ಉಕ್ರೇನ್ ಮೇಲಿನ ದಾಳಿ ಖಂಡಿಸುವ ವಿಶ್ವಸಂಸ್ಥೆ ನಿರ್ಣಯಕ್ಕೆ ರಷ್ಯಾ ವೀಟೋ ; ಭಾರತ, ಚೀನಾ,ಯುಎಇ ಮತದಾನದಿಂದ ದೂರ

ನ್ಯೂಯಾರ್ಕ್‌: ಉಕ್ರೇನ್‌ನ ಮೇಲೆ ಮಾಸ್ಕೋದ ಆಕ್ರಮಣವನ್ನು ಖಂಡಿಸುವ ಮತ್ತು ತನ್ನ ಸೈನ್ಯವನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ಕರಡು ಭದ್ರತಾ ಮಂಡಳಿಯ ನಿರ್ಣಯವನ್ನು ರಷ್ಯಾ ವೀಟೋ ಮಾಡಿದೆ. ಅಮೆರಿಕ ಪ್ರಸ್ತಾವಿತ ಕರಡು ಪಠ್ಯದ ಮೇಲೆ ನಡೆದ ಮತದಾನದಿಂದ ಚೀನಾ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೂರವಿದ್ದವು. ಉಳಿದ 11 ಸದಸ್ಯ ದೇಶಗಳು ಪರವಾಗಿ ಮತ … Continued

ರಷ್ಯಾ ತಡೆಯಲು ಯಾರಿಂದಲೂ ಸಾಧ್ಯವಿಲ್ಲ..ವ್ಲಾಡಿಮಿರ್ ಪುಟಿನ್ ಜಗತ್ತನ್ನು ಆಳುತ್ತಾರೆ: ಅಂಧ ಅತೀಂದ್ರಿಯ ಬಾಬಾ ವಂಗಾ ಮೊದಲೇ ಹೇಳಿದ್ದರು…!

ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಖ್ಯಾತಿ ಪಡೆದಿರುವ ಬಾಬಾ ವಂಗಾ 26 ವರ್ಷಗಳ ಹಿಂದೆ ಜಗತ್ತನ್ನು ತೊರೆದಿರಬಹುದು ಆದರೆ ಅವರ ಭವಿಷ್ಯವಾಣಿಗಳು ಇಂದಿಗೂ ಜೀವಂತವಾಗಿವೆ. 5079 ರವರೆಗಿನ ಅತೀಂದ್ರಿಯ ಮುನ್ಸೂಚನೆಗಳ ಸರಣಿಯಲ್ಲಿ 9/11 ಭಯೋತ್ಪಾದಕ ದಾಳಿಗಳು ಮತ್ತು ಬ್ರೆಕ್ಸಿಟ್‌ನಂತಹ ಪ್ರಮುಖ ಘಟನೆಗಳನ್ನು ವಂಗಾ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾಗುತ್ತದೆ. ಈಗ, ರಷ್ಯಾ ಉಕ್ರೇನ್ ಮೇಲೆ ವಿಧ್ವಂಸಕ ದಾಳಿಯನ್ನು … Continued

ಗ್ರೇಟರ್‌ ರಷ್ಯಾದ ಕನಸಿನಲ್ಲಿರುವ ಪುಟಿನ್ ಮಹಾತ್ವಾಕಾಂಕ್ಷೆ ಉಕ್ರೇನ್‌ಗೆ ಯಾಕೆ ನಿಲ್ಲುವುದಿಲ್ಲ..?

ಉಕ್ರೇನ್‌ ಮೇಲೆ ಮಾಡುತ್ತಿರುವ ಯುದ್ಧದಿಂದಾಗಿ ರಷ್ಯಾವು ಪಶ್ಚಿಮದಿಂದ ನಿರ್ಬಂಧಗಳು ಮತ್ತು ಬೆದರಿಕೆಗಳನ್ನು ಎದುರಿಸುತ್ತಿದೆ, ಆದರೆ ವಿಶ್ವದ ಭದ್ರತೆ ಮತ್ತು ರಾಜತಾಂತ್ರಿಕತೆ ಕುರಿತಾದ ತಜ್ಞರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಹಾತ್ವಾಕಾಂಕ್ಷೆ ಉಕ್ರೇನ್‌ಗೆ ನಿಲ್ಲದೆ ಮುಂದುವರಿಯಬಹುದು ಎಂದು ಹೇಳಿದ್ದಾರೆ. ಪುಟಿನ್ ಅವರ ಇತ್ತೀಚಿನ ಭಾಷಣಗಳು ಮತ್ತು ಹೇಳಿಕೆಗಳು ಉಕ್ರೇನ್ ಎಂಬುದು ರಷ್ಯಾದ ಹಿಂದಿನ ವೈಭವವನ್ನು ಪುನಃಸ್ಥಾಪಿಸುವ ಅವರ ದೊಡ್ಡ … Continued

