ಕೊವಿಡ್‌-೧೯ರ ಪರಿಣಾಮ: ಭಾರತದ ೧.೮ ಕೋಟಿ ಜನರಿಗೆ ಹೊಸ ಉದ್ಯೋಗ ಹುಡುಕಾಟ ಅನಿವಾರ್ಯ

ಮುಂಬೈ: ಕೋವಿಡ್-19 ಸಾಂಕ್ರಾಮಿಕವು ದೇಶದ ಉದ್ಯೋಗ ಮಾರುಕಟ್ಟೆಯ ಮೇಲೆ ಬಹುಕಾಲ ಪರಿಣಾಮ ಬೀರಲಿದೆ. ಭಾರತದ ಕಾರ್ಮಿಕರ ಪೈಕಿ 1.8 ಕೋಟಿ ಜನ 2030ರೊಳಗೆ ಹೊಸ ಉದ್ಯೋಗ ಕಂಡುಕೊಳ್ಳುವುದು ಅನಿವಾರ್ಯ ಆಗಲಿದೆ ಎಂದು ವರದಿಯೊಂದು ಹೇಳಿದೆ. ಚಿಲ್ಲರೆ ಮಾರಾಟ, ಆಹಾರ ಸೇವೆಗಳು, ಆತಿಥ್ಯ, ಕಚೇರಿ ನಿರ್ವಹಣೆ ಮೊದಲಾದ ವಲಯಗಳಲ್ಲಿ ಕೆಲಸ ಮಾಡುವ ಕೆಳಗಿನ ಹಂತದ ನೌಕರರ ಮೇಲೆ … Continued

ಎಂದಿಗೂ ನನ್ನನ್ನು ಮರೆಯಬೇಡ : ಮಗನಿಗೆ ಸ್ವತಂತ್ರ ಭಾರತದ ಗಲ್ಲಿಗೇರುವ ಮೊದಲ ಮಹಿಳೆ ಸಲಹೆ

ನವ ದೆಹಲಿ : 2008ರಲ್ಲಿ ಅವರ ಕುಟುಂಬದ ಏಳು ಸದಸ್ಯರನ್ನು ನಿದ್ರಾಜನಕಗಳನ್ನು ಬೆರೆಸಿದ ಹಾಲನ್ನು ಕುಡಿಸಿ ಮತ್ತು ಭರಿಸಿ ನಂತರ ಗಂಟಲು ಕತ್ತರಿಸಿ ಕೊಲೆ ಮಾಡಿದ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ಸ್ವತಂತ್ರ ಭಾರತದ ಮೊದಲ ಮಹಿಳೆ ೩೮ ವರ್ಷದ ಶಬ್ನಮ್‌ಳನ್ನು ಮಹಿಳೆಯರನ್ನು ಗಲ್ಲಿಗೇರಿಸುವ ಏಕೈಕ ಸ್ಥಳವಾದ ಉತ್ತರ ಪ್ರದೇಶದ ಮಥುರಾ ಜಿಲ್ಲಾ ಜೈಲಿನಲ್ಲಿ ಗಲ್ಲಿಗೇರಿಸುವ ಸಿದ್ಧತೆಗಳನ್ನು … Continued

ಕರ್ನಾಟಕದಲ್ಲಿ ಮುಂದಿನ ೨೪ ತಾಸಿನಲ್ಲಿ ಮಳೆ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ, ಮಧ್ಯ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಕರ್ನಾಟಕ, ಕೇರಳ, ವಿದರ್ಭ, ಛತ್ತೀಸಗಡ, ಮಧ್ಯ ಮಹಾರಾಷ್ಟ್ರ, ತಮಿಳುನಾಡು, ಪುದುಚೇರಿ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ … Continued

ಮದುವೆ ಮೆರವಣಿಗೆ ವೇಳೆ ಓಡಿ ಹೋದ ವಧು..ವರನ ಜೊತೆ ವಧುವಿನ ಅಪ್ರಾಪ್ತ ತಂಗಿ ಮದುವೆ…ಅಪ್ರಾಪ್ತಳನ್ನು ಕರೆದೊಯ್ದ ಆಡಳಿತ

