ಸ್ಟೆಮ್ ಸೆಲ್ ಮೂಲಕ ಅಪ್ರಬುದ್ಧ ಮಾನವ ಅಂಡಾಣು ಸೃಷ್ಟಿ: ಜಪಾನ್ ವಿಜ್ಞಾನಿಗಳ ಮಹತ್ತರ ಸಾಧನೆ

ಪ್ರಯೋಗಶಾಲೆಯಲ್ಲಿ ಮಾನವ ಅಂಡಾಣುಗಳನ್ನು ಸೃಷ್ಟಿಸುವತ್ತ ವಿಜ್ಞಾನಿಗಳು ಹೆಜ್ಜೆ ಇಟ್ಟಿದ್ದಾರೆ.ಜಪಾನಿನ ವಿಜ್ಞಾನಿಗಳ ಒಂದು ತಂಡ ಮಾನವ ರಕ್ತ ಕಣಗಳನ್ನು ಸ್ಟೆಮ್ ಸೆಲ್ ಆಗಿ ಪರಿವರ್ತಿಸಿ, ನಂತರ ಅವು ಅಪ್ರಬುದ್ಧ ಮಾನವ ಅಂಡಾಣುಗಳಾಗಿ ಪರಿವರ್ತನೆ ಮಾಡಿದಂತಹದ ಪ್ರಯೋಗ ಮಾಡಿದ್ದಾರೆ. ಈಗ ಸೃಷ್ಟಿಯಾದ ಅಂಡಾಣುಗಳು ಮಗುವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮಾನವ ಸಂತಾನೋತ್ಪತ್ತಿಗೆ ಉಪಯುಕ್ತ ಮತ್ತು ಸುರಕ್ಷಿತವಾದ ಅಂಡಾಣುಗಳನ್ನು ಸೃಷ್ಟಿಸಲು ಇನ್ನೂ … Continued

ದೆಹಲಿ ಬಾಟ್ಲಾ ಎನ್‌ಕೌಂಟರ್‌ ಪ್ರಕರಣ: ಉಗ್ರ ಅರಿಜ್‌ ಖಾನಗೆ ಮರಣದಂಡನೆ

    ನವ ದೆಹಲಿ: 2008 ರ ಬಾಟ್ಲಾ ಹೌಸ್ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಕೊಲೆ ಮತ್ತು ಇತರ ಅಪರಾಧಗಳಿಗಾಗಿ ದೆಹಲಿ ನ್ಯಾಯಾಲಯ ಸೋಮವಾರ ಉಗ್ರ ಅರಿಜ್ ಖಾನ್ ಅವರಿಗೆ ಮರಣದಂಡನೆ ವಿಧಿಸಿದೆ.ನ್ಯಾಯಾಲಯವು ಈ ಪ್ರಕರಣವನ್ನು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಹೇಳಿದೆ. ಇದಕ್ಕೂ ಮೊದಲು, ಖಾನ್ ಗೆ ಪೊಲೀಸರು … Continued

ಸದನದಲ್ಲಿ ಸಿಎಂ ಭರವಸೆ: ಪಂಚಮಸಾಲಿ ಮೀಸಲು ಹೋರಾಟ ತಾತ್ಕಾಲಿಕ ಕೈಬಿಟ್ಟ ಸ್ವಾಮೀಜಿ

ಬೆಂಗಳೂರು: ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೋರಿ ಕೂಡಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಇದನ್ನು ಖಚಿತ ಪಡಿಸಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನಿಸುವ ಸ್ಪಷ್ಟ ಭರವಸೆ ನೀಡಿದ ಹಿನ್ನೆಲೆಯಲ್ಲಿ ‘ಪಂಚಮಸಾಲಿ ಮೀಸಲಾತಿ ಹೋರಾಟವನ್ನ ತಾತ್ಕಾಲಿಕವಾಗಿ ಕೈಬಿಡುತ್ತಿದ್ದೇವೆ ಎಂದರು. ವಿಜಯಪುರ … Continued

ಕುಮಾರಸ್ವಾಮಿಯವರೇ ಶಕುನಿ, ಮಂಥರೆಯಂಥವರ ಮಾತನ್ನು ದಯವಿಟ್ಟು ಕೇಳಬೇಡಿ: ಮಾರ್ಮಿಕವಾಗಿ ಹೇಳಿದ ಜಿಟಿಡಿ

