2100ರ ವೇಳೆಗೆ ಭಾರತದ ಜನಸಂಖ್ಯೆ 41 ಕೋಟಿಗಳಷ್ಟು ಕಡಿಮೆಯಾಗಬಹುದು: ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗ

ನವದೆಹಲಿ: ಭಾರತವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ, ಆದರೂ ಅದರ ಜನಸಂಖ್ಯೆಯು ಮುಂದಿನ 78 ವರ್ಷಗಳಲ್ಲಿ 41 ಕೋಟಿಗಳಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ವಿಭಾಗವು ಹೇಳಿದೆ. ಹೆಚ್ಚಿನ ಜನಸಂಖ್ಯೆಯು ಒಬ್ಬ ವ್ಯಕ್ತಿಗೆ ಕಡಿಮೆ ಸಂಪನ್ಮೂಲಗಳನ್ನು ಸೂಚಿಸುತ್ತದೆ, ಆದರೆ ಹೊಸ ವೈಜ್ಞಾನಿಕ ಅಧ್ಯಯನಗಳು ಜನಸಂಖ್ಯೆಯ ಕುಸಿತವು ರಾಮಬಾಣವಲ್ಲ ಎಂದು ಬಹಿರಂಗಪಡಿಸುತ್ತದೆ. … Continued

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಇಬ್ಬರು ಬಾಲಕರ ಪೊಲೀಸ್‌ ಅಧಿಕಾರಿಗಳಾಗುವ ಕನಸನ್ನು ನನಸು ಮಾಡಿದ ಬೆಂಗಳೂರು ಪೊಲೀಸರು

ಬೆಂಗಳೂರು : ಬೆಂಗಳೂರಿನ ಈ ಚಿಕ್ಕ ಹುಡುಗರ ಪೊಲೀಸ್ ಅಧಿಕಾರಿಗಳಾಗುವ ಆಸೆಯನ್ನು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಪೂರೈಸಿದ್ದಾರೆ. ಕೇರಳದ ಮೊಹಮ್ಮದ್ ಸಲ್ಮಾನ್ ಮತ್ತು ಬೆಂಗಳೂರಿನ ಮಿಥಿಲೇಶ್ ಎಂಬ ಬಾಲಕರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಅವರಿಗೆ ಪೊಲೀಸ್ ಅಧಿಕಾರಿಗಳಾಗುವ ಕನಸು ಇದೆ. ಅವರ ಆಶಯವನ್ನು ಹೃದಯ ಸ್ಪರ್ಶಿಸುವ ರೀತಿಯಲ್ಲಿಈಡೇರಿಸಲಾಯಿತು. ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಈ … Continued

ವೇಗವಾಗಿ ಹರಡುತ್ತಿರುವ ಮಂಕಿಪಾಕ್ಸ್ ಉಲ್ಬಣ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ ಡಬ್ಲ್ಯುಎಚ್‌ಒ

ವಿಶ್ವ ಸಂಸ್ಥೆ: ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಶನಿವಾರ (ಜುಲೈ 23) ಘೋಷಿಸಿತು. ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು, “ಜಾಗತಿಕ ಮಂಕಿಪಾಕ್ಸ್ ಏಕಾಏಕಿ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. ಮಲ್ಟಿ-ಕಂಟ್ರಿ ಮಂಕಿಪಾಕ್ಸ್ ಏಕಾಏಕಿ ಅಂತಾರಾಷ್ಟ್ರೀಯ ಕಾಳಜಿಯ … Continued

ತಾಯಿ ಹೇಳಿದ ಸಂಸ್ಕೃತ ಶ್ಲೋಕ ಪೂರ್ಣಗೊಳಿಸುವ ಬೋರಲು ಬೀಳಲಿಕ್ಕೂ ಬಾರದ ಪುಟಾಣಿ ಶಿಶು : ಬೆರಗಾದ ಇಂಟರ್ನೆಟ್‌ | ವೀಕ್ಷಿಸಿ