ಭವಾನಿಪಟ್ನಾ: ಕಲಹಂಡಿಯ ದೂರದ ಮಾಲ್ಗುಡಾ ಕುಗ್ರಾಮ ಮಂಗಳವಾರ ರಾತ್ರಿ ಕಂಡದ್ದು ಬಾಲಿವುಡ್ ಪಾಟ್‌ಬಾಯ್ಲರ್‌ಗೆ ಸೂಕ್ತವಾದ ಕಥಾವಸ್ತುವಾಗಿದೆ. ಇದು ಕಥೆಯಲ್ಲಿ ಹಲವಾರು ತಿರುವುಗಳನ್ನು ಹೊಂದಿರುವ ವಿವಾಹವಾಗಿತ್ತು – ಓಡಿದ ವಧು; ಅವಮಾನಿತ ವರ… ಆದರೆ ನಾವು ಹೀಗೆಂದುಕೊಂಡಿದ್ದರೆ ಮುಂದೆ ಆಗಿದ್ದೇ ಮತ್ತೊಂದು. ತನ್ನ ವಧು ತನ್ನ ಮನೆಯಿಂದ ಕೇವಲ 50 ಮೀಟರ್ ದೂರದಲ್ಲಿರುವ ತನ್ನ ಗೆಳೆಯನೊಂದಿಗೆ ಮದುವೆ … Continued

ಬಿಹಾರ್‌ ಚುನಾವಣೆಯಲ್ಲಿ ಕಾಂಗ್ರೆಸ್‌, ಆರ್‌ಜೆಡಿ ಪಕ್ಷಗಳಿಗೆ ವಿಜಯೇಂದ್ರ ಹಣ ನೀಡಿದ ಬಗ್ಗೆ ತನಿಖೆಯಾಗಲಿ: ಯತ್ನಾಳ

ಬೆಂಗಳೂರು: ಬಿಜೆಪಿ ಸೋಲಿಸುವ ಮೂಲಕ ಪ್ರಧಾನಿ ಮೋದಿ ತಾಕತ್ತನ್ನು ಕುಗ್ಗಿಸುವ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಿಹಾರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಪಕ್ಷಗಳಿಗೆ ಹಣ ನೀಡಿದ್ದು, ಈ ಕುರಿತು ಸಮರ್ಪಕ ತನಿಖೆ ನಡೆಯಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ. ವಿಜಯೇಂದ್ರ ಬಿಹಾರ ಚುನಾವಣೆಯಲ್ಲಿ ಹಣ ನೀಡಿದ ಬಗ್ಗೆ ಕೇಂದ್ರ ಸರಕಾರಕ್ಕೂ ಮಾಹಿತಿಯಿದೆ. … Continued

ಬಸ್‌ ಪ್ರಯಾಣ ದರ ಹೆಚ್ಚಳವಿಲ್ಲ: ಸಾರಿಗೆ ಸಚಿವ ಸವದಿ

ಡೀಸೆಲ್‌ ಬೆಲೆ ಹೆಚ್ಚಳಗೊಂಡಿದ್ದರೂ ಬಸ್‌ ಪ್ರಯಾಣ ದರವನ್ನು ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಬಸ್‌ ಪ್ರಯಾಣ ದರ ಹೆಚ್ಚಿಸುವಂತೆ ಈಗಾಗಲೇ ಸಾರಿಗೆ ಸಂಸ್ಥೆಗಳಿಂದ ಪ್ರಸ್ತಾಪ ಬಂದಿದೆ. ಆದರೆ ಕೊರೊನಾ, ನೈಸರ್ಗಿಕ ವಿಕೋಪದ ಕಾರಣದಿಂದಾಗಿ ಈಗಾಗಲೇ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬಸ್‌ ಪ್ರಯಾಣ ದರ ಹೆಚ್ಚಿಸಿದರೆ ಜನರಿಗೆ ಇನ್ನಷ್ಟು … Continued

