2027ರ ಮಾರ್ಚ್ 1ರಿಂದ ಜನಗಣತಿ ಆರಂಭ ; ಜಾತಿ ಗಣತಿಯೂ ಸೇರ್ಪಡೆ

ನವದೆಹಲಿ: ಜಾತಿ ದತ್ತಾಂಶವನ್ನು ಒಳಗೊಂಡ ರಾಷ್ಟ್ರವ್ಯಾಪಿ ಜನಗಣತಿಯು 2027ರ ಮಾರ್ಚ್ 1ರಂದು ಪ್ರಾರಂಭವಾಗಲಿದೆ ಎಂದು ಗೃಹ ಸಚಿವಾಲಯ ಬುಧವಾರ ಪ್ರಕಟಿಸಿದೆ. ಜನಸಂಖ್ಯೆಯನ್ನು ಗಣತಿ ಮಾಡುವ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ಮಾಡಲಾಗುತ್ತದೆ. “ಜನಸಂಖ್ಯಾ ಗಣತಿಯ ಉಲ್ಲೇಖ ದಿನಾಂಕ ಮಾರ್ಚ್ 2027 ರ ಮೊದಲ ದಿನದ 00:00 ಗಂಟೆಗಳು. ಲಡಾಖ್ ಕೇಂದ್ರಾಡಳಿತ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ … Continued

ಆಪರೇಶನ್‌ ಸಿಂಧೂರ | 30 ಕ್ಷಿಪಣಿಗಳು, 6 ಯುದ್ಧ ವಿಮಾನಗಳು, 2 ಎಡಬ್ಲ್ಯುಎಸಿಎಸ್‌ ವಿಮಾನ, ಹಲವು ಮಾನವ ರಹಿತ ವೈಮಾನಿಕ ವಾಹನ ಕಳೆದುಕೊಂಡ ಪಾಕಿಸ್ತಾನ ; ವರದಿ

ನವದೆಹಲಿ : ಕಳೆದ ತಿಂಗಳು ಭಾರತದ ಜೊತೆಗಿನ ನಾಲ್ಕು ದಿನಗಳ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನ ಆರು ಯುದ್ಧ ವಿಮಾನಗಳು, ಎರಡು ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ (AWACS), ಒಂದು C-130 ಸಾರಿಗೆ ವಿಮಾನ, ಕನಿಷ್ಠ 30 ಕ್ಷಿಪಣಿಗಳು ಮತ್ತು ಹಲವಾರು ಮಾನವರಹಿತ ವೈಮಾನಿಕ ವಾಹನಗಳನ್ನು ಕಳೆದುಕೊಂಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಕಾರ್ಯಾಚರಣೆಯ … Continued

ದೇಶದಲ್ಲಿ ಮೇ ತಿಂಗಳಲ್ಲಿ 2.01 ಲಕ್ಷ ಕೋಟಿ ರೂ. ಜಿಎಸ್‌ ಟಿ ಸಂಗ್ರಹ ; ಕಳೆದ ವರ್ಷ ಮೇ ತಿಂಗಳಿಗೆ ಹೋಲಿಸಿದರೆ 16.4% ಹೆಚ್ಚಳ

ನವದೆಹಲಿ: ಹಣಕಾಸು ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2025ರ ಮೇ ತಿಂಗಳಲ್ಲಿ ಭಾರತದ ಒಟ್ಟು ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು 2.01 ಲಕ್ಷ ಕೋಟಿ ರೂ.ಗಳನ್ನು ತಲುಪಿದ್ದು, ಇದು 2024 ರ ಮೇ ತಿಂಗಳಲ್ಲಿ ಸಂಗ್ರಹಿಸಲಾದ 1.72 ಲಕ್ಷ ಕೋಟಿ ರೂ.ಗಳಿಗಿಂತ ಶೇ. 16.4 ರಷ್ಟು ಹೆಚ್ಚಾಗಿದೆ. ಏಪ್ರಿಲ್ 2025 … Continued