ಇಂಟರ್ ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ (social media) ವೈವಿಧ್ಯಮಯ ವೀಡಿಯೊಗಳು ನೋಡಲು ಸಿಗುತ್ತವೆ. ಆದರೆ ಇಂಥದೊಂದು ವಿಡಿಯೋವನ್ನು ಬಹುಶಃ ನೋಡುವುದು ಅಪರೂಪ. ಇನ್ನೂ ಬೋರಲು ಬೀಳಲು ಕೂಡ ಬಾರದ ಮಗುವೊಂದು ತನ್ನಮ್ಮನ ಜೊತೆ ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಿರುವುದನ್ನು ಚಿತ್ರೀಕರಿಸಿರುವ ವೀಡಿಯೋ ಇದಾಗಿದೆ. ವೀಡಿಯೊ ನೋಡಿದವರು ಈ ಬೊಚ್ಚುಬಾಯಿ ಮಗುವಿನ ಜ್ಞಾಮಪಕ ಶಕ್ತಿಗೆ ಬೆರಗಾಗಿದ್ದಾರೆ. ವೀಡಿಯೋದಲ್ಲಿ … Continued

ಪಕ್ಷಪಾತಿ, ಮಾಹಿತಿಯಿಲ್ಲದ, ಅಜೆಂಡಾ-ಚಾಲಿತ”: ಮಾಧ್ಯಮಗಳನ್ನು ಟೀಕಿಸಿದ ಮುಖ್ಯ ನ್ಯಾಯಮೂರ್ತಿ ಎನ್‌.ರಮಣ

ನವದೆಹಲಿ: ಟಿವಿ ಚರ್ಚೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗರೂ ನ್ಯಾಯಾಲಯಗಳು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಶನಿವಾರ ಟೀಕಿಸಿದ್ದಾರೆ. ಹಾಗೂ ನಡವಳಿಕೆಯನ್ನು “ಪಕ್ಷಪಾತ”, ಸರಿಯಾದ ಮಾಹಿತಿಯಿಲ್ಲದ ಮತ್ತು “ಅಜೆಂಡಾ-ಚಾಲಿತ” ಎಂದು ಆಕ್ಷೇಪಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಬಿಜೆಪಿಯ ಮಾಜಿ ವಕ್ತಾರರಾದ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ … Continued

ಸ್ಮೃತಿ ಇರಾನಿ ಮಗಳು ಗೋವಾದ “ಅಕ್ರಮ ಬಾರ್” ವ್ಯವಹಾರದಲ್ಲಿ ಭಾಗಿ-ಕಾಂಗ್ರೆಸ್ ಆರೋಪ: ಇದು ಆಧಾರರಹಿತ ಎಂದ ಜೋಯಿಶ್ ವಕೀಲ

ನವದೆಹಲಿ: ಗೋವಾದಲ್ಲಿ “ಅಕ್ರಮ ಬಾರ್” ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ವರದಿಗಳ ನಡುವೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಜೋಯಿಶ್ ಶನಿವಾರ ಈ ಆರೋಪಗಳನ್ನು “ಆಧಾರರಹಿತ” ಎಂದು ಹೇಳಿದ್ದಾರೆ ಮತ್ತು ತಾವು ರೆಸ್ಟೋರೆಂಟ್ ಮಾಲೀಕರಾಗಲೀ ಅಥವಾ ನಿರ್ವಹಿಸುವವರಾಗಲೀ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೇಳಿಕೆಯೊಂದರಲ್ಲಿ, ಜೋಯಿಶ್ ಇರಾನಿ ಅವರ ವಕೀಲ ಕಿರಾತ್ ನಾಗ್ರಾ ತಮ್ಮ ಕಕ್ಷಿದಾರರ … Continued

ಕರ್ನಾಟಕ ಉದ್ಯೋಗ ನೀತಿ 2022-25: ಉದ್ಯೋಗ ಮೂರು ಪಟ್ಟು ಹೆಚ್ಚಳ ನಿರೀಕ್ಷ, ಕನ್ನಡಿಗರಿಗೆ ಆದ್ಯತೆ

