ರಷ್ಯಾ-ಉಕ್ರೇನ್ ಯುದ್ಧ: ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಬ್ಯಾರಲ್‌ಗೆ 100 ಡಾಲರ್‌ ಮಾರ್ಕ್ ದಾಟಿದ ಕಚ್ಚಾ ತೈಲ..!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ “ಮಿಲಿಟರಿ ಕಾರ್ಯಾಚರಣೆ” ಘೋಷಿಸಿದ ನಂತರ ಗುರುವಾರ ತೈಲ ಬೆಲೆಗಳು ಏಳು ವರ್ಷಗಳಲ್ಲಿ ಮೊದಲ ಬಾರಿಗೆ $ 100 ದಾಟಿದೆ. ಬ್ರೆಂಟ್ ಕಚ್ಚಾ ತೈಲವು ಆರಂಭಿಕವಾಗಿ ಏಷ್ಯಾದ ವ್ಯಾಪಾರದಲ್ಲಿ ಬ್ಯಾರೆಲ್‌ಗೆ $101.34 ಅನ್ನು ತಲುಪಿತು, ಇದು ಸೆಪ್ಟೆಂಬರ್ 2014ರ ನಂತರ ಅತ್ಯಧಿಕವಾಗಿದೆ. ಜಾಗತಿಕ ಶಕ್ತಿ ಸರಬರಾಜುಗಳು ಬಾಧಿತವಾಗಬಹುದು..  ಯುರೋಪ್‌ನಲ್ಲಿನ ಯುದ್ಧವು … Continued

ಉಕ್ರೇನ್‌ ವಿರುದ್ಧ ರಷ್ಯಾದ ಯುದ್ಧ ಘೋಷಣೆ ನಂತರ ಕೈವ್, ಖಾರ್ಕಿವ್‌ನಲ್ಲಿ ಕಂಡುಬಂದ ಭಾರೀ ಸ್ಫೋಟಗಳು- ವರದಿ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಉಕ್ರೇನಿನ ಕೈವ್ ಮತ್ತು ಖಾರ್ಕಿವ್ ಪ್ರದೇಶಗಳಲ್ಲಿ ದೊಡ್ಡ ಸ್ಫೋಟಗಳು ಕಂಡುಬಂದವು. ಅಮೆರಿಕದ-ಆಧಾರಿತ BNO ನ್ಯೂಸ್ ವೀಡಿಯೋ ತುಣುಕನ್ನು ತೋರಿಸಿದೆ, ಇದು ಪೂರ್ವ ಉಕ್ರೇನ್‌ನ ಮೇಲಿನ ರಷ್ಯಾದ ದಾಳಿಯ ಭಾಗವಾಗಿ ಕತ್ತಲೆಯಾದ ದಿಗಂತದಲ್ಲಿ ಬೆಳಕಿನ ದೊಡ್ಡ ಹೊಳಪನ್ನು ತೋರಿಸಿದೆ. ಹಿಂದಿನ ದೂರದರ್ಶನದ ಭಾಷಣದಲ್ಲಿ, … Continued

ಹಿಜಾಬ್ ವಿವಾದ: ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಪಾತ್ರದ ಬಗ್ಗೆ ಸರ್ಕಾರದಿಂದ ವಿವರ ಕೇಳಿದ ಹೈಕೋರ್ಟ್‌

ಬೆಂಗಳೂರು: ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ ಬುಧವಾರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಪಾತ್ರದ ಬಗ್ಗೆ ರಾಜ್ಯ ಸರ್ಕಾರದಿಂದ ಮಾಹಿತಿ ಕೇಳಿದೆ. ಜನವರಿ 1ರಂದು ಉಡುಪಿಯ ಕಾಲೇಜೊಂದರ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನಿರಾಕರಿಸಿದ ಕಾಲೇಜು ಆಡಳಿತವನ್ನು ವಿರೋಧಿಸಿ ಕರಾವಳಿ ಪಟ್ಟಣದಲ್ಲಿ ಸಿಎಫ್‌ಐ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇದು … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಬಂಧನಕ್ಕೊಳಗಾದ ಮಹಾರಾಷ್ಟ್ರ ನವಾಬ್ ಮಲಿಕ್ ಅವರನ್ನು ಮಾರ್ಚ್ 3ರ ವರೆಗೆ ಇಡಿ ವಶಕ್ಕೆ ನೀಡಿದ ಕೋರ್ಟ್‌

