ಮುಂದುವರಿದ ಮುಷ್ಕರ: ಸಾರಿಗೆ ಇಲಾಖೆ 334 ನೌಕರರ ವಜಾ

ಬೆಂಗಳೂರು: ನೋಟಿಸ್ ನೀಡಿದರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯಿಂದ ಈವರೆಗೆ 334 ನೌಕರರನ್ನು ವಜಾಗೊಳಿಸಿ ಆದೇಶಿಸಲಾಗಿದೆ. ಶುಕ್ರವಾರ 118 ನೌಕರರನ್ನು ವಜಾಗೊಳಿಸಲಾಗಿತ್ತು. 216 ನೌಕರರನ್ನು ಶನಿವಾರ ವಜಾಗೊಳಿಸಿ ಆದೇಶ ಮಾಡಲಾಗಿದ್ದು, ಒಟ್ಟಾರೆ 334 ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. … Continued

ಪ್ರಶಾಂತ್ ಕಿಶೋರ್‌ ಕ್ಲಬ್ ಹೌಸ್ ಆಡಿಯೋ ಬಿಡುಗಡೆ..ಬಂಗಾಳದಲ್ಲಿ ದೀದಿಯಷ್ಟೇ ಮೋದಿಯೂ ಜನಪ್ರಿಯ, ದಲಿತರಿಂದ ಬಿಜೆಪಿಗೆ ಮತ ಎಂದ ಪಿಕೆ..!!

ನವ ದೆಹಲಿ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೂ ಗೆಲ್ಲುವ ಪಕ್ಷಗಳಲ್ಲಿ ಸೇರಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕ್ಲಬ್ ಹೌಸ್ ಚಾಟ್ ನಲ್ಲಿ ಹೇಳಿದ್ದಾರೆನ್ನಲಾದ ಆಡಿಯೋ ಈಗ ವೈರಲ್‌ ಆಗಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಪತ್ರಕರ್ತರೊಬ್ಬರು ಆಯೋಜಿಸಿದ್ದ ಒಪೆನ್ ಕ್ಲಬ್ … Continued

ಕೋಡಿಹಳ್ಳಿ ಚಂದ್ರಶೇಖರ ಅವರನ್ನು ವಶಕ್ಕೆ ಪಡೆದ ಪೊಲೀಸರು..!

ಬೆಳಗಾವಿ : ರೈತ ಮುಖಂಡ, ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಬೆಳಗಾವಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ನಗರದ ಖಾಸಗಿ ಹೋಟೆಲ್ ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತ ಮುಖಂಡರ ಹಾಗೂ ಸಾರಿಗೆ ನೌಕರರ ಜೊತೆಗೆ ಸಭೆ ಮಾಡಲು ಮುಂದಾಗಿದ್ದ  ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಶಕ್ಕೆ ಪಡೆದಿದ್ದಾರೆ. … Continued

ಕೊವಿಡ್‌ ಲಸಿಕೆಯಷ್ಟೇ ಅಲ್ಲ,ಕೆಲವು ರಾಜ್ಯಗಳಲ್ಲಿ ರೆಮ್ಡೆಸಿವಿರ್ ಕೊರತೆ ..!?

ನವ ದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ವಿಸ್ತರಣೆ ಮಾಡುತ್ತಿರುವ ಸಂದರ್ಭದಲ್ಲಿ ತಮ್ಮ ರಾಜ್ಯಗಳಲ್ಲಿ ಲಸಿಕೆ ಕೊರತೆಯುಂಟಾಗಿದೆ ಎಂದು ರಾಜಸ್ತಾನ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದಲ್ಲಿ ಅನೇಕ ಕಡೆ ಲಸಿಕಾ ಕೇಂದ್ರಗಳನ್ನು ಕೊರತೆ ಕಾರಣದಿಂದ ಮುಚ್ಚಲಾಗಿದೆ ಎಂದು ತಿಳಿಸಲಾಗಿದೆ.ಈಗ ರೆಮ್ಡೆಸಿವಿರ್ ಲಸಿಕೆಯ ಕೊರತೆ ಬಗ್ಗೆ ಕೆಲ ರಾಜ್ಯಗಳಲ್ಲಿ ವರದಿಯಾಗಿದೆ. … Continued

ಭಾರತದ ಅತಿಹೆಚ್ಚು ಏಕದಿನದ ಸ್ಟ್ರೈಕ್‌..1.45 ಲಕ್ಷಕ್ಕೂ ಹೆಚ್ಚು ದೈನಂದಿನ ಸೋಂಕು..ಸೆಪ್ಟೆಂಬರ್‌ ನಂತರ 10 ಲಕ್ಷ ದಾಟಿದ ಸಕ್ರಿಯ ಪ್ರಕರಣ