ಬೆಂಗಳೂರು: ‘ಕರ್ನಾಟಕ ಉದ್ಯೋಗ ನೀತಿ 2022- 25’ ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಎಲ್ಲ ರೀತಿಯ ಉದ್ಯಮಗಳು ಬಂಡವಾಳ ಹೂಡಿಕೆ ವಿಸ್ತರಣೆ ಮಾಡುವ ಸಂದರ್ಭ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕು ಮತ್ತು ಅವುಗಳನ್ನು ಕನ್ನಡಿಗರಿಗೇ ನೀಡಬೇಕು ಎಂಬ ಅಂಶವನ್ನು ಸೇರಿಸಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು … Continued

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ: ಸಚಿವ ಪಾರ್ಥ ಚಟರ್ಜಿ ಬಂಧಿಸಿದ ಇ.ಡಿ., ಸಹಾಯಕಿ ಅರ್ಪಿತಾ ಮುಖರ್ಜಿ ವಶಕ್ಕೆ

ನವದೆಹಲಿ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರನ್ನು ಶನಿವಾರ ಬಂಧಿಸಿದೆ. ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವರನ್ನು ಬಂಧಿಸಲಾಗಿದ್ದು, ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಇಡಿ ವಶಕ್ಕೆ ಪಡೆದಿದೆ ಎಂದು ವರದಿ ತಿಳಿಸಿದೆ. ಪಾರ್ಥ ಚಟರ್ಜಿಯವರ “ಆಪ್ತ ಸಹಾಯಕಿ ಮನೆ ಮೇಲೆ … Continued

ದ್ರೌಪದಿ ಮುರ್ಮು ಆಗಲಿದ್ದಾರೆ ಅತಿ ಕಿರಿಯ ರಾಷ್ಟ್ರಪತಿ : ಈ ಮೊದಲಿನ ರಾಷ್ಟ್ರಪತಿಗಳು ಅಧಿಕಾರ ವಹಿಸಿಕೊಂಡಾಗ ಅವರ ವಯಸ್ಸು ಎಷ್ಟಿತ್ತು ? ಇಲ್ಲಿದೆ ಮಾಹಿತಿ

ನವದೆಹಲಿ: ಒಡಿಶಾದ 64 ವರ್ಷದ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರು ಗುರುವಾರ ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಇತಿಹಾಸವನ್ನು ಬರೆದರು, ಅವರು ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಸೋಲಿಸಿದರು. ಮುರ್ಮು ಭಾರತದ ಮೊದಲ ಆದಿವಾಸಿ ಅಧ್ಯಕ್ಷರಾದರು. ಜೂನ್ 20, 1958 ರಂದು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಉಪರ್ಬೆಡಾ ಗ್ರಾಮದಲ್ಲಿ ಸಂತಾಲ್ ಕುಟುಂಬದಲ್ಲಿ ಜನಿಸಿದ … Continued

ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಸಹಾಯಕಿ ಮನೆ ಮೇಲೆ ಇ.ಡಿ ದಾಳಿ: 20 ಕೋಟಿ ರೂ. ನಗದು ವಶ

ನವದೆಹಲಿ: ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಸಹಚರರೊಬ್ಬರ ಮನೆಯಿಂದ 20 ಕೋಟಿ ರೂ.ಗಳ ಹಣವನ್ನು ಜಾರಿ ನಿರ್ದೇಶನಾಲಯ ಇಂದು, ಶುಕ್ರವಾರ ವಶಪಡಿಸಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಆಪಾದಿತ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅರ್ಪಿತಾ ಮುಖರ್ಜಿ ಅವರ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಈ ಮೊತ್ತವು ಎಸ್‌ಎಸ್‌ಸಿ ಹಗರಣದ ಅಪರಾಧದ ಆದಾಯ ಎಂದು … Continued