.ಗಳು …ಮತ್ತೂ ನಡೆಯುತ್ತಿದೆ ಎಣಿಕೆ: ಪಶ್ಚಿಮ ಬಂಗಾಳದ ಸಚಿವರ ಸಹಾಯಕಿ ಮತ್ತೊಂದು ಮನೆಯಿಂದ ಮತ್ತಷ್ಟು ನಗದು ವಶ…!

ಕೋಲ್ಕತ್ತಾ: ಬಂಧಿತ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ 21 ಕೋಟಿ ರೂಪಾಯಿ ವಶಕ್ಕೆ ಪಡೆದ ಕೆಲ ದಿನಗಳ ನಂತರ ದಿನಗಳ ನಂತರ ಜಾರಿ ನಿರ್ದೇಶನಾಲಯವು ಎರಡನೇ ಮನೆಯಲ್ಲಿ 20 ಕೋಟಿ ರೂಪಾಯಿ ನಗದು ಪತ್ತೆ ಮಾಡಿದೆ. ಅಪಾರ್ಟ್‌ಮೆಂಟ್‌ನಲ್ಲಿ 3 ಕೆಜಿ ಚಿನ್ನ ಪತ್ತೆಯಾಗಿದ್ದು, ಅಂದಾಜು 2 … Continued

ಬಿಎಸ್‌ಎನ್‌ಎಲ್‌ ಪುನಶ್ಚೇತನ ಮಾಡ್ತಾರಾ ಮೋದಿ…?: 1.64 ಲಕ್ಷ ಕೋಟಿ ರೂ.ಗಳ ಬಿಎಸ್‌ಎನ್‌ಎಲ್ ಪುನಶ್ಚೇತನ ಪ್ಯಾಕೇಜ್‌ಗೆ ಕ್ಯಾಬಿನೆಟ್ ಅನುಮೋದನೆ

ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಪುನಶ್ಚೇತನಕ್ಕೆ 1.64 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಕ್ಯಾಬಿನೆಟ್ ಅನುಮೋದಿಸಿದ ಪುನರುಜ್ಜೀವನ ಕ್ರಮಗಳು ಸೇವೆಗಳನ್ನು ನವೀಕರಿಸಲು, ಸ್ಪೆಕ್ಟ್ರಮ್ ಹಂಚಿಕೆ, ಅದರ ಬ್ಯಾಲೆನ್ಸ್ ಶೀಟ್ ಅನ್ನು ಕಡಿಮೆ ಮಾಡಲು ಮತ್ತು ಬಿಎಸ್‌ಎನ್‌ಎಲ್ … Continued

ರೋಶನಿ ನಾಡರ್ ಭಾರತದ ಶ್ರೀಮಂತ ಮಹಿಳೆ; ಸ್ವಯಂ ನಿರ್ಮಿತ ಶ್ರೀಮಂತ ಮಹಿಳೆಯರಲ್ಲಿ ಫಲ್ಗುಣಿ ನಾಯರ್‌ಗೆ ಅಗ್ರಸ್ಥಾನ: ವರದಿ

ನವದೆಹಲಿ: ಎಚ್‌ಸಿಎಲ್‌ (HCL) ಟೆಕ್ನಾಲಜೀಸ್‌ನ ಅಧ್ಯಕ್ಷೆ ರೋಶನಿ ನಾಡರ್ ಮಲ್ಹೋತ್ರಾ ಅವರು ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ, 2021 ರಲ್ಲಿ ಅವರ ನಿವ್ವಳ ಮೌಲ್ಯ 54 ಪ್ರತಿಶತದಷ್ಟು ಜಿಗಿದು 84,330 ಕೋಟಿ ರೂ.ಗಳಾಗಿದೆ. ಸುಮಾರು ಒಂದು ದಶಕದ ಹಿಂದೆ ಸೌಂದರ್ಯ-ಕೇಂದ್ರಿತ ಬ್ರಾಂಡ್ ನೈಕಾ ಪ್ರಾರಂಭಿಸಲು ತನ್ನ ಹೂಡಿಕೆಯ ಬ್ಯಾಂಕಿಂಗ್ ವೃತ್ತಿಯನ್ನು ತೊರೆದ … Continued

38 ತೃಣಮೂಲ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಹೊಸ ಬಾಂಬ್‌ ಸಿಡಿಸಿದ ಮಿಥುನ್ ಚಕ್ರವರ್ತಿ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ ಮೂರು ಡಜನ್‌ಗಿಂತಲೂ ಹೆಚ್ಚು ಬಂಗಾಳದ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಟ ಮಿಥುನ್ ಚಕ್ರವರ್ತಿ ಹೇಳಿದ್ದಾರೆ. ಶಿಕ್ಷಕರ ನೇಮಕಾತಿ ದೊಡ್ಡ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷದ ಸಚಿವರು ಮತ್ತು ಅವರ ಸಹಾಯಕಿ ಬಂಧನದಿಂದ ಪಕ್ಷದೊಳಗೆ ಭಾರೀ ಅಸಮಾಧಾನ ಉಂಟಾಗಿದೆ ಎಂದು ಹೇಳಿದ್ದಾರೆ. “ನಾನು ನಿಮಗೆ ಎಲ್ಲಾ ಬ್ರೇಕಿಂಗ್ ನ್ಯೂಸ್ ನೀಡುತ್ತೇನೆ. ಈ … Continued