ಮುಂಬೈ: ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಅವರನ್ನು ಮುಂಬೈ ವಿಶೇಷ ಕೋರ್ಟ್‌ ಮಾರ್ಚ್ 3ರ ವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿದೆ. ನವಾಬ್ ಮಲಿಕ್ ಅವರನ್ನು ಬುಧವಾರ ಬೆಳಗ್ಗೆ ದಕ್ಷಿಣ ಮುಂಬೈನಲ್ಲಿರುವ ಇಡಿ ಕಚೇರಿಗೆ … Continued

ಹೈಕೋರ್ಟ್‌ನಲ್ಲಿ ಹಿಜಾಬ್‌ ಪ್ರಕರಣ: ಸಾರ್ವಜನಿಕ ಸ್ಥಳದಲ್ಲಿ ನಾವು ಹಿಜಾಬ್ ತೆಗೆಯುವುದಿಲ್ಲ ಎಂಬ ವಿದ್ಯಾರ್ಥಿನಿಯರ ಹೇಳಿಕೆ ಸುಳ್ಳು, ಆಧಾರ್ ಕಾರ್ಡಿನಲ್ಲಿ ಹಿಜಾಬ್ ಧರಿಸಿಲ್ಲ: ವಕೀಲ ನಾಗಾನಂದ

ಬೆಂಗಳೂರು: ಶಿಕ್ಷಕರ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ಎಸ್ ನಾಗಾನಂದ ಅವರು, ಬುಧವಾರ ವಾದ ಮುಂದುವರಿಸಿದರು. ಇಬ್ಬರು ಅರ್ಜಿದಾರರು ಸಾರ್ವಜನಿಕ ಸ್ಥಳದಲ್ಲಿ ತಾವು ಯಾವಾಗಲೂ ಹಿಜಾಬ್ ಧರಿಸಿಯೇ ಇರುತ್ತೇವೆ ಎಂಬ ವಿದ್ಯಾರ್ಥಿನಿಯರ ಹೇಳಿಕೆ ಸತ್ಯವಲ್ಲ ಎಂದು ವಾದಿಸಿದ ಅವರು, ಇಬ್ಬರು ಅರ್ಜಿದಾರರು ಹಿಜಾಬ್ ಧರಿಸದ ಆಧಾರ್ ಕಾರ್ಡ್ ಚಿತ್ರವನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು. … Continued

ಹಿಜಾಬ್‌ ಪ್ರಕರಣ: ಮಧ್ಯಂತರ ಆದೇಶವು ಸಮವಸ್ತ್ರ ನಿಗದಿ ಪಡಿಸಿದ ಪದವಿ ಕಾಲೇಜ್‌, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ- ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರು ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ವಸ್ತ್ರಗಳ ಮಧ್ಯಂತರ ಪ್ರಸ್ತಾವನೆಯು ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಆದರೆ ಎಲ್ಲಾ ವಿದ್ಯಾರ್ಥಿಗಳು ಅದನ್ನು ಸೂಚಿಸಿರುವ ಏಕರೂಪದ ವಸ್ತ್ರ ಸಂಹಿತೆಯನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ. ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಪ್ರತಿವಾದಿಗಳು ಮತ್ತು ಸರ್ಕಾರದ ವಿಚಾರಣೆ ನಡೆಸುತ್ತಿದೆ. ಶಿರಸ್ತ್ರಾಣವನ್ನು ತೆಗೆದುಹಾಕುವಂತೆ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಾರಿ ನಿರ್ದೇಶನಾಲಯದಿಂದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನ

ಮುಂಬೈ: ಮುಂಬೈ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸಿದ ನಂತರ ಇಂದು, ಬುಧವಾರ ಬಂಧಿಸಿದೆ. ಇತ್ತೀಚೆಗಷ್ಟೇ ಇಡಿ ಹಲವು ದಾಳಿಗಳನ್ನು ನಡೆಸಿದ್ದು, ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ … Continued

