ಪಹಲ್ಗಾಮ್‌ ದಾಳಿ | ಪಾಕ್ ಬೆಂಬಲಿಸಿದ್ದ ಟರ್ಕಿಗೆ ದೊಡ್ಡ ಹೊಡೆತ ನೀಡಿದ ಭಾರತ : ಸೆಲೆಬಿ ಏರ್‌ಪೋರ್ಟ್‌ ಸರ್ವೀಸಸ್‌ ಗೆ ಭದ್ರತಾ ಅನುಮತಿ ರದ್ದು…

ನವದೆಹಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯ (Pahalgam Attack) ನಂಥರ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿಗೆ ಭಾರತ ದೊಡ್ಡ ಹೊಡೆತ ನೀಡಿದೆ. ವಿಮಾನ ನಿಲ್ದಾಣದಲ್ಲಿ ಗ್ರೌಂಡ್‌ ಹ್ಯಾಂಡ್ಲಿಂಗ್‌ ಸೇವೆಯನ್ನು ನೀಡುತ್ತಿದ್ದ ಟರ್ಕಿ ಮೂಲದ ಸೆಲೆಬಿ ಏರ್‌ಪೋರ್ಟ್‌ ಇಂಡಿಯಾ ಸರ್ವೀಸ್‌ (Celebi Airport Services India) ಕಂಪನಿಗೆ ಕೊಟ್ಟಿದ್ದ ಅನುಮೋದನೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಟರ್ಕಿ ಮೂಲದ ಸೆಲೆಬಿ … Continued

ನೀವು ಭಾರತದಲ್ಲಿ ಆಪಲ್ ಸಾಧನ ಉತ್ಪಾದನೆ ಮಾಡ್ಬೇಡಿ..; ಆಪಲ್ ಸಿಇಒಗೆ ಡೊನಾಲ್ಡ್ ಟ್ರಂಪ್ ಒತ್ತಡ : ಅಮೆರಿಕ ವರಸೆ ಬದಲಿಸಿದ್ದು ಯಾಕೆ..?

ದೋಹಾ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಪಲ್ ಸಿಇಒ ಟಿಮ್ ಕುಕ್ ಅವರ ಜೊತೆ ನೇರ ಸಂಭಾಷಣೆ ನಡೆಸಿದ್ದು, ಭಾರತೀಯ ಮಾರುಕಟ್ಟೆಗೆ ಸೇವೆ ಸಲ್ಲಿಸುವ ಉದ್ದೇಶವನ್ನು ಹೊರತುಪಡಿಸಿ, ಭಾರತದಲ್ಲಿ ಆಪಲ್ ಉತ್ಪಾದನಾ ಹೆಜ್ಜೆಗುರುತನ್ನು ವಿಸ್ತರಿಸುವುದು ಬೇಡ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. “ಭಾರತದಲ್ಲಿ ನೀವು ನಿರ್ಮಾಣ ಮಾಡುವುದರ ಬಗ್ಗೆ ನಮಗೆ ಆಸಕ್ತಿ ಇಲ್ಲ, ಅವರು … Continued

S-400 ಬಿಡಿ ; ವಾಯು ರಕ್ಷಣೆ ಹೆಚ್ಚಿಸಲು ಭಾರತ ಶೀಘ್ರವೇ ರಷ್ಯಾದ ಘಾತಕ S-500 ಖರೀದಿಸಬಹುದು ; ಎರಡರ ಮಧ್ಯದ ಪ್ರಮುಖ ವ್ಯತ್ಯಾಸ ಇಲ್ಲಿದೆ

ನವದೆಹಲಿ: ಭಾರತದ ವಾಯುದಾಳಿಗಳು ಪಾಕಿಸ್ತಾನದಲ್ಲಿನ ಹಲವಾರು ಭಯೋತ್ಪಾದಕ ನೆಲೆಗಳು ಮತ್ತು ವಾಯುನೆಲೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡಿದ ನಂತರ, ಭಾರತದ “ಆಪರೇಷನ್ ಸಿಂಧೂರ” ಸೇನಾ ಕಾರ್ಯಾಚರಣೆ ಪಾಕಿಸ್ತಾನದಲ್ಲಿ ಆಘಾತದ ಅಲೆಗಳನ್ನು ಎಬ್ಬಿಸಿದೆ. ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್‌ನ ಗಡಿಯ ಸಮೀಪವಿರುವ ನಗರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದರೂ ಭಾರತವು ಈ ದಾಳಿಗಳನ್ನು … Continued

