ಏ.೧ರಿಂದ ಕೇಂದ್ರದಿಂದ ಹೊಸ ವೇತನ ಸಂಹಿತೆ ಕಾಯ್ದೆ ಜಾರಿಗೆ: ವೇತನ, ಪಿಎಫ್, ಗ್ರಾಚ್ಯುಟಿಯಲ್ಲಿ ಬದಲಾವಣೆ 

ನವ ದೆಹಲಿ : ಕೇಂದ್ರ ಸರ್ಕಾರ ಹೊಸ ವೇತನ ಸಂಹಿತೆ ಮಸೂದೆ 2021 ಅಥವಾ ಹೊಸ ಕಾರ್ಮಿಕ ಕಾನೂನು 2021ರ ಏಪ್ರಿಲ್ 1ರಿಂದ ಜಾರಿಗೆ ತರಲು ಮುಂದಾಗಿದೆ. ಇದು ಜಾರಿಯಾದರೆ ಕೇಂದ್ರ ಸರ್ಕಾರಿ ನೌಕರರ ವೇತನ, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಮೇಲೆ ಪರಿಣಾಮ ಬೀರಲಿದೆ. ಹೊಸ ವೇತನ ಸಂಹಿತೆ ಮಸೂದೆ 2021 ನ್ನು ಜಾರಿಗೆ … Continued

ನಟ ದರ್ಶನ ಕಟೌಟ್‌ಗೆ ಮದ್ಯಾಭಿಷೇಕ: ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸ

ತುಮಕೂರು :ಎಲ್ಲೆಡೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಗುರುವಾರ ಬಿಡುಗಡೆಯಾಗಿದೆ. ಈ ಸಂಭ್ರಮದ ಮಧ್ಯೆಯೇ ತುಮಕೂರಿನಲ್ಲಿ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಕಟೌಟ್ಗೆ ಅಭಿಷೇಕ ಮಾಡಿದ ರೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನಟ ದರ್ಶನ್‌ ಕೆಲ ಅಭಿಮಾನಿಗಳು ಅವರ ಕಟೌಟ್‌ಗೆ ಮದ್ಯಾಭಿಷೇಕ ಮಾಡಿದ್ದು ಈಗ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಅವರ … Continued

ದೇಶದಲ್ಲಿ ಒಂದೇ ದಿನ 22,854 ಕೊರೋನಾ ಸೋಂಕು…!

ನವ ದೆಹಲಿ : ಕೊರೊನಾ ವೈರಸ್ ಅಬ್ಬರ ಮತ್ತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ೨೪ ತಾಸಿನಲ್ಲಿ ಒಂದೇ ದಿನದಲ್ಲಿ 22,854 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಬುಲೆಟಿನ್ ಗುರುವಾರ ತಿಳಿಸಿದೆ. ಈ ಸೋಂಕಿನಿಂದ 126 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,58,189ಕ್ಕೆ ಏರಿಕೆಯಾಗಿದೆ. .ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ 10,938,146ಕ್ಕೆ … Continued

ಮಹಿಳೆಯರು ಜೀನ್ಸ್‌ ಧರಿಸುವುದು, ಪುರುಷರು ಶಾರ್ಟ್ಸ್‌ ಧರಿಸುವುದಕ್ಕೆ ನಿಷೇಧ ಹೇರಿದ ಖಾಪ್‌ ಪಂಚಾಯತ್‌

ಮುಜಫ್ಫರನಗರ: ಉತ್ತರ ಪ್ರದೇಶದ ಮುಜಫ್ಫರನಗರದ ಖಾಪ್‌ ಪಂಚಾಯತ್‌ ಮಹಿಳೆಯರಿಗೆ ಜೀನ್ಸ್‌ ಹಾಗೂ ಪುರುಷರಿಗೆ ಶಾರ್ಟ್ಸ್‌ ಧರಿಸುವುದಕ್ಕೆ ನಿರ್ಬಂಧ ವಿಧಿಸಿದೆ. ಜೀನ್ಸ್‌ ಉಡುಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾಗಿದೆ. ಇದನ್ನು ಧರಿಸದೇ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಬೇಕು ಎಂದು ರಜಪೂತ್‌ ಸಮಾಜದ ಖಾಪ್‌ ಪಂಚಾಯತ್‌ ಹೇಳಿದೆ. ಮಾರ್ಚ್‌ ೨ರಂದು ಪಂಚಾಯತ್‌ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸಮುದಾಯದ ಮುಖಂಡ ಠಾಕೂರ … Continued

ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ: ಬೊಮ್ಮಾಯಿ

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣ ಕುರಿತು ಕೂಲಂಕಷ ವಿಚಾರಣೆ ನಡೆಸಲು ವಿಶೇಷ ತನಿಖಾ ತಂಡ ರಚನೆ ಮಾಡುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ನನಗೆ ಪತ್ರ ಬರೆದು, ತಮ್ಮ ವಿರುದ್ಧ ರಾಜಕೀಯ ತೇಜೋವಧೆ ಹಾಗೂ ಮಾನಹಾನಿ ಮಾಡುವ ಉದ್ದೇಶವಿದ್ದು, ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿ … Continued

ಹಣಕಾಸು ಇಲಾಖೆ ಅಧಿಕಾರಿಗಳೇ ಸಿಎಂ ಯಡಿಯೂರಪ್ಪಗೆ ಟೋಪಿ ಹಾಕಿದ್ದಾರೆ: ಎಚ್‌.ವಿಶ್ವನಾಥ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಏನೂ ಹೊಸತನವಿಲ್ಲ, ಹಣಕಾಸು ಇಲಾಖೆ ಅಧಿಕಾರಿಗಳೇ ಮುಖ್ಯಮಂತ್ರಿಗೆ ಟೋಪಿ ಹಾಕಿದ್ದಾರೆ ಎಂದು ಬಿಜೆಪಿ ಮುಖಂಡ ಎಚ್‌.ವಿಶ್ವನಾಥ ಹೇಳಿದರು. ಕಳೆದ ೧೦ ವರ್ಷಗಳ ಬಜೆಟ್‌ ನೋಡಿದ್ದೇನೆ. ಇದರಲ್ಲಿ ಏನೂ ಹೊಸ ಯೋಜನೆಗಳಿಲ್ಲ. ಅಂಕಿ-ಅಂಶಗಳನ್ನು ತಿರುಗು-ಮುರುಗು ಮಾಡಿದ್ದಾರೆ. ಹಣಕಾಸು ಖಾತೆ ನಿಭಾಯಿಸಿದ ಯಡಿಯೂರಪ್ಪ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹಲವು ಬಾರಿ ಬಜೆಟ್‌ … Continued

ಅಮೆರಿಕದಿಂದ ೩೦ ಸಶಸ್ತ್ರ ಡ್ರೋನ್‌ ಖರೀದಿಗೆ ಭಾರತ ಚಿಂತನೆ

ಭಾರತ ತನ್ನ ಸಮುದ್ರ ಹಾಗೂ ಭೂ ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ದಿಸೆಯಲ್ಲಿ ಅಮೆರಿಕದಿಂದ ೩೦ ಸಶಸ್ತ್ರ ಡ್ರೋನ್‌ಗಳನ್ನು ಖರೀದಿಸಲು ಮುಂದಾಗಿದೆ. ನೆರೆಯ ಪಾಕಿಸ್ತಾನ ಹಾಗೂ ಚೀನಾದಲ್ಲಿ ಉದ್ವಿಗ್ನತೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಡ್ರೋನ್‌ಗಳನ್ನು ಖರೀದಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಯಾನ್‌ ಡಿಯಾಗೊ ಮೂಲದ ಜನರಲ್‌ ಅಟಾಮಿಕ್ಸ್‌ ತಯಾರಿಸಿದ ಎಂಕ್ಯು ೯-ಬಿ ಪ್ರಿಡೇಟರ್‌ ಡ್ರೋನ್‌ಗಳನ್ನು ೩೦೦ … Continued