ರಷ್ಯಾ-ಉಕ್ರೇನ್ ಯುದ್ಧ ಮಧ್ಯೆಯೇ ಉಕ್ರೇನ್‌ ಜೊತೆ ಮಾತುಕತೆಗೆ ನಿಯೋಗ ಕಳುಹಿಸಲು ಸಿದ್ಧ ಎಂದ ರಷ್ಯಾ ಅಧ್ಯಕ್ಷ ಪುಟಿನ್..!

ಮಾಸ್ಕೋ: ಮಹತ್ವದ ಬೆಳವಣಿಗೆಯಲ್ಲಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ ಜೊತೆ ಮಾತುಕತೆ ನಡೆಸಲು ನಿಯೋಗವನ್ನು ಕಳುಹಿಸಲು ಸಿದ್ಧವಾಗಿರುವುದಾಗಿ ಪ್ರಕಟಿಸಿದ್ದಾರೆ. ಸರ್ಕಾರಿ ಮಾಧ್ಯಮ ಸ್ಪುಟ್ನಿಕ್ ಪ್ರಕಾರ, ಪುಟಿನ್ ಅವರು ಉಕ್ರೇನ್‌ನೊಂದಿಗೆ ಮಾತುಕತೆಗಾಗಿ ಮಿನ್ಸ್ಕ್‌ಗೆ ನಿಯೋಗವನ್ನು ಕಳುಹಿಸಲು ಸಿದ್ಧರಾಗಿದ್ದಾರೆ. ವಿದೇಶಾಂಗ ಸಚಿವಾಲಯ, ರಕ್ಷಣಾ ಮತ್ತು ಆಡಳಿತ ಅಧಿಕಾರಿಗಳು ಸೇರಿದಂತೆ ರಷ್ಯಾದ ರಾಜತಾಂತ್ರಿಕ ನಿಯೋಗವನ್ನು ಮಿನ್ಸ್ಕ್‌ಗೆ ಕಳುಹಿಸಬಹುದು … Continued

ಇದೇನು ಸೋಜಿಗ..? : ಪಶ್ಚಿಮ ಬಂಗಾಳದಲ್ಲಿ ಮಧ್ಯರಾತ್ರಿಗೆ ವಿಧಾನಸಭೆ ಅಧಿವೇಶನ ಆರಂಭ..! ಹೀಗಾದರೆ ದೇಶದ ಇತಿಹಾಸದಲ್ಲೇ ಮೊದಲು..!!

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಅಧಿವೇಶನವು ಮಾರ್ಚ್ 7 ರ  ರಾತ್ರಿಯ  2 ಗಂಟೆಗೆ ಪ್ರಾರಂಭವಾಗಲಿದೆ ಎಂದು ರಾಜ್ಯಪಾಲ ಜಗದೀಪ್ ಧನಕರ್ ಅವರು ಸಹಿ ಮಾಡಿರುವ ಟಿಪ್ಪಣಿಯಲ್ಲಿ ಸರ್ಕಾರಕ್ಕೆ ಕಳುಹಿಸಲಾಗಿದೆ..! ಫೆಬ್ರವರಿ 17ರಂದು ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯಪಾಲರಿಗೆ ಕಳುಹಿಸಿದ ಟಿಪ್ಪಣಿಯೊಂದಿಗೆ ಮಾರ್ಚ್ 7 ರಂದು ಮಧ್ಯಾಹ್ನ 2 ಗಂಟೆಗೆ ವಿಧಾನಸಭೆ ಅಧಿವೇಶನವನ್ನು ಕರೆಯುವಂತೆ ಶಿಫಾರಸು … Continued

ಹಿಜಾಬ್ ವಿವಾದ: ವಿಚಾರಣೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ 2022ರ ಫೆಬ್ರವರಿ 5ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಮುಕ್ತಾಯಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಫೆಬ್ರವರಿ 10, 2022 ರಂದು ವಿಚಾರಣೆಯನ್ನು ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ.ಎಂ. … Continued

ಉಕ್ರೇನ್ ಸೇನೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ಮಾತುಕತೆಗೆ ಸಿದ್ಧ ಎಂದ ರಷ್ಯಾ