ಮೈಸೂರು: ಎಚ್‌.ಡಿ.ಕುಮಾರಸ್ವಾಮಿಯವರೇ ನೀವು ಶಕುನಿ, ಮಂಥರೆಯಂಥವರ ಮಾತನ್ನು ದಯವಿಟ್ಟು ಕೇಳಬೇಡಿ ಎಂದು ಚಾಮುಂಡೇಶ್ವರಿ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಶಾಸಕ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ. ಮೈಸೂರಿನಲ್ಲಿ ಆತನಾಡಿದ ಅವರು, ಶಕುನಿ ಕೌರವನ ಜೊತೆ ಸೇರಿ ಕೌರವ ವಂಶವನ್ನೇ ನಾಶ ಮಾಡಿದ ಉದಾಹರಣೆಯಿದೆ. ಮಂಥರೆ ರಾಮನ ಪಟ್ಟಾಭಿಷೇಕ ತಪ್ಪಿಸಿ … Continued

ಗ್ರಾಹಕರೇ ಗಮನಿಸಿ: ಏ.1ರಿಂದ ಈ ಬ್ಯಾಂಕುಗಳ ಹಳೆ ಚೆಕ್ – ಪಾಸ್‌ ಪುಸ್ತಕ ರದ್ದಾಗಲಿದೆ

ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಆಂಧ್ರ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಕಳೆದ ವರ್ಷ ವಿಲೀನಗೊಂಡಿವೆ. ಈ ಬ್ಯಾಂಕುಗಳ ಚೆಚೆಕ್ ಪುಸ್ತಕ ಹಾಗೂ ಪಾಸ್‌ ಪುಸ್ತಕ‌ಗಳನ್ನು ಈಗಲೂ ಬಳಸುತ್ತಿದ್ದಾರೆ. ಆದರೆ ಬ್ಯಾಂಕ್‌ ವಿಲೀನಗೊಂಡ ಒಂದು ವರ್ಷದ ನಂತರ ಅಂದರೆ ಏಪ್ರಿಲ್ 1, … Continued

ಜಯಲಲಿತಾ ಸಾವಿಗೆ ಡಿಎಂಕೆ ಮುಖಂಡರೇ ಕಾರಣ: ಸಿಎಂ ಪಳನಿಸ್ವಾಮಿ ನೇರ ಆರೋಪ

ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಡಿಎಂಕೆ ಮುಖಂಡರಾದ ಎಂ. ಕರುಣಾನಿಧಿ ಹಾಗೂ ಸ್ಟಾಲಿನ್‌ ಕಾರಣಕರ್ತರು ಎಂದು ಆರೋಪಿಸಿದ ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ, ಡಿಎಂಕೆ ಮುಖಂಡರಿಗೆ ಜಯಲಲಿತಾ ಅವರ ಆತ್ಮ ತಕ್ಕ ಶಿಕ್ಷೆ ನೀಡುತ್ತದೆ ಎಂದು ಹೇಳಿದ್ದಾರೆ. ಜಯಲಲಿತಾ ೨೦೧೫ರಲ್ಲಿ ಎಲ್ಲ ಆರೋಪಗಳಿಂದ ಮುಕ್ತರಾಗಿದ್ದರೂ ಡಿಎಂಕೆ ಮುಖಂಡರು ಮೇಲ್ಮನವಿ ಸಲ್ಲಿಸಿದ್ದರಿಂದ ಜಯಲಲಿತಾ ಖಿನ್ನತೆಗೊಳಗಾದರು. ಜಯಲಲಿತಾ ಸಾವಿಗೆ ಕಾರಣರಾದ … Continued

ಭಾರತದಲ್ಲಿ 26 ಸಾವಿರ ದಾಟಿದ ದಿನವೊಂದರ ಕೊರೊನಾ ಸೋಂಕು..!

