ಯಲ್ಲಾಪುರ: ಗುಡ್ಡ ಕುಸಿದು ನಾಲ್ವರು ಕಾರ್ಮಿಕರ ಸಾವು

ಕಾರವಾರ: ತೋಟದ ಮಣ್ಣಿನ ಕೆಲಸ ಮಾಡುವಾಗ ಆಕಸ್ಮಾತ್‌ ಗುಡ್ಡ ಕುಸಿದು ನಾಲ್ವರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ  ಯಲ್ಲಾಪುರ ತಾಲೂಕಿನ ಇಡಗುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ. ಇಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂತೇಬೈಲ್‌ ಮಂಜುನಾಥ ಭಟ್‌ ಅವರ ಮಾಲೀಕತ್ವದ ತೋಟಕ್ಕೆ ಮಣ್ಣು ತೆಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ತೋಟಕ್ಕೆಂದು ಮಣ್ಣು ತೆಗೆಯಲು ಒಟ್ಟು … Continued

ಬಿಎಸ್‌ವೈ ಬಜೆಟ್ಟಿನ ವಿಶೇಷತೆಗಳೇನು? ಪ್ರಮುಖವಾದದ್ದು ಇಲ್ಲಿದೆ ನೋಡಿ

*ಆಯವ್ಯಯ ಗಾತ್ರ (ಸಂಚಿತ ನಿಧಿ)- 2,46,207 ಕೋಟಿ ರೂ. *ಒಟ್ಟು ಸ್ವೀಕೃತಿ- 2,43,734 ಕೋಟಿ ರೂ.; ರಾಜಸ್ವ ಸ್ವೀಕೃತಿ- 1,72,271 ಕೋಟಿ ರೂ.; ಸಾರ್ವಜನಿಕ ಋಣ 71,332 ಕೋಟಿ ರೂ. ಮತ್ತು ಬಂಡವಾಳ ಸ್ವೀಕೃತಿ 71,463 ಕೋಟಿ ರೂ. *ಒಟ್ಟು ವೆಚ್ಚ- 2,46,207 ಕೋಟಿ ರೂ.; ರಾಜಸ್ವ ವೆಚ್ಚ – 1,87,405 ಕೋಟಿ ರೂ.; ಬಂಡವಾಳ … Continued

ಅತ್ಯಾಚಾರ ಆರೋಪಿ ಪ್ರಕರಣ; ನಾವು ಹೇಳಿದ್ದೇ ಬೇರೆ, ವರದಿಯಾಗಿದ್ದೇ ಬೇರೆ-ತಪ್ಪು ವರದಿಗೆ ಸುಪ್ರೀಂ ಕೋರ್ಟ್ ಅಸಮಾಧಾನ‌

ನವದೆಹಲಿ: ಮಹಿಳೆಯರ ಬಗ್ಗೆ ತಮಗೆ ಅತ್ಯಂತ ಹೆಚ್ಚಿನ ಗೌರವವಿದೆ ಎಂದು ಸೋಮವಾರ ಹೇಳಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರನ್ನು ಒಳಗೊಂಡ ಪೀಠ, ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ವಾರದ ವಿಚಾರಣೆಯೊಂದನ್ನು ‘ಸಂಪೂರ್ಣ ತಪ್ಪಾಗಿ ವರದಿ ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಅತ್ಯಾಚಾರ ಸಂತ್ರಸ್ತೆಯನ್ನು ನೀವು ಮದುವೆಯಾಗುತ್ತೀರಾ ಎಂದು ನಾವು ಆರೋಪಿಯನ್ನು ಆರೋಪಿ ನೀಡಿದ … Continued

ರಾಜ್ಯ ಬಜೆಟ್‌ನಲ್ಲಿ ಮಹಿಳೆಯರಿಗೆ ಬಂಪರ್‌ ‌: ಮಹಿಳಾ ಉದ್ದೇಶಿತ ಯೋಜನೆಗಳಿಗೆ 37,188 ಕೋಟಿ ರೂ ಅನುದಾನ

  ಬೆಂಗಳೂರು; 2021-22ನೇ ಸಾಲಿನ ಬಜೆಟ್ನಲ್ಲಿ ಅಂತಾರಾಷ್ಟ್ರೀಯ ಮಹಿಳೆಯರ ದಿನವಾದ ಕಾರಣ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ.ಮಹಿಳಾ ಉದ್ದೇಶಿತ ಯೋಜನೆಗಳಿಗೆ 37,188 ಕೋಟಿ ರೂ ಅನುದಾನ, ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಆರು ತಿಂಗಳ ಮಕ್ಕಳ ಆರೈಕೆ ರಜೆಯನ್ನು ಸಹ ಬಜೆಟ್‌ನಲ್ಲಿ ಮುಖ್ಯಮಂತ್ರಿ ಯಡಯೂರಪ್ಪ ಘೋಷಣೆ ಮಾಡಿದ್ದಾರೆ. ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ, ಶೇ.4 ರಷ್ಟು … Continued

ರಾಜ್ಯ ಬಜೆಟ್‌ ಪ್ರಮುಖ ಹೈಲೈಟ್‌ಗಳು

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು, ೨೦೨೧-೨೨ನೇ ಸಾಲಿಗಾಗಿ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ೨,೪೩,೭೩೪ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಮಂಕು ತಿಮ್ಮನ ಕಗ್ಗದ ‘ಕಲ್ಲಾಗು ಬೆಟ್ಟದಡಿ ಮನದಿ ಮಲ್ಲಿಗೆಯಾಗು.’ಸಾಲುಗಳನ್ನು ಸ್ಮರಿಸಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್‌ ಮಂಡಿಸಿದರು. ಒಟ್ಟು ಸ್ವೀಕೃತಿ- 2,43,734 ಕೋಟಿ ರೂ.; ರಾಜಸ್ವ ಸ್ವೀಕೃತಿ- 1,72,271 ಕೋಟಿ ರೂ.; … Continued