ಪಹಲ್ಗಾಮ್ ದಾಳಿ : ಭಯೋತ್ಪಾದಕ ಗುಂಪು ಲಷ್ಕರ್ ಅಂಗಸಂಸ್ಥೆ ಟಿಆರ್‌ಎಫ್ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪುರಾವೆ ಸಲ್ಲಿಸಲಿರುವ ಭಾರತ

ನವದೆಹಲಿ: ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಉಪ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕೆಂದು ಒತ್ತಾಯಿಸಿ ಭಾರತ ಗುರುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿರ್ಬಂಧ ಸಮಿತಿಗೆ ಹೊಸ ಪುರಾವೆಗಳನ್ನು ಸಲ್ಲಿಸಲಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಹೊಣೆ ಹೊತ್ತುಕೊಂಡಿದ್ದು, ಈಗ ವಿಶ್ವಸಂಸ್ಥೆಯ ಭದ್ರತಾ … Continued

ಆಪರೇಷನ್ ಸಿಂಧೂರ | ಷೇರು ಮಾರುಕಟ್ಟೆಯಲ್ಲಿ ಭಾರತದ ರಕ್ಷಣಾ ಕಂಪನಿಗಳಿಗೆ ಹೆಚ್ಚಿದ ಬೇಡಿಕೆ, ಚೀನಾ-ಟರ್ಕಿ ಕಂಪನಿಗಳ ಬೇಡಿಕೆ ಕುಸಿತ…!

ನವದೆಹಲಿ: ನವದೆಹಲಿ: ಪಾಕಿಸ್ತಾನದೊಂದಿಗಿನ ಸಂಘರ್ಷದ ಸಮಯದಲ್ಲಿ ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಕ್ಷಿಪಣಿಯನ್ನು ಯಶಸ್ವಿಯಾಗಿ ತಡೆದು ನಾಶಪಡಿಸಿದ ನಂತರ, PL-15 ಕ್ಷಿಪಣಿಯನ್ನು ತಯಾರಿಸುವ ಚೀನಾದ ರಕ್ಷಣಾ ಕಂಪನಿಯಾದ ಝುಝೌ ಹಾಂಗ್ಡಾ ಎಲೆಕ್ಟ್ರಾನಿಕ್ಸ್ ಕಾರ್ಪ್ ಲಿಮಿಟೆಡ್‌ನ ಷೇರುಗಳು ಮಂಗಳವಾರ ಶೇ. 6.42 ರಷ್ಟು ಕುಸಿದು 37.33 ಯುವಾನ್‌ಗೆ ತಲುಪಿದೆ. ಟರ್ಕಿಯ ಕಂಪನಿಗಳ ಷೇರುಗಳಲ್ಲಿ ಕುಸಿತ ಕಂಡಿದೆ ಎಂದು … Continued

ಏಪ್ರಿಲ್ 23 ರಂದು ಪಾಕಿಸ್ತಾನ ಬಂಧಿಸಿದ್ದ ಬಿಎಸ್‌ಎಫ್ ಯೋಧ ಬಿಡುಗಡೆ

ನವದೆಹಲಿ: ಕಳೆದ ತಿಂಗಳು ಭಾರತ-ಪಾಕಿಸ್ತಾನದ ಮಧ್ಯದ ಅಂತಾರಾಷ್ಟ್ರೀಯ ಗಡಿಯನ್ನು ಆಕಸ್ಮಿಕವಾಗಿ ದಾಟಿದ ನಂತರ ಪಾಕಿಸ್ತಾನ ರೇಂಜರ್‌ಗಳಿಂದ ಬಂಧಿಸಲ್ಪಟ್ಟ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಯೋಧ ಪೂರ್ಣಂಕುಮಾರ ಶಾ ಅವರನ್ನು ಇಂದು, ಬುಧವಾರ ಅಟ್ಟಾರಿಯ ಚೆಕ್ ಪೋಸ್ಟ್‌ನಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಏಪ್ರಿಲ್ 23, 2025 ರಿಂದ ಪಾಕಿಸ್ತಾನ ರೇಂಜರ್‌ಗಳ ವಶದಲ್ಲಿದ್ದ ಬಿಎಸ್‌ಎಫ್ ಜವಾನ್ ಪೂರ್ಣಂಕುಮಾರ ಶಾ … Continued

ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ…?