ನವ ದೆಹಲಿ: ದೇಶದಲ್ಲಿ ದಿನದಿನವೂ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ 24ಗಂಟೆಯಲ್ಲಿ 26,291 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕಳೆದ ಮೂರು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಸೋಂಕಿತರು ಒಂದೇ ದಿನ ಪತ್ತೆಯಾಗಿದ್ದಾರೆ. 2020ರ ಡಿಸೆಂಬರ್​ 20ರಂದು 26,624 ಕೊರೊನಾ ಸೋಂಕಿನ ಕೇಸ್​ಗಳು ದಾಖಲಾಗಿದ್ದವು. ಭಾನುವಾರ 25,320 ಪ್ರಕರಣಗಳು ದಾಖಲಾಗಿದ್ದವು. ಸೋಮವಾರ ಸುಮಾರು … Continued

ಕೊರೊನಾ ಸೋಂಕಿತರು: ಬೆಂಗಳೂರು ನಗರ ಜಿಲ್ಲೆ ದೇಶದಲ್ಲಿ ೫ನೇ ನಂಬರ್‌..!

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ದೇಶದಲ್ಲಿ ಅತಿ ಹೆಚ್ಚು ಕೊವಿಡ್‌-೧೯ ಸೋಂಕಿತರಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಜಿಲ್ಲೆ ೫ನೇ ಸ್ಥಾನ ಪಡೆದಿರುವುದು ಎಚ್ಚರಿಕೆ ವಹಿಸಬೇಕು ಎಂಬುದರ ಮುನೂಚನೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 6,107 ಸಕ್ರಿಯ ಸೋಂಕಿತರಿದ್ದಾರೆ. 18,474 ಸಕ್ರಿಯ ಸೋಂಕಿತರಿರುವ ಪುಣೆ ಮೊದಲ ಸ್ಥಾನದಲ್ಲಿದೆ. 12,724 ಸಕ್ರಿಯ ಸೋಂಕಿತರಿರುವ ನಾಗಪುರ ಎರಡನೇ ಸ್ಥಾನ, … Continued

ರಾಜ್ಯದಲ್ಲಿ ಸಿಡಿ ತಯಾರಿಸುವ ೨ ಫ್ಯಾಕ್ಟರಿಗಳಿವೆ: ಯತ್ನಾಳ

ವಿಜಯಪುರ: ರಾಜ್ಯದಲ್ಲಿ ಸಿಡಿ ತಯಾರಿಸುವ ಫ್ಯಾಕ್ಟರಿಗಳಿದ್ದು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಸಿಡಿ ತಯಾರಿಸುವ ಇಬ್ಬರು ನಿಷ್ಣಾತ ವ್ಯಕ್ತಿಗಳಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿಡಿ ತಯಾರಿಕೆಯಲ್ಲಿ ಪಳಗಿದ ಮುಖಂಡರು ಯಾರು ಎಂಬುದನ್ನು ಬಹಿರಂಗಗೊಳಿಸುವುದಿಲ್ಲ. ಸಿಡಿ ವಿಚಾರದಲ್ಲಿ ಕಾಂಗ್ರೆಸ್‌ ಕೈವಾಡವಿದೆ ಎಂಬ ಎಸ್‌.ಟಿ.ಸೋಮಶೇಖರ ಹೇಳಿಕೆ ಸಮರ್ಥಿಸಿಕೊಂಡ ಯತ್ನಾಳ, ಸೋಮಶೇಖರ … Continued

ಮೀಸಲಾತಿ ಬಗ್ಗೆ ಕೂಲಂಕುಷವಾಗಿ ಪರಾಮರ್ಶಿಸಿ ಸುಪ್ರೀಂ ಕೋರ್ಟಿಗೆ ವರದಿ:ಸಚಿವ ಬೊಮ್ಮಾಯಿ

ಬೆಂಗಳೂರು: ರಾಜ್ಯದ ಎಸ್ ಸಿ/ಎಸ್ ಟಿ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಸಂವಿಧಾನಾತ್ಮಕವಾಗಿ  ರಕ್ಷಣೆ ಮಾಡುವ ಕುರಿತು ಕೂಲಂಕುಷವಾಗಿ ಪರಾಮರ್ಶೆ ನಡೆಸಿ ಸುಪ್ರೀಂಕೋರ್ಟಿಗೆ ವರದಿ ಸಲ್ಲಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರ ಮೀಸಲಾತಿ ಪ್ರಮಾಣವನ್ನು ಶೇ. ೫೦ಕ್ಕಿಂತಲೂ ಹೆಚ್ಚು ಮಾಡಿದೆ. ಸುಪ್ರೀಂಕೋರ್ಟ್ ಈ  ಪ್ರಕರಣದ … Continued