ರಾಜ್ಯ ಬಜೆಟ್‌: ಕಳಸಾ-ಬಂಡೂರಿ ಯೋಜನೆಗೆ 1,677 ಕೋಟಿ ರೂ. ಮೀಸಲು

ಬೆಂಗಳೂರು : ಮಹದಾಯಿ ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ಬಜೆಟ್‌ನಲ್ಲಿ 1,677 ಕೋಟಿ ರೂ. ಅನುದಾನ ನೀಡುವ ಮೂಲಕ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ ಭಾಗದ ರೈತರ ಬೇಡಿಕೆ ಈಡೇರಿಸಿದ್ದಾರೆ. ಬೆಳಗಾವಿ, ಗದಗ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ರೈತರು ಕಳಸಾ ಬಂಡೂರಿ ನಾಲಾ ತಿರುವು ಯೋಜನೆಗೆ ಆಗ್ರಹಿಸಿ ಕಳೆದ 20 ವರ್ಷಗಳಿಂದ … Continued

ರಾಜ್ಯ ಬಜೆಟ್: ಕೃಷಿ ಪೂರಕ ಚಟುವಟಿಕೆಗಳಿಗೆ ೩೧೦೨೮ ಕೋಟಿ ರೂ. ಅನುದಾನ

ಬೆಂಗಳೂರು: ೨೦೨೧-೨೨ನೇ ನೇ ಸಾಲಿನ ರಾಜ್ಯ ಬಜೆಟ್​ನಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಸರ್ಕಾರ ೩೧,೦೨೮ ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ. ಅಲ್ಲದೆ, ಸಾವಯವ ಕೃಷಿ ಉತ್ತೇಜನಕ್ಕೆ ೫೦೦ ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ಜಾರಿ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆ ಇಟ್ಟಂಗಿಹಾಳ ಗ್ರಾಮದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಯೋಜನೆಯಡಿ ಆಹಾರ … Continued

ತಮಿಳುನಾಡಿನಲ್ಲಿ ಒಂದು ಸಾವಿರ ಕೋಟಿ ರೂ.ಕಪ್ಪು ಹಣ ಪತ್ತೆ

ನವ ದೆಹಲಿ: ತಮಿಳುನಾಡಿನ ಚಿನ್ನದ ವ್ಯಾಪಾರಿಗಳು 1 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಕಪ್ಪು ಹಣ ವ್ಯವಹಾರ ನಡೆಸಿರುವುದನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮಾ.4ರಂದು ಐಟಿ ಅಧಿಕಾರಿಗಳು ಚೆನ್ನೈ , ಮುಂಬೈ, ಕೊಯಮತ್ತೂರು, ಮಧುರೈ, ತಿರುಚಿನಾಪಳ್ಳಿ, ತ್ರಿಶೂರ್, ನೆಲ್ಲೂರು ಸೇರಿದಂತೆ 27ಕ್ಕೂ ಹೆಚ್ಚು ಚಿನ್ನದ ಮಳಿಗೆಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ಸಂದರ್ಭದಲ್ಲಿ … Continued

ದೂರು ವಾಪಸ್‌, ಸರ್ಕಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬಹುದು: ಎಚ್‌ಡಿಕೆ

ಕೋಲಾರ: ದಿನೇಶ್ ಕಲ್ಹಳ್ಳಿ ಯಾವ ಕಾರಣಕ್ಕಾಗಿ ದೂರು ಹಿಂಪಡೆದಿದ್ದಾರೆ ಎಂಬುದು ತಿಳಿದಿಲ್ಲ. ಮಾಜಿ ಮುಖ್ಯಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ಸರ್ಕಾರಕ್ಕೆ ಹೊಣೆಗಾರಿಕೆಯಿದ್ದು, ಸರ್ಕಾರವೇ ಈ ಪ್ರಕರಣದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಬಹುದು. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅಸಹ್ಯಕರ ಘಟನೆಗಳು‌ ನಡೆಯುತ್ತಿವೆ. ಸರ್ಕಾರವು ಜನತೆಗೆ ವಿಶ್ವಾಸ ಮೂಡಿಸುವ‌ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ದಿನೇಶ … Continued

ದಯವಿಟ್ಟು ಆಕೆಯನ್ನು ಸಂತ್ರಸ್ತೆ ಎಂದು ಕರೆಯಬೇಡಿ

ಬೆಂಗಳೂರು: ದಯವಿಟ್ಟು ಆಕೆಯನ್ನು ಸಂತ್ರಸ್ತೆ ಎಂದು ಕರೆಯಬೇಡಿ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಧ್ಯಮದವರಿಗೆ ಮನವಿ ಮಾಡಿದರು. ಸಿಡಿ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ  ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮನವಿ ಮಾಡಿಕೊಂಡಿದ್ದಾರೆ. ​ ಸಿಡಿ ಪ್ರಕರಣ ಸಂಬಂಧ ನೀಡಿದ್ದ ದೂರನ್ನು ದಿನೇಶ್​ ಕಲ್ಲಹಳ್ಳಿ ವಾಪಸ್ ಪಡೆದಿದ್ದಾರೆ. ಹೀಗಾಗಿ ಆಕೆಯನ್ನು ಸಂತ್ರಸ್ತೆ ಎಂದು ಕರೆಯಬೇಡಿ … Continued