ಸಿದ್ದರಾಮಯ್ಯ, ನಟ ಯಶ್‌ ಅಂತ್ಯಕ್ರಿಯೆಗೆ ಬರಬೇಕೆಂದು ಡೆತ್‌ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡ ಯುವಕ

ತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚಿತ್ರ ನಟ ಯಶ್‌ ಆಗಮಿಸಬೇಕು ಎಂದು ಡೆತ್ ‌ನೋಟ್‌ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ತಾಲೂಕ ಕೆರೆಗೋಡು ಹೋಬಳಿ ಕೊಡಿದೊಡ್ಡಿ ಗ್ರಾಮದ ಯುವಕ ಕೃಷ್ಣ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂತ್ಯಕ್ರಿಯೆ ವೇಳೆ ತನ್ನ ಮೊಬೈಲ್‌ನ್ನು ಚಿತೆಯಲ್ಲಿ ಹಾಕುವಂತೆ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ … Continued

ಭಾರತದ ಮೆಟ್ರೋ ಮ್ಯಾನ್‌ ಇ ಶ್ರೀಧರನ್‌ ಬಿಜೆಪಿಗೆ ಸೇರಲು ನಿರ್ಧಾರ 

  ಭಾರತದ ಮೆಟ್ರೋ ಮ್ಯಾನ್‌, ಇ ಶ್ರೀಧರನ್ ಅವರು ಕೇರಳ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳಿರುವಾಗ ಬಿಜೆಪಿಗೆ ಸೇರಲಿದ್ದಾರೆ. ಕಳೆದ ೧೦ ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ತರಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರೂ ಆದರೆ ರಾಜಕಾರಣಿಗಳ ಪ್ರತಿರೋಧವನ್ನು ಎದುರಿಸಿಸಬೇಕಾಯಿತು. “ಪಕ್ಷಗಳು ತಮ್ಮ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತವೆ” ಎಂದು ಅವರು ಹೇಳಿದ ಅವರು, ನರೇಂದ್ರ ಮೋದಿ ಅವರು … Continued

ಈಗ ಮೀಸಲಾತಿ ಹೋರಾಟಕ್ಕೆ ಸಜ್ಜಾದ ಒಕ್ಕಲಿಗರು

ಬೆಂಗಳೂರು: ಕುರುಬ, ಪಂಚಮಸಾಲಿ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಒಕ್ಕಲಿಗ ಸಮುದಾಯ ಕೂಡ ಮೀಸಲಾತಿ ಹೋರಾಟಕ್ಕೆ ಸನ್ನದ್ಧಗೊಂಡಿದೆ. ಒಕ್ಕಲಿಗ ಸಮುದಾಯ ಎಲ್ಲಾ 115 ಉಪ ಪಂಗಡಗಳನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂದು ಸಮುದಾಯದ ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರದೇ ಇದ್ದರೆ ಆದಿ … Continued

ಎಂಜೆ ಅಕ್ಬರ್‌ ಮಾನನಷ್ಟ ಮೊಕದ್ದಮೆ ಪ್ರಕರಣ: ಪತ್ರಕರ್ತೆ ಪ್ರಿಯಾರಮಣಿ ಖುಲಾಸೆ

ನವದೆಹಲಿ: ಎಂಜೆ ಅಕ್ಬರ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ (ಮೀ ಟೂ) ಮಾಡಿದ ನಂತರ ಪ್ರಿಯಾರಮಣಿ ವಿರುದ್ಧ ಎಂಜೆ ಅಕ್ಬರ್‌ ಹೂಡಿದ್ದ ಮಾನನಷ್ಟ ಮೊಕದ್ದಮೆಯಿಂದ ದೆಹಲಿ ನ್ಯಾಯಾಲಯ ಬುಧವಾರ ಪ್ರಿಯಾ ರಮಣಿಯನ್ನು ಖುಲಾಸೆಗೊಳಿಸಿದೆ. ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಪರಿಣಾಮವನ್ನು ಸಮಾಜವು ಅರ್ಥಮಾಡಿಕೊಳ್ಳಬೇಕು” ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ … Continued