ರಾಮ ಸೇತುವಿಗೆ ರಾಷ್ಟ್ರೀಯ ಪರಂಪರೆ ಸ್ಮಾರಕ ಸ್ಥಾನಮಾನ: ಮಾರ್ಚ್ 9ರಂದು ಸುಬ್ರಮಣಿಯನ್ ಸ್ವಾಮಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಸಮ್ಮತಿ

ನವದೆಹಲಿ: ರಾಮಸೇತುವನ್ನು ರಾಷ್ಟ್ರೀಯ ಪರಂಪರೆಯ ಸ್ಮಾರಕವಾಗಿ ಘೋಷಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಮನವಿಯನ್ನು ಮಾರ್ಚ್ 9 ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಸುಬ್ರಮಣಿಯನ್ ಸ್ವಾಮಿ ಅವರು ಪ್ರಕರಣದ ಆರಂಭಿಕ ವಿಚಾರಣೆಯನ್ನು ಕೋರಿದ ನಂತರ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ … Continued

1,200 ವರ್ಷಗಳಷ್ಟು ಪುರಾತನ ಮಕ್ಕಳ-ವಯಸ್ಕರ ಅವಶೇಷ ಪತ್ತೆ…!

ಲಿಮಾ: ಪೂರ್ವ ಲಿಮಾದ ಪೂರ್ವದ ಇಂಕಾನ್ ಕಾಜಮಾರ್ಕಿಲ್ಲಾ ಸಂಕೀರ್ಣದದಲ್ಲಿ ಅಗೆಯುವಾಗಪೆರುವಿಯನ್ ಪುರಾತತ್ವಶಾಸ್ತ್ರಜ್ಞರು 800-1,200 ವರ್ಷಗಳ ಹಿಂದಿನ ಎಂಟು ಮಕ್ಕಳು ಮತ್ತು 12 ವಯಸ್ಕರ ದೇಹವನ್ನು ಪತ್ತೆ ಮಾಡಿರುವುದಾಗಿ ತಿಳಿಸಿದ್ದಾರೆ. ಅವಶೇಷಗಳು ಭೂಗತ ಸಮಾಧಿಯ ಹೊರಗಿದ್ದವು, ಅಲ್ಲಿ ಕಳೆದ ನವೆಂಬರ್‌ನಲ್ಲಿ ಪೆರುವಿನ ಸ್ಯಾನ್ ಮಾರ್ಕೋಸ್ ವಿಶ್ವವಿದ್ಯಾಲಯದ ತಂಡವು ಗರ್ಭದೊಳಗಿನ ಭ್ರೂಣದ ಸ್ಥಿತಿಯಲ್ಲಿ ಮಲಗಿರುವ ಹಗ್ಗಗಳಿಂದ ಬಂಧಿಸಲ್ಪ ಪ್ರಾಚೀನ … Continued

ರಷ್ಯಾ-ಉಕ್ರೇನ್ ಯುದ್ಧವಾದರೆ ಭಾರತದಲ್ಲಿ ಯಾವುದೆಲ್ಲ ಹೆಚ್ಚು ದುಬಾರಿಯಾಗಬಹುದು..?

ನವದೆಹಲಿ: ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಡುವೆ ಭಾರತದಲ್ಲಿ ಜನಸಾಮಾನ್ಯರು ಇದರ ಬಿಸಿ ಅನುಭವಿಸುವ ಸಾಧ್ಯತೆಯಿದೆ, ಏಕೆಂದರೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಗಳು ಹೆಚ್ಚಾಗುತ್ತಿರುವಾಗ, ಜಾಗತಿಕ ಆರ್ಥಿಕತೆಯು ಟೆಂಟರ್‌ ಹುಕ್ಸ್‌ನಲ್ಲಿದೆ. ನೈಸರ್ಗಿಕ ಅನಿಲದಿಂದ ಗೋಧಿಯ ವರೆಗೆ, ವಿವಿಧ ಸರಕುಗಳ ಬೆಲೆಗಳು ಮುಂದಿನ ದಿನಗಳಲ್ಲಿ ಹೆಚ್ಚಾಗುತ್ತವೆ ಎಂದು ತಜ್ಞರು ನಂಬುತ್ತಾರೆ. ಮುಂದಿನ … Continued