ಭಾರತದ 6 ಯುದ್ಧವಿಮಾನ ಹೊಡೆದಿದ್ದೇವೆ ಎಂಬ ಪಾಕ್‌ ಪ್ರಧಾನಿ ಹೇಳಿಕೆ ಶುದ್ಧ ಸುಳ್ಳು ; ಆರಂಭಿಕ ನಷ್ಟ ಸರಿಪಡಿಸಿಕೊಂಡು ಪಾಕ್ ಮೇಲೆ ನಿಖರ ದಾಳಿ-ಸಿಡಿಎಸ್ ಅನಿಲ ಚೌಹಾಣ

ನವದೆಹಲಿ: ಆಪರೇಷನ್ ಸಿಂಧೂರ ನಂತರದ ನಾಲ್ಕು ದಿನಗಳ ಮಿಲಿಟರಿ ಕಾರ್ಯಾಚರಣೆಯಲ್ಲಿ ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ ಚೌಹಾಣ ಸಾರಾಸಗಟಾಗಿ ನಿರಾಕರಿಸಿದ್ದಾರೆ. ಆದರೆ, ಅವರ ಮಾತುಗಳಿಂದ ಅನಿರ್ದಿಷ್ಟ ಸಂಖ್ಯೆಯ ಯುದ್ಧ ವಿಮಾನಗಳನ್ನು ಕಳೆದುಕೊಂಡಿರುವುದನ್ನು ಭಾರತದ ಸೇನೆ ಮೊದಲ ಬಾರಿಗೆ ಒಪ್ಪಿಕೊಂಡಂತಿದೆ. ಭಾರತವು “ಯುದ್ಧತಂತ್ರದ … Continued

ಹೈದರಾಬಾದ್‌ : 2025ರ ವಿಶ್ವ ಸುಂದರಿ ಪ್ರಶಸ್ತಿ ಗೆದ್ದ ಥೈಲ್ಯಾಂಡ್‌ ನ ಓಪಲ್ ಸುಚಾಟಾ

ಹೈದರಾಬಾದ್‌ : ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ, ಥೈಲ್ಯಾಂಡ್‌ನ ಓಪಲ್ ಸುಚಾಟಾ 2025 ರ ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 72 ನೇ ಆವೃತ್ತಿಯ ಮಿಸ್ ವರ್ಲ್ಡ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಜ್ಕೋವಾ ತಮ್ಮ ಕಿರೀಟವನ್ನು ಹೊಸ ಪ್ರಶಸ್ತಿ ವಿಜೇತರಿಗೆ ಹಸ್ತಾಂತರಿಸಿದರು. ಇಥಿಯೋಪಿಯಾದ ಹ್ಯಾಸೆಟ್‌ ಡೆರೆಜೆ ಮೊದಲ ರನ್ನರ್‌‌ಅಪ್‌ ಆದರೆ, 2ನೇ … Continued

ಭಾರತದಲ್ಲಿ 3,000 ದಾಟಿದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ; ಒಂದೇ ದಿನದಲ್ಲಿ 685 ಹೊಸ ಸೋಂಕುಗಳು ದಾಖಲು

ನವದೆಹಲಿ: ಭಾರತದಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆ 3,000 ದಾಟಿದ್ದು, ಈಗ ಒಟ್ಟು 3,395 ಪ್ರಕರಣಗಳಿಗೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ, 685 ಹೊಸ ಪ್ರಕರಣಗಳು ಹಾಗೂ ನಾಲ್ಕು ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ಆರೋಗ್ಯ ಸಚಿವಾಲಯದ ಮಾಹಿತಿಯ … Continued

ವೀಡಿಯೊಗಳು | ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆ ; ಪಾಕ್‌ ನ ಮತ್ತೊಂದು ಪ್ರಮುಖ ನಗರ ವಶಪಡಿಸಿಕೊಂಡ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ…!

ನವದೆಹಲಿ: ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಎಂಬ ಪ್ರತ್ಯೇಕತಾವಾದಿ ಗುಂಪು ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದ ಆಯಕಟ್ಟಿನ ನಗರವಾದ ಸುರಬ್ ಅನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಬಲೂಚಿಸ್ತಾನ್ ಪೋಸ್ಟ್ ಹಂಚಿಕೊಂಡ ವೀಡಿಯೊಗಳ ಪ್ರಕಾರ, ನಗರದಾದ್ಯಂತ ಹಲವಾರು ಸ್ಥಳಗಳಿಂದ ದಟ್ಟವಾದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಹೊರಹೊಮ್ಮುತ್ತಿರುವುದು ಕಂಡುಬಂದಿದ್ದು, ಹಲವಾರು ಪೊಲೀಸ್ ಠಾಣೆಗಳು ಮತ್ತು … Continued