ನವ ದೆಹಲಿ: ಭಾರತದಲ್ಲಿ ದೈನಂದಿನ ಕೊರೊನಾ ಸೋಂಕು ಹೆಚ್ಚಳ ಮುಂದುವರಿದಿದ್ದು ಶನಿವಾರ 1,45,384 ತಾಜಾ ಪ್ರಕರಣಗಳನ್ನು ವರದಿ ಮಾಡಿದೆ, ಇದುವರೆಗಿನ ಏಕೈಕ ಏಕದಿನದ ಅತಿ ಹೆಚ್ಚು ಸ್ಪೈಕ್ ಆಗಿದೆ, ಇದು ಒಟ್ಟಾರೆ ಸೋಂಕಿತರ ಸಂಖ್ಯೆ 1,32,05,926 ಕ್ಕೆ ತಲುಪಿದೆ. 2020 ರಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ಇದು ಐದನೇ ಬಾರಿಗೆ ಭಾರತದ 24 ಗಂಟೆಗಳ … Continued

ನಾಗ್ಪುರ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ನಾಲ್ವರ ಸಾವು

ಮಹಾರಾಷ್ಟ್ರದ ನಾಗ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಕೆಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರದ ವಾಡಿ ಪ್ರದೇಶದಲ್ಲಿರುವ ಆಸ್ಪತ್ರೆಯಲ್ಲಿ ರಾತ್ರಿ 8.10 ಕ್ಕೆ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದರು. ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಐಸಿಯುನ ಎಸಿ ಘಟಕದಿಂದ ಬೆಂಕಿ ಪ್ರಾರಂಭವಾಗಿದೆ ಎಂದು ವರದಿಯಾಗಿದೆ. ಬೆಂಕಿ … Continued

ಮಹತ್ವದ ಸುದ್ದಿ..ಸಾರಿಗೆ ಮುಷ್ಕರವನ್ನೇ ನಿಷೇಧಿಸಿದ ಸರ್ಕಾರ; ನೌಕರರ ಮೇಲೆ ಕಾನೂನು ಅಸ್ತ್ರ ..!

ಬೆಂಗಳೂರು:  ಕಳೆದ ಮೂರುದಿನಗಳಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ವಿರುದ್ಧ ಸರ್ಕಾರ ಕಾನೂನು ಅಸ್ತ್ರ ಪ್ರಯೋಗಿಸಿದೆ. ಸರ್ಕಾರದ ಒಪ್ಪಂದ ಮನವಿಗೆ ಒಪ್ಪದ ನೌಕರರ ಮುಷ್ಕರವನ್ನೇ ನಿಷೇಧಿಸಿ ಸರ್ಕಾರ ಆದೇಶಿಸಿದೆ. ಕಾನೂನಿನ ಮೂಲಕ ಸಾರಿಗೆ ನೌಕರರ ಮುಷ್ಕರವನ್ನ ಹತ್ತಿಕ್ಕಲು ಸರ್ಕಾರ ಮುಂದಾಗಿದ್ದು,  ಸಾರ್ವಜನಿಕ ಉಪಯುಕ್ತ ಸೇವೆ ಎಂದು ಪರಿಗಣಿಸಿ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಕೈಗಾರಿಕಾ ವಿವಾದ … Continued

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ: ಸಚಿವ ಸುರೇಶಕುಮಾರ

ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಕಳೆದ ವರ್ಷದಂತೆ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು ಶಿಕ್ಷಣ ಸಚಿವ ಎಸ್‌.ಸುರೇಶಕುಮಾರ ಹೇಳಿದರು. ಯಾವುದೇ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗದಂತೆ ಕ್ರಮ ವಹಿಸಬೇಕೆಂದು ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಪರೀಕ್ಷಾ ಕೊಠಡಿಯಲ್ಲಿ ಗರಿಷ್ಠ ೧೮-೨೦ ವಿದ್ಯಾರ್ಥಿಗಳಷ್ಟೇ ಇರಬೇಕು. ಪ್ರತಿ ಕೊಠಡಿಗೆ … Continued

ಸಚಿವ ಜೋಶಿ ಮನೆ ಎದುರು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮನೆಯ ಮುಂದೆ ಏಪ್ರಿಲ್ 6ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲವು ತಿಂಗಳ ಹಿಂದೆ ನೈಸರ್ಗಿಕ ವಿಕೋಪದಿಂದಾಗಿ ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಮೃತ ಶ್ರೀದೇವಿ ವೀರಪ್ಪ ಕಮ್ಮಾರ್ (31) ಅವರ ಮನೆ ಕುಸಿದಿತ್ತು. … Continued

ಕರ್ನಾಟದಲ್ಲಿ ಬೆಂಗಳೂರಿನಲ್ಲೇ ಶೇ.72ರಷ್ಟು ಕೊರೊನಾ ಪ್ರಕರಣಗಳು.. 46 ಜನರ ಸಾವು

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಕೊರೋನಾ ದೈನಂದಿನ ಸೋಂಕಿನಲ್ಲಿ ದಿಢೀರ್‌ ಹೆಚ್ಚಳವಾಗಿದ್ದು, ಒಂದೇ ದಿನ 7955 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇದು ಈ ವರ್ಷದ ಅತಿ ಹೆಚ್ಚು ದೈನದಿನ ಪ್ರಕರಣವಾಗಿದೆ. ಒಟ್ಟು 46 ಜನ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,48,085 ಕ್ಕೆ … Continued