ಮಾಸ್ಕೋ: ದಾಳಿಯ ಎರಡನೇ ದಿನದಂದು ರಷ್ಯಾದ ಪಡೆಗಳು ಕೈವ್ ಅನ್ನು ಸಮೀಪಿಸುತ್ತಿರುವಾಗ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಶುಕ್ರವಾರ ಉಕ್ರೇನ್ ಅನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಮಾಸ್ಕೋ ಬಯಸಿದೆ ಎಂದು ಹೇಳಿದ್ದಾರೆ. ಉಕ್ರೇನ್ ಸೇನೆಯು ಹೋರಾಟವನ್ನು ನಿಲ್ಲಿಸಿದರೆ ರಷ್ಯಾ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ಅವರು ಹೇಳಿದರು. “ಗುರುವಾರ ಮುಂಜಾನೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ … Continued

ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತದ ಜೊತೆ ಮಾತುಕತೆ : ಅಮೆರಿಕ ಅಧ್ಯಕ್ಷ ಬಿಡೆನ್‌

ವಾಷಿಂಗ್ಟನ್: ರಷ್ಯಾದಿಂದ ಸೇನಾ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತದ ಜೊತೆ ಸಮಾಲೋಚನೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಹೇಳಿದ್ದಾರೆ. ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರತದ ಜೊತೆ ನಾವು ಮಾತುಕತೆ ನಡೆಸಲಿದ್ದೇವೆ. ನಾವು ಅದನ್ನು ಇನ್ನೂ ಸಂಪೂರ್ಣವಾಗಿ ಬಗೆಹರಿಸಿಲ್ಲ” ಎಂದು ಶ್ವೇತಭವನದಲ್ಲಿ ಉಕ್ರೇನ್ ಸಂಘರ್ಷದ ಕುರಿತು ನಡೆಸಿದ ಸುದ್ದಿಗೋಷ್ಠಿ ವೇಳೆ ಅಮೆರಿಕ … Continued

ಉಕ್ರೇನ್ ಮೇಲೆ ಆಕ್ರಮಣದ ನಂತರ ರಷ್ಯಾ ಮೇಲೆ ನಿರ್ಬಂಧ ವಿಧಿಸಿದ ಅಮೆರಿಕ

ವಾಷಿಂಗ್ಟನ್: ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ರಷ್ಯಾವನ್ನು ಗುರಿಯಾಗಿಸಿಕೊಂಡು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಗುರುವಾರ ಹೊಸ ಸುತ್ತಿನ ನಿರ್ಬಂಧಗಳನ್ನು ಘೋಷಿಸಿದರು, ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರು “ಈ ಯುದ್ಧವನ್ನು ಆರಿಸಿಕೊಂಡರು” ಮತ್ತು ಅವರ ಕ್ರಮದ ಪರಿಣಾಮಗಳನ್ನು ಅವರ ದೇಶವು ಭರಿಸಲಿದೆ ಎಂದು ಹೇಳಿದ್ದಾರೆ. ದೇಶದ ಅತಿ ದೊಡ್ಡ ಬ್ಯಾಂಕ್ ಸ್ಬೆರ್‌ಬ್ಯಾಂಕ್ ಸೇರಿದಂತೆ … Continued

ರಷ್ಯಾದ ದಾಳಿಯಲ್ಲಿ ಉಕ್ರೇನ್​ನ 137 ಜನರ ಸಾವು; 316 ಜನರಿಗೆ ಗಾಯ

ಕ್ವೈವ್‌: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಮೊದಲ ದಿನದಲ್ಲಿ 137 ಜನರು ಮೃತಪಟ್ಟಿದ್ದಾರೆ ಹಾಗೂ 316 ಜನರಿಗೆ ಗಾಯಗೊಂಡಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ ಮೇಲೆ ಯುದ್ಧ ಘೋಷಿಸಿದ್ದರು. ಇದು ಯುರೋಪ್​ನಲ್ಲಿ ಎರಡನೇ ಮಹಾಯುದ್ಧದ ನಂತರ ನಡೆಯುತ್ತಿರುವ ಮೊದಲ ಭೀಕರ ಕದನವಾಗಿದೆ. ಉಕ್ರೇನ್ ರಾಜಧಾನಿ ಕೈವ್ ಸೇರಿದಂತೆ ಅಲ್ಲಿನ ಪ್ರಮುಖ ನಗರಗಳ … Continued