ಉತ್ತರಾಖಂಡ: ತೀರತ್‌ ಸಿಂಗ್‌ ನೂತನ ಮುಖ್ಯಮಂತ್ರಿ

ತೀರತ್‌ ಸೀಂಗ್‌ ರಾವತ್‌ ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ತ್ರಿವೇಂದ್ರ ಸಿಂಗ್‌ ರಾವತ್‌ ರಾಜಿನಾಮೆ ನೀಡಿದ ನಂತರ ತೀರತ್‌ ಸಿಂಗ್‌ ಸಿಎಂ ಹುದ್ದೆಗೇರಲಿದ್ದಾರೆ. ಉತ್ತರಾಖಂಡದ ಮೊದಲ ಶಿಕ್ಷಣ ಸಚಿವರಾಗಿದ್ದ ತೀರತ್‌ ಸಿಂಗ್‌, ರಾಜ್ಯದ ಬಿಜೆಪಿ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತ್ರಿವೇಂದ್ರ ರಾವತ್ ಅವರ ಆಡಳಿತದ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ … Continued

ತನ್ನ ಕದ್ದ ಎಮ್ಮೆ ಪತ್ತೆಗೆ ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸಿ ಪೊಲೀಸ್‌ ಠಾಣೆ ಮೆಟ್ಟಲೇರಿದ ಉತ್ತರ ಪ್ರದೇಶದ ವ್ಯಕ್ತಿ…!

ನವ ದೆಹಲಿ: ಉತ್ತರ ಪ್ರದೇಶದ ಶಾಮ್ಲಿ ಪೊಲೀಸರು ವಿಚಿತ್ರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತೊಯೊಬ್ಬ ತನ್ನ ಎಮ್ಮೆ ಕದ್ದ ಬಗ್ಗೆ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದು, ಈ ವ್ಯಕ್ತಿಯು ತನ್ನನ್ನು ಮಾಲೀಕ ಎಂದು ಹೇಳಿಕೊಂಡಿದ್ದಾನೆ. ಅದರ ಮಾಲೀಕತ್ವದ ವಿವಾದ ಬಗೆಹರಿಸಲು ಎಮ್ಮೆಯ ಡಿಎನ್‌ಎ ಪರೀಕ್ಷೆಗೆ ಕೋರಿದ್ದಾನೆ…! ಝಿಂಝಾನಾದ ರೈತ ಚಂದ್ರಪಾಲ್ ಸಿಂಗ್ (40), 2020 ರ ಆಗಸ್ಟ್ … Continued

ಮ್ಯಾನ್ಮಾರ್: ಸೈನ್ಯದ ಮುಂದೆ ಮಂಡಿಯೂರಿ ಮಕ್ಕಳನ್ನು ಬಿಟ್ಟುಬಿಡಿ ನನ್ನ ಕೊಂದು ಬಿಡಿ ಎಂದ ಸಿಸ್ಟರ್

ಯಾಂಗೂನ್ : ಉತ್ತರ ಮ್ಯಾನ್ಮಾರ್ ನ ನಗರವೊಂದರಲ್ಲಿ ಮಂಡಿಯೂರಿ ಕುಳಿತ ಸಿಸ್ಟರ್ ಆನ್ ರೋಸ್ ನು ತವಾಂಗ್ ಅವರು ಭಾರಿ ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳ ಮುಂದೆ ಮಕ್ಕಳನ್ನು’ ಬಿಟ್ಟು ತಮ್ಮ ಪ್ರಾಣ ತೆಗೆಯುವಂತೆ ಬೇಡಿಕೊಂಡಿರುವ ದೃಶ್ಯ ಸದ್ಯ ವೈರಲ್ ಆಗುತ್ತಿದೆ. ಕ್ಯಾಥೋಲಿಕ್ ಸನ್ಯಾಸಿನಿ ಪ್ರತಿಭಟನಾ ನಿರತರ ಮೇಲೆ ದಾಳಿ ನಡೆಸಲು ಸಿದ್ಧವಾಗಿದ್ದ ಮಿಲಿಟರಿ ಎದುರು ಆಕೆ … Continued