ದೇಶದಲ್ಲಿ 2,700 ದಾಟಿದ ಕೋವಿಡ್ ಸಕ್ರಿಯ ಪ್ರಕರಣಗಳು; ಪರೀಕ್ಷೆ ಹೆಚ್ಚಳಕ್ಕೆ ಸೂಚನೆ

ನವದೆಹಲಿ : ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 2,710ಕ್ಕೆ ಏರಿದೆ. ಕೇರಳದಲ್ಲಿ ಹೆಚ್ಚಿನ ಸೋಂಕು ಪ್ರಕರಣಗಳು ಕಂಡುಬಂದಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರದವಿದೆ. ಒಂದು ತಿಂಗಳು ನಂತರ ಭಾರತದಲ್ಲಿ ಕೊರೊನಾ ವೈರಸ್‌‍ ಪ್ರಕರಣಗಳು ಹೆಚ್ಚುತ್ತಿವೆ, ಮೇ 25 ಕ್ಕೆ ಕೊನೆಗೊಂಡ … Continued

ಚೀನಾ ಹಿಂದಿಕ್ಕಿ ಅಮೆರಿಕಕ್ಕೆ ಅತಿ ಹೆಚ್ಚು ಐಫೋನ್ ರಫ್ತು ಮಾಡುವ ದೇಶವಾದ ಭಾರತ

ನವದೆಹಲಿ: ಮಾರುಕಟ್ಟೆ ಸಂಶೋಧನಾ ಸಂಸ್ಥೆ ಓಮ್ಡಿಯಾ ವರದಿಯ ಪ್ರಕಾರ, ಭಾರತವು ಚೀನಾವನ್ನು ಹಿಂದಿಕ್ಕಿ ಅಮೆರಿಕಕ್ಕೆ ಐಫೋನ್‌ಗಳ ಅತಿದೊಡ್ಡ ರಫ್ತುದಾರ ದೇಶವಾಗಿ ಹೊರಹೊಮ್ಮಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಭಾರತದಲ್ಲಿ ತಯಾರಾದ ಸುಮಾರು 30 ಲಕ್ಷ ಐಫೋನ್‌ಗಳನ್ನು ಏಪ್ರಿಲ್‌ನಲ್ಲಿ ಅಮೆರಿಕಕ್ಕೆ ರವಾನಿಸಲಾಗಿದೆ. ಚೀನಾದಿಂದ ಫೋನ್ ಅಮೆರಿಕಕ್ಕೆ ಐಫೋನ್‌ ರಫ್ತು 76% ರಷ್ಟು ಕುಸಿದಿದ್ದು, ಕೇವಲ 9,00,000 ಯೂನಿಟ್‌ಗಳು ಮಾತ್ರ … Continued

ವೀಡಿಯೊ..| ನಾವು ದಾಳಿ ನಡೆಸುವ ಮೊದಲೇ ಭಾರತ ನಮ್ಮ ವಾಯುನೆಲೆಗಳ ಮೇಲೆ ʼಬ್ರಹ್ಮೋಸ್ʼ ದಾಳಿ ನಡೆಸಿತು ಎಂದು ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ…!

ನವದೆಹಲಿ: ಮೇ 9-10ರ ಮಧ್ಯರಾತ್ರಿ ರಾವಲ್ಪಿಂಡಿಯ ವಿಮಾನ ನಿಲ್ದಾಣ ಸೇರಿದಂತೆ ನಮ್ಮ ಪ್ರಮುಖ ಸೇನಾ ನೆಲೆಗಳ ಮೇಲೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಉಡಾಯಿಸಿ ನಮ್ಮ ಯೋಜನೆಗಳನ್ನು ಭಾರತವು ವಿಫಲಗೊಳಿಸಿತು ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಪರವಾಗಿ ನಿಂತ ಕೆಲವೇ ರಾಷ್ಟ್ರಗಳಲ್ಲಿ ಒಂದಾದ ಅಜೆರ್ಬೈಜಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕ್‌ ಪ್ರಧಾನಿ ಷರೀಫ್, … Continued