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಹಲವಾರು ವಾಯುನೆಲೆಗಳು ಮತ್ತು ಇತರ ಮಿಲಿಟಿರಿ ನೆಲೆಗಳು ಹಾನಿಗೊಳಗಾದವು. ಅದರ ನಂತರ ಪಾಕಿಸ್ತಾನ ಅಮೆರಿಕಕ್ಕೆ ಮಧ್ಯಪ್ರವೇಶಿಸುವಂತೆ ದುಂಬಾಲು ಬಿದ್ದ ನಂತರ ಕದನ ವಿರಾಮ ಘೋಷಣೆಯಾಯಿತು. ಅಮೆರಿಕ ಈ ಕದನ ವಿರಾಮದ ಕ್ರೆಡಿಟ್‌ … Continued

ಆಪರೇಶನ್‌ ಸಿಂಧೂರ : ಪಾಕಿಸ್ತಾನದ ವಾಯುನೆಲೆಗಳ ಮೇಲಿನ ದಾಳಿಯಲ್ಲಿ 20% ಮೂಲಸೌಕರ್ಯ; ಹಲವಾರು ಯುದ್ಧ ವಿಮಾನಗಳು ನಾಶ…!

ನವದೆಹಲಿ: ಮೇ 10 ರಂದು ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯಲ್ಲಿ ಅದರ ವಾಯುಪಡೆಯ ಮೂಲಸೌಲಭ್ಯಗಳಲ್ಲಿ ಶೇಕಡಾ 20 ರಷ್ಟು ನಾಶವಾಗಿದೆ ಮತ್ತು ಸ್ಕ್ವಾಡ್ರನ್ ಲೀಡರ್‌ ಸೇರಿದಂತೆ 50 ಕ್ಕೂ ಹೆಚ್ಚು ವ್ಯಕ್ತಿಗಳು ಸಾವಿಗೀಡಾಗಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿದ ಕೆಲವು ವರದಿಗಳು ತಿಳಿಸಿವೆ. ಈ ದಾಳಿಯು ಪಾಕಿಸ್ತಾನದ ಪ್ರಮುಖ ಶಸ್ತ್ರಾಸ್ತ್ರ … Continued

ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ನಂತರ ಬ್ರಹ್ಮೋಸ್ ಕ್ಷಿಪಣಿಗೆ ಬಂತು ಭಾರೀ ಬೇಡಿಕೆ ; ಖರೀದಿಸಲು 17 ದೇಶಗಳು ಕ್ಯೂನಲ್ಲಿ…!

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ತಲುಪಿಸಲು   ಆಪರೇಷನ್ ಸಿಂಧೂರ ಸೈನ್ಯ ಕಾರ್ಯಾಚರಣೆ ನಡೆಸಲಾಗಿದ್ದು, ಇದರಲ್ಲಿ ಸೂಪರ್‌ಸಾನಿಕ್‌ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಪ್ರಮುಖ ಪಾತ್ರ ವಹಿಸಿತು. ಇದರ ಯಶಸ್ವಿ ಬಳಕೆಯು ಭಾರತದ ನಿಖರ-ದಾಳಿ ಸಾಮರ್ಥ್ಯಗಳನ್ನು ಎತ್ತಿ ತೋರಿಸಿತು ಮತ್ತು ಪಾಕಿಸ್ತಾನ ಮತ್ತು ಅದರಲ್ಲಿ ಒಳಗೊಂಡಿರುವ ಭಯೋತ್ಪಾದಕ ಜಾಲಗಳಿಗೆ ಬಲವಾದ ಪೆಟ್ಟುಕೊಟ್ಟಿತು. ಈಗ … Continued

ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಹೊರಹಾಕಿದ ಭಾರತ; 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ

ನವದೆಹಲಿ : ದೆಹಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ನಿಯೋಜಿತರಾಗಿದ್ದ ಪಾಕಿಸ್ತಾನಿ ಅಧಿಕಾರಿಯೊಬ್ಬರನ್ನು ಭಾರತ ಸರ್ಕಾರ ದೇಶದಿಂದ ಹೊರಹಾಕಿದ್ದು, ಹೆಸರು ಹೇಳದ ಅಧಿಕಾರಿಗೆ 24 ಗಂಟೆಗಳ ಒಳಗೆ ದೇಶ ಬಿಟ್ಟು ಹೋಗುವಂತೆ ಸೂಚಿಸಲಾಗಿದೆ. “ಅಧಿಕೃತ ಸ್ಥಾನಮಾನಕ್ಕೆ ಅನುಗುಣವಾಗಿಲ್ಲದ” ಕೃತ್ಯಗಳಲ್ಲಿ ತೊಡಗಿದ್ದಕ್ಕಾಗಿ ಅವರನ್ನು ‘ಪರ್ಸನಾ ನಾನ್ ಗ್ರಾಟಾ’ ಎಂದು ಘೋಷಿಸಿದೆ. ಭಾರತ ಹಾಗೂ ಪಾಕಿಸ್ತಾನದ ನಡೆವಿನ ಸಂಘರ್ಷದ ನಡುವೆ ಈ … Continued