ಪ್ರವೀಣ ಹತ್ಯೆ ಪ್ರಕರಣ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಕಾರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು

ಪುತ್ತೂರು: ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ ನೆಟ್ಟಾರ ಅವರ ಅಂತಿಮ ದರ್ಶನದ ಮೇಳೆ ಕಾರ್ಯಕರ್ತರು ಬಿಜೆಪಿ ಮುಖಂಡರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಸದ್ಯ ಬೆಳ್ಳಾರೆ ಪರಿಸರದಲ್ಲಿ ಸ್ಥಿತಿ ಬಿಗುವಿನಿಂದ ಕೂಡಿದೆ. ಪ್ರವೀಣ್ ನೆಟ್ಟಾರು ಅವರ ಮನೆಗೆ … Continued

ಕ್ಯಾನ್ಸರ್ ವಿರುದ್ಧ ಹೋರಾಡುತ್ತಲೇ 12ನೇ ತರಗತಿ ಪರೀಕ್ಷೆಯಲ್ಲಿ 97.75% ಅಂಕ ಪಡೆದ ಈ ವಿದ್ಯಾರ್ಥಿನಿ…!

ಲಕ್ನೋ: ಕ್ಯಾನ್ಸರ್‌ನಿಂದ ಬಳಲುತ್ತಿರುವ 17 ವರ್ಷದ ಬಾಲಕಿ ಈ ವರ್ಷ ಐಎಸ್‌ಸಿ 12ನೇ ತರಗತಿ ಪರೀಕ್ಷೆಯಲ್ಲಿ ಶೇ.97.75 ಅಂಕ ಗಳಿಸಿದ್ದಾಳೆ. ಉತ್ತರ ಪ್ರದೇಶದ ಲಕ್ನೋ ಮೂಲದ ಪ್ರಮಿತಾ ತಿವಾರಿಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಅಕ್ಯೂಟ್ ಮೈನರ್ ಲ್ಯುಕೇಮಿಯಾ ಇರುವುದು ಪತ್ತೆಯಾಗಿತ್ತು. ಬಹುತೇಕರು ಅವಳ ಭವಿಷ್ಯವು ಕತ್ತಲೆಯಾಗುತ್ತದೆ ಎಂದು ಭಾವಿಸಿದ್ದರು. ಆದರೆ ಈ ಹುಡುಗಿ ಕೆಚ್ಚೆದೆಯ ಹೋರಾಟ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸುವ ಇ.ಡಿ ಅಧಿಕಾರ ಎತ್ತಿಹಿಡಿದ ಸುಪ್ರೀಂಕೋರ್ಟ್​

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್​ಎ) ಅಡಿಯಲ್ಲಿ ಆರೋಪಿಯನ್ನು ಬಂಧಿಸುವ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರವನ್ನು ಸುಪ್ರೀಂಕೋರ್ಟ್​ ಬುಧವಾರ ಎತ್ತಿ ಹಿಡಿದಿದೆ. ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನದ ಪ್ರಕ್ರಿಯೆಯು ನಿರಂಕುಶವಾಗಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್​, ಪಿಎಂಎಲ್​ಎ ಅಡಿಯಲ್ಲಿ ಅಕ್ರಮ ಹಣ ವರ್ಗಾವಣೆಯು ಒಂದು ಪ್ರತ್ಯೇಕ ಅಪರಾಧ ಎಂದು ಹೇಳಿದೆ. ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ … Continued

ಮಾರಕಾಸ್ತ್ರಗಳಿಂದ ದಾಳಿ ಮಾಡಿ ಬಿಜೆಪಿ ಯುವ ಮೋರ್ಚಾ ಮುಖಂಡನ ಹತ್ಯೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಮಾಸ್ತಿಕಟ್ಟೆಯಲ್ಲಿ ಚಿಕನ್ ಸೆಂಟರ್ ಮಾಲಕನ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಮೃತ ಘಟನೆ ಮಂಗಳವಾರ ನಡೆದಿದೆ. ಬೆಳ್ಳಾರೆ ಸಮೀಪದ ನೆಟ್ಟಾರು ನಿವಾಸಿ ಹಾಗೂ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ (29) ಎಂಬವರು ಮೃತಪಟ್ಟವರು. … Continued

ಶಿಕ್ಷಕರ ನೇಮಕಾತಿ ಹಗರಣ: ಸಚಿವ ಪಾರ್ಥ ಚಟರ್ಜಿ ಸಹಾಯಕಿ ಮನೆಯಲ್ಲಿ ಸ್ಫೋಟಕ ವಿವರಗಳ ಕಪ್ಪು ಡೈರಿ ಪತ್ತೆ ಮಾಡಿದ ಇ.ಡಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವ ಪಾರ್ಥ ಚಟರ್ಜಿ ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ನಿವಾಸದ ಮೇಲಿನ ದಾಳಿಯ ವೇಳೆ ಜಾರಿ ನಿರ್ದೇಶನಾಲಯ (ಇಡಿ) ಕಪ್ಪು ಡೈರಿಯನ್ನು ಪತ್ತೆ ಮಾಡಿದೆ. ಡೈರಿಯು ಬಂಗಾಳ ಸರ್ಕಾರದ ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಸೇರಿದೆ ಎಂದು ಹೇಳಲಾಗಿದೆ. ಇ.ಡಿ ಮೂಲಗಳ … Continued